ಬಿಸಿಯೂಟ-ಅಂಗನವಾಡಿ ಕೋಣೆ ಬಿರುಕು
•ಉರ್ದು ವಿಷಯ ಬೋಧಕರೇ ಇಲ್ಲ•ಆಹಾರ ಪದಾರ್ಥ ಸಂರಕ್ಷಣೆ ಸವಾಲು
Team Udayavani, Aug 26, 2019, 10:14 AM IST
ಶಾಲೆಯ ಬಿಸಿಯೂಟ ಹಾಗೂ ಅಂಗನವಾಡಿ ಕೇಂದ್ರವೊಂದು ಬಿರುಕು ಬಿಟ್ಟಿದೆ
ಮಡಿವಾಳಪ್ಪ ಹೇರೂರ
ವಾಡಿ: ಅಲ್ಪಸಂಖ್ಯಾತರ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ತೆರೆಯಲಾದ ಈ ಗ್ರಾಮದ ಸರಕಾರಿ ಉರ್ದು ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಗೆ ಉರ್ದು ವಿಷಯ ಬೋಧಕರನ್ನು ನೇಮಿಸದೇ ಶಿಕ್ಷಣ ಇಲಾಖೆ ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದೆ. ಕನ್ನಡ ವಿಷಯ ಬೋಧಕರ ಹುದ್ದೆಯೂ ಇಲ್ಲಿ ಖಾಲಿಯಿದ್ದು, ಮಕ್ಕಳ ಪಠ್ಯ ಶಿಕ್ಷಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
ಇಂಗಳಗಿ ಗ್ರಾಪಂ ವ್ಯಾಪ್ತಿಯ ಕುಂದನೂರು ಗ್ರಾಮದ ಸರಕಾರಿ ಉರ್ದು ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಸ್ಲಿಂ ಸಮುದಾಯದ ಮಕ್ಕಳಿಗೆ ಒಂದರಿಂದ 7ನೇ ತರಗತಿ ವರೆಗೆ ಶಿಕ್ಷಣ ಬೋಧಿಸಲಾಗುತ್ತಿದ್ದು, 59 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮೂವರು ಶಿಕ್ಷಕರು ಮಾತ್ರ ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಒಟ್ಟು ನಾಲ್ಕು ತರಗತಿ ಕೋಣೆಗಳಿದ್ದು, ಶಾಲೆ ಮುಂಭಾಗದಲ್ಲಿ ಬಿರುಕುಬಿಟ್ಟು ಶಿಥಿಲಗೊಂಡ ಎರಡು ಕೋಣೆಗಳಲ್ಲಿ ಒಂದೆಡೆ ಅಲ್ಪಸಂಖ್ಯಾತರ ಮಕ್ಕಳಿಗಾಗಿ ಬಿಸಿಯೂಟ ಬೇಯಿಸಲಾಗುತ್ತಿದ್ದರೆ, ಇನ್ನೊಂದರಲ್ಲಿ ಪೌಷ್ಟಿಕ ಆಹಾರ ನೀಡುವ ಅಂಗನವಾಡಿ ಕೇಂದ್ರ-1 ಭಯದ ನೆರಳಿನಲ್ಲಿ ಮುನ್ನಡೆಯುತ್ತಿದೆ. ಇಲಿ ಹೆಗ್ಗಣಗಳ ಕಾಟಕ್ಕೆ ಅಡುಗೆ ಸಿಬ್ಬಂದಿ ಬೇಸತ್ತಿದ್ದು, ಊಟದ ಪದಾರ್ಥಗಳ ಸಂರಕ್ಷಣೆ ದೊಡ್ಡ ಸವಾಲಾಗಿದೆ. ಕುಸಿದು ಬೀಳುವ ಸ್ಥಿತಿಯಲ್ಲಿರುವ ಕಟ್ಟಡಗಳಲ್ಲಿ ಜೀವ ಒತ್ತೆಯಿಟ್ಟು ಮಕ್ಕಳಿಗೆ ಅಡುಗೆ ಸಿದ್ಧಪಡಿಸುತ್ತೇವೆ. ನಮ್ಮ ಕಷ್ಟ ಯಾರೂ ಕೇಳುತ್ತಿಲ್ಲ ಎನ್ನುತ್ತಾರೆ ಬಿಸಿಯೂಟ ಮತ್ತು ಅಂಗನವಾಡಿ ಅಡುಗೆ ಸಹಾಯಕ ಸಿಬ್ಬಂದಿ.
ಹಲವು ಸಮಸ್ಯೆಗಳ ಮಧ್ಯೆ ಅಕ್ಷರಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು, ಉರ್ದು ಮತ್ತು ಕನ್ನಡ ಬೋಧಕರಿಗಾಗಿ ಕಾಯ್ದು ಕುಳಿತಿದ್ದಾರೆ. ಪ್ರಸಕ್ತ ಶೈಕ್ಷಣಿಕ ಸಾಲಿನ ತರಗತಿಗಳು ಶುರುವಾಗಿ ಮೂರು ತಿಂಗಳು ಕಳೆದಿದ್ದು, ಅಲ್ಪಸಂಖ್ಯಾತರೇ ಹೆಚ್ಚಿರುವ ಕುಂದನೂರಿನ ಈ ಉರ್ದು ಶಾಲೆಗೆ 4ನೇ ತರಗತಿಯ ಕನ್ನಡ ಮತ್ತು 5ನೇ ತರಗತಿಯ ಇಂಗ್ಲಿಷ್ ವಿಷಯದ ಪಠ್ಯಪುಸ್ತಕ ವಿತರಣೆಯಾಗಿಲ್ಲ. ಶೌಚಾಲಯ ಸೌಲಭ್ಯವಿದ್ದು, ಕುಡಿಯಲು ಶುದ್ಧ ನೀರಿನ ವ್ಯವಸ್ಥೆ ಮಾಡಲಾಗಿಲ್ಲ. ಕಾರಣ ಮಕ್ಕಳು ಕಲುಷಿತ ನೀರು ಕುಡಿದು ಅನಾರೋಗ್ಯಕ್ಕೀಡಾಗುತ್ತಿದ್ದಾರೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಗತ್ಯ ಪಠ್ಯಪುಸ್ತಕಗಳಿಗಾಗಿ ಮತ್ತು ಶಿಕ್ಷಕರ ಕೊರತೆ ಕುರಿತು ಈಗಾಗಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನ ಸೆಳೆಯಲಾಗಿದೆ. ಶಿಥಿಲಗೊಂಡ ಬಿಸಿಯೂಟ ಕೋಣೆ ಯಾವಾಗ ಮುಗುಚಿ ಬೀಳುತ್ತದೆಯೋ ಗೊತ್ತಿಲ್ಲ. ಹೊಸ ಕಟ್ಟಡದ ವ್ಯವಸ್ಥೆಗಾಗಿ ಮನವಿ ಸಲ್ಲಿಸಲಾಗಿದೆ ಎಂದು ಶಾಲೆ ಮುಖ್ಯಶಿಕ್ಷಕ ಅಫ್ಸರ್‌ಮಿಯ್ನಾ ತಿಳಿಸಿದ್ದಾರೆ. ಅಗತ್ಯ ಪಠ್ಯಪುಸ್ತಕ ವಿತರಿಸಿ, ಖಾಲಿ ಇರುವ ಶಿಕ್ಷಕರ ಸ್ಥಾನಗಳನ್ನು ಕೂಡಲೇ ಭರ್ತಿ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ಅನುಭವ ಮಂಟಪ ಸ್ಥಳ ಮರಳಿ ಪಡೆಯಲು ದೆಹಲಿ ಚಲೋ
Kalaburagi: ವಿದ್ಯುತ್ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ
Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.