ಪ್ಲೇ ಆಫ್ ಗೆ ಪ್ಯಾಂಥರ್, ಬಿಜಾಪುರ ಬುಲ್ಸ್ ಹೊರಕ್ಕೆ
Team Udayavani, Aug 27, 2019, 5:15 AM IST
ಮೈಸೂರು: ಕೆಪಿಎಲ್ ಟಿ20 ಲೀಗ್‌ನ 8ನೇ ಆವೃತ್ತಿಯಲ್ಲಿ ಬೆಳಗಾವಿ ಪ್ಯಾಂಥರ್ಸ್ ಪ್ಲೇ ಆಫ್ ಸುತ್ತಿಗೆ ಪ್ರವೇಶ ಖಚಿತಪಡಿಸಿದೆ. ಕೂಟದುದ್ದಕ್ಕೂ ಹೀನಾಯ ಪ್ರದರ್ಶನ ನೀಡಿದ ಬಿಜಾಪುರ ಬುಲ್ಸ್ ಹೊರಬಿದ್ದಿದೆ.
ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ಸೋಮವಾರದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಿಜಾಪುರ ಬುಲ್ಸ್ ತಂಡ ಬೆಳಗಾವಿ ಪ್ಯಾಂಥರ್ ಬಿಗಿ ದಾಳಿಗೆ ಸಿಲುಕಿ 20 ಓವರ್‌ಗಳಲ್ಲಿ 8 ವಿಕೆಟಿಗೆ 136 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಬೆಳಗಾವಿ ಪ್ಯಾಂಥರ್ ಆರ್. ಸಮರ್ಥ್ (ಅಜೇಯ 50) ಹಾಗೂ ಮನೋಹರ್ (ಅಜೇಯ 42) ಅವರ ದಿಟ್ಟ ಬ್ಯಾಟಿಂಗ್ ನೆರವಿನಿಂದ 17.4 ಓವರ್‌ಗಳಲ್ಲಿ 3 ವಿಕೆಟಿಗೆ 137 ರನ್ ಗಳಿಸಿ 7 ವಿಕೆಟ್ ಸುಲಭ ಜಯ ಸಾಧಿಸಿತು.
ಸಿಡಿದ ಸಮರ್ಥ್, ಅಭಿನವ್
137 ರನ್ ಗೆಲುವಿನ ಗುರಿ ಬೆನ್ನಟ್ಟಿದ ಬೆಳಗಾವಿ 15 ರನ್ನಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಆರ್. ಸಮರ್ಥ್ ಹಾಗೂ ದೀಕ್ಷಾಂಶು ನೇಗಿ (32 ರನ್) ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿದರು. ಮೊತ್ತವನ್ನು 65ರ ತನಕ ವಿಸ್ತರಿಸಿದರು. ಈ ಹಂತದಲ್ಲಿ ನೇಗಿ ಇಲ್ಲದ ರನ್ ಕದಿಯಲು ಹೋಗಿ ರನೌಟಾದರು. ಬಳಿಕ ಅಭಿನವ್ ಮನೋಹರ್ ಜತೆಗೂಡಿದ ಸಮರ್ಥ್ ಬುಲ್ಸ್ ಬೌಲರ್‌ಗಳನ್ನು ದಂಡಿಸುತ್ತ ಸಾಗಿದರು. ಅಜೇಯರಾಗಿ ತಂಡವನ್ನು ದಡ ಸೇರಿಸಿದರು. ಸಮರ್ಥ್ 45 ಎಸೆತದಿಂದ 4 ಬೌಂಡರಿ, ಒಂದು ಸಿಕ್ಸರ್ ಬಾರಿಸಿದರು. ಅಭಿನವ್ ಮನೋಹರ್ 30 ಎಸೆತ ಎದುರಿಸಿ 5 ಬೌಂಡರಿ, ಒಂದು ಸಿಕ್ಸರ್ ಹೊಡೆದರು.
ಬಿಜಾಪುರ ಬುಲ್ಸ್ ಪರ ಎಂ.ಜಿ. ನವೀನ್ (28ಕ್ಕೆ 2) ಬಿಟ್ಟರೆ ಉಳಿದವರೆಲ್ಲರೂ ಬೆಳಗಾವಿ ಬ್ಯಾಟ್ಸ್ ಮನ್‌ಗಳನ್ನು ನಿಯಂತ್ರಿಸಲು ವಿಫಲರಾದರು. ಮೊದಲು ಬ್ಯಾಟಿಂಗ್ ಮಾಡಿದ್ದ ಬಿಜಾಪುರ ಬುಲ್ಸ್ ಪರ ಭರತ್ ಚಿಪ್ಲಿ 33 ರನ್ ಹಾಗೂ ಎನ್.ಪಿ. ಭರತ್ ಅಜೇಯ 35 ರನ್ ಹೊಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್
Teertharoopa Tandeyavarige: ತೀರ್ಥರೂಪರ ಜೊತೆ ರಚನಾ
Ramanagara: ಬಸ್ -ಬೈಕ್ ಅಪಘಾತ; ಇಬ್ಬರು ಮಕ್ಕಳು ಮೂವರು ಸ್ಥಳದಲ್ಲೇ ಮೃತ್ಯು
Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ
Bengaluru: ರೋಡ್ ರೇಜ್: ಕಾರಿನ ಬಾನೆಟ್ ಮೇಲೆ ಹತ್ತಿ ಯುವಕರ ಪುಂಡಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.