ಸೌಭಾಗ್ಯ ಅನರ್ಹರ ಪಾಲು-ಪ್ರತಿಭಟನೆ
Team Udayavani, Aug 27, 2019, 1:10 PM IST
ಶಿಗ್ಗಾವಿ: ಕಾರ್ಮಿಕರ ವಿಕಾಸ ವೇದಿಕೆ ಕಾರ್ಯಕರ್ತರು ಹೆಸ್ಕಾಂ ಕಚೇರಿ ಎದುರು ಪ್ರತಿಭಟಿಸಿದರು.
ಶಿಗ್ಗಾವಿ: ಸೌಭಾಗ್ಯ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳ ಬದಲಾಗಿ ನಕಲಿ ಫಲಾನುಭವಿಗಳಿಗೆ ಅನುಕೂಲ ಕಲ್ಪಿಸಿದ್ದಾರೆ ಎಂದು ಆರೋಪಿಸಿ ರಾಜ್ಯ ಕಾರ್ಮಿಕರ ವಿಕಾಸ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ರಾಜ್ಯಾಧ್ಯಕ್ಷ ಅಬ್ದುಲ್ ಕರಿಂ ಮೊಗಲಲ್ಲಿಯವರ ನೇತೃತ್ವದಲ್ಲಿ ಶಿಗ್ಗಾವಿ ಮತ್ತು ಬಂಕಾಪೂರ ಪದಾಧಿಕಾರಿಗಳು ಹೆಸ್ಕಾಂ ಕಚೇರಿ ಎದುರು ಪ್ರತಿಭಟಿಸಿ ಎಇಇ ಜಿ. ರಮೇಶ ಅವರಿಗೆ ಮನವಿ ಸಲ್ಲಿಸಿದರು.
ಪುರಸಭೆ ಸದಸ್ಯ ಸುಭಾಷ ಚೌಹಾಣ್ ಮಾತನಾಡಿ, ನನ್ನ ಗಮನಕ್ಕೂ ತರದೇ ಮೀಟರ್ ಅಳವಡಿಕೆ ಕಾರ್ಯ ನಡೆಯುತ್ತಿದೆ. ಯೋಜನೆ ನಿಜವಾದ ಫಲಾನುಭವಿಗಳಿಗೆ ತಲುಪುವ ಬದಲಾಗಿ ಎಜೆಂಟರ್ ಹಾವಳಿಯಿಂದಾಗಿ ನಕಲಿ ಫಲಾನುಭವಿಗಳ ಪಾಲಾಗುತ್ತಿದೆ ಎಂದು ಆರೋಪಿಸಿದರು.
ಅಬ್ದುಲ್ ಕರೀಂ ಮೊಗಲಲ್ಲಿಯವರ ಮಾತನಾಡಿ, ಕೊಳಚೆ ನಿವಾಸಿಗಳಿಗಾಗಿ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಇದಾಗಿದೆ. ಆದರೆ, ಫಲಾನುಭವಿಗಳ ಆಯ್ಕೆ ಮಾತ್ರ ಪಾರದರ್ಶಕವಾಗಿಲ್ಲ. ನೈಜ ಫಲಾನುಭವಿಗಳಿಗೆ ಅನ್ಯಾಯವಾಗುತ್ತಿದೆ ಎಂದು ದೂರಿದರು. ಜಿಲಾನಿ ಜಂಗ್ಲಿ, ಇಮಾಮ್‌ಹುಸೇನ್ ಅದಂಬಾಯಿ, ವೆಂಕಟೇಶ ಬಂಡಿವಡ್ಡರ, ರಮೇಶ ವನಹಳ್ಳಿ, ಶಿವಾನಂದ ದೇವಗೇರಿ, ನಾಜಿಲ್ ಸವಣೂರ, ಮಹಮ್ಮಶಫಿ ಸವಣೂರ, ವೆಂಕಟೇಶ ಭಜಂತ್ರಿ, ಲಕ್ಷ ್ಮಣ ವಡ್ಡರ, ಮಂಜುನಾಥ ಮದುರಕರ, ಮುಕ್ತಾರಬಾನು ತಿಮ್ಮಾಪೂರ ಹನಮಂತ ಶಿವಳ್ಳಿ ಹಾಗೂ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Haveri: ಮಾಜಿ ಸಚಿವ ಮನೋಹರ ತಹಶೀಲ್ದಾರ ವಿಧಿವಶ
Shiggaon; ಉಪಚುನಾವಣೆ ಮತದಾನಕ್ಕೆ ಗೈರಾದ ಗಾಯಕ ಹನುಮಂತ ಲಮಾಣಿ
Adi Jambava Samavesha: ಅಂಬೇಡ್ಕರ್ ಇಸ್ಲಾಂ ಧರ್ಮ ಸೇರಲು ಸಜ್ಜಾಗಿದ್ದರು: ಖಾದ್ರಿ
BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ
Lokayukta Raid: ಹಾವೇರಿಯಲ್ಲಿ ಎಇ ಕಾಶೀನಾಥ್ ಭಜಂತ್ರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ
MUST WATCH
ಹೊಸ ಸೇರ್ಪಡೆ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.