ಮಲಬಾರ್ ಗೋಲ್ಡ್ & ಡೈಮಂಡ್ಸ್‌ನಿಂದ 21 ಹೊಸ ಶೋರೂಂ
Team Udayavani, Aug 28, 2019, 3:04 AM IST
ಬೆಂಗಳೂರು: ವಿಶ್ವದ ಅತಿದೊಡ್ಡ ಜ್ಯುವೆಲ್ಲರಿ ರೀಟೇಲರ್ ಕಂಪನಿಯಾಗಿರುವ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ 2023ನೇ ಹಣಕಾಸು ಸಾಲಿನ ಯೋಜನೆಯ ಭಾಗವಾಗಿ ಮುಂದಿನ 6 ತಿಂಗಳಲ್ಲಿ 21 ಹೊಸ ಮಳಿಗೆಗಳನ್ನು ಆರಂಭಿಸಲಿದೆ.
ಮಲಬಾರ್ ಗ್ರೂಪ್‌ನ ಅಧ್ಯಕ್ಷ ಎಂ.ಪಿ.ಅಹ್ಮದ್ ಅವರು ಮಾತನಾಡಿ, ಜಾಗತಿಕ ಮತ್ತು ಭಾರತೀಯ ಮಾರುಕಟ್ಟೆಯಲ್ಲಿ ಅತ್ಯುತ್ತಮ ರೀತಿಯಲ್ಲಿ ನಮ್ಮ ಬ್ರ್ಯಾಂಡ್ ಅನ್ನು ಗ್ರಾಹಕರು ಒಪ್ಪಿಕೊಂಡಿದ್ದಾರೆ. ಪಾರದರ್ಶಕತೆ, ಪ್ರಾಮಾಣಿಕತೆ, ಗುಣಮಟ್ಟದ ಜತೆಗೆ ಮೌಲ್ಯವರ್ಧಿತ ಸೇವೆಗಳು, ಪ್ರತಿಯೊಬ್ಬ ಗ್ರಾಹಕರ ಅಭಿರುಚಿಗೆ ತಕ್ಕ ವಿನ್ಯಾಸಗಳ ಆಭರಣಗಳನ್ನು ಪೂರೈಕೆಯಂತಹ ವ್ಯವಹಾರ ಮೌಲ್ಯಗಳು ನಮ್ಮ ಆದ್ಯತೆಗಳಾಗಿವೆ ಎಂದರು.
ಈ ಕಾರಣದಿಂದಾಗಿಯೇ ಜಗತ್ತಿನಾದ್ಯಂತ ಗ್ರಾಹಕರು ಹೊಂದಿದ್ದೇವೆ. 2019ರಲ್ಲಿ ಇನ್ನೂ ಹೆಚ್ಚು ಶೋರೂಂ ಮತ್ತು ಆಭರಣ ತಯಾರಿಕಾ ಘಟಕಗಳನ್ನು ಆರಂಭಿಸಲಿದ್ದೇವೆ. ಇದಲ್ಲದೆ, ಯುವಪೀಳಿಗೆಗೆ ಉದ್ಯೋಗ ಲಭಿಸುವಂತಹ ಆಭರಣ ತಯಾರಿಕೆಯ ಕೌಶಲ್ಯಾಭಿವೃದ್ಧಿ ಕೇಂದ್ರಗಳನ್ನೂ ಆರಂಭಿಸಲಿದ್ದೇವೆ. ಈ ಎಲ್ಲ ಉಪಕ್ರಮಗಳು ವಿಶ್ವದಲ್ಲಿ ಅತಿದೊಡ್ಡ ಆಭರಣಗಳ ರೀಟೇಲರ್ ಹಿರಿಮೆಗೆ ಮತ್ತಷ್ಟು ಗರಿ ಮೂಡಿಸಲಿವೆ ಎಂದು ಅಭಿಪ್ರಾಯಪಟ್ಟರು.
ಹೊಸ ವಿಸ್ತರಣೆಯಿಂದಾಗಿ ಮಲಬಾರ್ ಗ್ರೂಪ್‌ನ ವೃತ್ತಿಪರ ಸಿಬ್ಬಂದಿ ಸಂಖ್ಯೆ 13,500 ಕ್ಕೆ ಏರಲಿದೆ ಮತ್ತು ಮುಂದಿನ ಐದು ವರ್ಷಗಳಲ್ಲಿ ಯೋಜನೆಯ ಬೆಳವಣಿಗೆ ಮತ್ತು ವಿಸ್ತರಣೆಯಿಂದ ಮತ್ತಷ್ಟು ಉದ್ಯೋಗ ಸೃಷ್ಟಿಯಾಗಲಿದೆ. ಪಾರದರ್ಶಕವಾದ ಮಾಲೀಕತ್ವದ ಮಾದರಿಯಲ್ಲಿ ಮಲಬಾರ್ ಗ್ರೂಪ್‌ನ ವಿವಿಧ ಸಂಸ್ಥೆಗಳಲ್ಲಿ ಹೂಡಿಕೆ ಮಾಡುವವರು ಶೇರುದಾರರಾಗುವ ಮೂಲಕ ನೂತನವಾದ ವ್ಯವಹಾರ ಮಾದರಿಯನ್ನು ಹೊಂದಿದೆ.
ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ಪ್ರಸ್ತುತ ಇದೇ ಮಾದರಿಯ ದೃಷ್ಟಿಕೋನ, ಸಮರ್ಪಣೆ ಮತ್ತು ಉತ್ಸಾಹಭರಿತವಾದ 4,000ಕ್ಕೂ ಅಧಿಕ ಹೂಡಿಕೆದಾರರಿದ್ದಾರೆ. ಶೇ.19.4ರಷ್ಟು ಪಾಲನ್ನು ಹೊಂದಿರುವ ಈ ಹೂಡಿಕೆದಾರರು ಮಲಬಾರ್ ಗ್ರೂಪ್‌ನಲ್ಲಿ ನೌಕರರಾಗಿದ್ದಾರೆ ಎಂದು ತಿಳಿಸಿದರು.
ಮಲಬಾರ್ ಗ್ರೂಪ್ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯ ಆದ್ಯತಾ ವಲಯಗಳೆಂದರೆ ಆರೋಗ್ಯ, ಶಿಕ್ಷಣ, ಮಹಿಳಾ ಸಬಲೀಕರಣ, ವಸತಿ ಮತ್ತು ಪರಿಸರ ರಕ್ಷಣೆ. ಸಂಸ್ಥೆಯು ತನ್ನ ಲಾಭದಲ್ಲಿ ಶೇ.5ರಷ್ಟನ್ನು ಸಿಎಸ್‌ಆರ್ ಚಟುವಟಿಕೆಗಳಿಗೆ ಮೀಸಲಿಟ್ಟಿದೆ. ಈ ಹಣವನ್ನು ತನ್ನ ಶೋರೂಂಗಳು ಕಾರ್ಯನಿರ್ವಹಿಸುತ್ತಿರುವ ಜಿಸಿಸಿ, ಭಾರತ, ಮಲೇಶಿಯಾ, ಸಿಂಗಾಪುರ ಮತ್ತು ಯುಎಸ್‌ಎಗಳಲ್ಲಿ ಹಲವಾರು ಸಾಮಾಜಿಕ ಕಳಕಳಿಯ ಉದ್ದೇಶಗಳಿಗೆ ವಿನಿಯೋಗಿಸುತ್ತಿದ್ದೇವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.