ನಿಟ್ಟಡೆ ಸಂಶೋಧಕ ಅಮೆರಿಕದಲ್ಲಿ ಸಾವು
Team Udayavani, Aug 28, 2019, 3:00 AM IST
ವೇಣೂರು: ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಸಂಶೋಧಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಬೆಳ್ತಂಗಡಿ ತಾಲೂಕಿನ ನಿಟ್ಟಡೆ ಗ್ರಾಮದ ಫಂಡಿಜೆ ಮೂಲದ ಚೈತನ್ಯ ಸಾಠೆ (36) ಅವರು ಪರ್ವತಾ ಅವರೋಹಣ ಸಂದರ್ಭ ಪ್ರಪಾತಕ್ಕೆ ಬಿದ್ದು ಮೃತಪಟ್ಟಿದ್ದಾರೆ.
ಇವರು ಪೋರ್ಟ್ಲ್ಯಾಂಡ್ ಮೂಲದ ಮಾಝಾಮಾಸ್ ಎಂಬ ಪರ್ವತಾರೋಹಿ ಸಂಘಟನೆಯಲ್ಲಿದ್ದು, ಅನೇಕ ಚಾರಣ ಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಅಮೆರಿಕದಲ್ಲಿನ ಸ್ಮಿತ್ರಾಕ್ ಗಿರಿಶಿಖರವನ್ನು ಇಳಿಯುತ್ತಿರುವ ಸಂದರ್ಭ ಕಾಲು ಜಾರಿ 100 ಅಡಿ ಆಳಕ್ಕೆ ಬಿದ್ದು ಮೃತಪಟ್ಟಿರುವುದಾಗಿ ಹೇಳಲಾಗಿದೆ. 12 ಮಂದಿಯ ಗೆಳೆಯರ ತಂಡ ಚಾರಣಕ್ಕೆ ತೆರಳಿದ್ದು, ಘಟನೆ ನಡೆದ ತಕ್ಷಣ ರಮೇಶ್ ಸಾಠೆಯವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.
ಚೈತನ್ಯ ಅವರು ಬೆಂಗಳೂರಿನಲ್ಲಿ ವಾಸವಾಗಿರುವ ಹಿರಿಯ ವಿಜ್ಞಾನಿ ರಮೇಶ್ ಸಾಠೆಯವರ ಪುತ್ರ. ವಿಜ್ಞಾನ, ಆಧ್ಯಾತ್ಮದ ಸಂಶೋಧಕರಾಗಿದ್ದ ಇವರು ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಪಡೆದು ಅಮೆರಿಕದ ಚಂಪಗಾನೆ ಅರ್ಬನಾ ನಗರದ ಈಲ್ಲಿನೋಇಸ್ ವಿಶ್ವವಿದ್ಯಾಲಯದಲ್ಲಿ ಸಂಶೋಧಕರಾಗಿ ಕೆಲಸ ಮಾಡುತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.