ಕೆರೆ ಕುಂಟೆ ಸೇರಿದ ಹೊಲದ ರಾಸಾಯನಿಕ
Team Udayavani, Aug 28, 2019, 9:22 AM IST
ಧಾರವಾಡ: ಮಳೆ ನಿಂತರೂ ಅದರ ಹನಿಗಳು ನಿಲ್ಲಲಿಲ್ಲ ಎನ್ನುವ ಗಾದೆ ಮಾತಿನಂತೆ, ನೆರೆ ನಿಂತರು ಅದರಿಂದಾದ ಹಾನಿಯ ದುಷ್ಪರಿಣಾಮಗಳು ಒಂದೊಂದಾಗಿ ಗೋಚರಿಸುತ್ತಲೇ ಇವೆ.
ನೆರೆಹಾವಳಿಯಿಂದ ಹಳ್ಳಗಳು ಎಬ್ಬಿಸಿದ ಹಾವಳಿಗೆ ಜನ, ಜಾನುವಾರು ಕೊಚ್ಚಿ ಹೋಗಿದ್ದವು. ಬೆಳೆಹಾನಿ, ಮನೆಹಾನಿ ಕೂಡ ಆಗಿದೆ. ಕೆಲವು ಕಡೆಗಳಲ್ಲಿ ಹೊಲಕ್ಕೆ ಹೊಲವೇ ಕೊಚ್ಚಿಹೋಗಿದೆ. ಇದರ ಸಾಲಿಗೆ ಇನ್ನೊಂದು ಹೊಸ ಸೇರ್ಪಡೆ ಜೋರಾದ ಮಳೆ ಹೊಡೆತಕ್ಕೆ ಹೊಲದಲ್ಲಿ ಅನೇಕ ವರ್ಷಗಳಿಂದ ಸಿಂಪರಣೆ ಮಾಡಿದ್ದ ರಾಸಾಯನಿಕ ಗೊಬ್ಬರ, ಕ್ರಿಮಿನಾಶಗಳು, ಕಳೆನಾಶಕದ ಅಂಶವೆಲ್ಲ ಕೊಚ್ಚಿಕೊಂಡು ಬಂದು ಕೆರೆ, ಕುಂಟೆ ಮತ್ತು ಹಳ್ಳದ ನೀರನ್ನು ಸೇರುತ್ತಿದೆ.
ಹೊಲಗಳ ಬದುಗಳಲ್ಲಿ ಹರಿಯುತ್ತಿರುವ ನೀರಿನ ತೇಲು (ಹರಿವು)ಗಳಲ್ಲಿ ರಾಸಾಯನಿಕಗಳನ್ನೊಳಗೊಂಡ ಹೊಲಸು ಜಮಾವಣೆಯಾಗಿದೆ. ಅಷ್ಟೇಯಲ್ಲ, ಇದು ಕಿರು ತೊರೆಗಳ ಮೂಲಕ ಕೆರೆ ಅಥವಾ ಹಳ್ಳಗಳನ್ನು ಸೇರಿ ಸಾಗುತ್ತಿದೆ. ಮೇಲ್ನೋಟಕ್ಕೆ ಇದೇನು ಹಾನಿ ಮಾಡುವ ಅಥವಾ ತೊಂದರೆ ಕೊಡುವ ವಿಚಾರವಲ್ಲ ಎನಿಸಿದರೂ, ರಾಸಾಯನಿಕ ಯುಕ್ತ ನೀರು ಮತ್ತೆ ಅಂತರ್ಜಲ ಮೂಲಗಳಲ್ಲಿ ಬೆರೆಯುತ್ತಿದೆ. ಇನ್ನೊಂದೆಡೆ ಹತ್ತಾರು ವರ್ಷಗಳಿಂದ ರೈತರ ಹೊಲದ ಮಣ್ಣು ಸೇರಿದ್ದ ರಾಸಾಯನಿಕಗಳು ಕೊಚ್ಚಿ ಹೋಗಿದ್ದರಿಂದ ಹೊಲ ಹಸನಾಗಿದೆ ಎನ್ನಬಹುದು. ಇನ್ನು ಗ್ರಾಮ ಮತ್ತು ನಗರ ವಾಸಿಗಳು ಎಲ್ಲೆಂದರಲ್ಲಿ ಬಿಸಾಡಿದ್ದ ಟನ್‌ಗಟ್ಟಲೇ ಮನೆ ಬಳಕೆ ತಾಜ್ಯ, ಪ್ಲಾಸ್ಟಿಕ್ ವಸ್ತುಗಳು, ಖಾಲಿ ಬಾಟಲಿಗಳು, ನಿರುಪಯುಕ್ತ ವಸ್ತುಗಳೆಲ್ಲವೂ ತೇಲಿ ಕೆರೆಕುಂಟೆ ಸೇರಿಕೊಂಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಸಮಾಜದಹಿತಕ್ಕಾಗಿ ಪಕ್ಷ ಮರೆತು ಹೋರಾಡಬೇಕು: ಕಾಶನ್ನಪ್ಪನವರ ವಿರುದ್ದ ಬೆಲ್ಲದ್ ಟೀಕೆ
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.