ಮಾರ್ಕೆಟ್ ಮಳಿಗೆ ಹರಾಜಿಗೆ ಗ್ರಹಣ


Team Udayavani, Aug 28, 2019, 11:31 AM IST

kopala-tdy-1

ಕೊಪ್ಪಳ: ಜೆ.ಪಿ. ಮಾರ್ಕೆಟ್‌ನಲ್ಲಿ ರಸ್ತೆ ತ್ಯಾಜ್ಯದ ಪಕ್ಕದಲ್ಲೇ ತರಕಾರಿ ವ್ಯಾಪಾರ ನಡೆದಿರುವುದು.

ಕೊಪ್ಪಳ: ನಗರದ ಹೃದಯ ಭಾಗದಲ್ಲಿರುವ ಜೆ.ಪಿ. ಮಾರುಕಟ್ಟೆ ಮಳಿಗೆ ಹಂಚಿಕೆ ಪ್ರಕ್ರಿಯೆ ಇನ್ನೂ ನಡೆದಿಲ್ಲ. ನಗರಸಭೆ ಮೂರು ಬಾರಿ ಮಳಿಗೆಗಾಗಿ ಹರಾಜು ಕರೆದು ರದ್ದು ಮಾಡಲಾಗಿದೆ. ದರ ಹೆಚ್ಚಳದಲ್ಲಿನ ವ್ಯತ್ಯಾಸವೇ ಇದಕ್ಕೆಲ್ಲ ಕಾರಣ ಎಂದೆನ್ನಲಾಗುತ್ತಿದೆ. ವರ್ಷ ಗತಿಸಿದರೂ ಮಳಿಗೆಗೆ ಉದ್ಘಾಟನೆ ಭಾಗ್ಯವೇ ಕಂಡಿಲ್ಲ.

ನಗರದ ಹೃದಯ ಭಾಗದಲ್ಲಿರುವ ಜೆ.ಪಿ ಮಾರುಕಟ್ಟೆಯಲ್ಲಿ ಹಿಂದಿನಿಂದಲೂ ತರಕಾರಿ ವ್ಯಾಪಾರ ವಹಿವಾಟು ನಡೆಯುತ್ತಿದೆ. ಮೊದಲಿದ್ದ ಹಳೆಯ ಮಳಿಗೆ ತೆರವು ಮಾಡಿ ಕಳೆದ ಮೂರು ವರ್ಷದ ಹಿಂದಷ್ಟೇ ಹೊಸ ಮಳಿಗೆಗೆ ಮಾಜಿ ಶಾಸಕ ಶಿವರಾಜ ತಂಗಡಗಿ ಅವರು ಭೂಮಿಪೂಜೆ ನೆರವೇರಿಸಿದ್ದರು. ಮಳಿಗೆ ನಿರ್ಮಾಣವಾದರೆ ಆಧುನಿಕ ಮಾರುಕಟ್ಟೆ ಸೌಲಭ್ಯ ದೊರೆಯುತ್ತದೆ ಎನ್ನುವ ವಾಗ್ಧಾನ ಮಾಡಿದ್ದರು. ಆದರೆ ಮಳಿಗೆ ನಿರ್ಮಾಣವಾಗಿ ಬರೊಬ್ಬರಿ ಒಂದು ವರ್ಷ ಗತಿಸಿದೆ. ಆದರೆ ವ್ಯಾಪಾರಸ್ಥರಿಗೆ ಪರಿಪೂರ್ಣವಾಗಿ ಹರಾಜು ಮಾಡಲಾಗಿಲ್ಲ.

ಮಳಿಗೆಯ ಕೆಳ ಭಾಗದಲ್ಲಿ ಕಟ್ಟೆಗಳಿಗೆ ಪೈಪೋಟಿ ಹೆಚ್ಚಿದೆ. ಎಲ್ಲರೂ ಕೆಳಗಡೆ ಮಳಿಗೆ ಬೇಕು ಎಂದು ಪಟ್ಟು ಹಿಡಿಯುತ್ತಿದ್ದಾರೆ. ಮೇಲಿನ ಮಳಿಗೆಯಲ್ಲಿ ವ್ಯಾಪಾರ ನಡೆಯಲ್ಲ. ಜನತೆ ಮೇಲ್ಭಾಗದಲ್ಲಿ ಬರುವುದಿಲ್ಲ. ಇದರಿಂದ ನಮಗೆ ವ್ಯಾಪಾರ ವಹಿವಾಟು ನಡೆಯಲ್ಲ ಎನ್ನುವುದು ವ್ಯಾಪಾರಸ್ಥರ ವೇದನೆ.

ಇನ್ನೂ ನಗರಸಭೆ ಲೋಕೋಪಯೋಗಿ ಇಲಾಖೆಯು ನಿಗದಿ ಮಾಡುವ ಮಳಿಗೆಗಳ ದರ ಪಟ್ಟಿ ಅನುಸಾರ ಮಳಿಗೆಗಳ ದರ ನಿಗದಿ ಮಾಡಿ ಈ ಹಿಂದೆ ಹರಾಜು ಕರೆಯಲಾಗಿತ್ತು. ಆದರೆ ಮುಂಗಡ ಹಣ ಹಾಗೂ ಬಾಡಿಗೆ ಹಣದ ಹೊರೆಯಾಗಿದೆ ಎನ್ನುವ ದೂರು ವ್ಯಾಪಾರಸ್ಥರಿಂದ ಕೇಳಿ ಬಂದ ಹಿನ್ನೆಲೆಯಲ್ಲಿ ಮೂರು ಬಾರಿ ಹರಾಜು ಕರೆದರೂ ಯಾವುದೇ ಪ್ರಕ್ರಿಯೆ ನಡೆದಿಲ್ಲ.

ಅಲ್ಲಲ್ಲಿ ವ್ಯಾಪಾರ: ನಗರಸಭೆಯು ಈ ಹಿಂದೆ ಮಳಿಗೆ ಹರಾಜು ಪ್ರಯತ್ನ ಮಾಡಿದೆ. ಆದರೆ ಇಲ್ಲಿ ಕೆಲವು ಹಿತಾಸಕ್ತಿಗಳ ಆಟದಿಂದ ಎಲ್ಲವೂ ಮಂದಗತಿಯಲ್ಲಿ ನಡೆದಿದೆ. ಹಾಗಾಗಿ ವ್ಯಾಪಾರಸ್ಥರಿಗೆ ಮಳಿಗೆ ಸಿಗದ ಹಿನ್ನೆಲೆಯಲ್ಲಿ ನಗರದ ವಿವಿಧ ಭಾಗದಲ್ಲಿ ರಸ್ತೆ ಪಕ್ಕದಲ್ಲಿ ವ್ಯಾಪಾರ ನಡೆಸುತ್ತಿದ್ದಾರೆ. ಇದು ಪ್ರಯಾಣಿಕರಿಗೂ ಕಿರಿಕಿರಿ ತಂದೊಡ್ಡಿದೆ.

ವಿಳಂಬ: ಈಗಿರುವ ಮಳಿಗೆಯ ಮೇಲ್ಭಾಗದಲ್ಲಿ ಅಂಬೇಡ್ಕರ್‌ ಭವನ ನಿರ್ಮಾಣ ಮಾಡುವ ಕುರಿತು ಈ ಮೊದಲು ಶಿವರಾಜ ತಂಗಡಗಿ ಅವರು ವಾಗ್ಧಾನ ಮಾಡಿದ್ದರು. ಆದರೆ ಮೊದಲು ಮೇಲ್ಭಾಗದ ಅಂಬೇಡ್ಕರ್‌ ಭವನ ನಿರ್ಮಾಣ ಮಾಡಿ ನಂತರ ಕೆಳ ಮಳಿಗೆಗಳ ಬಾಡಿಗೆ ಹರಾಜು ಕರೆಯಿರಿ ಎಂಬ ತಕರಾರು ಮಾಡಿದ ಹಿನ್ನೆಲೆಯಲ್ಲಿ ಎಲ್ಲವೂ ಸ್ಥಗಿತವಾಯಿತು. ನೂತನ ಮಾರುಕಟ್ಟೆಯಲ್ಲಿ 26 ಕಟ್ಟೆಗಳು ಹಾಗೂ 60 ಮಳಿಗೆಗಳನ್ನು ನಿರ್ಮಿಸಲಾಗಿದೆ. ಆದರೆ ವ್ಯಾಪಾರಸ್ಥರು ಎಲ್ಲೆಂದರಲ್ಲಿ ವ್ಯಾಪಾರ ಮಾಡಿ ಕೊಳೆತ ಹಣ್ಣು, ತರಕಾರಿ ಬಿಸಾಡುತ್ತಿರುವುದರಿಂದ ಮಾರುಕಟ್ಟೆ ಗಬ್ಬೆದ್ದು ನಾರುತ್ತಿದೆ. ನಗರಸಭೆ ಎಷ್ಟೇ ಸ್ವಚ್ಛ ಮಾಡಿದರೂ ದುರ್ನಾತ ಕಡಿಮೆಯಾಗಲ್ಲ. ರಸ್ತೆ ಬದಿಯಲ್ಲಿ, ಚರಂಡಿ ಅಕ್ಕಪಕ್ಕದಲ್ಲಿ ವ್ಯಾಪಾರ ಮಾಡಲಾಗುತ್ತಿದೆ.

ಒಟ್ಟಿನಲ್ಲಿ ನಗರಸಭೆ ಕೂಡಲೇ ಮಳಿಗೆ ಹಂಚಿಕೆ ಮಾಡಿದರೆ ವ್ಯಾಪಾರಸ್ಥರಿಗೆ ಅನುಕೂಲವಾಗಿದೆ. ಇಲ್ಲವಾದರೆ ನಗರಸಭೆಗೆ ಬರಬೇಕಾದ ಆದಾಯ ಬರುವುದಿಲ್ಲ. ಈಗಾಗಲೇ ಒಂದು ವರ್ಷದಿಂದ ಆದಾಯವೂ ಬಂದಿಲ್ಲ.

 

•ದತ್ತು ಕಮ್ಮಾರ

ಟಾಪ್ ನ್ಯೂಸ್

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

16-moodbidri

Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ

Pakistan: 6 security personnel hit, shoot-at-sight order

Pakistan: 6 ಮಂದಿ ಭದ್ರತಾ ಸಿಬ್ಬಂದಿ ಸಾವು, ಕಂಡಲ್ಲಿ ಗುಂಡು ಆದೇಶ

Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ

Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ

ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ  

ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ  

Sagara-Minister-Dinesh

KFD Vaccine: ಮುಂಬರುವ ನವೆಂಬರ್‌ನಲ್ಲಿ ಮಂಗನ ಕಾಯಿಲೆಗೆ ಲಸಿಕೆ ಸಿದ್ಧ: ದಿನೇಶ್ ಗುಂಡೂರಾವ್

Gold price drops again: Rs 77240 per 10 grams!

Gold Rate: ಚಿನ್ನದ ಬೆಲೆ ಮತ್ತೆ ಇಳಿಕೆ: 10 ಗ್ರಾಂಗೆ 77240 ರೂ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ

ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ

By Election… ಕಮಲಕ್ಕೊಂದು ಕೈಗೊಂದು

By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು

5,000 tractors blockade Suvarna Soudha on December 10; Kudalasangama Sri

Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

15-uv-fusion

Cleanliness: ಮನೆ ಮನೆಯಿಂದ ದೇಶವೇ ಸ್ವಚ್ಚ

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

Congress: ದ.ಕ ಗ್ರಾಮ ಪಂಚಾಯತ್‌; 24ರಲ್ಲಿ 19 ಸ್ಥಾನ ಕಾಂಗ್ರೆಸ್‌ ಬೆಂಬಲಿತರಿಗೆ ಗೆಲುವು

Siddapura: ಬುಲೆಟ್‌ ಬೈಕಿಗೆ ಜೆಸಿಬಿ ಡಿಕ್ಕಿ; ಸವಾರರಿಗೆ ಗಾಯ

Siddapura: ಬುಲೆಟ್‌ ಬೈಕಿಗೆ ಜೆಸಿಬಿ ಡಿಕ್ಕಿ; ಸವಾರರಿಗೆ ಗಾಯ

16-moodbidri

Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ

Amparu: ಬೈಕ್‌ ಸ್ಕಿಡ್‌; ಸವಾರ ಚಿಕಿತ್ಸೆಗೆ ಸ್ಪಂದಿಸದೆ ಸಾವು

Amparu: ಬೈಕ್‌ ಸ್ಕಿಡ್‌; ಸವಾರ ಚಿಕಿತ್ಸೆಗೆ ಸ್ಪಂದಿಸದೆ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.