ರಾನು ಮಂಡಲ್ ಗೆ 55 ಲಕ್ಷ ಮೌಲ್ಯದ ಬಂಗಲೆ ಉಡುಗೊರೆ ಕೊಟ್ಟ ನಟ ಸಲ್ಮಾನ್ ?
Team Udayavani, Aug 28, 2019, 4:30 PM IST
ಅದೃಷ್ಟ ಅನ್ನುವುದು ಮನುಷ್ಯನಿಗೆ ಸಿಗುವ ಅಪರೂಪದ ಉಡುಗೊರೆ. ಎಲ್ಲರ ಜೀವನದಲ್ಲಿ ಒಳ್ಳೆಯ ದಿನಗಳು ಬಂದೇ ಬರುತ್ತದೆ ಆ ಸಮಯ ಮಾತ್ರ ಗೌಪ್ಯ ಅಷ್ಟೇ. ಮೊನ್ನೆಯಷ್ಟೇ ಸ್ಟೇಷನ್ ಒಂದರಲ್ಲಿ ಹಾಡು ಹಾಡುತ್ತಾ ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ರಾನು ಮಂಡಲ್ ಎನ್ನುವ ಮಹಿಳೆ ಇಂದು ಬಾಲಿವುಡ್ ಅಂಗಳಕ್ಕೆ ಬಂದಿದ್ದಾರೆ ಅಂದರೆ ಅದು ಅವರ ಅದೃಷ್ಟವೇ ಸರಿ.
ರಾನು ಮಂಡಲ್ ಪಶ್ಚಿಮ ಬಂಗಾಳದ ರಣಘಾಟ್ ರೈಲ್ವೇ ನಿಲ್ದಾಣದಲ್ಲಿ ಲತಾ ಮಂಗೇಶ್ಕರ್ ರವರ ಜನಪ್ರಿಯ ಹಾಡು ‘ಏಕ್ ಪ್ಯಾರ್ ಕಾ ನಗ್ಮಾ’ ಎನ್ನುವ ಹಾಡನ್ನು ಹಾಡುತ್ತಿರುವಾಗ ವ್ಯಕ್ತಿ ಒಬ್ಬರು ಇದನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುತ್ತಾರೆ. ನೋಡ ನೋಡುತ್ತಿದ್ದಂತೆ ರಾತ್ರೋ ರಾತ್ರಿ ರಾನು ಮಂಡಲ್ ಕಂಚಿನ ಧ್ವನಿ ಎಲ್ಲೆಡೆ ಸಂಚಲನ ಮೂಡಿಸುತ್ತದೆ. ಇಲ್ಲಿಂದ ರಾನು ಮಂಡಲ್ ಜೀವನದ ಪಥವೇ ಬದಲಾಗುತ್ತದೆ.
ಹಿಂದಿಯ ಖ್ಯಾತ ಗಾಯಕ ಹಿಮೇಶ್ ರೆಶ್ ಮಿಯಾ ರಾನು ಮಂಡಲ್ ಗಾಗಿ “ತೇರಿ ಮೇರಿ ಕಹಾನಿ” ಅನ್ನುವ ಹಾಡನ್ನು ರೆಕಾರ್ಡ್ ಮಾಡಿಸಿದ್ದಾರೆ. ಈ ಹಾಡನ್ನು ಹಿಮೇಶ್ ತಮ್ಮ ಮುಂದಿನ ಚಿತ್ರದಲ್ಲಿ ಅಳವಡಿಸಿಕೊಳ್ಳಲಿದ್ದಾರೆ. ರಾನು ಹಾಡಿದ ಈ ಹಾಡು ವೈರಲ್ ಆಗಿದೆ. ಸದ್ಯ ರಾನು ಮಂಡಲ್ ಬಾಲಿವುಡ್ ಮಾತ್ರವಲ್ಲ ಖಾಸಗಿ ವಾಹಿನಿಯ ಕಾರ್ಯಕ್ರಮದಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.
ಈಗ ರಾನು ಮಂಡಲ್ ಗಾಗಿ ನಟ ಸಲ್ಮಾನ್ ಖಾನ್ 55 ಲಕ್ಷ ಮೌಲ್ಯದ ಬಂಗಲೆಯನ್ನು ಉಡುಗೊರೆ ಆಗಿ ಕೊಟ್ಟಿದ್ದಾರೆ ಎನ್ನುವ ವರದಿ ಹರಿದಾಡುತ್ತಿದೆ. ಮೂಲಗಳ ಪ್ರಕಾರ ಸಲ್ಮಾನ್ ಖಾನ್ ತಮ್ಮ ದಬಾಂಗ್-3 ಚಿತ್ರಕ್ಕಾಗಿ ರಾನು ಮಂಡಲ್ ರಿಂದ ಹಾಡನ್ನು ರೆಕಾರ್ಡ್ ಮಾಡಲು ಇಚ್ಛಿಸಿದ್ದು, 55 ಲಕ್ಷ ಮೌಲ್ಯವುಳ್ಳ ಬಂಗಲೆಯನ್ನು ಉಡುಗೊರೆ ಆಗಿ ನೀಡಿದ್ದರ ಬಗ್ಗೆ ಇನ್ನಷ್ಟೇ ಖಚಿತ ಮಾಹಿತಿ ಹೊರ ಬೀಳಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.