ಭಾರತಕ್ಕೆ ಏರ್‌ಸ್ಪೇಸ್ ನಿಷೇಧಿಸಿದರೆ ಏನಾಗುತ್ತದೆ
ಪಾಕ್ ಕೈಗೊಂಡ ಈ ಕ್ರಮದ ಹಿನ್ನೆಲೆ ಏನಾಗಿರಬಹುದು?
Team Udayavani, Aug 28, 2019, 9:42 PM IST
ಹೊಸದಿಲ್ಲಿ: ಭಾರತ ಕಾಶ್ಮೀರಕ್ಕೆ ನೀಡಿದ 370ನೇ ವಿಧಿಯನ್ನು ಹಿಂಪಡೆದ ಬಳಿಕ ಪಾಕಿಸ್ಥಾನ ಒಂದಲ್ಲ ಒಂದು ರೀತಿಯ ಪ್ರತಿರೋಧ ತೋರಿಸುತ್ತಾ ಬಂದಿದೆ. ಇದೀಗ ತನ್ನಲ್ಲಿರುವ ಎಲ್ಲಾ ಏರ್‌ಸ್ಪೇಸ್ ಅನ್ನು ಮುಚ್ಚುವ ಪ್ರಸ್ತಾವನೆಯನ್ನು ಪಾಕ್ ಹೊಂದಿದೆ. ಇದರ ಆರಂಭಿಕ ಹಂತವಾಗಿ ಪ್ರಮುಖ ಕರಾಚಿ ಮಾರ್ಗವನ್ನು ಆ. 31ರ ವರೆಗೆ ಪಾಕ್ ನಿಷೇಧಿಸಿದೆ.
ಏನಿದು ಏರ್‌ಸ್ಪೇಸ್?
ಒಂದು ದೇಶ ಇನ್ನೊಂದು ವಾಯು ಪ್ರದೇಶದ ಮೂಲಕ ಹಾರಾಟ ನಡೆಸುವುದಕ್ಕಾಗಿ ಅಂತಾರಾಷ್ಟ್ರೀಯ ಒಪ್ಪಂದಗಳನ್ನು ನಡೆಸಲಾಗುತ್ತದೆ. ಇದರ ಅನ್ವಯ ಬೇರೆ ದೇಶದ ವಿಮಾನಗಳು ತನ್ನ ವಾಯು ನೆಲೆಯ ಮೂಲಕ ಸಂಚಾರಕ್ಕೆ ಅನುಮತಿ ಕಲ್ಪಿಸಲಾಗುತ್ತದೆ. ಇದಕ್ಕಾಗಿ ನಿರ್ದಿಷ್ಟ ಮೊತ್ತವನ್ನೂ ನೀಡಲಾಗುತ್ತದೆ.
ಫೆಬ್ರವರಿ 27ರಂದು ಬಾಲಾಕೋಟ್ ಏರ್‌ಸ್ಟ್ರೈಕ್ ನಡದ ಬಳಿಕ ಪಾಕಿಸ್ಥಾನ ತನ್ನ ದೇಶದ ಭದ್ರತೆಯ ಕಾರಣವೊಡ್ಡಿ ಏರ್ ಸ್ಪೇಸ್ ಬಂದ್ ಮಾಡಿತ್ತು. ಕೆಲವು ವಾರಗಳ ಬಳಿಕ ತೆರವು ಮಾಡಿತ್ತು. ಇದೀಗ ಮತ್ತೆ ಏರ್ ಸ್ಪೇಸ್ ನಿಷೇಧಿಸಿ ಆಟವಾಡುತ್ತಿದೆ.
ಎಲ್ಲಿಗೆಲ್ಲಾ ಪ್ರಯಾಣ
ಸದ್ಯ ಪಾಕಿಸ್ಥಾನದ ಏರ್ ಸ್ಪೇಸ್ ಬಳಸಿ ಭಾರತದಿಂದ ಐರೋಪ್ಯ ರಾಷ್ಟ್ರಗಳು, ಅಮೆರಿಕ ಮತ್ತು ಅರಬ್ ರಾಷ್ಟ್ರಗಳಿಗೆ ಸಂಚರಿಸಲಾಗುತ್ತದೆ. 50 ವಿಮಾನಗಳು ಈ ಮಾರ್ಗ ಬಳಸಿ ಸಂಚರಿಸುತ್ತವೆ.ಪಾಕ್ ತನ್ನ ಏರ್ ಸ್ಪೇಸ್ ನಿಷೇಧಿಸಿದ ಪರಿಣಾಮ ಪರ್ಯಾಯ ದಾರಿಯನ್ನು ಭಾರತ ಬಳಸಲಿದೆ. ಇದು 2-4 ಗಂಟೆ ತಡವಾಗಲಿದೆ.
ಪರ್ಯಾಯ ದಾರಿ
ಭಾರತದ ಏರ್ ಇಂಡಿಯಾ, ಸ್ಪೈಸ್ ಜೆಟ್ ಮತ್ತು ಇಂಡಿಗೋ ವಿಮಾನಗಳು ಪರ್ಯಾಯ ದಾರಿಯನ್ನು ಬಳಸಿ ಸಂಚರಿಸಲಿದೆ. ವಿದೇಶ ವಿಮಾನಯಾನ ಸಂಸ್ಥೆಯಾದ ಏರ್ ಕೆನಡ, ಯುನೈಟೆಡ್ ಏರ್ ಲೈನ್ಸ್ ಇದೇ ಮಾರ್ಗದಲ್ಲಿ ಸೇವೆ ನೀಡುತ್ತಿವೆ. ಏರ್ ಇಂಡಿಯಾಗೆ ಸುಮಾರು 500 ಕೋಟಿ ರೂ. ನಷ್ಟವಾಗಲಿದೆ. ಇತರ ವಿಮಾನಯಾನ ಸಂಸ್ಥೆಗಳಿಗೆ 60 ಕೋಟಿ ರೂ. ನಷ್ಟವಾಗಲಿದೆ.
ಕುತೂಹಲ ಮೂಡಿಸಿದ ಆ 4 ದಿನ
ಪಾಕಿಸ್ಥಾನ ಭಾರತಕ್ಕೆ ಎಲ್ಲಾ ಏರ್‌ಸ್ಪೇಸ್ ನಿಷೇಧಿಸುವ ಮಾತುಗಳನ್ನಾಡಿದ ಬಳಿಕ ಆ. 31ರ ವರೆಗೆ ನಿಷೇಧ ಅನ್ವಯವಾಗುತ್ತದೆ ಎಂದು ಹೇಳಿದೆ. ಇದಕ್ಕೆ ಅಲ್ಲಿ ಕ್ಯಾಬಿನೆಟ್ ನ ಅನುಮೋದನೆಯೂ ದೊರಕಿದೆ. ಆದರೆ ಪಾಕಿಸ್ಥಾನ ಯಾಕೆ ಮುಂದಿನ 4 ದಿನಗಳನ್ನು ಮಾತ್ರ ಆಯ್ಕೆ ಮಾಡಿದೆ ಎಂಬುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ವಿಷಯವಾಗಿದೆ. ಭಾರತದೊಂದಿಗೆ ಎಲ್ಲಾ ರಾಜತಾಂತ್ರಿಕ ಸಂಬಂಧಗಳನ್ನು ಕಡಿತಗೊಳಿಸಿದ ಪಾಕ್ ನೀಡಿದ ಈ 4 ದಿನದ ಗಡುವು ಮಾತ್ರ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಏನಿರಬಹುದು ಪಾಕ್ ನ ಈ ತಂತ್ರದ ಹಿಂದಿನ ರಹಸ್ಯ?
ಸಾಧ್ಯಾಸಾಧ್ಯತೆ 1: ಈಗಾಗಲೇ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಾಕ್ ತನ್ನ ಏರ್‌ಸ್ಪೇಸ್ ಅನ್ನು ಭಾರತದ ಬಳಸುವುದನ್ನು ನಿಲ್ಲಿಸಿದರೆ ತನಗೆ ಆಗುವ ನಷ್ಟವನ್ನು ಅಂದಾಜು ಮಾಡುತ್ತಿರಬಹುದು.
ಸಾಧ್ಯಾಸಾಧ್ಯತೆ 2: ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನದ ವಿಧಿ 370ನ್ನು ಹಿಂದೆಗೆದ ಬಳಿಕ ವ್ಯಯಕ್ತಿಕವಾಗಿ ಪಾಕ್ ತಲ್ಲಣಕ್ಕೆ ಒಳಗಾಗಿದೆ. ಹೀಗಾಗಿ ಏರ್‌ಸ್ಪೇಸ್ ನಿಷೇಧಿಸಿದರೆ ಭಾರತದ ತನ್ನ ನಿರ್ಧಾರ ಬದಲಾಯಿಸಬಹುದೇ ಎಂದೂ ಪರೀಕ್ಷಿಸಬಹುದು.
ಸಾಧ್ಯಾಸಾಧ್ಯತೆ 3: ಭಾರತ ತನ್ನ ಮೂಲಕ ಮಧ್ಯಪ್ರಾಚ್ಯ ರಾಷ್ಟ್ರಗಳ ಮೂಲಕ ಸಂಪರ್ಕ ಇಟ್ಟುಕೊಳ್ಳುವುದನ್ನು ತಡೆಯುವ ಪ್ರಯತ್ನವಾಗಿರಬಹುದು.
ಸಾಧ್ಯಾಸಾಧ್ಯತೆ 4: ಭಾರತ ಪರ್ಯಾಯ ಏರ್‌ಸ್ಪೇಸ್ ಬಳಸಿವುದರಿಂದ ಆರ್ಥಿಕ ಹೊಡೆತಕ್ಕೆ ಸಿಲುಕಿಸುವುದು ಒಂದು ರಣ ತಂತ್ರ.
ಸಾಧ್ಯಾಸಾಧ್ಯತೆ 5: ಈಗಾಗಲೇ ಭಾರತದೊಂದಿಗೆ ಯುದ್ದ ಮಾಡುವ ಮಾತುಗಳನ್ನಾಡಿರುವ ಪಾಕ್, ತನ್ನಲ್ಲಿ ಶಸ್ತ್ರಾಸ್ತ್ರವನ್ನು ಶೇಖರಿಸಿಟ್ಟುಕೊಳ್ಳಲು ಈ ಕ್ರಮದ ಮೊರೆ ಹೋಗಿರುವ ಸಾಧ್ಯತೆ ಇದೆ. ತನ್ನ ವಿಮಾನ ನಿಲ್ದಾಣಗಳ ಮೂಲಕ ಯುಧ್ದೋಪಕರಣವನ್ನು ಸಾಗಿಸಲು ಈ ತಂತ್ರ ಬಳಸಿರಬಹುದು.
ಸಾಧ್ಯಾಸಾಧ್ಯತೆ 6: ಭಾರತದ ಮೇಲೆ ವೈಮಾನಿಕ ಯುದ್ದ ನಡೆಸಲು ತನ್ನ ವಿಮಾನ ನಿಲ್ದಾಣವನ್ನು ಬಳಸುವ ಸಾಧ್ಯತೆ ಇದೆ.
ಸಾಧ್ಯಾಸಾಧ್ಯತೆ 7: ಈಗಾಗಲೇ ಏರ್‌ಸ್ಪೇಸ್ ನಿಷೇಧಿಸುವ ಮಾತುಗಳನ್ನಾಡಿರುವ ಪಾಕ್ ತನ್ನ ಮಾತುಗಳನ್ನು ಉಳಿಸುವ ಸಲುವಾಗಿ ಈ ತಿಂಗಳು ಮಾತ್ರ ನಿಷೇಧ ಹೇರಿ ತನಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಗುತ್ತಿರುವ ಮುಜುಗರವನ್ನು ತಪ್ಪಿಸಲು ಈ ಕ್ರಮಕೈಗೊಂಡಿರಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ
Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು
Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.