ಪ್ರಕೃತಿ ವಿಕೋಪ ಸಂತ್ರಸ್ತ ಪರಿಹಾರ ಪಡೆಯದವರಿಗೆ ತತ್‌ಕ್ಷಣ ಕಿಟ್‌

ಬಂಟ್ವಾಳ: ಕೆಡಿಪಿ ಸಭೆಯಲ್ಲಿ ಶಾಸಕ ರಾಜೇಶ್‌ ನಾೖಕ್‌ ಸೂಚನೆ

Team Udayavani, Aug 29, 2019, 5:00 AM IST

h-2

ಬಂಟ್ವಾಳ: ಪ್ರಕೃತಿ ವಿಕೋಪದಲ್ಲಿ ಮನೆ ಸಂಪೂರ್ಣ ಹಾನಿಯಾಗಿ, ಪರಿಹಾರ ಪಡೆಯದ ಕರೋಪಾಡಿ ಗ್ರಾಮದ ಸಂತ್ರಸ್ತ ಕುಟುಂಬಕ್ಕೆ ತತ್‌ಕ್ಷಣ ಕಿಟ್‌ ವಿತರಿಸಿ, ಪುನರ್‌ ವಸತಿಗೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಕಂದಾಯ ಅಧಿಕಾರಿಗೆ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಸೂಚಿಸಿದರು.

ಆ. 28ರಂದು ತಾ.ಪಂ. ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಜಿ.ಪಂ. ಸದಸ್ಯ ಎಂ.ಎಸ್‌. ಮಹಮ್ಮದ್‌, ಸಂತ್ರಸ್ತರೊಬ್ಬರ ಮನೆ ಸಂಪೂರ್ಣ ನಾಶವಾಗಿದ್ದರೂ ಸರಕಾರ ದಿಂದ ಯಾವುದೇ ಪರಿಹಾರ ಸಿಗದ ಬಗ್ಗೆ ತಿಳಿಸಿದಾಗ ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕರು ಮೇಲಿನಂತೆ ಸೂಚನೆ ನೀಡಿದರು.

ಮನೆ ಸಂಪೂರ್ಣ ಕುಸಿದಿರುವ ಸ್ಥಳಕ್ಕೆ ಸ್ವತಃ ಹೋಗಿ ಪರಿಶೀಲನೆ ಮಾಡಿದ್ದೇನೆ. ಪರಿಹಾರ ಕ್ರಮಕ್ಕೆ ಶಿಫಾರಸು ಮಾಡದೇ ಇರಲು ಕಾರಣವೇನು ಎಂದು ಪ್ರಶ್ನಿಸಿ, ಸೂಕ್ತ ವ್ಯವಸ್ಥೆ ಮಾಡುವಂತೆ ತಿಳಿಸಿದರು.

ಪ್ರಕೃತಿ ವಿಕೋಪದಲ್ಲಿ ಒಟ್ಟು 507 ಸಂತ್ರಸ್ತ ರಿಗೆ ಪರಿಹಾರಕ್ಕೆ ಶಿಫಾರಸು ಮಾಡಲಾಗಿದೆ. ಒಂದು ಮನೆ ಪಟ್ಟಿಯಿಂದ ತಪ್ಪಿ ಹೋಗಿರು ವುದು ಹೇಗೆ ಎಂದು ಪ್ರಶ್ನಿಸಿದರು. ಸರಕಾರ ದಿಂದ ಪೂರೈಸಿದ ಕಿಟ್‌ ಇನ್ನೂ ಪೂರ್ಣ ವಿತರಣೆ ಆಗಿಲ್ಲ. ವಿತರಣೆ ನಡೆಸಿ ಎಂದರು.

ನೀರಾ ಘಟಕ ಪುನಶ್ಚೇತನ ಸಾಧ್ಯವೇ
ತುಂಬೆ ತೋಟಗಾರಿಕ ಇಲಾಖೆಯ ಸುಪರ್ದಿಯಲ್ಲಿ ಇದ್ದಂತಹ ನೀರಾ ಘಟಕದ ಬಗ್ಗೆ ಜಿ.ಪಂ. ಸದಸ್ಯ ಎಂ. ತುಂಗಪ್ಪ ಬಂಗೇರ ಪ್ರಸ್ತಾವಿಸಿ, ಅದರ ಪುನಶ್ಚೇತನ ಸಾಧ್ಯವೇ ಎಂದು ಪ್ರಶ್ನಿಸಿದರು. ತೋಟಗಾರಿಕ ಅಧಿ ಕಾರಿ ಉತ್ತರಿಸಿ, ಸರಕಾರವೇ ಸ್ಥಳಾಂತರಕ್ಕೆ ಶಿಫಾರಸು ಮಾಡಿದೆ. ತುಂಬೆ ತೋಟಗಾರಿಕ ಕ್ಷೇತ್ರದಲ್ಲಿ 27 ಎಕ್ರೆ ಜಮೀನಿದ್ದು, ಮುಂದಕ್ಕೆ ಅವಶ್ಯವಾದರೆ ಸರಕಾರವು ನೀರಾ ಘಟಕ ವನ್ನು ಪುನಶ್ಚೇತನ ಮಾಡಬಹುದು ಎಂದರು.

ತುಂಬೆ ರಾ.ಹೆ. ಸಮೀಪವಿರುವ ಬೀಜೋ ತ್ಪಾದನೆ ಕೇಂದ್ರವನ್ನು ಗ್ರಾಮಾಂತರಕ್ಕೆ ಸ್ಥಳಾಂತ ರಿಸಿ, ಆ ಸ್ಥಳವನ್ನು ಕ್ರೀಡಾ ಹಾಸ್ಟೆಲ್‌ ನಿರ್ಮಿ ಸಲು ನೀಡುವುದಕ್ಕೆ ಸಾಧ್ಯವಿದೆಯೇ, ಇಲಾ ಖೆಗೆ ಅಷ್ಟೇ ಜಮೀನನ್ನು ಇತರ ಕಡೆ ನೀಡಿದರೆ ಸಾಧ್ಯವೇ ಎಂಬ ಬಗ್ಗೆ ಶಾಸಕರು ಪ್ರಶ್ನಿಸಿದರು. ಜಿಲ್ಲಾಮಟ್ಟದಲ್ಲಿ ಪ್ರಸ್ತಾವಿಸುವಂತೆ ತೋಟಗಾರಿಕ ಅಧಿಕಾರಿ ತಿಳಿಸಿದರು.

ಬೆಂಜನಪದವು 10 ಕೋ. ರೂ. ವೆಚ್ಚದ ಕ್ರೀಡಾಂಗಣ ವಿಚಾರ ಪ್ರಸ್ತಾವದಲ್ಲಿ ಯುವ ಸಬಲೀಕರಣ ಇಲಾಖೆ ಅಧಿಕಾರಿ ಮಾತನಾಡಿ, ಶಾಸಕರ ಸೂಚನೆಯಂತೆ ನೀರಿನ ಸರಬರಾಜು ವ್ಯವಸ್ಥೆ ಪರಿಶೀಲನೆಗೆ ಲೋಕೋಪಯೋಗಿ ಇಲಾಖೆಗೆ ಶಿಫಾರಸು ಮಾಡಲಾಗಿದೆ. ಬಹುಗ್ರಾಮ ಕುಡಿಯುವ ನೀರಿನ ಸಂಪರ್ಕದಲ್ಲಿ ಜೋಡಿಸಲು ಸಾಧ್ಯವೇ ಎಂಬ ಕುರಿತು ವರದಿ ಬಂದ ಬಳಿಕ ಕ್ರಮ ಸಾಧ್ಯ ಎಂದರು. ಈ ಬಗ್ಗೆ ಕೆಲಸ ಮಾಡುವಂತೆ ಶಾಸಕರು ಸೂಚಿಸಿದರು.

ನರಿಕೊಂಬು ಗ್ರಾಮ ಪೋಡಿಮುಕ್ತ
ಭೂಮಾಪನ ಇಲಾಖೆ ನರಿಕೊಂಬು ಗ್ರಾಮವನ್ನು ಮುಂದಿನ ಅಕ್ಟೋಬರ್‌ನಲ್ಲಿ ಪೋಡಿಮುಕ್ತ ಮಾಡಲು ನಿರ್ದಿಷ್ಟ ಸರ್ವೆ ಅಧಿಕಾರಿಯನ್ನು ನಿಯೋಜಿಸಿದೆ. ಅವರು ಈಗಾಗಲೇ 18 ಫೈಲ್‌ಗ‌ಳನ್ನು ಮುಕ್ತಾಯ ಮಾಡಿದ್ದಾರೆ. ಇನ್ನುಳಿದ ಕೆಲಸದ ಬಗ್ಗೆ ನಿರ್ದಿಷ್ಟ ಅವಧಿಯಲ್ಲಿ ಕ್ರಮ ಕೈಗೊಂಡು ಸಮಗ್ರ ವರದಿ ನೀಡುವುದಾಗಿ ತಿಳಿಸಿದರು.

ಹಾಲಿ ಮಳೆಗಾಲದ ಹಂಗಾಮಿನಲ್ಲಿ 2,860 ಹೆಕ್ಟೇರ್‌ ಭತ್ತದ ಬೆಳೆ ಕೃಷಿ ಮಾಡಲಾಗಿದೆ. ಅದಕ್ಕೆ ಸರಕಾರದ ಗೈಡ್‌ಲೈನ್‌ ಪ್ರಕಾರ 223 ಹೆಕ್ಟೇರ್‌ಗೆ ಸಹಾಯ ಧನ ನೀಡಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕರು ಮಾಹಿತಿ ನೀಡಿದರು.

ಸರಕಾರವು ಅಂಗನವಾಡಿಗೆ ಪ್ರತ್ಯೇಕ ಕಟ್ಟಡ ಮಾಡಿಸುವ ಬದಲು ಹತ್ತಿರದ ಶಾಲೆಯಲ್ಲಿ ಸೂಕ್ತ ಕಟ್ಟಡ ಇದ್ದರೆ ಅದನ್ನೇ ಬಳಸುವ ಬಗ್ಗೆ ಆಯಾ ಇಲಾಖೆ ಮಾರ್ಗ ದರ್ಶಿ ಸೂಚನೆ ನೀಡಿದೆ. ಇದರಿಂದ ಶಾಲೆಗೆ ಮಕ್ಕಳು ಬರುವುದಕ್ಕೆ, ಮಕ್ಕಳಿಗೆ ಭದ್ರತೆ ಅವಕಾಶ ಸಿಗುವುದು. ಅವಶ್ಯ ಅಂಗನ ವಾಡಿ ಕಟ್ಟಡದ ಬಗ್ಗೆ ಪಟ್ಟಿ ತಯಾರಿಸು ವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾ ಖೆಯ ಅಧಿಕಾರಿಗೆ ಇಲಾಖಾವಾರು ಪರಿಶೀಲನೆ ಸಂದರ್ಭ ಶಾಸಕರು ತಿಳಿಸಿದರು.

ಮೆಸ್ಕಾಂ ಅನಧಿಕೃತ ರಜೆ
ಪ್ರಕೃತಿ ವಿಕೋಪ ಸಂದರ್ಭದಲ್ಲಿ ಮೆಸ್ಕಾಂ ಉತ್ತಮ ಕೆಲಸ ಮಾಡಿದೆ ಎಂದು ಜಿ.ಪಂ. ಸದಸ್ಯ ಎಂ. ತುಂಗಪ್ಪ ಬಂಗೇರ ಅಭಿನಂದಿಸಿದರು. ಆದರೆ ತನ್ನ ಏರಿಯಾದಲ್ಲಿ ಹಾನಿ ಆಗಿರುವ ವಿದ್ಯುತ್‌ ಪರಿವರ್ತಕ ದುರಸ್ತಿ ಆಗಿಲ್ಲ ಎಂದು ಎಂ.ಎಸ್‌. ಮಹ ಮ್ಮದ್‌ ದೂರಿದರು. ಮೆಸ್ಕಾಂ ಮಂಗಳ ವಾರ ಲೈನ್‌ ದುರಸ್ತಿ ಉದ್ದೇಶಕ್ಕೆ ಸಮಗ್ರವಾಗಿ ವಿದ್ಯುತ್‌ ನಿಲುಗಡೆ ಮಾಡುವ ಬದಲು ದುರಸ್ತಿ ಪ್ರದೇಶದ ಸಂಪರ್ಕ ಮಾತ್ರ ನಿಲುಗಡೆ ಮಾಡಿದಲ್ಲಿ ಜನರಿಗೆ ಉಪಕಾರ ಆಗುತ್ತದೆ. ಇಲ್ಲದಿದ್ದಲ್ಲಿ ಅನಧಿಕೃತ ರಜೆ ಘೋಷಿಸಿದಂತೆ ಆಗುವುದಾಗಿ ಶಾಸಕರು ಅಭಿಪ್ರಾಯಪಟ್ಟರು.

ಸಾಮಾಜಿಕ ಅರಣ್ಯ ಇಲಾಖೆ 7 ಲಕ್ಷ ರೂ. ವೆಚ್ಚದಲ್ಲಿ 89 ಸಾವಿರ ನರ್ಸರಿ ಸಸಿಗಳನ್ನು ತಾ|ನಲ್ಲಿ ವಿತರಿಸಿದೆ ಎಂದು ಅರಣ್ಯಾಧಿಕಾರಿ ತಿಳಿಸಿದರು. ಸಾಮಾಜಿಕ ಅರಣ್ಯ ಇಲಾಖೆಯು 70 ಮಂದಿಗೆ 35 ಸಾವಿರ ಗಿಡಗಳನ್ನು ಹಂಚಿದ್ದಾಗಿ ತಿಳಿಸಿದರು. ಇಷ್ಟೊಂದು ಗಿಡಗಳನ್ನು ಪಡೆದ ವ್ಯಕ್ತಿಗಳ ಹೆಸರನ್ನು ನೀಡುವಂತೆ ಶಾಸಕರು ಸೂಚಿಸಿದರು.

ಜಿ.ಪಂ. ಸದಸ್ಯರಾದ ಕಮಲಾಕ್ಷಿ ಕೆ. ಪೂಜಾರಿ, ಮಂಜುಳಾ ಮಾಧವ ಮಾವೆ, ಮಮತಾ ಡಿ.ಎಸ್‌. ಗಟ್ಟಿ, ರವೀಂದ್ರ ಕಂಬಳಿ ಮಾತನಾಡಿದರು.ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಟಾಸ್‌ ಅಲಿ, ಸ್ಥಾಯೀ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಸಿ. ಬಂಗೇರ ಉಪಸ್ಥಿತ ರಿದ್ದರು. ತಾ.ಪಂ. ಇಒ ರಾಜಣ್ಣ ಸ್ವಾಗತಿಸಿ, ವಂದಿಸಿದರು.

ಡೆಂಗ್ಯೂ 82 ಪ್ರಕರಣ
ತಾ|ನಲ್ಲಿ ಒಟ್ಟು 82 ಡೆಂಗ್ಯೂ ಪ್ರಕರಣ ವರದಿ ಆಗಿದ್ದು , ಸೂಕ್ತ ಚಿಕಿತ್ಸೆ ಬಳಿಕ ಅವರು ಗುಣಮುಖರಾಗಿದ್ದಾರೆ. ಪುಂಜಾಲಕಟ್ಟೆ ಪ್ರಾ. ಆರೋಗ್ಯ ಕೇಂದ್ರದಲ್ಲಿ 12, ವಿಟ್ಲ ದಲ್ಲಿ 10, ಮಾಣಿ 12 ಪ್ರಕರಣಗಳು ವರದಿ ಆಗಿವೆ. ಉಳಿದವುಗಳು ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ಗುರುತಿಸಲ್ಪಟ್ಟು ಚಿಕಿತ್ಸೆ ನೀಡಲಾಗಿದೆ ಎಂದು ತಾ| ಆರೋಗ್ಯ ಅಧಿಕಾರಿ ತಿಳಿಸಿದರು.

ಹಡೀಲು ಗದ್ದೆಯಲ್ಲಿ ಬೆಳೆ
ತಾ|ನಲ್ಲಿ ಹಡೀಲು ಗದ್ದೆಗಳ ಅಂಕಿಅಂಶ ಇದೆಯೇ ಎಂದು ಪ್ರಶ್ನಿಸಿದ ಶಾಸಕರು, ರೈತರು ಗದ್ದೆಯನ್ನು ಹಡೀಲು ಬಿಟ್ಟಲ್ಲಿ ಇಲಾಖೆ ಕೃಷಿ ಮಾಡಿಸುವ ಕ್ರಮ ಕೈಗೊಳ್ಳುವುದಾಗಿ, ಸರಕಾರದ ನೀತಿ ಪ್ರಕಾರ ಹಡೀಲು ಗದ್ದೆಯಲ್ಲಿ ಅರ್ಹ ಬೆಳೆಯನ್ನು ಕನಿಷ್ಠ ಒಂದು ಹಂಗಾಮಿನಲ್ಲಿ ಆದರೂ ಮಾಡಬೇಕು ಎಂಬುದನ್ನು ಕೃಷಿಕರಿಗೆ ಮನವರಿಕೆ ಮಾಡಿ ಎಂದರು.

ಟಾಪ್ ನ್ಯೂಸ್

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

1-aaaaaaa

Karkala: ಕಾಂಗ್ರೆಸ್ ನಾಯಕ ಡಿ. ಅರ್.‌ರಾಜು ನಿಧನ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

police crime

Belgavi:ಸಚಿವೆ ಲಕ್ಷ್ಮೀ ಹೆಬ್ಬಾಳಕ‌ರ್ ಆಪ್ತನ ಮೇಲೆ ದುಷ್ಕರ್ಮಿಗಳ ತಂಡದಿಂದ ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

Gangolli

Puttur: ಗಾಯಾಳು ವಿದ್ಯಾರ್ಥಿನಿ ಸಾವು

1

Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ

ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

tractor

Farmers; ಶೂನ್ಯ ಬಡ್ಡಿಯ ಕೃಷಿ ಸಾಲಕ್ಕೆ ಬಡ್ಡಿ ಕಟ್ಟಲು ಸೂಚನೆ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.