ರಾಜಧಾನಿಯಿಂದ ಕರಾವಳಿಗೆ ಹೆಚ್ಚುವರಿ ಕೆಎಸ್ಸಾರ್ಟಿಸಿ ಬಸ್
Team Udayavani, Aug 29, 2019, 5:00 AM IST
ಮಹಾನಗರ: ಇನ್ನೇನು ಕೆಲ ದಿನಗಳಲ್ಲಿ ಗಣೇಶ ಹಬ್ಬ ಬರುತ್ತಿದ್ದು, ದೂರದ ಬೆಂಗಳೂರಿನಿಂದ ಚೌತಿಯ ಗೌಜಿಗೆ ಕರಾವಳಿಗೆ ಬರುವ ಮಂದಿಗೆ ಖಾಸಗಿ ಬಸ್ ಮಾಲಕರು ಶಾಕ್ ನೀಡಿದ್ದಾರೆ. ಏಕೆಂದರೆ, ಈ ಹಿಂದಿನಂತೆ ಹಬ್ಬದ ನೆಪವೊಡ್ಡಿ ಬಸ್ ಪ್ರಯಾಣ ದರವನ್ನು ನಾಲ್ಕು ಪಟ್ಟು ಏರಿಕೆ ಮಾಡಲಾಗಿದೆ.
ಕೆಲವು ಖಾಸಗಿ ಬಸ್ ಮಾಲಕರ ವಸೂಲಿಗೆ ಕಡಿವಾಣ ಹಾಕುವುದಕ್ಕೆ ಕೆಎಸ್ಸಾರ್ಟಿಸಿ ಬೆಂಗಳೂರಿ ನಿಂದ-ಮಂಗಳೂರು ಕಡೆಗೆ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಲು ನಿರ್ಧರಿಸಿದೆ.ಪುತ್ತೂರು ವಿಭಾಗದಲ್ಲಿ ಬಸ್‌ಗಳ ಕೊರತೆ ಇರುವ ಕಾರಣ ಹೆಚ್ಚುವರಿ ಬಸ್ ಬದಲು ಹೆಚ್ಚುವರಿ ಟ್ರಿಪ್ ಕಾರ್ಯಾಚರಣೆ ಮಾಡಲು ಚಿಂತನೆ ನಡೆಯುತ್ತಿದೆ.
ಟಿಕೆಟ್ ದರದಲ್ಲಿ ರಿಯಾಯಿತಿ
ಗಣೇಶ ಹಬ್ಬದಂದು ಪ್ರಯಾಣಿಕರ ದಟ್ಟಣೆ ಹೆಚ್ಚಿರುವ ಕಾರಣದಿಂದಾಗಿ ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್ಸಾರ್ಟಿಸಿ ಹೆಚ್ಚುವರಿ ಬಸ್‌ಗಳಿಗೆ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸುವ ಸೌಲಭ್ಯಗಳನ್ನು ಕಲ್ಪಿಸಿದೆ. ಪ್ರಯಾಣಿಕರು ಬಸ್ ನಿಲ್ದಾಣಗಳಿಗೆ ತೆರಳುವ ಮುನ್ನ, ಮುಂಗಡ ಕಾಯ್ದಿರಿಸಲಾಗಿರುವ ಟಿಕೇಟುಗಳ ಮೇಲೆ ನಮೂದಿಸಲಾಗಿರುವ ಬಸ್ ನಿಲ್ದಾಣ/ಪಿಕ್‌ಅಪ್ ಪಾಯಿಂಟ್‌ನ ಹೆಸರನ್ನು ಗಮನಿಸಬಹುದಾಗಿದೆ.
ಕೆಎಸ್ಸಾರ್ಟಿಸಿಯಲ್ಲಿ ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೇಟ್ ಕಾಯ್ದಿರಿಸಿದಲ್ಲಿ ಶೇ.5 ರಷ್ಟು ರಿಯಾಯಿತಿ ನೀಡಲಾಗುತ್ತಿದ್ದು, ಹೋಗುವ ಮತ್ತು ಬರುವ ಪ್ರಯಾಣದ ಟಿಕೇಟ್‌ನ್ನು ಒಟ್ಟಿಗೆ ಕಾಯ್ದಿರಿಸಿದಾಗ ಬರುವ ಪ್ರಯಾಣ ದರದಲ್ಲಿ ಶೇ.10 ರಷ್ಟು ರಿಯಾಯಿತಿ ನೀಡಲು ಮುಂದಾಗಿದೆ.
ಖಾಸಗಿ ಬಸ್ ದರ 2,450 ರೂ..!
ಚೌ ಹಬ್ಬಕ್ಕೆ ಬೆಂಗಳೂರಿನ ಮಂದಿ ಮಂಗಳೂರಿಗೆ ಬರಬೇಕಾದರೆ ಮಾಮೂಲಿ ದರಕ್ಕಿಂತ ನಾಲ್ಕು ಪಟ್ಟು ಹೆಚ್ಚುವರಿ ದರ ನೀಡಿ ಬರಬೇಕು. ಬೆಂಗಳೂರಿನಲ್ಲಿರುವ ಹೆಚ್ಚಿನ ಮಂದಿ ಈ ಬಾರಿಯ ಗಣೇಶ ಚತುರ್ಥಿ ಹಬ್ಬವು ಸೆ. 2ರಂದು ಸೋಮವಾರ ಬಂದಿದ್ದು, ರವಿವಾರ ಖಾಸಗಿ ಮತ್ತು ಸರಕಾರಿ ಕಚೇರಿಗಳಿಗೆ ರಜೆ ಇರುತ್ತದೆ. ಕೆಲವೊಂದು ಸಾಫ್ಟ್‌ವೇರ್ ಕಚೇರಿಗಳಿಗೆ ಶನಿವಾರವೂ ರಜೆ ಇರುತ್ತದೆ. ಇದೇ ಕಾರಣಕ್ಕೆ ದೂರದ ಊರುಗಳಿಗೆ ಪ್ರಯಾಣಿಸುವ ಹೆಚ್ಚಿನ ಮಂದಿ ಶುಕ್ರವಾರ ರಾತ್ರಿಯೇ ಪ್ರಯಾಣ ಆರಂಭಿಸುತ್ತಾರೆ. ಬೆಂಗಳೂರಿನಿಂದ ಮಂಗ ಳೂರಿಗೆ ಶುಕ್ರವಾರದಂದು ಖಾಸಗಿ ಬಸ್‌ನಲ್ಲಿ ಗರಿಷ್ಠ ದರ 2,550 ರೂ. ಇದೆ. ಇನ್ನು, ಸೋಮವಾರ ಮತ್ತು ಮಂಗಳವಾರದಂದು ಮಂಗಳೂರಿನಿಂದ ಬೆಂಗಳೂರಿಗೆ 1,950 ರೂ. ಇದೆ.
ಹೆಚ್ಚುವರಿ ಬಸ್
ಗಣೇಶ ಹಬ್ಬಕ್ಕೆಂದು ಕೆಎಸ್ಸಾ ರ್ಟಿಸಿಯು ರಾಜ್ಯದಲ್ಲಿ ಒಟ್ಟಾರೆ 1,800 ಹೆಚ್ಚುವರಿ ಬಸ್ ನಿಯೋಜಿಸ ಲಾಗಿದ್ದು, ಆ. 30ರಂದು ಬೆಂಗಳೂ ರಿನಿಂದ-ಮಂಗಳೂರಿಗೆ (ಉಡುಪಿ, ಕುಂದಾಪುರ)ಹೆಚ್ಚುವರಿ 20 ಬಸ್‌ಗಳು ಕಾರ್ಯಾಚರಣೆ ನಡೆಸಲಿವೆ. ಪುತ್ತೂರಿಗೆ 10 ಹೆಚ್ಚುವರಿ ಬಸ್ ಸಂಚರಿಸಲಿವೆ. ಒತ್ತ ಡಕ್ಕೆ ಅನುಗುಣ ವಾಗಿ ಹೆಚ್ಚುವರಿ ಬಸ್‌ಗಳು ನಿಯೋಜಿಸಲಾಗುತ್ತಿದೆ. ಸೆ.2 ಮತ್ತು 3ರಂದು 10ಕ್ಕೂ ಹೆಚ್ಚು ಬಸ್‌ಗಳು ಕುಂದಾಪುರ-ಉಡುಪಿ – ಮಂಗಳೂರು ಮಾರ್ಗವಾಗಿ ಬೆಂಗಳೂರಿಗೆ ಸಂಚರಿಸಲಿದೆ.
ಅಗತ್ಯಕ್ಕೆ ತಕ್ಕಂತೆ ಹೆಚ್ಚುವರಿ ಬಸ್
ಗಣೇಶ ಹಬ್ಬಕ್ಕೆ ಬೆಂಗಳೂರಿನಿಂದ- ಮಂಗಳೂರಿಗೆ ಮತ್ತು ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ಪ್ರಯಾಣಿಕರಿಗೆ ಅನುಕೂಲವಾಗಲೆಂದು ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸಲಾಗಿದೆ. ಒಂದು ವೇಳೆ ಪ್ರಯಾಣಿಕರ ಸಂಖ್ಯೆ ಮತ್ತಷ್ಟು ಹೆಚ್ಚಾದರೆ, ಅಗತ್ಯಕ್ಕೆ ಅನುಗಣವಾಗಿ ಮತ್ತಷ್ಟು ಬಸ್ ಕಾರ್ಯಾಚರಣೆ ನಡೆಸಲು ಕೆಎಸ್ಸಾರ್ಟಿಸಿ ತಯಾರಿದೆ.
– ಜಯಶಾಂತ್, ಕೆಎಸ್ಸಾರ್ಟಿಸಿ ವಿಭಾಗ ನಿಯಂತ್ರಣಾಧಿಕಾರಿ (ಪ್ರಭಾರ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hukkeri: ಮೀನು ಹಿಡಿಯಲು ಹೋಗಿದ್ದ ತಂದೆ, ಇಬ್ಬರು ಮಕ್ಕಳು ನೀರುಪಾಲು
Karkala: ಪಶು ಗಣತಿಯಲ್ಲಿ ಬೆಕ್ಕುಗಳ ಅವಗಣನೆ !
Emergency: ಹತ್ತಾರು ವಿಳಂಬದ ಬಳಿಕ ಕೊನೆಗೂ ಕಂಗನಾ ʼಎಮರ್ಜೆನ್ಸಿʼ ರಿಲೀಸ್ ಗೆ ಡೇಟ್ ಫಿಕ್ಸ್
IPL Mega Auction: ಮೆಗಾ ಹರಾಜಿನಲ್ಲಿ 13ರ ಬಾಲಕ: ಯಾರಿದು ವೈಭವ್ ಸೂರ್ಯವಂಶಿ
Mangaluru: ಹೆದ್ದಾರಿ ಬದಿ ನಿಲ್ಲುವ ವಾಹನ; ಅಪಾಯಕ್ಕೆ ಆಹ್ವಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.