ಮಂದಾರ; ಕಂಜಿರಾಡಿ ರಸ್ತೆಯ ತ್ಯಾಜ್ಯ ತೆರವು ಕಾರ್ಯಾಚರಣೆ
Team Udayavani, Aug 29, 2019, 5:00 AM IST
ರಸ್ತೆಯಲ್ಲಿ ಬಿದ್ದಿರುವ ತ್ಯಾಜ್ಯವನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ.
ಮಹಾನಗರ: ಪಚ್ಚನಾಡಿ ಡಂಪಿಂಗ್ ಯಾರ್ಡ್ನಿಂದ ತ್ಯಾಜ್ಯ ರಾಶಿಯು ಜರಿದು ಮಂದಾರ ವ್ಯಾಪ್ತಿ ಯಲ್ಲಿ ವ್ಯಾಪಿಸಿರುವುದನ್ನು ತೆರವು ಮಾಡುವ ನೆಲೆಯಲ್ಲಿ ವಿವಿಧ ತಜ್ಞರ ತಂಡ ನೀಡಿರುವ ಅಧ್ಯಯನ ವರದಿಯನ್ನು ದ.ಕ. ಜಿಲ್ಲಾಡಳಿತ ಅಂತಿಮಗೊಳಿ ಸುತ್ತಿದ್ದು, ಮಂದಾರ-ಕಂಜಿರಾಡಿ ಸಂಪರ್ಕ ರಸ್ತೆಯಲ್ಲಿ ಬಿದ್ದಿರುವ ತ್ಯಾಜ್ಯವನ್ನು ತೆರವುಗೊಳಿಸುವ ಕಾರ್ಯ ಸದ್ಯ ನಡೆ ಯುತ್ತಿದೆ.
ಇಲ್ಲಿನ ಸಂಪರ್ಕ ರಸ್ತೆಯ ಸುಮಾರು 300 ಮೀ. ನಷ್ಟು ಉದ್ದದಲ್ಲಿ ತ್ಯಾಜ್ಯ ರಾಶಿ ಸುಮಾರು 100ಮೀ. ಎತ್ತರದಲ್ಲಿ ಬಿದ್ದಿರುವುದರಿಂದ ರಸ್ತೆ ಸಂಪರ್ಕ ಸಂಪೂರ್ಣ ಬಂದ್ ಆಗಿದೆ. ಹೀಗಾಗಿ ಕಂಜಿರಾಡಿ ಭಾಗಕ್ಕೆ ಸಂಪರ್ಕಿಸಲು ಪರ್ಯಾಯ ರಸ್ತೆಯನ್ನೇ ಅವಲಂಬಿಸ ಬೇಕಾಗಿದೆ. ರಸ್ತೆಯಲ್ಲಿ ಬಿದ್ದಿರುವ ತ್ಯಾಜ್ಯ ವನ್ನು ತೆಗೆದು ವಾಹನಗಳಿಗೆ ಅವಕಾಶ ನೀಡುವ ನೆಲೆಯಲ್ಲಿ ಮಂಗಳೂರು ಪಾಲಿಕೆಯು ಕಾಮಗಾರಿ ನಡೆಸುತ್ತಿದೆ. ಎರಡು ಬುಲ್ಡೋಜರ್ ಸಹಾಯದಿಂದ ಕೆಲವು ದಿನಗಳಿಂದ ರಸ್ತೆಯ ತ್ಯಾಜ್ಯವನ್ನು ತೆಗೆದು ಪಕ್ಕಕ್ಕೆ ಸರಿಸಲಾಗುತ್ತಿದೆ. ಆದರೆ ತೆಗೆದ ತ್ಯಾಜ್ಯ ಮತ್ತೆ ಜರಿದು ಅದೇ ಜಾಗಕ್ಕೆ ಬೀಳುತ್ತಿರುವುದರಿಂದ ಕೆಲಸ ಮಾಡುವುದೇ ಇಲ್ಲಿ ಕಷ್ಟವಾಗಿದೆ.
ಮಂದಾರದ ರವೀಂದ್ರ ಭಟ್ ಅವರ ಹಳೆಯ ಮನೆಯ ಬಳಿ ವ್ಯಾಪಿಸಿರುವ ತ್ಯಾಜ್ಯವನ್ನು ತೆರವುಗೊಳಿಸುವ ಕಾಮಗಾರಿ ಒಂದೆರಡು ದಿನಗಳಿಂದ ನಡೆದಿದ್ದು, ಮನೆಯಿಂದ ಸುಮಾರು ನಾಲ್ಕು ಅಡಿಯಷ್ಟು ದೂರ ತ್ಯಾಜ್ಯ ಸರಿಸಲಾಗಿದೆ.
ಒಂದೆರಡು ದಿನದಿಂದ ಬಿಸಿಲು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತ್ಯಾಜ್ಯ ರಾಶಿ ಯಲ್ಲಿ ಹುಳುಗಳು ಉತ್ಪತ್ತಿಯಾಗಿದ್ದು, ನೊಣ ಹಾಗೂ ಸೊಳ್ಳೆ ಕಾಟ ವಿಪರೀತವಾಗಿದೆ. ಇಲ್ಲಿನ ಸುತ್ತಮುತ್ತಲ ಪ್ರದೇಶದಲ್ಲಿ ಸೊಳ್ಳೆಕಾಟ ಜಾಸ್ತಿಯಾಗಿದೆ.
ತ್ಯಾಜ್ಯರಾಶಿಯಿಂದ ಇನ್ನೂ ಕೂಡ ತ್ಯಾಜ್ಯನೀರು ಹೊರಬರುವುದು ಕಡಿಮೆ ಯಾಗಿಲ್ಲ. ಇದು ನೇರವಾಗಿ ತೋಡು ಸೇರಿ ನದಿ-ಸಮುದ್ರಕ್ಕೆ ಸೇರುತ್ತಿದೆ. ಜತೆಗೆ ತೋಟದ ಮಧ್ಯೆ ತ್ಯಾಜ್ಯನೀರು ನಿಂತು ಪರಿಸರವೆಲ್ಲ ಗಲೀಜಾಗಿದೆ. ರವೀಂದ್ರ ಭಟ್ ಸಹಿತ ಇತರರ ಮನೆಯ ಮುಂಭಾಗ-ಹಿಂಭಾಗದಲ್ಲಿ ತ್ಯಾಜ್ಯ ನೀರು ಹರಿದು ಹೋಗುತ್ತಿದೆ. ತ್ಯಾಜ್ಯನೀರು ವಿಪರೀತವಾಗಿರುವ ಕಾರಣದಿಂದ ಇಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ.
ಇಂಧೋರ್ನಲ್ಲಿ ಸುಮಾರು 13 ಲಕ್ಷ ಟನ್ ತ್ಯಾಜ್ಯ ರಾಶಿಯನ್ನು ವಿಲೇ ಮಾಡಿ ಅನುಭವ ಇರುವ ತಜ್ಞರ ತಂಡವೊಂದು ಸೆ. 2ರಂದು ಮಂದಾರಕ್ಕೆ ಭೇಟಿ ನೀಡಲಿದೆ. ಇಲ್ಲಿನ ತ್ಯಾಜ್ಯವನ್ನು ವಿಲೇ ಮಾಡುವ ಬಗ್ಗೆ ವರದಿ ನೀಡಲಿದ್ದಾರೆ. ಈಗಾಗಲೇ ಚೆನ್ನೈ, ಕೊಯಮತ್ತೂರು ಸಹಿತ ವಿವಿಧ ತಜ್ಞರ ತಂಡ ಆಗಮಿಸಿ ವರದಿಯನ್ನು ಜಿಲ್ಲಾಡಳಿತಕ್ಕೆ ನೀಡಿದ್ದು, ಇದೆಲ್ಲದರ ಪರಾಮರ್ಶೆ ಆದ ಬಳಿಕ ಯಾವ ರೀತಿಯಲ್ಲಿ ತ್ಯಾಜ್ಯವನ್ನು ವಿಲೇವಾರಿ ಮಾಡಬಹುದು ಎಂಬುದರ ಬಗ್ಗೆ ಅಂತಿಮ ತೀರ್ಮಾನವಾಗಲಿದೆ ಎಂದು ಮನಪಾ ಪರಿಸರ ಅಧಿಕಾರಿ ಮಧು ‘ಸುದಿನ’ಕ್ಕೆ ತಿಳಿಸಿದ್ದಾರೆ.
ಸೆ. 2ರಂದು ಇಂದೋರ್ ತಜ್ಞರ ತಂಡ ಆಗಮನ
ಇಂಧೋರ್ನಲ್ಲಿ ಸುಮಾರು 13 ಲಕ್ಷ ಟನ್ ತ್ಯಾಜ್ಯ ರಾಶಿಯನ್ನು ವಿಲೇ ಮಾಡಿ ಅನುಭವ ಇರುವ ತಜ್ಞರ ತಂಡವೊಂದು ಸೆ. 2ರಂದು ಮಂದಾರಕ್ಕೆ ಭೇಟಿ ನೀಡಲಿದೆ. ಇಲ್ಲಿನ ತ್ಯಾಜ್ಯವನ್ನು ವಿಲೇ ಮಾಡುವ ಬಗ್ಗೆ ವರದಿ ನೀಡಲಿದ್ದಾರೆ. ಈಗಾಗಲೇ ಚೆನ್ನೈ, ಕೊಯಮತ್ತೂರು ಸಹಿತ ವಿವಿಧ ತಜ್ಞರ ತಂಡ ಆಗಮಿಸಿ ವರದಿಯನ್ನು ಜಿಲ್ಲಾಡಳಿತಕ್ಕೆ ನೀಡಿದ್ದು, ಇದೆಲ್ಲದರ ಪರಾಮರ್ಶೆ ಆದ ಬಳಿಕ ಯಾವ ರೀತಿಯಲ್ಲಿ ತ್ಯಾಜ್ಯವನ್ನು ವಿಲೇವಾರಿ ಮಾಡಬಹುದು ಎಂಬುದರ ಬಗ್ಗೆ ಅಂತಿಮ ತೀರ್ಮಾನವಾಗಲಿದೆ ಎಂದು ಮನಪಾ ಪರಿಸರ ಅಧಿಕಾರಿ ಮಧು ‘ಸುದಿನ’ಕ್ಕೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kinnigoli: ದ್ವಿಚಕ್ರ ವಾಹನಗಳ ಢಿಕ್ಕಿ; ಸವಾರ ಮೃತ್ಯು
Mangaluru: ಅನಧಿಕೃತ ಫ್ಲೆಕ್ಸ್ , ಬ್ಯಾನರ್ ತೆರವು ಆರಂಭ
Ullala: ಉಚ್ಚಿಲದ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
MUST WATCH
ಹೊಸ ಸೇರ್ಪಡೆ
Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್ನಲ್ಲಿ ಉದ್ಯೋಗದ ಆಮಿಷ
Kyiv: ಉಕ್ರೇನ್ ವಿದ್ಯುತ್ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Puttur: ಮಹಿಳೆಯ ಮಾನಭಂಗಕ್ಕೆ ಯತ್ನ; ಆರೋಪಿಗೆ ಜೈಲು ಶಿಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.