ಅನುತ್ತೀರ್ಣ ಹುಡುಗನಿಗೆ ಶಿಕ್ಷಕ ರಾಷ್ಟ್ರಪ್ರಶಸ್ತಿ ಗೌರವ!
Team Udayavani, Aug 29, 2019, 5:44 AM IST
ಉಡುಪಿ: ಕೊಡಗಿನ ಸೋಮವಾರ ಪೇಟೆಯ ಬೆಸೂರು ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿರುವ ಬಹುಮುಖ ಪ್ರತಿಭೆಯ ಸುರೇಶ್ ಮರಕಾಲ ಅವರಿಗೆ ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ. ಇವರು ಮೂಲತಃ ಉಡುಪಿ ಜಿಲ್ಲೆಯ ಬಾರಕೂರಿನ ಸಾೖಬರಕಟ್ಟೆಯವರು.
ಸುರೇಶ್ ಅವರು ಸಮಾಜ ವಿಜ್ಞಾನ ಶಿಕ್ಷಕರು. ಆದರೆ ಅದನ್ನಷ್ಟೇ ಬೋಧಿಸಿದವರಲ್ಲ. ಹಲವು ರಂಗಗಳಲ್ಲಿ ಅಸಾಮಾನ್ಯ ಪ್ರತಿಭೆಯನ್ನು ತೋರ್ಪಡಿಸಿ ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕರಾಗಿ ಗುರುತಿಸಿಕೊಂಡಿದ್ದಾರೆ.
ಕಲಿಕೆಯನ್ನು ಲವಲವಿಕೆಯಿಂದಿರಿಸುವ ಉದ್ದೇಶದಿಂದ ಅವರು ಪಾಠದ ಜತೆ ಶಾಡೋಪ್ಲೇ, ಕನ್ನಡಿ ಬರಹ, ಪಿಯಾನೋ, ಕೀ ಬೋರ್ಡ್, ಕಲಿಕೆ, ನಾಟಕಾಭಿನಯ, ಪೇಪರ್ ಕ್ರಾಫ್ಟ್, ತೋಟಗಾರಿಕೆ ಶಿಕ್ಷಣ, ಒಳಚರಂಡಿ ಶಿಕ್ಷಣ, ಚಿತ್ರಕಲೆ, ಗೋಡೆ ಪೈಂಟಿಂಗ್, ಸಂಗೀತವನ್ನು ಕಲಿಸುತ್ತಿದ್ದಾರೆ. ಕಂಪ್ಯೂಟರ್‌ನಲ್ಲಿ ಪ್ರಾವೀಣ್ಯ ಹೊಂದಿದ್ದು, ತಾವು ರಚಿಸಿರುವ ಅನೇಕ ಇ-ಪಾಠವನ್ನು ಹಂಚಿಕೊಳ್ಳಲು ಯೂಟ್ಯೂಬ್ ಚಾನೆಲೊಂದನ್ನು ಆರಂಭಿಸಿದ್ದಾರೆ.
ಸಂಪನ್ಮೂಲ ವ್ಯಕ್ತಿಯಾಗಿ ಶಿಕ್ಷಕರಿಗೂ ತರಬೇತಿ ನೀಡುತ್ತಿರುವ ಅವರು ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳಿಗೆ ಉತ್ತೇಜನ ನೀಡಲು ವಿವೇಕ ರಾತ್ರಿ ತರಗತಿಗಳನ್ನು ಆರಂಭಿಸಿ ಮಕ್ಕಳ ಬಾಳಿನಲ್ಲಿ ಬೆಳಕಾಗಿದ್ದಾರೆ.
ಶಿಕ್ಷಕರಾಗಿ ಸೇವೆ ಸಲ್ಲಿಸುವ ಮೊದಲು ಅವರು ಪೊಲೀಸ್ ಇಲಾಖೆಯಲ್ಲಿ ಸುಮಾರು 8 ವರ್ಷ ಸೇವೆ ಸಲ್ಲಿಸಿದ್ದರು. ಅವರು ಪತ್ನಿ ಪ್ರತಿಮಾ ಮುದ್ರಾಡಿಯಲ್ಲಿ ಸಿಆರ್‌ಪಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಸಾೖಬರಕಟ್ಟೆಯ ರೈತ ಕುಟುಂಬದಲ್ಲಿ ಜನಿಸಿದ ಅವರು ಸ್ವ ಪರಿಶ್ರಮದಿಂದ ಉನ್ನತ ಸಾಧನೆ ಮಾಡಿ ಈಗ ಶಿಕ್ಷಕ ರಾಷ್ಟ್ರಪ್ರಶಸ್ತಿಗೆ ಭಾಜನರಾಗಿದ್ದಾರೆ.
ಫೇಲ್ ಆಗಿದ್ದರು!
ಶಾಲಾ ವಿದ್ಯಾರ್ಥಿ ಯಾಗಿದ್ದಾಗ ಫೇಲ್ ಆಗಿದ್ದ ಸುರೇಶ್ ಬಿಎಡ್‌ನಲ್ಲಿ ಪ್ರಥಮ ರ್‍ಯಾಂಕ್ ಮತ್ತು 4 ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಈ ಮೂಲಕ ಧಾರವಾಡ ವಿಶ್ವವಿದ್ಯಾನಿಲಯದ 69 ವರ್ಷಗಳ ಇತಿಹಾಸ ದಲ್ಲಿ ಇಂದಿಗೂ ಮುರಿ ಯಲಾಗದ ದಾಖಲೆ ಸೃಷ್ಟಿಸಿದ್ದಾರೆ. ಈ ಸಾಧನೆ ಗಾಗಿ ಅವರಿಗೆ 2010ರಲ್ಲಿ ಪ್ರಧಾನಮಂತ್ರಿ ಪುರಸ್ಕಾರವೂ ಲಭಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ
Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.