ಮಳೆ ಕೊರತೆ: ಭರ್ತಿಯಾಗದ ದ್ವಾರಸಮುದ್ರ ಕೆರೆ
ಯಗಚಿ ನದಿಯಿಂದ 75 ದಿನಗಳ ಕಾಲ ಮಾತ್ರ ನೀರು ಸರಬರಾಜು 750 ಹೆಕ್ಟೇರ್ ಪ್ರದೇಶದ ಕೆರೆ ತುಂಬುವುದು ಅನುಮಾನ
Team Udayavani, Aug 29, 2019, 3:53 PM IST
ಮಳೆ ಕೊರತೆಯಿಂದಾಗಿ ದ್ವಾರಸಮುದ್ರ ಕೆರೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ.
ಹಳೇಬೀಡು: ಹೋಬಳಿಯ ಜೀವ ನಾಡಿಯಂತಿ ರುವ ದ್ವಾರಸಮುದ್ರ ಕರೆ ತುಂಬುವುದು ಅನುಮಾನವಾಗಿದೆ.
ಕಳೆದ ತಿಂಗಳಿನಿಂದ ಎಡೆಬಿಡದೇ ಬೇಲೂರು ತಾಲೂಕಿಗೆ ವಾಡಿಕೆಗಿಂತ ಹೆಚ್ಚು ಅಂದರೆ 225 ಮಿ.ಮೀ. ಮಳೆ ಯಾದರೆ ಹಳೇಬೀಡು ಹೋಬಳಿ ಭಾಗಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಯಾಗದಿರು ವುದರಿಂದ ಚೀಲ ನಾಯ್ಕನಹಳ್ಳಿ ರಾಜನಶಿರಿ ಯೂರು, ಪಂಡಿತನಹಳ್ಳಿ, ಸವಾಸಿಹಳ್ಳಿ ಸೇರಿದಂತೆ ಸುತ್ತ ಮುತ್ತಲಿನ ಕೆರೆಗಳು ಮಳೆಯಿಲ್ಲದೇ ಬರಿ ದಾಗಿವೆ. ಹೊಯ್ಸಳರ ಕಾಲದಲ್ಲಿ ನಿರ್ಮಾಣವಾಗಿ ರುವ ಸುಮಾರು 750 ಹೆಕ್ಟೇರ್ ಪ್ರದೇಶವಿರುವ ದೊಡ್ಡ ದ್ವಾರಸಮುದ್ರ ಕರೆ ಭರ್ತಿಯಾಗುವುದು ಕನಸಿನ ಮಾತಾಗಿದೆ.
ರಣಘಟ್ಟ ಯೋಜನೆ ವಿಳಂಬ: ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದಾಗ ಬೇಲೂರು ಶಾಸಕ ಕೆ.ಎಸ್. ಲಿಂಗೇಶ್ ಹೋರಾಟ ಮಾಡಿ ರಣಘಟ್ಟ ಯೋಜನೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಬಳಿ ಬಜೆಟ್‌ನಲ್ಲಿ 100 ಕೋಟಿ ಹಣ ಮೀಸಲಿಡಿಸಿದ್ದರು. ಈ ಯೋಜನೆಗೆ ಸ್ವತಃ ಮುಖ್ಯಮಂತ್ರಿಗಳೇ ಚಾಲನೆ ನೀಡಿದ್ದರು. ಸಮಿಶ್ರ ಸರ್ಕಾರ ಪತನವಾದ ನಂತರ ಕಾಮಗಾರಿ ಆರಂಭ ವಾಗವುದು ಅನುಮಾನವಾಗಿದೆ.
75 ದಿನ ಮಾತ್ರ ಯಗಚಿ ನೀರು: ಯಗಚಿ ನೀರಿಗಾಗಿ 2 ವರ್ಷಗಳ ಹಿಂದೆ ಪಕ್ಷಾತೀತವಾಗಿ ಎಲ್ಲಾ ಪಕ್ಷದ ನಾಯಕರು, ರೈತರು, ಸ್ವಾಮೀಜಿಗಳು ಜನಸಾಮಾನ್ಯರು ಮಹಿಳೆಯರು ಸೇರಿದಂತೆ ಸಾವಿ ರಾರು ಮಂದಿ ಉಪವಾಸ ಸತ್ಯಾಗ್ರಹ ಮಾಡಿದ ಪರಿಣಾಮ ಬೇಲೂರು ಯಗಚಿ ನದಿಯಿಂದ ಹಳೇಬೀಡು ದ್ವಾರಸಮುದ್ರ ಕರೆಗೆ ಜಾನು ವಾರು ಗಳ ಕುಡಿವ ನೀರಿಗಾಗಿ 75 ದಿನಗಳ ಕಾಲ ನೀರು ಬಿಡಲು ಅಂದಿನ ಕಾಂಗ್ರೆಸ್ ಸರ್ಕಾರ ಏತ ನೀರಾ ವರಿ ಮುಖಾಂತರ ನೀರು ಬಿಡಲು ಶಿಫಾರಸು ಮಾಡಿತ್ತು. ಆದರೆ ನೀರೆತ್ತುವ ಮೋಟಾರ್ ಪದೇ ಪದೇ ಕೈಕೊಟ್ಟ ಕಾರಣ ದ್ವಾರಸಮುದ್ರ ಕೆರೆಗ ಭರ್ತಿಯಾಗಲಿಲ್ಲ. ಈ ಬಾರಿಯೂ ಯಗಚಿ ನದಿಯಿಂದ ನೀರು ಏತ ನೀರಾವರಿ ಮುಖಾಂತರ ಹಳೇಬೀಡು ಕೆರೆಗೆ ಬರು ತ್ತಿದ್ದು 75 ದಿನಗಳಲ್ಲಿ ದ್ವಾರಸಮುದ್ರ ಕೆರೆಗೆ ಅರ್ಧ ದಷ್ಟು ನೀರು ಬರುವುದೂ ಕಷ್ಟವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಭಸ್ಮವಾದ ಗುಡಿಸಲು
Belagavi: ಗ್ಯಾರಂಟಿ ವಿರೋಧಿಸಿದ ವಿಪಕ್ಷಗಳಿಗೆ ಸ್ಪಷ್ಟ ಉತ್ತರ ನೀಡಿದ ಮತದಾರ: ಹೆಬ್ಬಾಳ್ಕರ್
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
By Polls Result: ಪ್ರತಿಪಕ್ಷಗಳ ಸುಳ್ಳು ಆರೋಪಕ್ಕೆ ಜನಾದೇಶದ ಉತ್ತರ: ಖಂಡ್ರೆ
Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.