ಕಾಶ್ಮೀರದ ಯುವತಿಯರನ್ನು ವಿವಾಹವಾದ ಬಿಹಾರದ ಇಬ್ಬರು ಯುವಕರು ಈಗ ಜೈಲುಪಾಲು!
Team Udayavani, Aug 29, 2019, 6:40 PM IST
ಪಾಟ್ನಾ(ಸ್ಪೌಲ್):ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಕಾಶ್ಮೀರದ ಯುವತಿಯರನ್ನು ವಿವಾಹವಾಗಿದ್ದ ಬಿಹಾರದ ಇಬ್ಬರು ಸಹೋದರರು ಇದೀಗ ಕಿಡ್ನಾಪ್ ಪ್ರಕರಣದ ಆರೋಪದಲ್ಲಿ ಪೊಲೀಸರ ಅತಿಥಿಯಾಗಿದ್ದಾರೆ.
ಜಮ್ಮು-ಕಾಶ್ಮೀರದ ರಂಬಾನ್ ಜಿಲ್ಲೆಯ ಇಬ್ಬರು ಸಹೋದರಿಯರನ್ನು ಕೆಲವು ದಿನಗಳ ಹಿಂದಷ್ಟೇ ವಿವಾಹವಾಗಿದ್ದ ಬಿಹಾರದ ಇಬ್ಬರು ಸಹೋದರರನ್ನು ಜಮ್ಮು-ಕಾಶ್ಮೀರದ ಪೊಲೀಸರು ಬಿಹಾರ ಪೊಲೀಸರ ನೆರವಿನೊಂದಿಗೆ ಬಂಧಿಸಿರುವುದಾಗಿ ಬಿಹಾರ ಪೊಲೀಸರು ತಿಳಿಸಿದ್ದಾರೆ.
ಬಿಹಾರದ ಸ್ಪೌಲ್ ಗ್ರಾಮದ ರಾಮ್ ವಿಷ್ಣುಪುರದ ನಿವಾಸಿಗಳಾದ ಪರ್ವೇಜ್ ಮತ್ತು ತಾರ್ವೇಜ್ ಆಲಂ ಜಮ್ಮು-ಕಾಶ್ಮೀರದ ರಂಬಾನ್ ನಲ್ಲಿ ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಸಹೋದರಿಯರ ಪ್ರೀತಿಯಲ್ಲಿ ಬಿದ್ದಿದ್ದರು.
ಇಬ್ಬರು ಸಹೋದರರು, ರಂಬಾನ್ ನ ಇಬ್ಬರು ಸಹೋದರಿಯರ ಜತೆ ವಿವಾಹವಾಗಿದ್ದು, ಇತ್ತೀಚೆಗೆ ತಮ್ಮ ಊರಾದ ಸ್ಪೌಲ್ ಗೆ ಕರೆತಂದಿದ್ದರು. ಏತನ್ಮಧ್ಯೆ ಯುವತಿಯರ ತಂದೆ, ತನ್ನ ಮಗಳನ್ನು ಕಿಡ್ನಾಪ್ ಮಾಡಿರುವುದಾಗಿ ಆರೋಪಿಸಿ ದೂರು ದಾಖಲಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು-ಕಾಶ್ಮೀರ ಪೊಲೀಸರ ತಂಡ ನಮ್ಮನ್ನು ಸಂಪರ್ಕಿಸಿದ್ದರು. ಬಳಿಕ ಇಬ್ಬರನ್ನು ಬಂಧಿಸಿದ್ದರು. ಆರೋಪಿಗಳ ಹೇಳಿಕೆ ಪ್ರಕಾರ ಅವರು ಸಹೋದರಿಯರ ಇಚ್ಛೆಯ ಮೇರೆಗೆ ವಿವಾಹವಾಗಿರುವುದಾಗಿ ತಿಳಿಸಿದ್ದಾರೆಂದು ವರದಿ ವಿವರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.