ಬದುಕು ಸಾಗಿಸಲಾಗದೆ ಸಂಕಷ್ಟಕ್ಕೀಡಾದ ವಿಶೇಷ ಶಿಕ್ಷಕ-ಶಿಕ್ಷಕೇತರರು

ವಿಶೇಷ ಶಿಕ್ಷಕರ ಉತ್ಕೃಷ್ಟ ಸೇವೆಗೆ ಅತ್ಯಲ್ಪ ಸಂಬಳ

Team Udayavani, Aug 30, 2019, 5:54 AM IST

School

ವಿಶೇಷ ಮಕ್ಕಳಿಗೆ ತರಬೇತಿ ನೀಡುತ್ತಿರುವುದು.

ಉಡುಪಿ: ದಿನದ 24 ಗಂಟೆಯೂ ವಿಶೇಷ ಮಕ್ಕಳೊಂದಿಗಿದ್ದು ಕೆಲಸ ನಿರ್ವಹಿಸುವ ವಿಶೇಷ ಶಿಕ್ಷಕರು, ಶಿಕ್ಷಕೇತರರಿಗೆ ತಿಂಗಳ ಸಂಬಳ ಗೊತ್ತೆ? ಕೇವಲ 13,500 ರೂ. ಗೌರವಧನ.

ಸಂಘಟನೆ ಸ್ಥಾಪನೆ-ಹೋರಾಟ
ವಿಶೇಷ ಶಿಕ್ಷಕರು ವಿಶೇಷ ಮಕ್ಕಳ ಶಿಕ್ಷಣದಲ್ಲಿ ಡಿಪ್ಲೊಮಾ ತರಬೇತಿ ಪಡೆದು ಆರ್‌.ಸಿ.ಐ. ನೋಂದಣಿ ಹೊಂದಿ ಸೇವೆ ಸಲ್ಲಿಸುತ್ತಿದ್ದಾರೆ. 2001ರಿಂದ ಇದುವರೆಗೂ ಶಿಕ್ಷಕರು ವೇತನ, ಭದ್ರತೆಗಾಗಿ ಹೋರಾಟ ನಡೆಸುತ್ತಲೇ ಬಂದಿದ್ದರೂ, ಇಂದಿಗೂ ಫ‌ಲ ಸಿಕ್ಕಿಲ್ಲ. 2007ರಲ್ಲಿ ವಿಶೇಷ ಶಿಕ್ಷಕರು ಒಗ್ಗಟ್ಟಾಗಿ ಕರ್ನಾಟಕದಲ್ಲೇ ಪ್ರಥಮ ಬಾರಿಗೆ ಉಡುಪಿ ಜಿಲ್ಲೆಯಲ್ಲಿ ವಿಶೇಷ ಶಿಕ್ಷಕ ಶಿಕ್ಷಕೇತರರ‌ ಸಂಘಟನೆಯನ್ನು ಸ್ಥಾಪಿಸಿದರು. ಅನಂತರ ರಾಜ್ಯ ಸಂಘಟನೆಯೂ ಆರಂಭವಾಯಿತು. ಇದರ ಪ್ರಭಾವದಿಂದ ಪ್ರಸ್ತುತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿಶೇಷ ಶಿಕ್ಷಕರ ಸಂಘಟನೆಗಳು ಕಾರ್ಯಾಚರಿಸುತ್ತಿವೆ. ಸಂಘಟನೆಗಳು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸಾಕಷ್ಟು ಬಾರಿ ಮುಷ್ಕರ, ಪ್ರತಿಭಟನೆ ಕೈಗೊಂಡರೂ ಪ್ರಯೋಜನವಾಗಿಲ್ಲ.

ಸಮನ್ವಯ ಶಿಕ್ಷಣಕ್ಕೆ ಒತ್ತು
ವಿಶೇಷ ಮಕ್ಕಳಿಗೆ ಪ್ರತ್ಯೇಕ ವಿಶೇಷ ಶಾಲೆ ಬೇಡ ಸಾಮಾನ್ಯ ಶಾಲೆಯೊಂದಿಗೆ ವಿಲೀನಗೊಳಿಸಿ ಸಮನ್ವಯ ಶಿಕ್ಷಣ ನೀಡಬೇಕೆನ್ನುವ ಮಾತು ಸರಕಾರದಿಂದ ಕೇಳಿ ಬರುತ್ತಿದೆ.

ಆದರೆ ವಿಶೇಷ ಮಕ್ಕಳು ಇರುವವರೆಗೂ ವಿಶೇಷ ಶಿಕ್ಷಣದ ಅವಶ್ಯಕತೆ ಇದೆ. ಅದಕ್ಕೆಂದೇ ವಿಶೇಷ ಶಿಕ್ಷಕರ ತರಬೇತಿ ಕೇಂದ್ರವು ಶಿಕ್ಷಕರಿಗೆ ತರಬೇತಿ ನೀಡುತ್ತಿದೆ. ವಿಶೇಷ ಶಿಕ್ಷಕರ ತರಬೇತಿ ಕೇಂದ್ರವನ್ನು ತೆರೆಯಲೆಂದೇ 2018ರ ಬಜೆಟ್‌ನಲ್ಲಿ ಪ್ರತ್ಯೇಕ ಅನುದಾನವನ್ನೂ ತೆಗೆದಿರಿಸಲಾಗಿದೆ. ಸ್ವಯಂಸೇವಾ ಸಂಸ್ಥೆ ಮುಂದೆ ಬಂದಲ್ಲಿ ಸರಕಾರ ಶಿಕ್ಷಕರ ತರಬೇತಿ ಕೇಂದ್ರವನ್ನು ತೆರೆಯಲು ಅವಕಾಶ ನೀಡಿದೆ. 2010ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ವಿಶೇಷ ಮಕ್ಕಳಿಗೆ ಇಲಾಖೆ ಮೂಲಕ ಅನುದಾನ ನೀಡುವುದಾಗಿ ಘೋಷಿಸಿದ್ದರು. ಆದರೆ ಅನಂತರದ ಸರಕಾರಗಳು ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿಲ್ಲ.

ಮಕ್ಕಳಿಗೆ ವಿಶೇಷ ಶಿಕ್ಷಕರೇ ಬೇಕು
ವಿಶೇಷ ಶಾಲೆಯಲ್ಲಿ ತರಬೇತಿ ಹೊಂದಿದ ಮಕ್ಕಳು ಸಾಕಷ್ಟು ಸಾಧನೆಗೈದಿದ್ದಾರೆ. ಸ್ವಂತ ಉದ್ಯೋಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಸಾಧಕರಾಗಿಯೂ ಗುರುತಿಸಿಕೊಂಡಿದ್ದಾರೆ. ಇವೆಲ್ಲದರ ಹಿಂದೆ ವಿಶೇಷ ಶಿಕ್ಷಕರ ಶಿಕ್ಷಕೇತರರ ಅವಿರತ ಶ್ರಮವಿದೆ. ಆದರೆ ಕನಿಷ್ಠ ವೇತನ, ಭದ್ರತೆ, ಸೇವಾ ಹಿರಿತನಕ್ಕೂ ಬೆಲೆಯಿಲ್ಲದೆ ಸೇವೆ ನೀಡುತ್ತಿರುವ ವಿಶೇಷ ಶಿಕ್ಷಕರ ಬದುಕು ಮಾತ್ರ ಶೋಚನೀಯ. ಮುಂದಾದರೂ ಒಳ್ಳೆಯ ದಿನ ಬರಬಹುದೆನ್ನುವ ಆಶಾಭವನೆ ಹೊತ್ತು ವಿಶೇಷ ಶಿಕ್ಷಕರು ಶಕ್ತಿ ಮೀರಿ ಹಗಲಿರುಳೆನ್ನದೆ ಸೇವಾ ಮನೋಭಾವದಿಂದ ಸೇವೆ ಸಲ್ಲಿಸುತ್ತಿದ್ದಾರೆ.

ಪುನರ್ವಸತಿ ಕೇಂದ್ರ ತೆರೆಯಲಿ
ರಾಜ್ಯದಲ್ಲಿರುವ ವಿಶೇಷ ಶಾಲೆಗಳು ಬಲಿಷ್ಠಗೊಳ್ಳಬೇಕಾದರೆ ಸರಕಾರ ಪೂರ್ಣ ಪ್ರಮಾಣದ ಅನುದಾನವನ್ನು ಸಂಸ್ಥೆಗಳಿಗೆ ನೀಡಬೇಕು. ಅದರಲ್ಲಿಯೂ ಬುದ್ಧಿಮಾಂದ್ಯ ಮಕ್ಕಳ ಹೆತ್ತವರಿಗೆ ಇರುವ “ನನ್ನ ಅನಂತರ ಯಾರು’ ಎನ್ನುವ ಪ್ರಶ್ನೆಗೆ ಉತ್ತರವಾಗಿ ರಾಜ್ಯದ ಎಲ್ಲ ಕಡೆಗಳಲ್ಲಿಯೂ ಪುನರ್ವಸತಿ ಕೇಂದ್ರ, ವೃತ್ತಿಪರ ತರಬೇತಿ ಕೇಂದ್ರಗಳು ಸ್ಥಾಪನೆಗೊಳ್ಳಬೇಕಾಗಿದೆ. ಈ ಮೂಲಕ ಅದೆಷ್ಟೋ ಮನೆಗಳಲ್ಲಿರುವ ವಿಶೇಷ ಮಕ್ಕಳ ಬಾಳು ಹಸನಾಗುವುದರಲ್ಲಿ ಸಂದೇಹವಿಲ್ಲ.

ತರಬೇತಿಗೆ ಸೇರಲು ಹಿಂಜರಿಕೆ
ಗೋವಾ, ಕೇರಳ, ಮಹಾರಾಷ್ಟ್ರಗಳಲ್ಲಿ ವಿಶೇಷ ಶಿಕ್ಷಕರಿಗಿರುವ ವೇತನ ಕರ್ನಾಟಕದಲ್ಲಿರುವ ವಿಶೇಷ ಶಿಕ್ಷಕರಿಗಿಲ್ಲ. ಕರ್ನಾಟಕದಲ್ಲಿ 500ಕ್ಕೂ ಹೆಚ್ಚು ವಿಶೇಷ ಶಾಲೆಗಳಿವೆ. 32 ವಿಶೇಷ ಶಾಲೆಗಳು 1982ರ ಅನುದಾನ ನೀತಿಯನ್ವಯ ಅನುದಾನ ಪಡೆಯುತ್ತಿದ್ದರೆ, 136 ವಿಶೇಷ ಶಾಲೆಗಳು ಶಿಶು ಕೇಂದ್ರಿತ ಅನುದಾನ ಪಡೆಯುತ್ತಿದೆ. ಉಳಿದವುಗಳು ಖಾಸಗಿಯಾಗಿ ಸ್ವಯಂ ಸೇವಾ ಸಂಸ್ಥೆಗಳ ಆಶ್ರಯದಲ್ಲಿ ನಡೆಯುತ್ತಿದೆ. ವಿಶೇಷ ಶಿಕ್ಷಕರಿಗಾಗಿ ಬೆಂಗಳೂರು, ಮಂಗಳೂರು, ದಾವಣಗೆರೆಗಳಲ್ಲಿ ತರಬೇತಿ ಶಾಲೆಗಳಿದ್ದರೂ, ಶಿಕ್ಷಕರ ಬದುಕಿಗೆ ಬೇಕಾಗುವಷ್ಟು ವೇತನ, ಭದ್ರತೆ ಇಲ್ಲದಿರುವುದರಿಂದ ವಿದ್ಯಾವಂತ ಯುವಜನತೆ ಈ ತರಬೇತಿಗೆ ಸೇರುವುದಕ್ಕೆ ಮುಂದೆ ಬರುತ್ತಿಲ್ಲ.

ಸರ್ವಶಿಕ್ಷಣ ಅಭಿಯಾನದಡಿ ಸಾಮನ್ಯ ಶಿಕ್ಷಕರಿಗೆ ದೊರೆಯುವ ಗೌರವಧನಕ್ಕೆ ಸಮಾನವಾಗಿ ವಿಶೇಷ ಶಿಕ್ಷಕರಿಗೂ ಗೌರವ ಧನ ಹೆಚ್ಚಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ ಎಂದು ಇಲಾಖೆ ಮಾಹಿತಿ ತಿಳಿಸಿದೆ.

ವಿಶೇಷ ಮಕ್ಕಳಿಗೆ ಅನ್ಯಾಯ
ಸಾಮಾನ್ಯ ಶಾಲೆಗಳಲ್ಲಿ ವಿಶೇಷ ಮಕ್ಕಳಿಗೆ ಅಗತ್ಯವಾದ ವೈಯಕ್ತಿಕ ಶಿಕ್ಷಣದ ಕ್ರಮವಿಲ್ಲ. ಅಲ್ಲದೆ ವಿಶೇಷ ಶಿಕ್ಷಣ ಮತ್ತು ಥೆರಪಿಗೆ ಸಂಬಂಧಿಸಿದಂತೆ ತಜ್ಞರ ಕೊರತೆಯೂ ಎದ್ದು ಕಾಣುತ್ತಿದೆ. ಅಂಗವಿಕಲಸ್ನೇಹಿ ವಾತಾವರಣ ಈ ಸಂಸ್ಥೆಗಳಲ್ಲಿ ಇಲ್ಲದಿರುವುದು ಇನ್ನೊಂದು ಪ್ರಮುಖ ವಿಚಾರ. ಪ್ರತಿಯೊಂದು ಸಂಸ್ಥೆಗಳಲ್ಲಿಯೂ ಸಂಪನ್ಮೂಲ ಕೊಠಡಿಯ ಅವಶ್ಯಕತೆಯಿದೆ. ಈ ಎಲ್ಲ ವ್ಯವಸ್ಥೆ ಗಳಿಲ್ಲದ ಸಾಮಾನ್ಯ ಶಾಲೆಗಳಲ್ಲಿ 9ನೇ ತರಗತಿವರೆಗೆ ಕಲಿತ ವಿಶೇಷ ಮಕ್ಕಳು ಪುನಃ ವಿಶೇಷ ಶಾಲೆಗೆ ಬರುತ್ತಿರುವುದು ವಿಷಾದನೀಯ. ಈ ನೆಲೆಯಲ್ಲಿ ವಿಶೇಷ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ವಿಶೇಷ ಶಿಕ್ಷಕರು, ಶಿಕ್ಷಕೇತರ ಸಿಬಂದಿಗೆ ಇತರೇ ಶಾಲೆಗಳಲ್ಲಿರುವ ಶಿಕ್ಷಕರು, ಶಿಕ್ಷಕೇತರರಿಗೆ ವೇತನ ಶ್ರೇಣಿ, ಸೇವಾ ಸೌಲಭ್ಯ ದೊರಕಬೇಕು.
-ಡಾ| ವಸಂತ ಕುಮಾರ್‌ ಶೆಟ್ಟಿ,
ಪ್ರ.ಕಾರ್ಯದರ್ಶಿ, ರಾಜ್ಯ ವಿಶೇಷ ಶಿಕ್ಷಕ ಶಿಕ್ಷಕೇತರರ ಸಂಘ

ವೇತನದಲ್ಲಿ ತಾರತಮ್ಯ
ವಿಶೇಷ ಶಾಲೆಗಳಲ್ಲಿ ಸೇವೆ ಸಲ್ಲಿಸುವ ಶಿಕ್ಷಕ ಶಿಕ್ಷಕೇತರರಿಗೆ ಕನಿಷ್ಠ ವೇತನ, ಸೇವಾ ಭದ್ರತೆ ದೊರಕುವುದರೊಂದಿಗೆ ಅವರ ಖಾತೆಗೆ ನೇರವಾಗಿ ಸಂಬಳ ತಲುಪಿಸುವ ವ್ಯವಸ್ಥೆಯನ್ನು ಇಲಾಖೆ ಮಾಡಬೇಕು.
-ಡಾ| ಕಾಂತಿ ಹರೀಶ್‌, ಅಧ್ಯಕ್ಷರು,
ರಾಜ್ಯ ವಿಶೇಷ ಶಿಕ್ಷಕ ಶಿಕ್ಷಕೇತರರ ಸಂಘ

ಎಸ್‌.ಜಿ. ನಾಯ್ಕ

ಟಾಪ್ ನ್ಯೂಸ್

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಚಾಲಕ ಸಾವು

Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್‌ ಡಿಕ್ಕಿ: ಮೊಪೆಡ್‌ ಸವಾರ ಸಾವು

vijayapura-Police

Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು

1veer

IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್‌ ಹೂಡಾ

1-ree

Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ

1-parm

Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!

ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್‌ ಟೂರಿಸಂ ಹಬ್ಬ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Naxal encounter case: Jayant Gowda’s interrogation, villagers lay siege to the police station

Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ಮಿಕ್ಸಿಂಗ್ ವಾಹನ ಪಲ್ಟಿ… ತಪ್ಪಿದ ಅನಾಹುತ

ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ

8-udupi

Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್‌.ಆರ್‌.

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Prajwal Revanna

Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ

Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ

1-wqweeqw

Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ

Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ

Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.