ಕಿಂಗ್‌ಸ್ಟನ್: ಕೊಹ್ಲಿ ತಂಡದ ಕ್ಲೀನ್ ಸ್ವೀಪ್ ಸ್ಕೆಚ್
Team Udayavani, Aug 30, 2019, 5:09 AM IST
ಕಿಂಗ್‌ಸ್ಟನ್ (ಜಮೈಕಾ): ನಾರ್ತ್ ಸೌಂಡ್ ಟೆಸ್ಟ್ ಪಂದ್ಯವನ್ನು 318 ರನ್ನುಗಳಿಂದ ಗೆದ್ದು ಕೆರಿಬಿಯನ್ ನಾಡಿನಲ್ಲಿ ದೊಡ್ಡ ಸದ್ದು ಮಾಡಿರುವ ಭಾರತ, ಶುಕ್ರವಾರದಿಂದ ಕಿಂಗ್‌ಸ್ಟನ್‌ನ “ಸಬೀನಾ ಪಾರ್ಕ್’ನಲ್ಲಿ ದ್ವಿತೀಯ ಹಾಗೂ ಅಂತಿಮ ಟೆಸ್ಟ್ ಪಂದ್ಯವನ್ನು ಆರಂಭಿಸಲಿದೆ. ಅಷ್ಟೇನೂ ಗಂಭೀರವಾಗಿ ಆಡದ ವೆಸ್ಟ್ ಇಂಡೀಸ್ ವಿರುದ್ಧ ಕ್ಲೀನ್ ಸ್ವೀಪ್ ಸಾಧಿಸುವುದು ಕೊಹ್ಲಿ ಪಡೆಗೇನೂ ಸಮಸ್ಯೆಯಾಗಿ ಕಾಡದು ಎಂಬುದೊಂದು ಲೆಕ್ಕಾಚಾರ.
ಈ ಪಂದ್ಯವನ್ನು ಡ್ರಾ ಮಾಡಿಕೊಂಡರೂ ಟೀಮ್ ಇಂಡಿಯಾ ಸರಣಿ ವಶಪಡಿಸಿಕೊಳ್ಳಲಿದೆ. ಆಗ ಕೆರಿಬಿಯನ್ ನಾಡಿನಲ್ಲಿ ಭಾರತ ಮೂರೂ ಪ್ರಕಾರಗಳ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಸರಣಿ ಗೆದ್ದಂತಾಗುತ್ತದೆ. ಇದಕ್ಕೂ ಮುನ್ನ ಟಿ20 ಸರಣಿಯನ್ನು 3-0 ಅಂತರದಿಂದ ವಶಪಡಿಸಿಕೊಂಡರೆ, ಏಕದಿನ ಸರಣಿಯಲ್ಲಿ 2-0 ಗೆಲುವು ಸಾಧಿಸಿತ್ತು.
ಪಂತ್ ಬ್ಯಾಟಿಂಗ್ ಚಿಂತೆ
ಈ ಪಂದ್ಯಕ್ಕಾಗಿ ಭಾರತ ತನ್ನ ಆಡುವ ಬಳಗದಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಇಲ್ಲ. ವಿಕೆಟ್ ಕೀಪರ್ ರಿಷಭ್ ಪಂತ್ ಅವರ ಬ್ಯಾಟಿಂಗ್ ಬಗ್ಗೆ ತುಸು ಯೋಚಿಸಬೇಕಿದೆ. ಫಾರ್ಮ್ ಗಿಂತ ಮಿಗಿಲಾಗಿ ಅವರು ಮಾಡು ವ ಅವಸರ ಹಾಗೂ ವಿಕೆಟ್ ಒಪ್ಪಿ ಸುವ ರೀತಿ ಚರ್ಚೆಗೆ ಗ್ರಾಸ ವಾಗಿದೆ. ಈ ಪ್ರವಾಸದಲ್ಲಿ ಪಂತ್ ಗಳಿಕೆ ಹೀಗಿದೆ: 0, 4, ಔಟಾಗದೆ 65, 20, 0, 24 ಮತ್ತು 7 ರನ್. ಆದರೂ ಪಂತ್ ಯಾವುದೇ ಕ್ಷಣದಲ್ಲಿ ಸಿಡಿದು ನಿಲ್ಲಬಲ್ಲ ಆಟಗಾರ. ಹೀಗಾಗಿ ವೃದ್ಧಿಮಾನ್ ಸಾಹಾಗೆ ಅವಕಾಶ ಸಿಗುವುದು ಅನುಮಾನ.
ಅಗ್ರ ಕ್ರಮಾಂಕದಲ್ಲಿ ಆರಂಭಕಾರ ಮಾಯಾಂಕ್ ಅಗರ್ವಾಲ್ ಕೂಡ ನಿರೀಕ್ಷೆಗೆ ತಕ್ಕ ಆಟವಾಡಿಲ್ಲ. ಮೊದಲ ಟೆಸ್ಟ್‌ನಲ್ಲಿ ಗಳಿಸಿದ್ದು 5 ಹಾಗೂ 16 ರನ್ ಮಾತ್ರ. ಆದರೂ ಅಗರ್ವಾಲ್ ಸ್ಥಾನಕ್ಕೇನೂ ಧಕ್ಕೆ ಇಲ್ಲ. ಪೂಜಾರ ದೊಡ್ಡ ಇನ್ನಿಂಗ್ಸ್ ಕಟ್ಟಬೇಕಾದ ಅಗತ್ಯವಿದೆ.
ರಹಾನೆ-ವಿಹಾರಿ ಮೆರೆದಾಟ
ಈವರೆಗೆ ಭಾರತಕ್ಕೆ ಸಮಸ್ಯೆಯಾಗಿ ಕಾಡಿದ್ದು ಮಧ್ಯಮ ಸರದಿ. ಇದಕ್ಕೆ ಅಜಿಂಕ್ಯ ರಹಾನೆ ಮತ್ತು ಹನುಮ ವಿಹಾರಿ ಸೂಕ್ತ ಉತ್ತರ ಒದಗಿಸಿದ್ದಾರೆ. ರಹಾನೆ ಎರಡೂ ಇನ್ನಿಂಗ್ಸ್‌ಗಳಲ್ಲಿ ಅಮೋಘ ಪ್ರದರ್ಶನ ನೀಡಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದು ರಹಾನೆ ಹೆಗ್ಗಳಿಕೆ. ವಿಹಾರಿ ಕೂಡ 2ನೇ ಸರದಿಯಲ್ಲಿ 93 ರನ್ ಹೊಡೆದು ಆಯ್ಕೆಯನ್ನು ಸಮರ್ಥಿಸಿದ್ದರು. ಹೀಗಾಗಿ ರೋಹಿತ್ ಶರ್ಮ ಕಾಯಬೇಕಾದುದು ಅನಿವಾರ್ಯ.
ಭಾರತ ಕೇವಲ 4 ಮಂದಿ ಸ್ಪೆಷಲಿಸ್ಟ್ ಬೌಲರ್‌ಗಳನ್ನು ಕಣಕ್ಕಿಳಿಸಿ ನಾರ್ತ್ ಸೌಂಡ್‌ನಲ್ಲಿ ಭರ್ಜರಿ ಯಶಸ್ಸು ಕಂಡಿತ್ತು. ಬುಮ್ರಾ, ಇಶಾಂತ್ ಘಾತಕ ಸ್ಪೆಲ್ ಮೂಲಕ ಕೆರಿಬಿಯನ್ನರ ಕತೆ ಮುಗಿಸಿದ್ದರು.
ವಿಂಡೀಸ್ ಒಟ್ಟಾರೆ ಆಟ
ವೆಸ್ಟ್ ಇಂಡೀಸ್ ತಂಡದ ಸಾಮರ್ಥ್ಯದ ಬಗ್ಗೆ ಎರಡು ಮಾತಿಲ್ಲ. ಇದೊಂದು ಸಶಕ್ತ ಹಾಗೂ ಪರಿಪೂರ್ಣ ಪಡೆ. ಮನಸ್ಸು ಮಾಡಿದರೆ ಯಾವುದೇ ಎದುರಾಳಿಯನ್ನು ಬಗ್ಗುಬಡಿಯಬಲ್ಲ ಛಾತಿ ಹೊಂದಿದೆ. ಆದರೆ ಗೆಲ್ಲಬೇಕೆಂಬ ಛಲ, ಹುಮ್ಮಸ್ಸು, ಬದ್ಧತೆ, ಆಸಕ್ತಿ ಮಾತ್ರ ಇಲ್ಲವೇ ಇಲ್ಲ. “ಒಟ್ಟಾರೆ ಆಟ’ಕ್ಕೆ ಯಾವ ಫಲಿತಾಂಶ ಲಭಿಸಬೇಕೋ, ಅದೇ ಲಭಿಸುತ್ತಿದೆ. ಬಹುಶಃ ಕಿಂಗ್‌ಸ್ಟನ್‌ನಲ್ಲೂ ಹೋಲ್ಡರ್ ಪಡೆ “ಕಿಂಗ್’ ಆಗುವುದು ಅನುಮಾನ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
HDK ಕ್ಷೇತ್ರ ಬಿಟ್ಟು ಹೋಗಿದ್ದಕ್ಕೆ ಜನ ಕೊಟ್ಟ ತೀರ್ಪು: ಡಿಕೆಶಿ ಟಾಂಗ್
Chinnaswamy Stadium: ಚಿನ್ನಸ್ವಾಮಿ ಸ್ಟಾಂಡ್‌ಗಳಿಗೆ ದಿಗ್ಗಜರ ಹೆಸರು
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.