ವ್ಯಕ್ತಿಗೆ ದಿನಕ್ಕೆ 55 ಲೀ. ನೀರು
ಸ್ವಚ್ಛ ಭಾರತ ರೀತಿಯಲ್ಲಿ 'ನಲ್ ಸೇ ಜಲ್'ಗೆ ರಾಷ್ಟ್ರೀಯ ಕೋಶ
Team Udayavani, Aug 30, 2019, 5:22 AM IST
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಘೋಷಣೆ ಮಾಡಿರುವಂತೆ 2024ರ ಒಳಗಾಗಿ ಪ್ರತಿ ಮನೆಗೂ ಟ್ಯಾಪ್ ಮೂಲಕ ನೀರು ಪೂರೈಕೆ ಯೋಜನೆಯಡಿ ಪ್ರತಿ ವ್ಯಕ್ತಿಗೆ ದಿನವೊಂದಕ್ಕೆ 55 ಲೀ. ನೀರನ್ನು ಒದಗಿಸಲು ಗುರಿ ಹಾಕಿಕೊಳ್ಳಲಾಗಿದೆ. ಅದಕ್ಕಾಗಿ ರಾಷ್ಟ್ರೀಯ ಜಲ ಜೀವನ ಕೋಶ ರಚಿಸಲಾಗುತ್ತದೆ. ಸ್ವಚ್ಛ ಭಾರತ ಯೋಜನೆ ಘೋಷಿಸಿದಾಗಲೂ ಇದೇ ರೀತಿ ಸ್ವಚ್ಛ ಭಾರತ ಕೋಶವನ್ನು ರಚಿಸಲಾಗಿತ್ತು. ಅದರ ಮೂಲಕ ಖಾಸಗಿ ಕಂಪನಿಗಳು ಮತ್ತು ಇತರ ದತ್ತಿ ಸಂಸ್ಥೆಗಳ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ನಿಧಿಯನ್ನು ಬಳಸಿಕೊಳ್ಳಲಾಗುತ್ತಿದೆ. ಇದೇ ರೀತಿ ‘ನಲ್ ಸೆ ಜಲ್’ ಎಂಬ ಈ ಯೋಜನೆಗೂ ಜಲ ಕೋಶ ರಚಿಸಿ, ಸಿಎಸ್‌ಆರ್ ಅನುದಾನಗಳನ್ನು ಬಳಸಿಕೊಳ್ಳಲು ಯೋಜಿಸಲಾಗಿದೆ. ಆರಂಭದಲ್ಲಿ ಕೆರೆ ಹಾಗೂ ನೀರಿನ ಮೂಲಗಳನ್ನು ಪುನಶ್ಚೇತನಗೊಳಿಸಲು ಉದ್ಯೋಗ ಖಾತರಿಯಲ್ಲಿನ 1 ಲಕ್ಷ ಕೋಟಿ ರೂ. ಹಣವನ್ನು ಅದಕ್ಕೆ ಮೀಸಲು ಇರಿಸಬೇಕಾಗುತ್ತದೆ.
ಸಂಪುಟದಲ್ಲಿ ಶೀಘ್ರ ಚರ್ಚೆ: ಅಧಿಕಾರಿಗಳು ಈ ಯೋಜನೆಗೆ ಅಂತಿ ರೂಪ ನೀಡುತ್ತಿದ್ದು, ಶೀಘ್ರದಲ್ಲೇ ಇದನ್ನು ಸಂಪುಟ ಸಭೆಯಲ್ಲಿ ಮಂಡಿಸುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ ಒಬ್ಬ ವ್ಯಕ್ತಿಗೆ 43 ರಿಂದ 55 ಲೀ .ನೀರನ್ನು ಪ್ರತಿ ದಿನ ಒದಗಿಸುವ ಪ್ರಸ್ತಾವನೆ ಇದರಲ್ಲಿದೆ. ಸಾಮಾನ್ಯವಾಗಿ ಬಹುತೇಕ ಸಂದರ್ಭಗಳಲ್ಲಿ ಮನೆಯಿಂದ 100 ಮೀಟರ್ ಒಳಗೆ ಇಷ್ಟು ನೀರು ಲಭ್ಯವಾಗುತ್ತದೆ. ತೀವ್ರ ಕೊರತೆ ಇರುವ 254 ಜಿಲ್ಲೆಗಳನ್ನು ಆದ್ಯತೆಯಲ್ಲಿ ಕೈಗೆತ್ತಿಕೊಳ್ಳಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.