ಸ್ವಾಧಾರ ಕೇಂದ್ರ ಮಂಜೂರು
•ಕಸ್ತೂರಿಬಾ ಸಾಂತ್ವನ ಕೇಂದ್ರದಲ್ಲಿ ಶೀಘ್ರ ಆರಂಭ: ಮೋಹಿನಿ ಸಿದ್ಧೇಗೌಡ
Team Udayavani, Aug 30, 2019, 12:12 PM IST
ಚಿಕ್ಕಮಗಳೂರು: ನಗರದ ಕಸ್ತೂರಿಬಾ ಸದನ ಸಾಂತ್ವನ ಕೇಂದ್ರಕ್ಕೆ ಕೇಂದ್ರ ಸರ್ಕಾರ ಸ್ವಾಧಾರ ಕೇಂದ್ರ ಮಂಜೂರು ಮಾಡಿದ್ದು, ಸದ್ಯದಲ್ಲೇ ಕಾರ್ಯಾರಂಭ ಮಾಡಲಿದೆ ಎಂದು ಸದನದ ಕಾರ್ಯದರ್ಶಿ ಮೋಹಿನಿ ಸಿದ್ಧೇಗೌಡ ಹೇಳಿದರು.
ಗುರುವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾಧಾರ ಕೇಂದ್ರ ಮಂಜೂರಾ ಗಿರುವುದು ಶೋಷಿತ ಹೆಣ್ಣುಮಕ್ಕಳಿಗೆ ಬಹಳ ಸಹಕಾರಿಯಾಗಲಿದೆ. ಈ ಹಿಂದೆ ಕಷ್ಟ ಹೇಳಿಕೊಂಡು ಬರುವ ಶೋಷಿತ ಹೆಣ್ಣುಮಕ್ಕಳನ್ನು ಇಲ್ಲಿ ಇರಿಸಿಕೊಳ್ಳಲಾಗದೆ ಬೇರೆ ಕಡೆ ಕಳುಹಿಸಲಾಗುತ್ತಿತ್ತು. ಆದರೆ, ಇನ್ನು ಮುಂದೆ ಇಲ್ಲಿಯೇ ಸ್ವಾಧಾರ್ ಕೇಂದ್ರ ತೆರೆಯುವುದರಿಂದ ಅಂತಹವರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದರು.
ಕೇಂದ್ರದಲ್ಲಿ ಕನಿಷ್ಠ 30 ಮಂದಿ ಮಹಿಳೆಯರನ್ನು ದಾಖಲು ಮಾಡಲು ಅವಕಾಶವಿದೆ. ಅವರಿಗೆ ಒಂದರಿಂದ 2ವರ್ಷ ಉಚಿತ ಸ್ವ ಉದ್ಯೋಗ ತರಬೇತಿ ನೀಡಿ ಸ್ವಾವಲಂಬಿಗಳನ್ನಾಗಿ ಮಾಡಲಾಗುವುದು ಎಂದು ತಿಳಿಸಿದರು.
ಈಗಾಗಲೇ ಗೌರಿ ಕಾಲುವೆಯಲ್ಲಿ ಬಾಡಿಗೆ ಕಟ್ಟಡ ನೋಡಿದ್ದೇವೆ. ಮಂಜೂರಾತಿ ಪ್ರಕ್ರಿಯೆಗಳು ನಡೆಯುತ್ತಿವೆ. ಆದಷ್ಟು ಬೇಗನೆ ಕೇಂದ್ರ ಆರಂಭಿಸಲಾಗುವುದು ಎಂದು ಹೇಳಿದರು.
ಕಸ್ತೂರಿಬಾ ಸದನ ಸಾಂತ್ವನ ಕೇಂದ್ರಕ್ಕೆ ಜನವರಿಯಿಂದ ಆಗಸ್ಟ್ ವರೆಗೆ ಒಟ್ಟು 62 ಪ್ರಕರಣ ದಾಖಲಾಗಿವೆ. ಅದರಲ್ಲಿ 45 ಪ್ರಕರಣ ಮುಕ್ತಾಯ ಮಾಡಲಾಗಿದ್ದು, 17 ಬಾಕಿ ಇವೆ. ಕೌಟುಂಬಿಕ ಕಲಹ 49, ಇತರೆ 13 ಇದ್ದು ರಾಜೀ ಸಂಧಾನದ ಮೂಲಕ 38 ಕೇಸು ಇತ್ಯರ್ಥಪಡಿಸಿದ್ದು, 7ಕೇಸುಗಳನ್ನು ಕೈಬಿಡಲಾಗಿದೆ ಎಂದು ತಿಳಿಸಿದರು.
ಕಸ್ತೂರಿಬಾ ಸದನ ಕೌಟುಂಬಿಕಾ ಸಲಹಾ ಕೇಂದ್ರಕ್ಕೆ ಒಟ್ಟು 55 ಕೇಸುಗಳು ದಾಖಲಾಗಿವೆ. ಅದರಲ್ಲಿ 18 ಇತ್ಯರ್ಥಪಡಿಸಿದ್ದು, 33ಬಾಕಿ ಇವೆ. ವರದಕ್ಷಿಣೆ 7, ದಾಂಪತ್ಯದಲ್ಲಿ ವಿರಸ 11, ಅತ್ತೆ, ಮಾವ, ಪೋಷಕರ ಮಧ್ಯಪ್ರವೇಶ 13, ಬಹು ಪತ್ನಿತ್ವ 8, ಮದ್ಯಪಾನ ವ್ಯಸನಿ ಕುಟುಂಬದ ಸಮಸ್ಯೆ 8, ಆರ್ಥಿಕ ಶೋಷಣೆಯಿಂದ ಬಳಲುತ್ತಿರುವವರ ಸಮಸ್ಯೆ 3, ಇತರೆ 5 ಸೇರಿ ಒಟ್ಟು 55 ಪ್ರಕರಣಗಳು ದಾಖಲಾಗಿದ್ದವು. ಅದರಲ್ಲಿ ರಾಜೀ ಸಂಧಾನದ ಮೂಲಕ 9, ನ್ಯಾಯಾಲಯಕ್ಕೆ ಕಳುಹಿಸಿದ್ದು, 1 ಹಾಗೂ ಕೈಬಿಟ್ಟ ಪ್ರಕರಣಗಳು 8 ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕಸ್ತೂರಿಬಾ ಸದನದ ಅಧ್ಯಕ್ಷೆ ಯಮುನಾ , ಉಪಾಧ್ಯಕ್ಷೆ ಯಶೋಧಾ, ಸದಸ್ಯರಾದ ಜಯಶ್ರೀ, ಪಾರ್ವತಿ, ಶುಭಾ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya:ಟಿಪ್ಪು ಆಳ್ವಿಕೆ- ಪ್ರವಾಸಿಗರ ಕಣ್ಮನ ಸೆಳೆಯುವ ಜಾಮೀಯಾ ಮಸೀದಿ, ಬೇಸಿಗೆ ಅರಮನೆ
Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ
CT Ravi Arrest; ಧೂರ್ತ ಸರ್ಕಾರ ನೀಚತನದ ಕೆಲಸ ಮಾಡಿದೆ: ಆರಗ ಜ್ಞಾನೇಂದ್ರ
CT Ravi ಬಂಧನ ಪ್ರಕರಣ; ಗೃಹ ಸಚಿವರು ಸ್ಪಷ್ಟನೆ ನೀಡಲಿ: ಕೋಟ
Koppala: ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು: ಕೂಡಲಸಂಗಮ ಶ್ರೀ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mandya:ಟಿಪ್ಪು ಆಳ್ವಿಕೆ- ಪ್ರವಾಸಿಗರ ಕಣ್ಮನ ಸೆಳೆಯುವ ಜಾಮೀಯಾ ಮಸೀದಿ, ಬೇಸಿಗೆ ಅರಮನೆ
BGT 2024: ಉಳಿದೆರಡು ಪಂದ್ಯಗಳಿಗೆ ಆಸೀಸ್ ತಂಡ ಪ್ರಕಟ: ಮೂರು ಬದಲಾವಣೆ ಮಾಡಿದ ಆಸ್ಟ್ರೇಲಿಯಾ
Parcel: ಮನೆಗೆ ಬಂದ ಪಾರ್ಸೆಲ್ ನಲ್ಲಿ ಇದ್ದದ್ದು ವ್ಯಕ್ತಿಯ ಮೃತದೇಹ… ಮಹಿಳೆಗೆ ಶಾಕ್ !
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Mandya: ಬ್ರಹ್ಮ, ಶಿವನ ಪೂಜಿಸುವ ಏಕೈಕ ದೇಗುಲ ಬ್ರಹ್ಮಲಿಂಗೇಶ್ವರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.