ಬೇರೆ ಜಿಲ್ಲೆಗೆ ನೀರು ಹರಿಸುವುದಿಲ್ಲ
ಲಿಂಕ್ ಕೆನಾಲ್ ಯೋಜನೆ: ವಿಪಕ್ಷದವರ ಸುಳ್ಳು ಪ್ರಚಾರಕ್ಕೆ ಶಾಸಕ ಡಾ. ರಂಗನಾಥ್ ಆಕ್ರೋಶ
Team Udayavani, Aug 30, 2019, 1:10 PM IST
ಕುಣಿಗಲ್ ತಾಲೂಕು ಯಲಿಯೂರಿನಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಯ ಕಾರ್ಯಕ್ರಮ ವನ್ನು ಶಾಸಕ ಡಾ.ರಂಗನಾಥ್ ಉದ್ಘಾಟಿಸಿದರು. ತಾಪಂ ಸದಸ್ಯ ಐ.ಎ. ವಿಶ್ವನಾಥ್ ಇತರರಿದ್ದರು.
ಕುಣಿಗಲ್: ತಾಲೂಕಿನ ನೀರು ಬೇರೆ ಜಿಲ್ಲೆಗೆ ಹರಿಸಲು ಲಿಂಕ್‌ಕೆನಾಲ್ ಮಾಡಲಾಗುತ್ತಿದೆ ಎಂದು ವಿಪಕ್ಷ ದವರು ಸುಳ್ಳು ಪ್ರಚಾರ ಮಾಡಿ ಜನರನ್ನು ದಾರಿತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ ಶಾಸಕ ಡಾ.ಎಚ್. ಡಿ. ರಂಗನಾಥ್ ಆರೋಪಿಸಿದರು.
ಹುತ್ರಿದುರ್ಗ ಹೋಬಳಿ ಯಲಿಯೂರು ಗ್ರಾಪಂ ವ್ಯಾಪ್ತಿಯಲ್ಲಿ ಗುರುವಾರ ಅಂಗನವಾಡಿ ಕಟ್ಟಡ ಉದ್ಘಾಟನೆ ಹಾಗೂ ಗ್ರಾಮ ಪಂಚಾಯಿತಿ, ರಾಜೀವ ಗಾಂಧಿ ಸೇವಾ ಕೇಂದ್ರ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಯಾವುದೇ ಕಾರಣಕ್ಕೂ ನಮ್ಮ ಪಾಲಿನ ಒಂದು ಹನಿ ನೀರು ಬೇರೆ ಜಿಲ್ಲೆಗೆ ಕೊಡುವುದಿಲ್ಲ. ಹೇಮಾವತಿ ಕೊನೆಯ ಭಾಗವಾದ ಕುಣಿಗಲ್ ತಾಲೂಕಿಗೆ ಮೊದಲು ನೀರು ಹರಿಸಿದ ಬಳಿಕ ಬೇರೆ ತಾಲೂಕಿಗೆ ಹರಿಸಬೇಕಾಗಿದೆ. ಆದರೆ ಗುಬ್ಬಿ, ತುರುವೇಕೆರೆ, ತುಮಕೂರು, ಸಿ.ಎಸ್. ಪುರ ಮಾರ್ಗವಾಗಿ ಕುಣಿಗಲ್ ದೊಡ್ಡಕೆರೆಗೆ ನೀರು ಹರಿಸ ಲಾಗುತ್ತಿದೆ. ಈ ಮಧ್ಯೆ ಬೇರೆ ತಾಲೂಕಿನ ರೈತರು ಅಕ್ರಮವಾಗಿ ನೂರಾರು ಪಂಪ್‌ಸೆಟ್ ಅಳವಡಿಸಿ ಕೊಂಡು ನೀರು ಹರಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಕೆಲ ಪ್ರಭಾವಿ ರಾಜಕಾರಣಿಗಳು ರೈತರನ್ನು ಎತ್ತಿಕಟ್ಟಿ ನಾಲೆಯ ಗೇಟ್ ಮುರಿಸಿ ಸಣ್ಣಪುಟ್ಟ ಕೆರೆಗಳಿಗೆ ಹರಿಸಿ ಕೊಳ್ಳುತ್ತಿದ್ದಾರೆ.
ಇದರಿಂದ ಕುಣಿಗಲ್ ದೊಡ್ಡಕೆರೆ 25 ವರ್ಷದಿಂದ ತುಂಬಿಲ್ಲ. ಹಾಗಾಗಿ ಲಿಂಕ್ ಕೆನಾಲ್ ಯೋಜನೆ ಕೈಗೆತ್ತಿಕೊಳ್ಳ ಲಾಗಿದೆ. ಇದು ಅನುಷ್ಠಾನ ಗೊಂಡರೆ ಸಂಸದ ಡಿ.ಕೆ. ಸುರೇಶ್ ಹಾಗೂ ನನಗೆ ಹೆಸರು ಬರುತ್ತದೆ ಎಂದು ವಿರೋಧ ಪಕ್ಷದ ಮುಖಂಡರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಹನಿ ನೀರು ಕೊಡ್ಡಲ್ಲ: ಕೃಷ್ಣ ಬೇಸನ್‌ನಲ್ಲಿ ಇರುವ ಶಿರಾ ತಾಲೂಕಿಗೆ ಹೇಮಾವತಿಯಿಂದ ಒಂದು ಟಿಎಂಸಿ ನೀರು ಅಲೋಕೇಷನ್ ಮಾಡಿಕೊಡಲಾಗಿದೆ. ತುಮ ಕೂರು, ಗುಬ್ಬಿ, ತುರುವೇಕೆರೆ ಕೆರೆಗಳಿಗೆ ತಲಾ 500 ಎಂಸಿಎಫ್‌ಟಿ ನೀರು ನಿಗದಿಪಡಿಸಲಾಗಿದೆ. ಆದರೆ ಕುಣಿಗಲ್ ದೊಡ್ಡಕೆರೆಗೆ ಕೇವಲ 73.07 ಎಸಿಎಫ್‌ಟಿ, ಹಾಗೂ ಮಾರ್ಕೋ ನಹಳ್ಳಿ ಜಲಾಶಯಕ್ಕೆ ಯಾವುದೇ ಅಲೋಕೇಷನ್ ಇರಲಿಲ್ಲ. ಹಿಂದಿನ ಸರ್ಕಾರದ ಮೇಲೆ ಒತ್ತಡ ತಂದು ಕುಣಿಗಲ್ ದೊಡ್ಡ ಕೆರೆಗೆ 464.68 ಎಂಸಿಎಫ್‌ಟಿ ಹಾಗೂ ಮಾರ್ಕೋನಹಳ್ಳಿ ಜಲಾಶಯಕ್ಕೆ 1 ಟಿಂಎಂಸಿ ಹಾಗೂ ಅಚ್ಚುಕಟ್ಟು ಪ್ರದೇಶಕ್ಕೆ 2.5 ಟಿ.ಎಂ.ಸಿ ನೀರು ಸೇರಿದಂತೆ ಒಟ್ಟು ತಾಲೂಕಿಗೆ 4 ಟಿಎಂಸಿ ನೀರು ನಿಗದಿ ಪಡಿಸಲಾಗಿದೆ. ಬೇರೆ ಜಿಲ್ಲೆಗೆ ನೀರು ಹರಿಸುವುದಿಲ್ಲ ಎಂದು ಹೇಳಿದರು.
ನೀರಿಗೆ ಅಡ್ಡಿ: ಜಿಲ್ಲೆಯ ಬಹುತೇಕ ಶಾಸಕರು ಕುಣಿಗಲ್ಗೆ ಹೇಮಾವತಿ ನೀರು ಕೊಡಲು ವಿರೋಧಿಸುತ್ತಿದ್ದಾರೆ. ವಿರೋಧದ ನಡುವೆಯೂ ಕಳೆದ ಹತ್ತು ದಿನಗಳಿಂದ 280 ಕ್ಯೂಸೆಕ್ ನೀರು ಕುಣಿಗಲ್ ದೊಡ್ಡಕೆರೆಗೆ ಹರಿಸಲಾಗುತ್ತಿದೆ. ಇದೇ ರೀತಿ ಒಂದು ತಿಂಗಳು ಹರಿದರೆ ಕೆರೆ ತುಂಬಲಿದೆ ಎಂದು ಶಾಸಕರು ಹೇಳಿದರು.
ಚಕಾರ ಎತ್ತದ ಬಿಜೆಪಿ: ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 52 ಸಾವಿರ ಮತ ಪಡೆದಿದೆ. ಆದರೆ ನೀರಾವರಿಯಲ್ಲಿ ತಾಲೂಕಿಗೆ ಅಗಿರುವ ಅನ್ಯಾಯದ ಬಗ್ಗೆ ಏಕೆ ಚಕಾರ ಎತ್ತುತ್ತಿಲ್ಲ ಎಂದು ಬಿಜೆಪಿ ಮುಖಂಡರನ್ನು ಶಾಸಕರು ತರಾಟೆ ತೆಗೆದು ಕೊಂಡರು. ವಿವಿಧ ಅಭಿವೃದ್ಧಿಗೆ ಜಮೀನು ಬಿಟ್ಟಿಕೊಟ್ಟ 16 ಕುಟುಂಬಗಳಿಗೆ ನಿವೇಶನದ ಹಕ್ಕು ಪತ್ರ ಶಾಸಕರು ನೀಡಿದರು. ಗ್ರಾಪಂ ಅಧ್ಯಕ್ಷೆ ಮಮತಾ ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು.
ತಾಪಂ ಸದಸ್ಯ ಐ.ಎ. ವಿಶ್ವನಾಥ್, ಜಿಪಂ ಮಾಜಿ ಸದಸ್ಯ ಗಂಗಶಾನಯ್ಯ, ತಾಪಂ ಮಾಜಿ ಉಪಾಧ್ಯಕ್ಷ ಹೊನ್ನೇಗೌಡ, ಗ್ರಾಪಂ ಉಪಾಧ್ಯಕ್ಷ ರಂಗಸ್ವಾಮಿ, ಸದಸ್ಯರಾದ ಜಯಲಕ್ಷ್ಮ ಮ್ಮ, ಮಹಮದ್ ಸೆಮಿಉಲ್ಲಾ, ಜಹೀರುದ್ದೀನ್, ಶಿವಣ್ಣ, ಪಿಡಿಒ ಎಸ್.ಶಂಕರ್, ಕಾರ್ಯದರ್ಶಿ ಬಲರಾಮಯ್ಯ, ಗುತ್ತಿಗೆದಾರರ ಸಂಘದ ಅಧ್ಯಕ್ಷ ನಾರಾಯಣ್, ಮುಖಂಡರಾದ ಕೆಂಪೀರೇಗೌಡ, ಪದ್ಮನಾಭ, ಶಾಂತರಾಜು ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು
Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್: ಸಚಿವ ಡಾ| ಜಿ. ಪರಮೇಶ್ವರ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Editorial: ಪುಂಡ ವಿದ್ಯಾರ್ಥಿಗಳಿಗೆ ಶಿಕ್ಷೆ: ಸ್ಪಷ್ಟ ಮಾರ್ಗಸೂಚಿ ಅಗತ್ಯ
Mangaluru: ನ್ಯಾಯಾಂಗ ನಿಂದನೆ ಪ್ರಕರಣ: ಹನುಮಂತ ಕಾಮತ್‌ಗೆ ಕಾರಾಗೃಹ ಶಿಕ್ಷೆ
Parliament: ಎರಡೂ ಸದನಗಳಲ್ಲಿ ಸಂವಿಧಾನದ ಬಗ್ಗೆ ಚರ್ಚೆಗೆ ವಿಪಕ್ಷ ನಾಯಕರ ಪತ್ರ
Congress Politics: ಡಿಸಿಎಂ ಡಿ.ಕೆ.ಶಿವಕುಮಾರ್ ದಿಲ್ಲಿಗೆ ಭೇಟಿ: ಹೈಕಮಾಂಡ್ ಜತೆ ಚರ್ಚೆ
Andhra Pradesh: ಅದಾನಿ ಗ್ರೂಪ್ ಜತೆಗಿನ ಒಪ್ಪಂದ ರದ್ದತಿಗೆ ಆಂಧ್ರಪ್ರದೇಶ ಚಿಂತನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.