ನಗರದಲ್ಲಿ ದಿನಕ್ಕೊಂದು ರಾಬರಿ!
Team Udayavani, Aug 31, 2019, 3:07 AM IST
ಬೆಂಗಳೂರು: ನಗರದಲ್ಲಿ ದುಷ್ಕರ್ಮಿಗಳು ಅಟ್ಟಹಾಸ ಮೆರೆಯುತ್ತಿದ್ದು, ಮೊಬೈಲ್ ಕಳ್ಳರು ಹಾಗೂ ಸರಕಳ್ಳರು ತಲೆನೋವಾಗಿ ಪರಿಣಮಿಸತೊಡಗಿದ್ದಾರೆ. 2019ರ ಜನವರಿಯಿಂದ ನಗರದ ಯಾವುದಾದರೂ ಒಂದು ಭಾಗದಲ್ಲಿ ದುಷ್ಕರ್ಮಿಗಳು ದಿನಕ್ಕೆ ಒಂದು ಅಥವಾ ಎರಡು ಮೊಬೈಲ್ ಕಳವು, ಮಹಿಳೆಯರ ಸರ ಕಳವು ಮಾಡಿದ್ದಾರೆ. ಆಗಸ್ಟ್ 25ರವರೆಗೆ ನಗರದಲ್ಲಿ ನಡೆದ ರಾಬರಿ ಹಾಗೂ ಸರಗಳವು ಪ್ರಕರಣಗಳು ಇದಕ್ಕೆ ಸಾಕ್ಷ್ಯಾವಾಗಿದೆ.
ಬಹುತೇಕ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವ ದುಷ್ಕರ್ಮಿಗಳು, ರಸ್ತೆಬದಿ ನಡೆದು ಹೋಗುವ ಯುವತಿಯರು, ಮಹಿಳೆಯರು ಸೇರಿದಂತೆ ಸಾರ್ವಜನಿಕರನ್ನು ಅಡ್ಡಗಟ್ಟಿ, ಮೊಬೈಲ್, ಹಣ, ಸರ ಕಸಿದುಕೊಂಡು ಪರಾರಿಯಾಗುತ್ತಿದ್ದಾರೆ. ಕೆಲ ಸಂಧರ್ಭಗಳಲ್ಲಿ ಸರ, ಹಣಕ್ಕಾಗಿ ತಳ್ಳುವ, ಹಲ್ಲೆ ನಡೆಸುವ ಘಟನೆಗಳೂ ಜರುಗಿವೆ.
ತಲೆಗೆ ಇರಿದು ಮೊಬೈಲ್ ದೋಚಿದರು!: ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಯುವತಿಯನ್ನು ಹಿಂಬಾಲಿಸಿದ ದುಷ್ಕರ್ಮಿಗಳು, ಚಾಕುವಿನಿಂದ ಆಕೆಯ ತಲೆಗೆ ಇರಿದು ಮೊಬೈಲ್ ಹಾಗೂ ಬ್ಯಾಗ್ ಕಿತ್ತುಕೊಂಡು ಪರಾರಿಯಾದ ಘಟನೆ ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಜೈ ಭಾರತ್ ನಗರದ ನಿವಾಸಿ ಲೀಲಾ, ಈ ಕುರಿತು ಬಾಣಸವಾಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಆ.28ರಂದು ಮಧ್ಯಾಹ್ನ 2.30ರ ಸುಮಾರಿಗೆ ಶಿವಾಜಿನಗರಕ್ಕೆ ತೆರಳಲು ಲೀಲಾ, ಬಸ್ ನಿಲ್ದಾಣಕ್ಕೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಹಿಂಬಾಲಿಸಿದ ದುಷ್ಕರ್ಮಿಗಳು, ಏಕಾಏಕಿ ಚಾಕುವಿನಿಂದ ಲೀಲಾ ಅವರ ತಲೆಗೆ ಗಾಯವಾಗುವಂತೆ ಇರಿದಿದ್ದಾರೆ.
ನೋವಿನಿಂದ ಲೀಲಾ ಅವರು ಕುಳಿತುಕೊಳ್ಳುತ್ತಲೇ, ಬೈಕ್‌ನಿಂದ ಇಳಿದ ದುಷ್ಕರ್ಮಿ, ಅವರ ಕೈಲಿದ್ದ ಮೊಬೈಲ್ ಹಾಗೂ ವ್ಯಾನಿಟಿ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಸ್ಥಳೀಯರು ಲೀಲಾ ಅವರ ರಕ್ಷಣೆಗೆ ಧಾವಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಾಕು ಇರಿತದಿಂದ ಲೀಲಾ ಅವರ ತಲೆಯಲ್ಲಿ ತೂತು ಬಿದ್ದಿದ್ದು, ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು.
ವೃದ್ಧೆಯರ ಸರಗಳವು: ಮತ್ತೂಂದು ಪ್ರಕರಣದಲ್ಲಿ ಗುರುವಾರ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು, ಬಾಣಸವಾಡಿ ಹಾಗೂ ಬೈಯಪ್ಪನಹಳ್ಳಿಯಲ್ಲಿ ಇಬ್ಬರು ವೃದ್ಧೆಯರ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ರಾಮಯ್ಯ ಲೇಔಟ್‌ನ ತಮ್ಮ ಮನೆಯ ಮುಂಭಾಗ ವಾಯು ವಿಹಾರ ಮಾಡುತ್ತಿದ್ದ ಕಲ್ಯಾಣಿ ದೊರೆಸ್ವಾಮಿ (71) ಅವರನ್ನು ತಳ್ಳಿದ ದುಷ್ಕರ್ಮಿಗಳು, ಅವರ ಕತ್ತಿನಲ್ಲಿದ್ದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಗುರುವಾರ ಸಂಜೆ 5.30ರ ಸುಮಾರಿಗೆ ಈ ಘಟನೆ ನಡೆದಿದೆ. ಈ ಕುರಿತು ಕಲ್ಯಾಣಿ ದೊರೆಸ್ವಾಮಿ ಅವರು ನೀಡಿರುವ ದೂರಿನ ಅನ್ವಯ ಬಾಣಸವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ. ಬೈಯಪ್ಪನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಮಲ್ಲೇಶಪಾಳ್ಯದ 5ನೇ ಮುಖ್ಯರಸ್ತೆಯಲ್ಲಿ ಗುರುವಾರ ಸಂಜೆ 6 ಗಂಟೆ ಸುಮಾರಿಗೆ ವೃದ್ಧೆಯೊಬ್ಬರನ್ನು ಬೈಕ್‌ನಲ್ಲಿ ಹಿಂಬಾಲಿಸಿದ ದುಷ್ಕರ್ಮಿಗಳು ಅವರ ಕತ್ತಿನಲ್ಲಿದ್ದ ಸರ ಕಿತ್ತಿದ್ದಾರೆ. ಈ ಕುರಿತು ಸರ ಕಳೆದುಕೊಂಡ ಸರೋಜಾ (78) ಎಂಬವರು ನೀಡಿರುವ ದೂರಿನ ಅನ್ವಯ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.
ವೃದ್ಧೆಯ ಕಾಲು ಮುರಿದಿತ್ತು: ಕೆಲ ತಿಂಗಳ ಹಿಂದೆ ಸಂಜಯ್‌ನಗರದಲ್ಲಿ ದುಷ್ಕರ್ಮಿಗಳು ವೃದ್ಧೆಯೊಬ್ಬರನ್ನು ತಳ್ಳಿ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಈ ವೇಳೆ ರಸ್ತೆ ಮೇಲೆ ಬಿದ್ದಿದ್ದ ವೃದ್ಧೆಯ ಕಾಲು ಮುರಿದು, ಶಸ್ತ್ರಚಿಕಿತ್ಸೆ ಪಡೆದುಕೊಂಡ ಬಳಿಕ ಗುಣಮುಖರಾಗಿದ್ದರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ರಾಬರಿ ಪ್ರಕರಣಗಳು (ಜ.1ರಿಂದ ಆ.25)
2017 2018 2019 (ಆ.25ರವರೆಗೆ)
630 700 360
ಸರಗಳವು ಪ್ರಕರಣಗಳು
2017 2018 2019
355 308 150
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು
Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್ ವೈದ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.