ಇದ್ದೂ ಇಲ್ಲದಂತಿರುವ ಶ್ರದ್ಧಾಂಜಲಿ,ಮುಕ್ತಿ ಆ್ಯಂಬುಲೆನ್ಸ್‌

ಮೃತದೇಹ ಸಾಗಿಸಲು ಖಾಸಗಿ ವಾಹನದ ಮೊರೆ ಹೋಗುವ ಸಾರ್ವಜನಿಕರು!

Team Udayavani, Aug 31, 2019, 5:56 AM IST

MANG-As

ಮಹಾನಗರ: ಬಡ ಜನರಿಗೆ ನೆರವಾಗುವ ನಿಟ್ಟಿನಲ್ಲಿ ಸರಕಾರಿ ಆಸ್ಪತ್ರೆಗೆ ನೀಡಲಾಗಿದ್ದ ಶ್ರದ್ಧಾಂಜಲಿ ಆ್ಯಂಬುಲೆನ್ಸ್‌ ಜನರ ಬಳಕೆಗೆ ಸಿಗದೆ ಧೂಳು ಹಿಡಿಯುತ್ತಿದೆ.

ವೆನಾÉಕ್‌ ಆಸ್ಪತ್ರೆಯ ಶವಗಳನ್ನು ಉಚಿತವಾಗಿ ಮನೆಗೆ ತಲುಪಿಸುವ ಉದ್ದೇಶದಿಂದ ಯು.ಟಿ. ಖಾದರ್‌ ಅವರು ಆರೋಗ್ಯ ಸಚಿವರಾಗಿದ್ದಾಗ ವಿಶೇಷ ಕಾಳಜಿ ವಹಿಸಿ ಯು.ಟಿ. ಫರೀದ್‌ ಫೌಂಡೇಶನ್‌ ವತಿಯಿಂದ ಈ ವಾಹನವನ್ನು ಆಸ್ಪತ್ರೆಗೆ ನೀಡಿದ್ದರು. ಆದರೆ ವಾಹನವನ್ನು ಓಡಿಸಲು ಆರೋಗ್ಯ ಇಲಾಖೆಯ ಬಳಿ ಯಾವುದೇ ಅನುದಾನ ಇಲ್ಲ ಎಂಬ ಕಾರಣ ನೀಡಿ ಆ್ಯಂಬುಲೆನ್ಸ್‌ ಮೂಲೆಗೆ ಬಿದ್ದಿದೆ. ಸಾಮಾನ್ಯವಾಗಿ ಆ್ಯಂಬುಲೆನ್ಸ್‌ ಗಳಲ್ಲಿ ಮೃತದೇಹಗಳನ್ನು ಸಾಗಿಸಲಾಗುವುದಿಲ್ಲ. ಆದ್ದರಿಂದ ಮೃತರ ಸಂಬಂಧಿಕರು ಮೃತದೇಹ ಸಾಗಿಸಲು ಖಾಸಗಿ ಆ್ಯಂಬುಲೆನ್ಸ್‌ಗಳಿಗೆ ಮೊರೆ ಹೋಗಬೇಕಾಗಿತ್ತು. ಆದರೆ ಅದಕ್ಕೆ ದುಬಾರಿ ಬೆಲೆ ನೀಡಬೇಕಾಗಿರುವುದರಿಂದ ಬಡವರು ಸಂಕಷ್ಟಕ್ಕೆ ಒಳಗಾಗ ಬೇಕಿತ್ತು. ಹಾಗಾಗಿ ಯು.ಟಿ. ಖಾದರ್‌ ಆರೋಗ್ಯ ಸಚಿವರಾಗಿದ್ದಾಗ ಶ್ರದ್ಧಾಂಜಲಿ ಆ್ಯಂಬುಲೆನ್ಸ್‌ ವಾಹನದ ಯೋಜನೆ ರೂಪಿಸಿದ್ದರು. ಆದರೆ ಈಗ ಅದು ಸಮರ್ಪಕವಾಗಿ ಜಾರಿಗೆ ಬಾರದೆ ಸಾರ್ವಜನಿಕರು ಸಂಕಷ್ಟಕ್ಕೊಳಗಾಗಿದ್ದಾರೆ.

ಪಾಲಿಕೆ ಆ್ಯಂಬುಲೆನ್ಸ್‌ಗೆ ಇಲ್ಲ ಮುಕ್ತಿ
ಮನಪಾ ವತಿಯಿಂದ ಬಡ ಜನರಿಗೆ ಮೃತದೇಹ ಸಾಗಿಸಲು ಸಹಾಯವಾಗಲಿ ಎಂಬ ದೃಷ್ಟಿಯಿಂದ 2017ರಲ್ಲಿ ಒಂದು ಆ್ಯಂಬುಲೈನ್ಸ್‌ ತರಿಸಿ ಅದಕ್ಕೆ ಮುಕ್ತಿ ಆ್ಯಂಬುಲೆನ್ಸ್‌ ಎಂದು ಹೆಸರಿಡಲಾಯಿತು. ಅದಕ್ಕೆ ಪ್ರತಿ ತಿಂಗಳು 40,500 ರೂ. ಕೊಡುವುದು, ಅದರಲ್ಲಿ ಚಾಲಕನ ಸಂಬಳ, ಡಿಸೆಲ್‌ ಖರ್ಚು ಎಲ್ಲ ಬರಬೇಕು ಎಂದು ತೀರ್ಮಾನಿಸಲಾಗಿತ್ತು.

ಮಾಸಿಕ ಎರಡು ಸಾವಿರ ಕಿಲೋ ಮೀಟರ್‌ ಹೋಗಬಹುದು ಎಂದು ನಿಗದಿಪಡಿಸಲಾಯಿತು. ಒಂದು ವೇಳೆ ಅದಕ್ಕಿಂತ ಜಾಸ್ತಿ ಖರ್ಚು ಬಂದರೆ ಪಾಲಿಕೆಗೆ ಬಿಲ್‌ ಕೊಡಬೇಕು ಎಂದು ಸೂಚಿಸಲಾಗಿತ್ತು. ಆದರೆ ಈ ಆ್ಯಂಬುಲೆನ್ಸ್‌ ಚಾಲನೆಯಲ್ಲಿ ಇದೆಯಾ ಎಂಬುದಾಗಿ ಯಾರಿಗೂ ತಿಳಿದಿಲ್ಲ. ಹಾಗಾಗಿ ಮುಕ್ತಿ ಆ್ಯಂಬುಲೆನ್ಸ್‌ ಪಾಲಿಕೆ ಆವರಣದಲ್ಲೇ ನಿಂತಿರುತ್ತದೆ. ಮೃತದೇಹ ಸಾಗಾಟ ಮಾಡದೆ ಇದ್ದರೂ ತಿಂಗಳಿಗೆ ನಿಗದಿಪಡಿಸಿದ ಮೊತ್ತವನ್ನು ನೀಡಲೇ ಬೇಕಾಗುತ್ತದೆ. ಮುಕ್ತಿ ವಾಹನದ ಬಗ್ಗೆ ಯಾರಿಗೂ ತಿಳಿಯದೆ ಇರುವುದರಿಂದ ಅಗತ್ಯವುಳ್ಳ ಸಾರ್ವಜನಿಕರು ಇದರ ಬಳಕೆ ಮಾಡುತ್ತಿಲ್ಲ.

 ಅನುದಾನದ ಕೊರತೆ
ಸದ್ಯ ಶ್ರದ್ಧಾಂಜಲಿ ವಾಹನದ ಬಳಕೆಯಾಗುತ್ತಿಲ್ಲ. ಈ ಹಿಂದೆ ಟೆಂಡರ್‌ ಮೂಲಕ ಚಾಲಕರ ನೇಮಕ ಮಾಡಲಾಗಿತ್ತು. ಆದರೆ ಟೆಂಡರ್‌ ಮುಗಿದ ಹಿನ್ನೆಲೆಯಲ್ಲಿ ಶ್ರದ್ಧಾಂಜಲಿ ಆ್ಯಂಬುಲೆನ್ಸ್‌ ಬಳಕೆ ಮಾಡಲಾಗುತ್ತಿಲ್ಲ. ಹೆಣ ಸಾಗಾಟದ ವಾಹನ ಎಂಬ ಕಾರಣಕ್ಕಾಗಿಯೇ ಯಾರೂ ಮುಂದೆ ಬರುತ್ತಿಲ್ಲ. ಈ ನಡುವೆ ಚಾಲಕರ ಸಂಬಳ, ಇಂಧನಕ್ಕೆ ಹಣ ನೀಡಲು ಇಲಾಖೆಯಲ್ಲಿ ಅನುದಾನದ ಕೊರತೆ ಇದೆ. ಸರಕಾರಕ್ಕೆ ಈ ಬಗ್ಗೆ ಪತ್ರ ಬರೆಯಲಾಗಿದೆ.
– ಡಾ| ರಾಮಕೃಷ್ಣ ರಾವ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ

ಖಾಸಗಿ ಆ್ಯಂಬುಲೆನ್ಸ್‌ಗೆ ಸಾವಿರಾರು ರೂ. ಖರ್ಚು
ಸರಕಾರಿ ಆ್ಯಂಬುಲೆನ್ಸ್‌ಗಳು ಇದ್ದು ಇಲ್ಲದಂತಿರುವ ಕಾರಣದಿಂದ ಬಡ ಜನರು ಮೃತದೇಹ ಸಾಗಿಸಲು ಖಾಸಗಿ ಆ್ಯಂಬುಲೆನ್ಸ್‌ಗಳ ಮೊರೆ ಹೋಗಬೇಕಾಗುತ್ತದೆ. ಅವರು ಕಿ.ಮೀ.ಗೆ ಇಂತಿಷ್ಟು ಎಂಬುದಾಗಿ ದರ ನಿಗದಿಪಡಿಸುತ್ತಾರೆ. ಇದು ದುಬಾರಿಯಾಗಿರುವುದರಿಂದ ಸಾರ್ವಜನಿಕರು ಕಷ್ಟ ಅನುಭವಿಸುವಂತಾಗಿದೆ.

ಟೆಂಡರ್‌ ಮುಕ್ತಾಯ
ಈ ಆ್ಯಂಬುಲೆನ್ಸ್‌ ಬಳಕೆಯ ಆವಶ್ಯಕತೆ ಇರುವವರು ಪಾಲಿಕೆಗೆ ಕರೆ ಮಾಡಿ ತಿಳಿಸಬೇಕು. ಅವರಿಗೆ ಆ್ಯಂಬುಲೆನ್ಸ್‌ ಸೇವೆ ನೀಡಲಾಗುತ್ತಿದೆ. ಆದರೆ ಜುಲೈಯಲ್ಲಿ ಮುಕ್ತಿ ಆ್ಯಂಬುಲೆನ್ಸ್‌ನ ಟೆಂಡರ್‌ ಮುಗಿದಿದೆ. ಆದರೂ ಅದನ್ನು ಮೂರು ತಿಂಗಳಿಗೆ ವಿಸ್ತರಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮತ್ತೆ ಟೆಂಡರ್‌ ಕರೆದು ಮುಂದುವರಿಸಲಾಗುತ್ತದೆ ಎಂಬುದಾಗಿ ಪಾಲಿಕೆ ಅಧಿಕಾರಿ ಪತ್ರಿಕೆಗೆ ತಿಳಿಸಿದ್ದಾರೆ.

-ಪ್ರಜ್ಞಾ ಶೆಟ್ಟಿ

ಟಾಪ್ ನ್ಯೂಸ್

Bisanala-Dairy

Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

Bantwala-Crime

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

1-rcb

RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್‌

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್‌ ಎಂಟ್ರಿ ನೇಮಕಾತಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ

Kochi: ಲೈಂಗಿಕ ಕಿರುಕುಳ ಕೇಸು ವಾಪಸ್‌ ಪಡೆಯಲ್ಲ ಎಂದ ಮಲಯಾಳಿ ನಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ullala-Auto-Accident

Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

Dawwod-Arrest

Mangaluru: ಕುಖ್ಯಾತ ರೌಡಿಶೀಟರ್‌ ದಾವೂದ್‌ ಬಂಧಿಸಿದ ಸಿಸಿಬಿ ಪೊಲೀಸರು

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Bisanala-Dairy

Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ

Bantwala-Crime

Bantwala: ತುಂಬೆ ದೇವಸ್ಥಾನ ಕಳ್ಳತನ ಪ್ರಕರಣ: ಮೂವರು ಖದೀಮರ ಸೆರೆ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

Mayawati: ಇನ್ನು ಮುಂದೆ ಉಪಚುನಾವಣೆಯಲ್ಲಿ ಸ್ಪರ್ಧೆ ಇಲ್ಲ

1-rcb

RCB ತಂಡಕ್ಕೆ ಸೇರಿದ ಫಿಲ್ ಸಾಲ್ಟ್, ಜಿತೇಶ್ ಶರ್ಮ, ಹ್ಯಾಜಲ್‌ವುಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.