ಹೆಂಚಿನ ಮನೆಯಿಂದ ಬೋರ್‌ವೆಲ್‌ಗೆ ಮಳೆಕೊಯ್ಲು
"ಮನೆ ಮನೆಗೆ ಮಳೆಕೊಯ್ಲು' ಉದಯವಾಣಿ ಅಭಿಯಾನದ ಯಶಸ್ಸು
Team Udayavani, Aug 31, 2019, 5:05 AM IST
ಪ್ರತಿ ಬಾರಿ ಬೇಸಗೆಯಲ್ಲೂ ಎದುರಾಗುತ್ತಿದ್ದ ನೀರಿನ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಬಂಟ್ವಾಳ ಕೊಯ್ಲ ನಿವಾಸಿ ದಾಮೋದರ ಆಚಾರ್ಯ ಅವರು ತಮ್ಮ ಮನೆಯ ಬೋರ್‌ವೆಲ್‌ಗೆ ಮಳೆಕೊಯ್ಲು ಅಳವಡಿಸಿದ್ದಾರೆ.
ಹೆಂಚಿನ ಮನೆಯ ಬದಿಗಳಿಗೆ ಅಳವಡಿಸಲಾದ ದಂಬೆಗೆ ಬೀಳುವ ಮಳೆ ನೀರನ್ನು ಪೈಪ್ ಮೂಲಕ ಬೋರ್‌ವೆಲ್‌ಗೆಬಿಡಲಾಗಿದೆ. ಅದಕ್ಕೂ ಮೊದಲು ಜಲ್ಲಿ, ಕಲ್ಲಿದ್ದಲು ಮೂಲಕ ಮಾಡಲಾದ ಫಿಲ್ಟರ್ ಮೂಲಕ ನೀರು ಶುದ್ಧೀಕರಿಸಲಾಗುತ್ತಿದೆ. ಮನೆಯಲ್ಲಿ ಪೈಪ್ ಸಂಗ್ರಹ ಇದ್ದುದರಿಂದಾಗಿ ತುಂಬಾ ಖರ್ಚು ಬಿದ್ದಿಲ್ಲ. ಸುಮಾರು 1,000 ರೂ. ನಲ್ಲಿ ನಾನು ಮಳೆ ನೀರು ಉಳಿತಾಯದ ಕೆಲಸ ಮಾಡಿದ್ದೇನೆ ಎಂದು ಹೇಳುತ್ತಾರೆ ದಾಮೋದರ ಆಚಾರ್ಯ.
ಅಂಗಡಿ ಪರಿಸರದಲ್ಲಿ
ನೀರಿಂಗಿಸುವ ಕಾಯಕ
ಕುಳಾಯಿ ಲಲಿತ್ ಎಂಟರ್‌ಪ್ರೈಸಸ್‌ನ ಛಾವಣಿಯಿಂದ ರಸ್ತೆಗೆ ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಹಿಡಿದಿಟ್ಟು ಭೂಮಿಗೆ ಇಂಗಿಸಲಾಗಿದೆ. ಇದಕ್ಕಾಗಿ ಗುಂಡಿಯೊಂದನ್ನು ಮಾಡಲಾಗಿದ್ದು, ಇದರಲ್ಲಿ ನೀರನ್ನು ಇಂಗಿಸುವ ವ್ಯವಸ್ಥೆ ಮಾಡಲಾಗಿದೆ.
ಮಳೆಗಾಲ ಆರಂಭದಲ್ಲಿಯೇ ಈ ವ್ಯವಸ್ಥೆಯನ್ನು ಮಾಡಲಾಗಿದ್ದು, ಅಕ್ಕಪಕ್ಕದ ಬಾವಿಗಳಿಗೂ ಇದರಿಂದ ಹೆಚ್ಚು ನೀರು ಸಿಗುವಂತಾಗುತ್ತದೆ. ಮಳೆಯ ಸಂದರ್ಭ ಸುಮಾರು 2.5 ಲೀ.ನಷ್ಟು ನೀರು ಇಂಗುತ್ತದೆ ಎಂದು ಮಾಲಕ ಸುರೇಶ್ ಹೇಳುತ್ತಾರೆ.
ನೀರಿಂಗಿಸಿರುವುದನ್ನು ಅಂಗಡಿಗೆ ಬರುವ ಗ್ರಾಹಕರು ನೋಡಿ ಅದರ ಬಗ್ಗೆ ವಿಚಾರಿಸುತ್ತಾರೆ. ಅವರಿಗೂ ನೀರಿಂಗಿಸುವ ವಿಧಾನಗಳನ್ನು ಹೇಳಿಕೊಡಲು ಸಾಧ್ಯವಾಗುತ್ತಿದೆ. “ಉದಯವಾಣಿ’ಯ ಮಳೆಕೊಯ್ಲು ಅಭಿಯಾನವೂ ಜನರಿಗೆ ಒಂದೊಳ್ಳೆ ಪ್ರೇರಣೆ ನೀಡಿದೆ ಎನ್ನುತ್ತಾರೆ ಸುರೇಶ್.
ನೀವೂ ಅಳವಡಿಸಿ,
ವಾಟ್ಸಪ್ ಮಾಡಿ
ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಈಗ ಕಾರ್ಯೋನ್ಮುಖರಾಗಿ ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆ, ಸಂಘ- ಸಂಸ್ಥೆ, ಧಾರ್ಮಿಕ ಕೇಂದ್ರಗಳ ಲ್ಲಿ ಅಳವಡಿಸುತ್ತಿದ್ದಾರೆ. “ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಿತರಾಗಿ ನೀವೂ ನಿಮ್ಮ ಮನೆ, ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಂಡಿದ್ದರೆ ಫೋಟೋ ಸಮೇತ ನಮಗೆ ವಿವರವನ್ನು ವಾಟ್ಸಪ್ ಮಾಡಿ. ಅವುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ.
9900567000
ಸಂಘಟನಾತ್ಮಕ ಕೆಲಸ
ಮಳೆ ನೀರು ಸಂಗ್ರಹಿಸುವುದು ಬಹಳ ಕಷ್ಟಕರವಾದ ಕೆಲಸವೇನೂ ಅಲ್ಲ. ಜನಸಾಮಾನ್ಯರು ಎಲ್ಲ ಮನೆಗಳಲ್ಲಿ ಹಾಗೂ ವಾಣಿಜ್ಯ ಕಟ್ಟಡಗಳಲ್ಲಿಯೂ ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು. ಆದರೆ ಇದನ್ನು ಒಬ್ಬರು, ಇಬ್ಬರು ಮಾಡುವುದಲ್ಲ; ಬದಲಿಗೆ ಸಂಘಟನಾತ್ಮಕವಾಗಿ ಮಾಡಬೇಕು. ಏಕೆಂದರೆ ಅದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಉದಯವಾಣಿ ಮಾಡುತ್ತಿರುವ ಕೆಲಸ ಅಭಿನಂದನೀಯ.
- ಕೃತಿ ಪಾಲಡ್ಕ, ಶಿಕ್ಷಕಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Belthangady: ಜೈನ ಧರ್ಮಕ್ಕೆ ಅವಹೇಳನ; ದೂರು ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.