ಗೋಶಾಲೆಯೂ ಇಲ್ಲ, ಗೋವುಗಳೂ ಇಲ್ಲ!
Team Udayavani, Aug 31, 2019, 9:42 AM IST
ಕುಂದಗೋಳ: ಗೋಶಾಲೆ ಇಲ್ಲದೆ ಬಿಕೋ ಎನ್ನುತ್ತಿರುವ ಸಂಶಿಯ ಎಪಿಎಂಸಿ ಆವರಣ.
ಕುಂದಗೋಳ: ತಾಲೂಕಿನ ಸಂಶಿ ಗ್ರಾಮದ ಎಪಿಎಂಸಿ ಆವರಣದಲ್ಲಿ ತಾಲೂಕಾಡಳಿತದಿಂದ ಎಂಟು ದಿನದ ಹಿಂದೆ ಗೋಶಾಲೆ ತೆರೆದಿದ್ದು, ಆ ಸ್ಥಳಕ್ಕೆ ಭೇಟಿ ನೀಡಿದರೆ ಅಲ್ಲಿ ಗೋಶಾಲೆಯೂ ಇಲ್ಲ, ಗೋವುಗಳು ಸಹ ಕಾಣುತ್ತಿಲ್ಲ!
ಜಿಲ್ಲಾಡಳಿತದಿಂದ ಅವಶ್ಯಕ ಪ್ರದೇಶಗಳಲ್ಲಿ ಗೋಶಾಲೆಗಳನ್ನು ಆರಂಭಿಸಿರುವುದು ಸ್ತುತ್ಯಾರ್ಹ. ಆದರೆ ತಾಲೂಕಿನ ಸಂಶಿ ಗ್ರಾಮದಲ್ಲಿ ಒಂದೂ ಜಾನುವಾರಿಗೆ ನೆಲೆ ಕಲ್ಪಿಸಲಾಗಿಲ್ಲ. ಸರ್ಕಾರದ ಆದೇಶದಂತೆ ಕೇವಲ ಕಾಗದ ಪತ್ರದಲ್ಲಿ ಗೋಶಾಲೆ ಕಾಣುತ್ತಿದ್ದು, ಸ್ಥಳಕ್ಕೆ ಭೇಟಿ ನೀಡಿದರೆ ಯಾವ ಲಕ್ಷಣವೂ ಅಲ್ಲಿಲ್ಲ. ದಾಸ್ತಾನು ಮಾಡಲಾಗಿದೆ ಎಂದ ಮೇವನ್ನು ಸಹ ಗೋದಾಮಿನಲ್ಲಿ ಇರಿಸಿ, ಬೀಗ ಜಡಿಯಲಾಗಿದೆ.
ತೆರೆದಿದ್ದೇ ಗೊತ್ತಿಲ್ಲ: ಸಂಶಿ ಗ್ರಾಮದ ರೈತಬೆಳೆ ರಕ್ಷಕ ಸಂಘದ ಅಧ್ಯಕ್ಷರಾದ ಡಿ.ಬಿ. ಪಾಟೀಲ ಅವರು ಮಾತನಾಡಿ, ಈ ಗೋಶಾಲೆ ಆರಂಭವಾಗಿರುವುದೇ ನಮಗೆ ಗೊತ್ತಿಲ್ಲ. ಗೋಶಾಲೆಯ ಲಕ್ಷಣಗಳು ಸಹ ಕಾಣುತ್ತಿಲ್ಲ. ಸತತ ಮಳೆಯಿಂದ ಅನೇಕ ಮನೆಗಳು ಬಿದ್ದಿದ್ದು, ರೈತರು ತಮ್ಮ ಜಾನುವಾರುಗಳನ್ನು ಅಲ್ಲಿ ಇಲ್ಲಿ ನಿಲ್ಲಿಸಿ ಸಂರಕ್ಷಿಸಿಕೊಳ್ಳುತ್ತಿದ್ದಾರೆ. ಮಳೆಯಿಂದ ಸಂಗ್ರಹಿಸಿದ ಮೇವು ಸಹ ಹಾಳಾಗಿದೆ. ಈ ಗೋಶಾಲೆ ಆರಂಭಿಸಿದ್ದು ರೈತರಿಗೆ ತಿಳಿಸಿದ್ದರೆ ಬಹಳಷ್ಟು ಅನುಕೂಲವಾಗುತ್ತಿತ್ತು ಎಂದರು.
ರೈತರು ಬಂದರೆ ಸೌಲಭ್ಯ: ಪ್ರತಿದಿನ ಒಂದು ದನಕ್ಕೆ 6 ಕೆಜಿ ಮೇವಿನಂತೆ ವಿತರಿಸಲಾಗುತ್ತದೆ. ಈಗಾಗಲೇ ಒಂದು ಗಾಡಿ ಸೊಪ್ಪಿಯನ್ನು ದಾಸ್ತಾನು ಮಾಡಲಾಗಿದೆ. ರೈತರು ತಮ್ಮ ಜಾನುವಾರುಗಳನ್ನು ಗೋಶಾಲೆಯಲ್ಲಿ ಬಿಡುವುದಾಗಿ ಹೇಳಿದಾಗ ಟೆಂಟ್ ನಿರ್ಮಿಸಿ ಕೊಡಲಾಗುವುದು. ಸರ್ಕಾರದ ಆದೇಶದಂತೆ ತಾತ್ಕಾಲಿಕವಾಗಿ ಗೋಶಾಲೆ ಆರಂಭಿಸಿದ್ದೇವೆ. ರೈತರು ಮುಂದೆ ಬಂದರೆ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು ಎಂಬುದು ತಹಶೀಲ್ದಾರ್ ಬಸವರಾಜ ಮೆಳವಂಕಿ ಸಮಜಾಯಿಷಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
ತಮ್ಮದೇ ಮಕ್ಕಳ “ಅಪಹರಣ’ನಾಟಕವಾಡಿದ ಗೃಹಿಣಿಯರು
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
MUST WATCH
ಹೊಸ ಸೇರ್ಪಡೆ
Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು
BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್
Uttar Pradesh ಈಗ ರಾಜಕಾರಣಿಗಳಿಂದ “ಬಿಳಿಟವಲ್’ ರಾಜಕೀಯ!
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.