ಇಂಗ್ಲೆಂಡಿನಲ್ಲಿ ಗಣೇಶ
Team Udayavani, Sep 1, 2019, 5:15 AM IST
ವಿಘ್ನನಾಶಕ ಗಣಪತಿಯ ಆರಾಧನೆ ವೈದಿಕ ಹವನಗಳ ಆರಂಭ ಪೂಜೆಯಿಂದ ಮೊದಲಾಗಿ, ಮನೆ ಮನೆಯ ಹಬ್ಬವಾಗಿ, ಬಾಲಗಂಗಾಧರ ತಿಲಕರ ಕಾಲದಲ್ಲಿ ಸಾರ್ವಜನಿಕ ಸಂಘಟನೆಯ ಸರಪಳಿಯಾಗಿ, ಸ್ವಾತಂತ್ರ್ಯದೀಚೆಗೆ ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಿ ಬೆಳೆದು, ಇತ್ತೀಚಿನ ಟಿವಿ-ಮೊಬೈಲುಗಳ ಯುಗದಲ್ಲಿ ಕುಗ್ಗಿದಂತೆ ಕಂಡರೂ, ವಿವಿಧ ರೂಪಗಳಲ್ಲಿ ಭಾರತದಲ್ಲಿ ಬೆಳೆಯುತ್ತಲೇ ಇದೆ.
ಭಾರತದ ಮಾತು ಹೀಗೆ ಇರಲಿ, ಭಾರತದಾಚೆಯ ನೆಲವನ್ನು ತಮ್ಮ ಮನೆ ಮಾಡಿಕೊಂಡ ಭಾರತೀಯರು ತಮ್ಮೊಟ್ಟಿಗೆ ತಂದ ಪ್ರಮುಖ ಹಬ್ಬಗಳಲ್ಲಿ ಗಣಪನ ಹಬ್ಬವೂ ಒಂದು. ಯುಗಾದಿ, ನವರಾತ್ರಿ, ದೀಪಾವಳಿಗಳಷ್ಟು ಸರ್ವಮಾನ್ಯವಲ್ಲದಿದ್ದರೂ, ಮರಾಠರ, ತೆಲುಗರ, ತಮಿಳರ ಮತ್ತೆ ಅಲ್ಲಲ್ಲಿ ಕನ್ನಡಿಗರ ಸಾಂಘಿಕ ಚಟುವಟಿಕೆಗಳ ub ಆಗಿ ಗಣೇಶ ಹಬ್ಬ ಹಲವು ದೇಶಗಳಂತೆ ಯುನೈಟೆಡ್ ಕಿಂಗ್‌ಡಮ್ (ಯುಕೆ) ಯಲ್ಲೂ ಆಚರಿಸಲ್ಪಡುತ್ತದೆ.
ಬಣ್ಣ-ಬಣ್ಣದ ಮಣ್ಣಿನ ಗಣಪತಿಯ ವಿಗ್ರಹಗಳು ಇತ್ತೀಚಿನ ವರ್ಷಗಳಲ್ಲಿ ಸುಲಭವಾಗಿ ಭಾರತೀಯರು ಹೆಚ್ಚಿರುವ ಜಾಗಗಳ ಅಂಗಡಿಗಳಲ್ಲಿ ದೊರೆಯುತ್ತವೆ. ಈಗೀಗ ಬರುತ್ತಿರುವ ಇಕೋಫ್ರೆಂಡ್ಲಿ ಮೂರ್ತಿಗಳು ಪೂಜೆಯ ನಂತರ ಕೆರೆ, ನದಿ, ಸಮುದ್ರಗಳಲ್ಲಿ ವಿನಾಯಕನನ್ನು ವಿಸರ್ಜಿಸುವವರಿಗೆ ಅನುಕೂಲ ಮಾಡಿವೆ. ಇಂಗ್ಲೆಂಡಿನಲ್ಲಿ ವಿಸರ್ಜನೆಗೆ ಪರ್ಮಿಷನ್ ಬೇಕಿರುವುದರಿಂದ, ಹೆಚ್ಚಿನ ಮನೆಗಳಲ್ಲಿ ಹಬ್ಬದ ನಂತರ ಗಣೇಶ ಮುಂದಿನ ಹಬ್ಬದವರೆಗೆ ಷೋಕೇಸಿನ ಅಲಂಕಾರಿ!
ಹೀಗೆ ಮನೆ-ಮನೆಯಲ್ಲಿ ಪೂಜೆ ಮಾಡುವವರ ಸಂಖ್ಯೆ ಮರಾಠಿಗರಲ್ಲಿ ಹೆಚ್ಚು. ನೆರೆಯ ಜನರನ್ನು, ಮಿತ್ರರನ್ನು ಪೂಜೆಗೆ ಕರೆದು, ಮೋದಕ ಮತ್ತಿತರ ಪ್ರಸಾದಗಳನ್ನು ಹಂಚಿ ಸಂಭ್ರಮಿಸುವುದು ಇವರಲ್ಲಿ ಸಾಮಾನ್ಯ. ಹಾಗೆಯೇ, ಬಹು ದೊಡ್ಡ ರೀತಿಯಲ್ಲಿ ಮಂಡಳಿಗಳಲ್ಲಿ ಗಣಪತಿಯನ್ನು ಎಂಟು-ಹತ್ತು ದಿನ ಕೂರಿಸಿ, ಜನರನ್ನು ಕೂಡಿಸಿ, ಹಾಡಿಸಿ, ಕುಣಿಸಿ ಮೆರೆಯುವುದು ಮರಾಠಿಗರ ಸಂಸ್ಥೆಗಳೇ. ಲಂಡನ್‌ನಲ್ಲಿ 1932ರಿಂದ ಸಕ್ರಿಯವಾಗಿರುವ ಮಹಾರಾಷ್ಟ್ರ ಮಂಡಳಿಯ ಗಣಪತಿಯ ಉತ್ಸವ ಹತ್ತು ದಿನಗಳ ಕಾಲ ಭರ್ಜರಿಯಾಗಿ ನಡೆಯುತ್ತದೆ. ಬ್ರಿಸ್ಟಲ್, ಬರ್ಮಿಂಗಾಮ…, ಲೆಸ್ಟರ್-ಹೀಗೆ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿರುವ ಊರುಗಳಲ್ಲಿ ಹಲವಾರು ಹಿಂದೂ ಸಂಸ್ಥೆಗಳು ಯಥಾಶಕ್ತಿ ಸಾಂ ಕವಾಗಿ ಗಣಪತಿಯನ್ನು ಪೂಜಿಸುತ್ತಾರೆ.
ಮಕ್ಕಳಲ್ಲಿ ಸಂಸ್ಕೃತಿ ಪ್ರಜ್ಞೆ ಮೂಡಿ ಸಲು !
ಕನ್ನಡಿಗರ ಸಂಸ್ಥೆಗಳು ಸಹ ಕಳೆದ 3-4 ವರ್ಷಗಳಿಂದ ಗಣೇಶನನ್ನು ಕೂರಿಸುತ್ತಿದ್ದಾರೆ. ಲಂಡನ್ನಿನ ದಕ್ಷಿಣದ orpington ಗಣೇಶೋತ್ಸವಕ್ಕೆ ಈಗ ಮೂರು ವರ್ಷದ ಸಂಭ್ರಮ. ಹಳೆಯ ಚರ್ಚ್ ಒಂದನ್ನು ಹಬ್ಬದ ಮೂರುದಿನ ಬಾಡಿಗೆಗೆ ಪಡೆದು, ಗಣೇಶನನ್ನು ಸ್ಥಾಪಿಸಿ, ಪೂಜಿಸಿ, ಕನ್ನಡದ ಭಜನೆ, ಹಾಡು, ನೃತ್ಯಗಳಲ್ಲಿ ತಮ್ಮ ಬಾಲ್ಯದ ಮನೆಯ ಬೀದಿಗಳ, ಊರಿನ ಪೆಂಡಾಲುಗಳ ಗಣಪತಿಯ ಉತ್ಸವವನ್ನು ನೆನೆಯುತ್ತ ಕುಣಿಯುವುದು ಮೇಲ್ಮೆ„ಯ ಉದ್ದೇಶವಾದರೂ, ತಮ್ಮ ಮಕ್ಕಳ ಮನದಲ್ಲಿ ಭಾರತದ ಸಂಸ್ಕೃತಿ, ಭಾಷೆಗಳು ಮೂಡಿ ಅರಳಲಿ ಎನ್ನುವದು ಹೆಚ್ಚಿನವರ ಮನದೊಳಗಿನ ಆಶಯ.
ಇವೆಲ್ಲ ಅಲ್ಲದೆ, ನಿತ್ಯ ಗಣಪತಿಯನ್ನು ಪೂಜಿಸುವ ಇಂಗ್ಲೆಂಡಿನ ಹಲವೆಡೆಯಲ್ಲಿರುವ ದೇವಸ್ಥಾನಗಳಲ್ಲಿ ಹಬ್ಬದ ವಿಶೇಷ ಪೂಜೆ, ಉತ್ಸವಗಳು ಇರುತ್ತವೆ. ತಮಿಳು ಭಾಷಿಕರು ಹೆಚ್ಚಿರುವ ಕಡೆ ದೇವಸ್ಥಾನಗಳೂ ಹೆಚ್ಚು. ಆ ಆಲಯಗಳಲ್ಲಿ ನಡೆಯುವ ಪೂಜಾ ವಿಧಿಗಳೂ ತಮಿಳುನಾಡಿನ ದೇವಸ್ಥಾನಗಳಂತೆ ನೋಡಲು, ಕೇಳಲು ಚೆನ್ನ. ಕನ್ನಡಿಗರ ಮಟ್ಟಿಗೆ ಹೇಳುವುದಾದರೆ, ಲಂಡನ್‌ನಲ್ಲಿರುವ ಪುತ್ತಿಗೆ ಮಠದ ಶಾಖೆ ಕಳೆದ ನಾಲ್ಕು ವರ್ಷಗಳಿಂದ ಸಕ್ರಿಯವಾಗಿ ಆಚರಿಸುವ ವಿವಿಧ ಹಬ್ಬಗಳಲ್ಲಿ ಗಣೇಶನ ಹಬ್ಬವೂ ಒಂದು. ಈ ವರ್ಷ, ಹೊಸತಾಗಿ, ಲೈವ್ online video ಮೂಲಕ ಪುರೋಹಿತರನ್ನು ಮನೆ-ಮನೆಗೆ ಕಳಿಸುವ ಸಂಕಲ್ಪ ಅವರದ್ದು. ಈಗಾಗಲೇ, ಉಪಾಕರ್ಮ, ಕೃಷ್ಣಾಷ್ಟಮಿ ಪೂಜೆಗಳನ್ನು ಯಶಸ್ವಿಯಾಗಿ onlineನಲ್ಲಿ ಮಾಡಿಸಿರುವ ಉತ್ಸಾ ಹದಲ್ಲಿ ಗಣೇಶ ಹಬ್ಬಕ್ಕೆ ಅವರು ತಯಾರಾಗಿದ್ದಾರೆ. ಅಮೆರಿಕದ ಪುತ್ತಿಗೆ ಮಠದ ಆಚಾರ್ಯ ಯೋಗಿಂದ್ರ ಭಟ್ಟರು ಅಲ್ಲಿಯೇ ಕುಳಿತು ಇಂಗ್ಲೆಂಡಿನ ಆಸಕ್ತ ಕನ್ನಡಿಗರ ಮನೆಯ ಗಣಪನ ಪೂಜೆಗೆ ಆಚಾರ್ಯರಾಗಲಿದ್ದಾರೆ.
ಗಣಪನ ನಾಮರೂಪಗಳು ನೂರಾರು. ಅದರಂತೆ, ದೇಶಾಂತರ ಬಂದರೂ, ಹಲವು ರೀತಿಯಲ್ಲಿ, ನಮ್ಮತನವನ್ನು ಉಳಿಸಿ, ಬೆಳೆಸಿ, ನಮ್ಮವರೊಂದಿಗೆ ಬೆರೆತು ಮೆರೆಯಬೇಕೆನ್ನುವ ಹಂಬಲದ ಜನರೆಲ್ಲ ಗಣೇಶ ಹಬ್ಬದ ರೂಪದಲ್ಲಿ ಭಾರತೀಯತೆಯನ್ನು ಯುಕೆಯಲ್ಲಿ ಅರಳಿಸುತ್ತಿದ್ದಾರೆ.
-ಮುರಳಿ ಹತ್ವಾರ್, ಲಂಡನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Kadaba: ಕರ್ತವ್ಯದ ಬಿಡುವಿನಲ್ಲಿ ಮೊಬೈಲ್‌ನಲ್ಲೇ ಓದಿ ಎಸ್‌ಐ ಆದ ಪೊಲೀಸ್ ಚಾಲಕ!
Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು
Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್ ವೈದ್ಯ
Moodbidri: ಜಿಲ್ಲಾ ಕಂಬಳ ಸಮಿತಿ ತುರ್ತು ಸಭೆ: ನಿಯಮ ಉಲ್ಲಂಘಿಸಿದರೆ ನಿಷೇಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.