ಹಬ್ಬಕ್ಕೆ ಊರಿಗೆ ಹೊರಟ್ಟಿದ್ದೀರಾ ? ಟ್ರಾಫಿಕ್ ನ ಈ ಹೊಸ ನಿಯಮದ ಬಗ್ಗೆ ತಿಳಿದುಕೊಳ್ಳಿ
ಹೊಸ ನಿಯಮದ ಪ್ರಕಾರ ಯಾವ ತಪ್ಪಿಗೆ ಎಷ್ಟು ದಂಡ ? ಇಲ್ಲಿದೆ ಸಂಪೂರ್ಣ ಮಾಹಿತಿ
Team Udayavani, Sep 1, 2019, 12:30 PM IST
ಮಣಿಪಾಲ: ಗಣೇಶ ಚತುರ್ಥಿಯ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಅದ್ದೂರಿ ಉತ್ಸವಕ್ಕೆ ಭರದಿಂದ ತಯಾರಿ ನಡೆಯುತ್ತಿದೆ. ವಿದ್ಯಾಭ್ಯಾಸ , ಉದ್ಯೋಗ, ಇನ್ನೀತರ ಕಾರಣಗಳಿಗಾಗಿ ಪರವೂರಿಗೆ ತೆರಳಿದವರು ತಮ್ಮ ಊರಿಗೆ ಮರಳಿ ಹಬ್ಬವನ್ನು ಆಚರಿಸುವ ಸಂತಸದ ಕ್ಷಣವಿದು. ಈ ಅಪೂರ್ವ ಕ್ಷಣವನ್ನು ಆಚರಿಸುವ ಮುನ್ನ ಕೇಂದ್ರ ಸರಕಾರ ಇಂದಿನಿಂದ ಜಾರಿಗೆ ತಂದಿರುವ ಮೋಟಾರು ವಾಹನ ತಿದ್ದುಪಡಿ ಕಾಯ್ದೆಯ ಕುರಿತು ಒಂದಿಷ್ಟು ತಿಳಿದುಕೊಳ್ಳಿ.
ರಸ್ತೆ ಅಪಘಾತಗಳನ್ನು ಕಡಿಮೆ ಮಾಡುವ ಉದ್ಧೇಶದಿಂದ ಹಾಗೂ ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ರಾಷ್ಟ್ರಾದ್ಯಂತ ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಜಾರಿಗೆ ತರಲಾಗಿದೆ.
ಅನಧಿಕೃತ ಚಾಲನೆ, ಅಪಾಯಕಾರಿ ಚಾಲನೆ, ನಿಗದಿತ ಮಿತಿಗಿಂತ ಹೆಚ್ಚಿನ ವೇಗದಲ್ಲಿ ವಾಹನ ಚಲಾಯಿಸುವುದು, ನಿಗದಿತ ಮಿತಿಗಿಂತ ಹೆಚ್ಚು ಜನರ ಪ್ರಯಾಣ , ಅಪ್ರಾಪ್ತ ವಯಸ್ಕರು ವಾಹನ ಚಲಾವಣೆ ಮಾಡುವುದು, ಮುಂತಾದ ನಿಯಮ ಉಲ್ಲಂಘಿಸಿದರೆ ಭಾರೀ ದಂಡ ತೆರಬೇಕಾಗುತ್ತದೆ. ನಿಯಮ ಉಲ್ಲಂಘನೆಗೆ ಕನಿಷ್ಠ ದಂಡ ಒಂದು ಸಾವಿರ ರೂ. ಆಗಿದ್ದು, ಗರಿಷ್ಠ ಒಂದು ಲಕ್ಷದವರೆಗೂ ದಂಡ ವಿಧಿಸುವ ಅವಕಾಶವಿದೆ. ಅಪ್ರಾಪ್ತರು ವಾಹನ ಚಾಲನೆ ಮಾಡಿ ಸಿಕ್ಕಿಬಿದ್ದರೆ ಅವರ ಪಾಲಕರಿಗೆ ದಂಡ ವಿಧಿಸಲಾಗುತ್ತದೆ.
ನೂತನ ವಿಧೇಯಕದಲ್ಲಿ ವಿಧಿಸಲಾಗಿರುವ ದಂಡದ ಪ್ರಮಾಣ
- ಸಂಚಾರ ನಿಯಮ ಉಲ್ಲಂಘನೆಗೆ 500 ರೂ. ದಂಡ
- ಆ್ಯಂಬುಲೆನ್ಸ್ ಗಳಿಗೆ ದಾರಿ ಬಿಡದಿದ್ದರೆ 10,000 ರೂ ದಂಡ, 6 ತಿಂಗಳು ಜೈಲು
- ಅತೀ ವೇಗದ ಚಾಲನೆಗೆ 1000 ದಿಂದ 2000 ರೂ ದಂಡ, 3 ತಿಂಗಳು ಜೈಲು
- ಕುಡಿದು ವಾಹನ ಚಾಲನೆ ಮಾಡಿದರೆ 10,000 ರೂ ದಂಡ. 6 ತಿಂಗಳು ಜೈಲು
- ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿದರೆ 1000 ರೂ. ದಂಡ
- ವಿಮೆ ರಹಿತ ವಾಹನ ಚಲಾವಣೆಗೆ 2000 ರೂ, ದಂಡ
- ಅಪ್ರಾಪ್ತರು ವಾಹನ ಚಲಾವಣೆ ಮಾಡಿದರೆ ಪೋಷಕರಿಗೆ 25,000 ರೂ ದಂಡ ಹಾಗೂ ಕಾನೂನು ಕ್ರಮ
- ಲೈಸೆನ್ಸ್ ಇಲ್ಲದೆ ವಾಹನ ಚಲಾಯಿಸಿದರೆ 5000 ರೂ. ದಂಡ
- ವಾಹನಗಳ ಅಪಘಾತವಾದರೆ ಚಾಲಕರಿಗೆ 10 ಲಕ್ಷದವರೆಗೂ ದಂಡ
- ಸಿಗ್ನಲ್ ಜಂಪ್, ಚಾಲನೆ ವೇಳೆ ಮೊಬೈಲ್ ಬಳಕೆಯ ಅಪರಾಧಕ್ಕೆ 5000 ರೂ ದಂಡ, 6 ತಿಂಗಳು ಜೈಲು ಶಿಕ್ಷೆ
- ನೋ ಪಾರ್ಕಿಂಗ್ ಗೆ 1000ರೂ. ದಂಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗೋಡ್ಸೆ ವಿಚಾರಧಾರೆಗಳ ಹೊಂದಿರುವ ಬಿಜೆಪಿಗರು ಗಾಂಧಿ ವಿಚಾರಗಳ ಒಪ್ಪಲ್ಲ: ಸುರ್ಜೇವಾಲಾ
ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್
Gudibande: ಬುದ್ದಿವಾದ ಹೇಳಿದ್ದೆ ತಪ್ಪಾಯ್ತು… ವಿದ್ಯುತ್ ಹರಿಸಿ ವ್ಯಕ್ತಿಯ ಕೊಲೆ ಯತ್ನ
ಹೃದಯಾಘಾತದಿಂದ ಜಾಗೃತ ಮತದಾರರ ವೇದಿಕೆಯ ರಾಜ್ಯಾಧ್ಯಕ್ಷ ಮಹೇಂದ್ರ ಕುಮಾರ್ ಫಲ್ಗುಣಿ ನಿಧನ
Karnataka BJP; ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶೀಘ್ರ ಚುನಾವಣೆ: ಕೇಂದ್ರ ಸಚಿವ ಚೌಹಾಣ್
MUST WATCH
ಹೊಸ ಸೇರ್ಪಡೆ
ಗೋಡ್ಸೆ ವಿಚಾರಧಾರೆಗಳ ಹೊಂದಿರುವ ಬಿಜೆಪಿಗರು ಗಾಂಧಿ ವಿಚಾರಗಳ ಒಪ್ಪಲ್ಲ: ಸುರ್ಜೇವಾಲಾ
BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು
Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ
ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್
Puthige Matha: ವಿಶ್ವ ಗೀತಾ ಪರ್ಯಾಯಕ್ಕೆ ಇಂದಿಗೆ ವರ್ಷ ಪೂರ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.