ನಾಯಿ ಸಾಕಿದ್ರೆ ನಿಮ್ಮ ಹೃದಯಕ್ಕೆ ಒಳ್ಳೇದು!
ನಾಯಿ ಕರೆದುಕೊಂಡು ಹೋಗುವ ನೆವದಲ್ಲಾದ್ರೂ ವಾಕಿಂಗ್
Team Udayavani, Sep 1, 2019, 7:30 PM IST
ಲಂಡನ್: ಕೆಲವರು ಮನೆಯಲ್ಲಿ ನಾಯಿ ಸಾಕುತ್ತಾರೆ. ಹಳ್ಳಿಯಲ್ಲಾದರೆ ಯಾರಾದ್ರೂ ಬಂದರೆ ಗೊತ್ತಾಗಲಿ ಎಂದಾದರೆ, ನಗರಗಳಲ್ಲಿ ಶ್ವಾನ ಪ್ರೀತಿಯೇ ಮುಖ್ಯವಾಗಿರುತ್ತದೆ. ನಗರಗಳಲ್ಲಿ ನಾಯಿ ಸಾಕುವುದರಿಂದ ಆ ಮನೆಯವರಿಗೆ ಪ್ರಯೋಜನ ಹೆಚ್ಚು ಎಂದು ವಿಜ್ಞಾನಿಗಳ ತಂಡವೊಂದು ಹೇಳಿದೆ.
ಸಾಕಿದ ನಾಯಿಯನ್ನು ಹೊರಗಡೆಗೆ ಕರೆದುಕೊಂಡು ಹೋಗುವ ನೆವದಲ್ಲಾದರೂ ಅದರ ಯಜಮಾನ ಅಥವಾ ಮನೆಯವರು ಒಂದಷ್ಟು ವಾಕಿಂಗ್ ಮಾಡುತ್ತಾರೆ. ನಾಯಿ ಓಡಿದರೆ ಅವರೂ ಓಡುತ್ತಾರೆ. ಇದರಿಂದ ದೈಹಿಕ ಚಟುವಟಿಕೆ ಸಿಗುತ್ತದೆ. ಜತೆಗೆ ಒಂದಷ್ಟು ಮನಸ್ಸಿಗೆ ಆನಂದವೂ ಸಿಗುತ್ತದೆ. ಇದರಿಂದ ದೇಹಕ್ಕೆ, ಹೃದಯಕ್ಕೆ ಬಹಳಷ್ಟು ಲಾಭವಾಗುತ್ತದೆ ಎಂದು ಹೇಳಲಾಗಿದೆ. ಇನ್ನು ನಾಯಿ ಸಾಕಿದವರಿಗೆ ಬಿ.ಪಿ., ಶುಗರ್ ಸಮಸ್ಯೆ ಇದ್ದರಂತೂ ನಾಯಿಯೊಂದಿಗಿನ ಚಟುವಟಿಕೆಯಿಂದ ಹೆಚ್ಚು ಪ್ರಯೋಜನವಾಗುತ್ತದಂತೆ.
ಸೈಂಟ್ ಅನ್ನೆ ವಿವಿಯ ಸಂಶೋಧಕರ ತಂಡ 2 ಸಾವಿರ ಮಂದಿಯ ಮೇಲೆ ನಾಯಿ ಹೊಂದಿದವರು ಮತ್ತು ಹೊಂದದವರು ಎಂದು ಪ್ರತ್ಯೇಕಿಸಿ ಸಮೀಕ್ಷೆ ನಡೆಸಿ ಈ ಅಭಿಪ್ರಾಯಕ್ಕೆ ಬಂದಿದ್ದಾರೆ. ವೈಜ್ಞಾನಿಕ ಸಮೀಕ್ಷೆಯಲ್ಲಿ ಪಾಲ್ಗೊಂಡವರೆಲ್ಲ 24 ರಿಂದ 65 ವರ್ಷ ವಯಸ್ಸಿನವರು. ಇವರಿಗೆ ಹೃದಯದ ಸಮಸ್ಯೆಯಿದ್ದು, ನಾಯಿಯನ್ನು ವಾಕಿಂಗ್ ಮಾಡಿಸುವ, ಅದರೊಂದಿಗೆ ಆಡುವ ಇತ್ಯಾದಿ ಕ್ರಿಯೆಗಳಿಂದ ಹೃದಯ ಹೆಚ್ಚು ಗೆಲುವಾಗಲು ಕಾರಣವಾಗಿದೆ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Appoint: ಲಾಕ್‌ಡೌನ್ ಟೀಕಿಸಿದ್ದ ಜಯ ಭಟ್ಟಾಚಾರ್ಯ ಅಮೆರಿಕ ಆರೋಗ್ಯ ಸಂಸ್ಥೆ ಮುಖ್ಯಸ್ಥ
Pakistan: ಪೊಲೀಸರ ಕಾರ್ಯಾಚರಣೆಗೆ ಪಿಟಿಐ ಪ್ರತಿಭಟನೆ ರದ್ದು!
Bangladeshದಲ್ಲಿ ಇಸ್ಕಾನ್ ನಿಷೇಧಿಸಬೇಕು: ಹೈಕೋರ್ಟ್ ಗೆ ಬಾಂಗ್ಲಾದೇಶ ಸರ್ಕಾರ ಅರ್ಜಿ!
Israel ಮತ್ತು ಲೆಬನಾನ್ ನಡುವೆ ಕದನ ವಿರಾಮ ಒಪ್ಪಂದ: ಅಮೆರಿಕ ಮಧ್ಯಸ್ಥಿಕೆಗೆ ಹಸಿರು ನಿಶಾನೆ
Bangladesh: ಚಿನ್ಮಯ್ ಕೃಷ್ಣದಾಸ್ ಬಂಧನ ಖಂಡಿಸಿ ಪ್ರತಿಭಟನೆ: ವಕೀಲನ ಹ*ತ್ಯೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ
ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ವಿದ್ಯಾರ್ಥಿಗಳ ಬಸ್ ಪಲ್ಟಿ,ನಾಲ್ವರು ವಿದ್ಯಾರ್ಥಿಗಳಿಗೆ ಗಾಯ
Labor Card: ಅವಿಭಜಿತ ದ.ಕ. ಜಿಲ್ಲೆ: 1,286 ಕಾರ್ಮಿಕರ ಕಾರ್ಡ್ ಅಮಾನತು
Udupi: ಮರಳುಗಾರಿಕೆ ಆರಂಭವಾದರೂ ಅಕ್ರಮ ದಂಧೆ ಅವ್ಯಾಹತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.