ಎನಿ ಟೈಮ್ ಬಂದ್!
ಮುಚ್ಚಲ್ಪಡುತ್ತಿವೆ ಎ.ಟಿ.ಎಂಗಳು!
Team Udayavani, Sep 2, 2019, 5:35 AM IST
ಒಂದು ಎ.ಟಿ.ಎಂ.ಅನ್ನು ಸ್ಥಾಪಿಸಲು ಸುಮಾರು 7 ಲಕ್ಷ ರೂ. ತಗುಲುತ್ತದೆ. ಜೊತೆಗೆ ಅದರ ತಿಂಗಳ ನಿರ್ವಹಣಾ ವೆಚ್ಚ ಸುಮಾರು 80,000 ರೂ.ಗಳು. ಎ.ಟಿ.ಎಂ, ಶಾಖೆಯಲ್ಲಿಯೇ ಇದ್ದರೆ (on site) ಸ್ವಲ್ಪ ಕಡಿಮೆ. ಹೊರಗೆ (off site) ಇದ್ದರೆ ಬಾಡಿಗೆ ಬೇರೆಯಾಗಿದ್ದು, ವೆಚ್ಚ ತುಸು ಹೆಚ್ಚು. ಹಾಗೆಯೇ, ಅವುಗಳ ನಿರ್ವಹಣೆ ಸುರಕ್ಷತೆ ಮತ್ತು ಭದ್ರತೆ ಕೂಡಾ ಬ್ಯಾಂಕುಗಳಿಗೆ ತಲೆನೋವಾಗಿದೆ.
ತೀರಾ ಇತ್ತೀಚಿನವರೆಗೆ ದಿನಪತ್ರಿಕೆಗಳಲ್ಲಿ ಜನತೆಯ ಸೇವೆಯಲ್ಲಿ ನಮ್ಮ ಇನ್ನೊಂದು ಶಾಖೆ ಎನ್ನುವ ಬ್ಯಾಂಕುಗಳ, ಮುಖ್ಯವಾಗಿ ಸಾರ್ವಜನಿಕ ರಂಗದ ಬ್ಯಾಂಕುಗಳ ಹೊಸ ಶಾಖೆ ತೆರೆಯುವ ಜಾಹೀರಾತುಗಳು ನಿರಂತರವಾಗಿ ಕಾಣುತ್ತಿದ್ದವು. ಹೀಗೆ ತೆರೆಯುತ್ತಿರುವ ಶಾಖೆ ದೇಶದಲ್ಲಿ ತಮ್ಮ ಎಷ್ಟನೇ ಶಾಖೆ ಎಂಬುದನ್ನೂ ಜಾಹೀರಾತಿನಲ್ಲಿ ನಮೂದಿಸಲಾಗುತ್ತಿತ್ತು. ಇಂಥ ಜಾಹೀರಾತುಗಳು ಈ ದಿನಗಳಲ್ಲಿ ಅಪರೂಪದ ಅತಿಥಿಗಳಾಗಿವೆ. ಹೊಸ ಬ್ಯಾಂಕ್ ಶಾಖೆಗಳ ತೆರೆಯುವಿಕೆ ಮತ್ತು ಎಟಿಎಂ ಕಿಯೋಸ್ಕ್ಗಳ ಸ್ಥಾಪನೆ ಸ್ಲೋ ಗೇರ್‌ಗೆ ಶಿಫr… ಆಗಿದೆ. ಬ್ಯಾಂಕ್ ಶಾಖೆಗಳು ಮತ್ತು ಎ.ಟಿ.ಎಂ.ಗಳು ಬಾಗಿಲು ಹಾಕುತ್ತಿವೆ. ಹೊಸ ಶಾಖೆಗಳನ್ನು ಮತ್ತು ಎ.ಟಿ.ಎಂ.ಅನ್ನು ತೆರೆಯದಿದ್ದರೆ ಅದು ದೊಡ್ಡ ಸುದ್ದಿಯಲ್ಲ. ಆದರೆ, ಅವುಗಳನ್ನು ಮುಚ್ಚಿದರೆ ದೊಡ್ಡ ಸುದ್ದಿಯಾಗುತ್ತದೆ. ಹತ್ತರಲ್ಲಿ ಒಂಭತ್ತು… ಮತ್ತು ಹಲವು ನಕಾರಾತ್ಮಕ ಅಭಿಪ್ರಾಯಗಳಿಗೆ ಪುಷ್ಕಳ ಆಹಾರ ದೊರಕುತ್ತದೆ.
ಡಿಜಿಟಲೀಕರಣದ ಪ್ರಭಾವ
ಇಂದು ದೇಶದಲ್ಲಿ 1,41,756 ಬ್ಯಾಂಕ್ ಶಾಖೆಗಳಿವೆ ಮತ್ತು 2,38,000 ಎ.ಟಿ.ಎಂ.ಗಳು ಇವೆ. ಇವುಗಳಲ್ಲಿ 35% ಅಂದರೆ 50051 ಶಾಖೆಗಳ ಗ್ರಾಮಾಂತರ ಪ್ರದೇಶಗಳಲ್ಲಿ ಇವೆ. ಎ.ಟಿ.ಎಂ.ಗಳಲ್ಲಿ 1 ಲಕ್ಷ ಎ.ಟಿ.ಎಂ.ಗಳು ಶಾಖೆಗಳ ಹೊರಗೆ (Off site) ಇದ್ದರೆ 1,38,000 ಎ.ಟಿ.ಎಂ.ಗಳ ಶಾಖೆಗಳಲ್ಲಿಯೇ ಇವೆ. ಹಾಗೆಯೇ, 15000 ವೈಟ್ ಲೇಬಲ್ (ಯಾವುದೇ ಬ್ಯಾಂಕಿನ ಹಣೆಪಟ್ಟಿ ಇರದ ಖಾಸಗಿ) ಎ.ಟಿ.ಎಂ.ಗಳು ಇವೆ. ಇವು ಬಹುತೇಕ ನಗರ ಮತ್ತು ಪಟ್ಟಣ ಪ್ರದೇಶಗಳಿಗೆ ಸೀಮಿವಾಗಿವೆ. ಎ.ಟಿ.ಎಂ.ಗಳ ಬಳಕೆಯಲ್ಲಿ ಸಾಕಷ್ಟು ಹೆಚ್ಚಳವಾದರೂ, ಬ್ರಿಕ್ ರಾಷ್ಟ್ರಗಳಲ್ಲಿ ಒಂದಾದ ಭಾರತದಲ್ಲಿ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ಎ.ಟಿ.ಎಂ ಸಂಖ್ಯೆ ತುಂಬಾ ಕಡಿಮೆಯಾಗಿರುತ್ತದೆ.
ಬ್ಯಾಂಕುಗಳ ನಿರ್ವಹಣಾ ವೆಚ್ಚವನ್ನು ತಗ್ಗಿಸುವುದು ಈ ಮುಚ್ಚುವಿಕೆಯ ಹಿಂದಿನ ಮೂಲ ಉದ್ದೇಶವಾಗಿದ್ದು, ಬ್ಯಾಂಕಿಂಗ್ ವ್ಯವಹಾರದಲ್ಲಿ ಡಿಜಿಟಲೀಕರಣ 40%ವರೆಗೆ ತಲುಪಿದ್ದು, ಶಾಖೆಗಳಲ್ಲಿ ದಟ್ಟಣೆ ಕಡಿಮೆ ಅಗಿದ್ದು ಇನ್ನೊಂದು ಕಾರಣ ಎಂದು ಬ್ಯಾಂಕಿಂಗ್ ವಲಯ ಸಮಜಾಯಿಷಿ ಕೊಡುತ್ತಿದೆ. ಹಾಗೆಯೇ ಸಾಲ ನೀಡುವಿಕೆಯಲ್ಲಿ ಇಳಿಕೆ ಮತ್ತು ಏರುತ್ತಿರುವ ಅನುತ್ಪಾದಕ ಅಸ್ತಿ ( ಸಾಲ) ಕೂಡಾ ಬ್ಯಾಂಕುಗಳ ಶಾಖೆಗಳನ್ನು ಕಡಿಮೆ ಮಾಡುವುದರ ಹಿಂದಿನ ಕಾರಣ ಎನ್ನಬಹುದು.
ಬ್ಯಾಂಕು ಶಾಖೆಗಳ ಸಂಖ್ಯೆಯ ಕಡಿತದ ಹಿಂದಿನ ಕಾರಣವೇನು?
1969 ರ ಬ್ಯಾಂಕ್ ರಾಷ್ಟ್ರೀಕರಣದವರೆಗೆ, ಬ್ಯಾಂಕ್ ಶಾಖೆಗಳು, ಪಟ್ಟಣ ಮತ್ತು ನಗರ ಪ್ರದೇಶಗಳಿಗೆ ಸೀಮಿತವಾಗಿದ್ದವು. ರಾಷ್ಟ್ರೀಕರಣದ ಕೇವಲ ಲಾಭಗಳಿಸಲು ಅಲ್ಲ ಎನ್ನುವ ಹೊಸ ಚಿಂತನೆಯ ಅನ್ವಯ, ಬ್ಯಾಂಕುಗಳು ದೇಶದ ಉದ್ದಗಲಕ್ಕೂ ತಮ್ಮ ಶಾಖೆಗಳನ್ನು ತೆರೆದವು ಮತ್ತು ಮೈ ಚಳಿ ಬಿಟ್ಟು ಲಿಬರಲ್ ಆಗಿ ಸಾಲ ನೀಡಿದವು. ಯಾವುದಕ್ಕೆ ಸಾಲ ನೀಡಬಹುದು ಎನ್ನುವ ಪಟ್ಟಿ ಉದ್ದವಾಗಿ ಯಾವುದಕ್ಕೆ ಸಾಲ ನೀಡಬಾರದು ಎನ್ನುವ ಪಟ್ಟಿ ಸಣ್ಣದಾಯಿತು. ಹೆಚ್ಚು ಬಿಜಿನೆಸ್ ಗಳಿಸಿ ಬ್ಯಾಂಕಿನ ಲಾಭವನ್ನು ವೃದ್ದಿಸುವ ಧಾವಂತದಲ್ಲಿ ಧಾರಾಳವಾಗಿ ಶಾಖೆಗಳನ್ನು ತೆರೆದವು. ಒಂದು ಹಂತದಲ್ಲಿ ಆಗಿನ ಹಣಕಾಸು ಸಚಿವರು, ಒಂದು ಕಿ.ಮೀ. ಉದ್ದದ ರಸ್ತೆಯಲ್ಲಿ ಡಜನ್ ಶಾಖೆಗಳನ್ನು ತೆರೆದು ಪರಸ್ಪರ ಬಿಜಿನೆಸ್‌ಗೆ ಕಲ್ಲು ಹಾಕಬೇಡಿ ಎಂದು ಎಚ್ಚರಿಸಿದ್ದರು. ಸಾಲ ನೀಡಿದ ವೇಗದಲ್ಲಿ ಸಾಲ ಮರುಪಾವತಿಯಾಗದೇ ನಷ್ಟ ಆಗುತ್ತಿದೆ. ಅನುತ್ಪಾದಕ ಸಾಲ(ಸುಸ್ತಿ) ನಿಯಂತ್ರಣ ತಪ್ಪಿ ಬ್ಯಾಂಕಿಂಗ್ ಉದ್ಯಮವನ್ನೇ ನಡುಗಿಸತೊಡಗಿತು.
ಇತ್ತೀಚಿನ ವರದಿ ಪ್ರಕಾರ ಸುಸ್ತಿ ಸಾಲದ 9.75 ಲಕ್ಷ ಕೋಟಿ ಹತ್ತಿರವಿದ್ದು, ಇದು ಒಟ್ಟು ಸಾಲದ ಸುಮಾರು 10% ಎಂದು ಹೇಳಲಾಗುತ್ತದೆ. ಗಳಿಸಿದ ಲಾಭ ಅನುತ್ಪಾದಕ ಸಾಲಕ್ಕೆ ವರ್ಗಾಯಿಸಲ್ಪಡುತ್ತಿದ್ದು, ಬ್ಯಾಂಕ್‌ಗಳು ನಷ್ಟ ಹೊಂದುತ್ತಿವೆ. ಅಂತೆಯೇ ನಿರ್ವಹಣಾ ವೆಚ್ಚವನ್ನು ತಗ್ಗಿಸಿ, ಲಾಭವನ್ನು ಹೆಚ್ಚಿಸುವ ಅನಿವಾರ್ಯತೆ ಬ್ಯಾಂಕುಗಳ ಮೇಲೆ ಎರಗಿದ್ದು, ಅವು ಲಾಭ ಗಳಿಸದ ಮತ್ತು ಸದಾ ನಷ್ಟ ಹೊಂದುತ್ತಿರುವ ಶಾಖೆಗಳನ್ನು ಮುಚ್ಚುತ್ತಿವೆ. ಹಾಗೆಯೇ, ಆರು ಸ್ಟೇಟ್‌ಬ್ಯಾಂಕ್ ಸಹವರ್ತಿ ಬ್ಯಾಂಕುಗಳು ಮತ್ತು ಭಾರತ ಮಹಿಳಾ ಬ್ಯಾಂಕುಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಮತ್ತು ವಿಜಯಾ ಮತ್ತು ದೇನಾ ಬ್ಯಾಂಕ್‌ಗಳನ್ನು ಬ್ಯಾಂಕ್ ಆಫ್ ಬರೋಡಾದಲ್ಲಿ ವಿಲೀನಗೊಳಿಸಿದ ನಂತರ ಸಾವಿರಾರು ಬ್ಯಾಂಕ್ ಶಾಖೆಗಳು ovelapping ಅಗುತ್ತಿದ್ದು, ಹೆಚ್ಚುವರಿ (surplus ಕಾಣುತ್ತಿದ್ದು, branch rationalisation ಅನ್ವಯ ಹಲವು ಶಾಖೆಗಳನ್ನು ಅನಿವಾರ್ಯವಾಗಿ ಮುಚ್ಚಲೇಬೇಕಾಗುತ್ತದೆ. ಅದೇ ರೀತಿ ಹಿಂದಿನ ಫೈನಾನ್ಸ್ ಸೆಕ್ರೆಟರಿ ಪ್ರಕಾರ ಬ್ಯಾಂಕುಗಳು ಇರುವುದು ಲಾಭ ಗಳಿಸಲು, ಅದು ಸಾದ್ಯವಿಲ್ಲದಿದ್ದರೆ ಅದನ್ನು ಮುಚ್ಚಬೇಕು ಎನ್ನುವ ಚಿಂತನೆ ಕೂಡಾ ಈ ಮುಚ್ಚುವಿಕೆ ಹಿಂದೆ ಇರಬೇಕು ಎನ್ನಲಾಗುತ್ತಿದೆ.
ಎ.ಟಿ.ಎಂ ಎಂಬ ಬಿಳಿಯಾನೆ
ಬ್ಯಾಂಕುಗಳು ಗ್ರಾಹಕರಿಗೆ ಒದಗಿಸಿದ ಜನಸ್ನೇಹಿ ಸೇವೆಗಳಲ್ಲಿ ಎ.ಟಿ.ಎಂ. ಅವಿಷ್ಕಾರ ಭಾರೀ ಮಹತ್ವದ್ದು. ಡಿಜಿಟಲ್ ಬ್ಯಾಂಕಿಂಗ್ ತೀವ್ರವಾಗಿ ಬೆಳೆಯತ್ತಿದ್ದು, ಇದು ಎ.ಟಿ.ಎಂ ವ್ಯವಹಾರದ ಮೇಲೆ ಪರಿಣಾಮ ಬೀರುತ್ತಿದೆ. ಎ.ಟಿ.ಎಂ ವ್ಯವಹಾರದಲ್ಲಿ ಬ್ಯಾಂಕುಗಳಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎನ್ನಲಾಗುತ್ತಿದೆ. ದಿನಕ್ಕೆ ಕನಿಷ್ಠ 600 ಹಿಟ್ಸ್ ಆದರೆ, ಅದು ತನ್ನ ನಿರ್ವಹಣಾ ವೆಚ್ಚವನ್ನು ಸರಿದೂಗಿಸುತ್ತದೆ ((break even) ಎನ್ನುವ ಅಂದಾಜು ಇದೆ. ಅಷ್ಟು ಹಿಟ್ಸ್ ಆಗುವುದು ಸಂದೇಹ. ಅದಕ್ಕೂ ಮಿಗಿಲಾಗಿ, ಒಂದು ಎ.ಟಿ.ಎಂ.ಅನ್ನು ಸ್ಥಾಪಿಸಲು ಸುಮಾರು 7 ಲಕ್ಷ ರೂ. ತಗುಲುತ್ತದೆ. ಜೊತೆಗೆ ಅದರ ತಿಂಗಳ ನಿರ್ವಹಣಾ ವೆಚ್ಚ ಸುಮಾರು 80,000 ರೂ.ಗಳು. ಎ.ಟಿ.ಎಂ, ಶಾಖೆಯಲ್ಲಿಯೇ ಇದ್ದರೆ (on site) ಸ್ವಲ್ಪ ಕಡಿಮೆ. ಹೊರಗೆ (off site) ಇದ್ದರೆ ಬಾಡಿಗೆ ಬೇರೆಯಾಗಿದ್ದು, ವೆಚ್ಚ ತುಸು ಹೆಚ್ಚು. ಹಾಗೆಯೇ, ಅವುಗಳ ನಿರ್ವಹಣೆ ಸುರಕ್ಷತೆ ಮತ್ತು ಭದ್ರತೆ ಕೂಡಾ ಬ್ಯಾಂಕುಗಳಿಗೆ ತಲೆನೋವಾಗಿದೆ. ಎ.ಟಿ.ಎಂ. ಸ್ಥಾಪಿಸುವಾಗ financial viability ಬಗೆಗೆ ಹೆಚ್ಚು ಗಮನ ಕೊಡದೇ, ತಮ್ಮ ಬ್ಯಾಂಕಿನ ಎ.ಟಿ.ಎಂ ಕೂಡಾ ಇರಲಿ ಎನ್ನುವ ಬ್ಯಾಂಕುಗಳ ಧೋರಣೆ ಎ.ಟಿ.ಎಂ.ಗಳ ದಟ್ಟಣೆಯಾಗಲು ಮತ್ತು ಅವು ನಷ್ಟ ಹೊಂದಲು ಕಾರಣ ಎಂದು ಬ್ಯಾಂಕಿಂಗ್ ತಜ್ಞರು ಹೇಳುತ್ತಾರೆ. ಇದರ ಸತ್ಯಾಸತ್ಯತೆ ಏನೇ ಇರಲಿ, ಇಂದಿನ ಪೀಳಿಗೆ ಡಿಜಿಟಲ್ ಬ್ಯಾಂಕಿಂಗ್‌ಗೆ ಹೊಂದಿಕೊಂಡಿದ್ದು, ಈಗಿರುವ brick mortar ¸ಬ್ಯಾಂಕಿಂಗ್ ವ್ಯವಸ್ಥೆಯು ಮುಂದಿನ ದಿನಗಳಲ್ಲಿ ಕ್ರಮೇಣ ಕಡಿಮೆಯಾಗಿ ಶಾಖೆಗಳ ಮುಚ್ಚುವಿಕೆ ನಾರ್ಮಲ್ ಆಗಬಹುದೇನೋ ಎನಿಸುತ್ತದೆ.
5500 ಎ.ಟಿ.ಎಂ.ಗಳು ಬಂದ್
ಕಳೆದ ಒಂದು ವರ್ಷದಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಸುಮಾರು 600 ಶಾಖೆಗಳನ್ನು ಮತ್ತು 5500 ಎ.ಟಿ.ಎಂ.ಗಳನ್ನು, ಮುಚ್ಚಿವೆ- ಎನ್ನುತ್ತದೆ ಹಣಕಾಸು ಮಾಧ್ಯಮವೊಂದರ ವರದಿ. ಈ ಮುಚ್ಚುವಿಕೆ ಸದ್ಯ ಮೆಟ್ರೊ ಮತ್ತು ನಗರ- ಪಟ್ಟಣ ಪ್ರದೇಶಗಳಿಗೆ ಸೀಮಿತವಾಗಿದ್ದು, ಗ್ರಾಮಾಂತರ ಪ್ರದೇಶಗಳಲ್ಲಿ ಇರುವ ಶಾಖೆಗಳನ್ನು ಮತ್ತು ಎ.ಟಿ.ಎಂ.ಗಳನ್ನು ಮುಚ್ಚಲಿಲ್ಲ. ಜೂನ್ 2018ರಿಂದ ಜೂನ್ 2019ರ ವರೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 420 ಶಾಖೆಗಳನ್ನು ಮುಚ್ಚಿದ್ದರೆ, ವಿಲೀನಗೊಂಡ ಬ್ಯಾಂಕ್ ಆಫ್ ಬರೋಡಾ, ವಿಜಯಾ ಬ್ಯಾಂಕ್ ಮತ್ತು ದೇನಾ ಬ್ಯಾಂಕ್‌ಗಳು 40 ಶಾಖೆಗಳನ್ನು ಮತ್ತು 274 ಎ.ಟಿ.ಎಂ.ಗಳನ್ನು ಮುಚ್ಚಿವೆ. ಹತ್ತರಲ್ಲಿ ಒಂಬತ್ತು ಬ್ಯಾಂಕುಗಳು ತಮ್ಮ ಎ.ಟಿ.ಎಂ ಸಂಖ್ಯೆಯನ್ನು ಕಡಿಮೆ ಮಾಡಿವೆ. ಹಾಗೆಯೇ, ಹತ್ತರಲ್ಲಿ ಆರು ಬ್ಯಾಂಕುಗಳು ತಮ್ಮ ಶಾಖೆಗಳ ಸಂಖ್ಯೆಯನ್ನು ಇಳಿಸಿವೆ. ಬ್ಯಾಂಕಿಂಗ್ ವಲಯದ ವೀಕ್ಷಕರ ಮತ್ತು ವಿಶ್ಲೇಷಕರ ಪ್ರಕಾರ, ಈ ಮುಚ್ಚುವಿಕೆಯ ಟ್ರೆಂಡ್ ಮುಂದುವರಿಯುವ ಲಕ್ಷಣ ಇದೆ. ಬ್ಯಾಂಕಿಂಗ್‌ನಲ್ಲಿ ಡಿಜಿಟಲ್ ಚಾನೆಲ್‌ಗಳು ಜನಪ್ರಿಯವಾಗುತ್ತಿದ್ದು, ಬ್ಯಾಂಕ್ ಶಾಖೆಗಳ ಪರಿಕಲ್ಪನೆ redunt ಅಗಬಹುದು ಎನ್ನುವ ಅಭಿಪ್ರಾಯ ಕೇಳಿಬರುತ್ತಿದೆ.
-ರಮಾನಂದ ಶರ್ಮಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.