ಗಣೇಶೋತ್ಸವ ನಿಯಮ ಉಲ್ಲಂ ಸಿದರೆ ಕ್ರಮ: ಜಿಲ್ಲಾಧಿಕಾರಿ
Team Udayavani, Sep 2, 2019, 5:16 AM IST
ಉಡುಪಿ: ಗಣೇಶೋತ್ಸವ ಹಿನ್ನೆಲೆಯಲ್ಲಿ ರೂಪಿಸಲಾಗಿರುವ ನಿಯಮಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳುವುದಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿಯವರು ವಿವಿಧ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ನಿಯಮ ಉಲ್ಲಂ ಸುವ ಆಯೋಜಕರು, ಸಾರ್ವಜನಿಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಗಣೇಶೋತ್ಸವ ಆಚರಣೆ ಸಂದರ್ಭ ಕಾನೂನು ಸುವ್ಯವಸ್ಥೆ ಕಾಪಾಡುವುದು, ಪರಿಸರ ಮಾಲಿನ್ಯ ತಡೆಗಟ್ಟುವ ಕುರಿತು ಜರಗಿದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಗಣೇಶೋತ್ಸವಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರೀಸ್ ಬಳಸಿ ತಯಾರಿಸಿದ ಯಾವುದೇ ಗಣೇಶ ವಿಗ್ರಹಗಳನ್ನು ಬಳಸಬಾರದು. ಅವುಗಳನ್ನು ವಿಸರ್ಜಿಸಲು ಯಾವುದೇ ಅವಕಾಶ ಇಲ್ಲ. ಒಂದು ವೇಳೆ ಬಳಸಿದಲ್ಲಿ ಅಂಥವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ರಾಸಾಯನಿಕ ಬಣ್ಣಗಳನ್ನು ಉಪಯೋಗಿಸಿದ ವಿಗ್ರಹಗಳನ್ನು ಕೂಡ ಬಳಸುವಂತಿಲ್ಲ. ಈ ಬಗ್ಗೆ ಕೈಗೊಳ್ಳುವ ಕ್ರಮದ ಬಗ್ಗೆ ಪರಿಸರ ಅಧಿಕಾರಿಯವರು ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಸ್ಥಳ ಗುರುತು
ಗಣಪತಿ ಮೂರ್ತಿಯನ್ನು ಎಲ್ಲೆಂದರಲ್ಲಿ, ರಸ್ತೆ ಬದಿಯಲ್ಲಿ ಪ್ರತಿಷ್ಠಾಪನೆ ಮಾಡಲು ಅವಕಾಶ ನೀಡಬಾರದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪೌರಾಯುಕ್ತ ಆನಂದ ಸಿ.ಕಲ್ಲೋಳಿಕರ್ “ಆಯೋಜಕರು ಕೋರುವ ನಿಗದಿತ ಸ್ಥಳಗಳ ತನಿಖೆ ನಡೆಸಿ ಆಕ್ಷೇಪ ಇಲ್ಲದಿರುವಲ್ಲಿ ಮಾತ್ರ ಗಣಪತಿ ಇಡಲು ಅನುಮತಿ ನೀಡಲಾಗುತ್ತಿದೆ’ ಎಂದು ತಿಳಿಸಿದರು.
ಮೈಕ್ ಬಳಕೆ ಸೂಚನೆ
ಆಯೋಜಕರು ಸಂಬಂಧಪಟ್ಟ ಎಲ್ಲ ಇಲಾಖೆಗಳಿಂದ ಅನುಮತಿ ಪಡೆದು ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಸಾರ್ವಜನಿಕರಿಗೆ ತೊಂದರೆಯಾಗುವಂತೆ ಜೋರಾಗಿ ಮೈಕ್ ಅಳವಡಿಸಬಾರದು. ಮೆರವಣಿಗೆಯ ಸಂದರ್ಭದಲ್ಲಿ ಡಿಜೆ ಹಾಕಿ ತೊಂದರೆ ಕೊಡಬಾರದು. ಸರಕಾರಿ ನಿಯಮದಂತೆ ವಾಸಸ್ಥಳ ಪ್ರದೇಶದಲ್ಲಿ 55 ಡೆಸಿಬಲ್, ವಾಣಿಜ್ಯ ಪ್ರದೇಶದಲ್ಲಿ 65 ಡೆಸಿಬಲ್ ಶಬ್ದ ಪ್ರಮಾಣದಲ್ಲಿ ಬೆಳಗ್ಗೆ 6ರಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಪೊಲಿಸ್ ಇಲಾಖೆಯ ಅನುಮತಿ ಪಡೆದು ಮೈಕ್ ಅಳವಡಿಸಬೇಕು ಎಂದು ಡಿಸಿ ತಿಳಿಸಿದರು.
ಎಸ್‌ಪಿ ನಿಶಾ ಜೇಮ್ಸ್ ಮಾತನಾಡಿ ಸ್ಥಳವು ಸಾರ್ವಜನಿಕ ಜಾಗವಾಗಿದ್ದಲ್ಲಿ ಸ್ಥಳಿಯಾಡಳಿತದಿಂದ ಹಾಗೂ ಖಾಸಗಿ ಜಾಗವಾಗಿದ್ದಲ್ಲಿ ಜಾಗದ ಮಾಲಕರಿಂದ ಅನುಮತಿ ಪತ್ರ, ಮೆಸ್ಕಾಂ ಇಲಾಖೆಯಿಂದ ನಿರಾಕೇÒಪಣಾ ಪತ್ರ, ಅಗ್ನಿಶಾಮಕ ಇಲಾಖೆಯಿಂದ ನಿರಾಕೇÒಪಣಾ ಪತ್ರ ಪಡೆಯಬೇಕು. ಬ್ಯಾನರ್, ಬಂಟಿಂಗ್ಸ್, ಫ್ಲೆಕ್ಸ್ ಅಳವಡಿಸುವ ಸಂಬಂಧ ಸ್ಥಳಿಯಾಡಳಿತದಿಂದ ಅನುಮತಿ ಪತ್ರ ಪಡೆಯಬೇಕು. ಎಲ್ಲ ನಿರಾಕೇÒಪಣಾ ಪತ್ರಗಳ ಪ್ರತಿಗಳನ್ನು ಹತ್ತಿರದ ಪೊಲೀಸ್ ಠಾಣೆಗೆ ಸಲ್ಲಿಸಬೇಕು. ನಿರಾಕೇÒಪಣಾ ಪತ್ರಗಳಲ್ಲಿ ನೀಡಲಾಗಿರುವ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ವಿಸರ್ಜನಾ ಮೆರವಣಿಗೆಯ ಮಾರ್ಗದ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಅವರಿಂದ ಅನುಮತಿ ಪಡೆಯಬೇಕು. ಪೆಂಡಾಲ್ ಸುರಕ್ಷತೆಯ ಬಗ್ಗೆ ಹಾಗೂ ಮೆರವಣಿಗೆ ಸುರಕ್ಷತೆಯ ಬಗ್ಗೆ ಸ್ವಯಂ ಸೇವಕರನ್ನು ನೇಮಕ ಮಾಡಿ ಅವರ ವಿವರವನ್ನು ಪೊಲೀಸ್ ಠಾಣೆಗೆ ಸಲ್ಲಿಸಬೇಕು. ಸದ್ರಿ ಸ್ವಯಂ ಸೇವಕರು ಪೆಂಡಾಲ್‌ನಲ್ಲಿ ಎಲ್ಲ ಸಮಯದಲ್ಲಿಯೂ ಕಡ್ಡಾಯವಾಗಿ ಇರಬೇಕು. ಪೆಂಡಾಲ್‌ನಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಬೇಕು. ಪೆಂಡಾಲ್‌ನಲ್ಲಿ ಅಡುಗೆ ಮಾಡಬಾರದು, ಸ್ವತ್ಛತೆಯ ಬಗ್ಗೆ ಗಮನ ಹರಿಸಬೇಕು. ಮೂರ್ತಿ ವಿಸರ್ಜನೆ ಮೆರವಣಿಗೆಯನ್ನು ಸರಿಯಾದ ಸಮಯಕ್ಕೆ ಆರಂಭಿಸಬೇಕು. ರಾತ್ರಿ 10 ಗಂಟೆಯೊಳಗಾಗಿ ಮುಗಿಸಬೇಕು. ಇಲ್ಲವಾದಲ್ಲಿ ಇದರಿಂದ ಕಳ್ಳತನ/ಅಪಘಾತ ಇಂತಹ ಅಹಿತಕರ ಘಟನೆಗಳು ಉಂಟಾಗುವ ಸಂಭವವಿರುತ್ತದೆ. ಮೆರವಣಿಗೆ ಸಮಯದಲ್ಲಿ ತಾಂತ್ರಿಕ ಕಾರಣಗಳಿಂದ ತೊಂದರೆ ಉಂಟಾಗುವುದನ್ನು ತಡೆಯಲು ಹೆಚ್ಚುವರಿ ಬದಲಿ ವ್ಯವಸ್ಥೆಯನ್ನು ಮಾಡಿಟ್ಟುಕೊಳ್ಳಬೇಕು.
ಗಣಪತಿ ಮೂರ್ತಿಯನ್ನು ನೀರಿನಲ್ಲಿ ವಿಸರ್ಜಿಸುವ ಸಮಯದಲ್ಲಿ ಜಾಗರೂಕತೆ ವಹಿಸಬೇಕು. ಇದಕ್ಕಾಗಿ ಈಜುಗಾರರು, ಬೆಳಕಿನ ವ್ಯವಸ್ಥೆ, ಬ್ಯಾರಿಕೇಡ್ ವ್ಯವಸ್ಥೆಯನ್ನು ಮಾಡಿಟ್ಟುಕೊಳ್ಳಬೇಕು ಎಂದು ಎಸ್‌ಪಿ ತಿಳಿಸಿದರು.
ಎಎಸ್‌ಪಿ ಕುಮಾರಚಂದ್ರ ಉಪಸ್ಥಿತರಿದ್ದರು.
ಆಯೋಜಕರೇ ಜವಾಬ್ದಾರರು
ವಿಸರ್ಜನಾ ಮೆರವಣಿಗೆಗೆ ಪೊಲೀಸ್ ಇಲಾಖೆಯ ಅನುಮತಿ ಪಡೆದುಕೊಳ್ಳಬೇಕು. ಕಡ್ಡಾಯವಾಗಿ ಬಾರ್‌ಗಳನ್ನು ಮುಚ್ಚಬೇಕು. ಮೆರವಣಿಗೆ ಸಂದರ್ಭದಲ್ಲಿ ಕುಡಿದು ನೃತ್ಯ ಮಾಡಬಾರದು. ಗಲಾಟೆಗಳು ಸಂಭವಿಸಿದಲ್ಲಿ ಇದಕ್ಕೆ ಕಾರ್ಯಕ್ರಮ ಆಯೋಜಕರೇ ಜವಾಬ್ದಾರರಾಗಿರುತ್ತಾರೆ. ಗಣೇಶೋತ್ಸವ ಆಚರಣೆಗಾಗಿ ಸಾರ್ವಜನಿಕರಲ್ಲಿ ಬಲವಂತವಾಗಿ ಚಂದಾ ಹಣ ವಸೂಲಿ ಮಾಡಬಾರದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಗಣೇಶೋತ್ಸವ ಸಂದರ್ಭದಲ್ಲಿ ಇಲಾಖಾ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.