ಕುಕ್ಕೆ: ಸಿದ್ಧವಾಗುತ್ತಿದೆ ಪಾರಂಪರಿಕ ಶಿಲ್ಪ ವೈಭವದ ಬ್ರಹ್ಮರಥ

 ಕೋಟೇಶ್ವರದಲ್ಲಿ ರಥಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯರ ಮಾರ್ಗದರ್ಶನದಲ್ಲಿ ಕೆತ್ತನೆ ಕಾರ್ಯ

Team Udayavani, Sep 2, 2019, 5:01 AM IST

SUB-1

 ವಿಶೇಷ ವರದಿ-ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನೂತನ ಬ್ರಹ್ಮರಥವು ಈಗಿನ 400 ವರ್ಷಗಳ ಪುರಾತನವಾದ ರಥದ ಪ್ರಾಚೀನ ಶಿಲ್ಪ ಕಲೆಗೆ ಧಕ್ಕೆ ಬರದಂತೆ ಅದೇ ಆಯ, ಅಳತೆ ಶಾಸ್ತ್ರಗಳ ತದ್ರೂಪದಲ್ಲಿ ಕೋಟೇಶ್ವರದಲ್ಲಿ ನಿರ್ಮಾಣವಾಗುತ್ತಿದೆ.

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಮಾರ್ಗದರ್ಶನದಲ್ಲಿ ಶಿಲ್ಪಿ ರಾಜಗೋಪಾಲ ನೇತೃತ್ವದಲ್ಲಿ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಶಾಲೆಯಲ್ಲಿ ಬ್ರಹ್ಮರಥ ನಿರ್ಮಾಣಗೊಂಡಿದೆ. ನವರಾತ್ರಿ ಆರಂಭವಾಗುವ ಸೆ. 29ರ ರಾತ್ರಿ ಚಿತ್ತ ನಕ್ಷತ್ರದ ಶುಭ ಮುಹೂರ್ತದಲ್ಲಿ ರಥವನ್ನು ಕುಕ್ಕೆಗೆ ತರಲಾಗುತ್ತಿದೆ. ಅತ್ಯಲ್ಪ ಅವಧಿಯ ಏಳು ತಿಂಗಳಲ್ಲಿ ಶಿಲ್ಲಿಗಳ ಕಲಾ ನೈಪುಣ್ಯದಿಂದ ಹೊರಹೊಮ್ಮಿದ ರಥ ಸುಂದರವಾಗಿ ಮೂಡಿಬಂದಿದೆ.

ರಥದ ವಿಶೇಷ
ನೆಲದಿಂದ ರಥದ ಜಿಡ್ಡೆಯ ತನಕ 17 ಅಡಿ ಎತ್ತರ, ಅಗಲ, ಉದ್ದ ಇರಲಿದೆ. 6 ಚಕ್ರಗಳಿದ್ದು ಚಕ್ರ 8 ಅಡಿ ಎತ್ತರವಿದೆ. ರಥ ನೆಲದಿಂದ ಕಲಶದ ತುದಿವರೆಗೆ 63 ಅಡಿ ಎತ್ತರವಿರುತ್ತದೆ. ರಥ ಅಂದಾಜು 22 ಟನ್‌ ಭಾರವಿರಲಿದೆ. 16 ಅಂತಸ್ತುಗಳನ್ನು ಹೊಂದಿದ್ದು, ವಿವಿಧ ಜಾತಿಯ 2000 ಸಿಎಫ್ಎಫ್ ಮರ ಬಳಸಿಕೊಳ್ಳಲಾಗಿದೆ. ಉತ್ತರ ಭಾರತದಿಂದ ಸಾಗುವಾನಿ, ಗುಜರಾತಿನಿಂದ ಬೋಗಿ ಮರ ಹಾಗೂ ಸುಬ್ರಹ್ಮಣ್ಯ ಪ್ರಾಂತದಿಂದ ಕಿಲಾರ್‌ ಬೋಗಿ ಮರವನ್ನು ಬಳಸಿಕೊಳ್ಳಲಾಗಿದೆ.

ರಥದಲ್ಲಿ ಚತುರ್ವಂಶಿ ವಿಗ್ರಹ, ಶಿವ ಹಾಗೂ ಸುಬ್ರಹ್ಮಣ್ಯ ಸ್ವಾಮಿಯ ಲೀಲಾವಲಿಗಳು, ಅಷ್ಟ ದಿಕಾ³ಲರು, ಮಹಾಭಾರತ, ಪಾರ್ವತಿ ಕಲ್ಯಾಣ, ದಕ್ಷ ಯಜ್ಞ, ಪುತ್ರ ಕಾಮೇಷ್ಠಿ ಯಾಗ ಹಾಗೂ ಪ್ರಪಂಚದ ಸಕಲ ಜೀವರಾಶಿಗಳಿರುವ ಸಹಸ್ರಾರು ಚಿತ್ರಗಳ ಕೆತ್ತನೆಯಿಂದ ಕೂಡಿದೆ. ದೇವತೆಗಳು ಹಾಗೂ ದೇವರನ್ನು ಅತ್ಯಂತ ನಾಜೂಕಾಗಿ ಕೆತ್ತಲಾಗಿದ್ದು, ರಥ ಗಮನ ಸೆಳೆಯುತ್ತಿದೆ.

ರಥವು ನೆಗಳನ ಆನೆಕಾಲು, ಸಿಂಹಗಳು ಕೇನೆ ಅಡ್ಡಗಾಲು ಇತ್ಯಾದಿ ಇದೆ. ನಾಲ್ಕು ದಿಕ್ಕುಗಳಲ್ಲಿ ದ್ವಾರಪಾಲಕರು, ಕೆತ್ತನೆ, ಶಿಲ್ಪಗಳು ಶಿಲ್ಪಿಗಳ ಕಲಾ ಕುಸುರಿಗೆ ಸಾಕ್ಷಿಯಾಗಿವೆ. ಹಲವು ವೈಶಿಷ್ಟéಗಳ ಚಿತ್ರ ರಥದ ಸುತ್ತ ಮೂಡಿಬಂದಿವೆ. ಕಲೆಗಾಗಿ ಸಾಗುವಾನಿ ಮರ ಬಳಸಿಕೊಳ್ಳಲಾಗಿದೆ. ಚಕ್ರ ಮತ್ತು ಅಚ್ಚಿಗೆ ಬೋಗಿ ಮರ ಉಪಯೋಗಿಸಲಾಗಿದೆ.

 ಅನುಮತಿ ಪ್ರಕ್ರಿಯೆ
ನಿರೀಕ್ಷಿತ ಆವಧಿಯಲ್ಲಿ ರಥ ಸುಂದರ ರೂಪ ಪಡೆದು ಹೊರಹೊಮ್ಮಿದೆ. ಕೋಟೇಶ್ವರದಿಂದ ರಥವನ್ನು ಕುಕ್ಕೆಗೆ ತರುವ ಕುರಿತು ಸಿದ್ಧತೆಗಳನ್ನು ನಡೆಸುತ್ತಿದ್ದೇವೆ. ಇಲಾಖಾವಾರು ಅನುಮತಿ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ.
– ನಿತ್ಯಾನಂದ ಮುಂಡೋಡಿ
ಅಧ್ಯಕ್ಷರು, ಕುಕ್ಕೆ ದೇಗುಲ ವ್ಯವಸ್ಥಾಪನ ಸಮಿತಿ

 116ನೇ ರಥ
1969ರಲ್ಲಿ ರಥ ನಿರ್ಮಾಣ ಕೆಲಸ ಆರಂಭಿಸಿದ್ದೆವು. ಇಂದು 116ನೇ ರಥವಾಗಿ ಕುಕ್ಕೆ ಸುಬ್ರಹ್ಮಣ್ಯದ ಬ್ರಹ್ಮರಥ ನಿರ್ಮಿಸಿ ಕೊಡುತ್ತಿದ್ದೇವೆ. ಇದೊಂದು ಅತ್ಯದ್ಭುತ ಅನುಭವ ನೀಡಿದೆ. ಶೀಘ್ರ ಹಸ್ತಾಂತರಿಸುತ್ತಿದ್ದೇವೆ.
– ರಾಜಗೋಪಾಲ
ರಥದ ಶಿಲ್ಪಿ, ಕೊಟೇಶ್ವರ

ರಥ ಸಮರ್ಪಣೆ ವಿಳಂಬ
ರಥ ಕುಕ್ಕೆಗೆ ಅಕ್ಟೋಬರ್‌ನಲ್ಲಿ ತಲುಪಿದರೂ ರಥ ಸಮರ್ಪಣೆಗೆ ದೀಪಾವಳಿ ತನಕ ಕಾಯಬೇಕಿದೆ. ದೀಪಾವಳಿ ಸಂದರ್ಭ ದೇವರ ಉತ್ಸವಗಳು ಬೀದಿಗೆ ಬರಲಿದ್ದು, ಅಲ್ಲಿಯ ತನಕ ಸಮರ್ಪಣೆ ಅಸಾಧ್ಯ. ರಥಕ್ಕೆ ಸಂಬಂಧಿಸಿ ಉಳಿದ ಕೆಲಸ ಕಾರ್ಯಗಳು ನಡೆದು ದೀಪಾವಳಿ ಸಂದರ್ಭ (ನವೆಂಬರ್‌) ರಥ ಸಮರ್ಪಣೆಯಾಗಲಿದೆ. ಡಿಸೆಂಬರ್‌ನಲ್ಲಿ ನಡೆಯುವ ಚಂಪಾ ಷಷ್ಠಿ ಸಂದರ್ಭ ನೂತನ ಬ್ರಹ್ಮರಥದಲ್ಲಿ ದೇವರು ಆರೋಹಣರಾಗುವರು.

ಟಾಪ್ ನ್ಯೂಸ್

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

BGV-CM-SS

Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ

Frud

Mangaluru: ಆನ್‌ಲೈನ್‌ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ

MCC-BankArrest

Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್‌ ಅಧ್ಯಕ್ಷನ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kallabatti

Bantwala: ಪಂಜಿಕಲ್ಲು: ಅಕ್ರಮ ಕಳ್ಳಬಟ್ಟಿ ಅಡ್ಡೆಗೆ ದಾಳಿ

13

Alankar: ಮನೆಯಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

Brahmavar

Aranthodu: ಅಸೌಖ್ಯ; ಆಟೋ ಚಾಲಕ ಸಾವು

police-ban

Bantwal: ಜೂಜಾಟಕ್ಕೆ ದಾಳಿ; 7.81 ಲಕ್ಷ ರೂ.ವಶ

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

BGV-CM-SS

Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.