ಪಶು ಆಹಾರ ಮಳಿಗೆಯಲ್ಲಿ ಕಳವು
Team Udayavani, Sep 2, 2019, 4:40 PM IST
ಕುಣಿಗಲ್ ಭಕ್ತರಹಳ್ಳಿ ಗ್ರಾಮದ ಎನ್.ಎನ್.ಎಂಟರ್‌ಪ್ರೖಸಸ್ ಪಶು ಆಹಾರ ಮಳಿಗೆ ಛಾವಣಿ ಮುರಿದಿರುವ ಕಳ್ಳರು.
ಕುಣಿಗಲ್: ರಾಜ್ಯ ಹೆದ್ದಾರಿ 33ರ ಭಕ್ತರಹಳ್ಳಿಯಲ್ಲಿ ಅಂಗಡಿಯ ಛಾವಣಿ ಸೀಟು ತೆಗೆದು ಒಳನುಗ್ಗಿರುವ ಕಳ್ಳರು 8 ಲಕ್ಷ ರೂ. ಮೌಲ್ಯದ ವಸ್ತು ಕಳವು ಮಾಡಿದ್ದಾರೆ.
ಎನ್‌ಎನ್ ಎಂಟರ್‌ಪ್ರ್ತ್ರೖಸಸ್ ಪಶು ಆಹಾರ ಮಳಿಗೆಯಲ್ಲಿ ಶನಿವಾರ ರಾತ್ರಿ ಮಧ್ಯರಾತ್ರಿ ಕಳ್ಳರು ಮಳಿಗೆ ಛಾವಣಿ ಒಡೆದು ಒಳ ಪ್ರವೇಶಿಸಿ ಸಿ.ಸಿ ಕ್ಯಾಮರಾ, ಕಂಪ್ಯೂಟರ್, ಯುಪಿಎಸ್ ಹಾಗೂ 600 ಚೀಲ ಬೂಸಾ ಕಳವು ಮಾಡಿ ಪರಾರಿಯಾಗಿದ್ದಾರೆ. ಕುಣಿಗಲ್ ಠಾಣೆಗೆ ದೂರು ನೀಡಲಾಗಿದೆ.
ಎರಡನೇ ಬಾರಿ ಕಳ್ಳತನ: ಒಂದು ವರ್ಷದ ಹಿಂದೆ ಅಪರಿಚಿತರು ಕೆಲಸದವರ ಗಮನ ಬೇರೆಡೆ ಸೆಳೆದು ಕ್ಯಾಶ್ ಕೌಂಟರ್‌ನಿಂದ ಸುಮಾರು 2.20 ಲಕ್ಷ ರೂ. ಕಳವು ಮಾಡಿದ್ದರು ಎಂದು ಅಂಗಡಿ ಮಾಲೀಕ ಎಸ್.ಸಿ.ನಟರಾಜ ಹೇಳಿದರು.
ದೇವಾಲಯಕ್ಕೂ ಕನ್ನ: ಹಳೆಯ ರಾಷ್ಟ್ರೀಯ ಹೆದ್ದಾರಿ 48ರ ಪಟ್ಟಣದ ಕೆ.ಆರ್.ಎಸ್ ಅಗ್ರಹಾರದ ಗಣಪತಿ ದೇವಾಲಯಕ್ಕೆ ಅಳವಡಿಸಿದ್ದ ಸಿ.ಸಿ. ಕ್ಯಾಮರಾ ಹಾಗೂ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಕಳ್ಳರು ದೇವಾಲಯದ ಕಬ್ಬಿಣದ ಬಾಗಿಲಿನ ಬೀಗ ಒಡೆದು ಬೀರು ಜಾಲಾಡಿದ್ದಾರೆ. ಏನೂ ಸಿಗದ ಕಾರಣ ಪಕ್ಕದಲ್ಲೇ ಇದ್ದ ಹುಂಡಿಯಲ್ಲಿದ್ದ ಒಂದು ಲಕ್ಷಕ್ಕೂ ಅಧಿಕ ಹಣ ದೋಚಿ ದ್ದಾರೆ. ಈ ಸಂಬಂಧ ಪಟ್ಟಣದ ಠಾಣೆಗೆ ದೇವಾಲಯದ ಮುಖ್ಯಸ್ಥರು ದೂರು ನೀಡಿದ್ದಾರೆ.
ಪೊಲೀಸರ ವೈಫಲ್ಯ: ಪೊಲೀಸರ ಗಸ್ತು ವೈಫಲ್ಯದಿಂದ ಕುಣಿಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣ ಗಳು ಹೆಚ್ಚಾಗಿದೆ. ಕಳೆದ ತಿಂಗಳು ಠಾಣೆಗೆ ಕೂದಲೆಳೆ ಅಂತರದಲ್ಲಿರುವ ಪಂಚವಟಿ ಆಂಜನೇಯಸ್ವಾಮಿ ದೇವಾಲಯ ಬೀಗ ಮುರಿದು ಎರಡು ಹುಂಡಿ ದೋಚ ಲಾಗಿತ್ತು. ಪಟ್ಟಣದ ಮುಖ್ಯ ಅಂಚೆ ಕಚೇರಿ ಹಾಗೂ ಸುಧಾ ಪ್ರಸ್ ಅಂಗಡಿ ಬೀಗ ಮುರಿದ ಕಳ್ಳರು ಸಾವಿ ರಾರು ರೂ. ನಗದು ದೋಚಿದ್ದರು. ಆಲ್ಕೆರೆ, ಗವಿಮಠ ಸೇರಿ ಮೊದಲಾದ ಗ್ರಾಮ ಗಳಲ್ಲಿನ ದೇವಾಲಯಗಳ ಬೀಗ ಮುರಿದ ದುಷ್ಕರ್ಮಿಗಳು ಹಲವು ವಸ್ತು ಕಳವು ಮಾಡಿದ್ದರು. ಇದಕ್ಕೆಲ್ಲಾ ಪೊಲೀಸರ ಕಾರ್ಯವೈಖರಿ ಕಾರಣ ವೆಂಬುದು ಜನರ ಆರೋಪ. ಕೂಡಲೇ ಪೊಲೀಸ್ ಇಲಾಖೆ ಈ ಸಂಬಂಧ ಕ್ರಮ ಕೈಗೊಂಡು ರಾತ್ರಿ ಗಸ್ತು ಬಿಗಿ ಗೊಳಿಸಬೇಕೆಂದು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kunigal: ಬೈಕ್, ಕ್ಯಾಂಟರ್ ಮುಖಾಮುಖಿ ಢಿಕ್ಕಿ; ಇಬ್ಬರು ಸ್ಥಳದಲ್ಲೇ ಮೃತ್ಯು
Gubbi: ಮೀಟರ್ ಬಡ್ಡಿ ದಂಧೆಕೋರರ ಕಿರುಕುಳಕ್ಕೆ ಬೇಸತ್ತು ಪೌರ ಕಾರ್ಮಿಕ ಆತ್ಮಹತ್ಯೆ
Koratagere: ವೃದ್ದೆ ಮೇಲೆ ಕೆಎಸ್ಆರ್ಟಿಸಿ ಬಸ್ ಹರಿದು ಸಾವು
Hunasur: ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ತಿಪಟೂರಿನ ಮಹಿಳೆ!
Kunigal: ಅಪ್ರಾಪ್ತೆಯ ಅಪಹರಣ, ಲೈಂಗಿಕ ದೌರ್ಜನ್ಯ; ಗುಜರಾತ್ ನಲ್ಲಿ ಬಂಧನ
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.