ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದವನಿಗೆ ಎಷ್ಟು ದಂಡ ಹಾಕಿದ್ರು ಗೊತ್ತಾ?
Team Udayavani, Sep 3, 2019, 6:05 PM IST
ಗುರುಗ್ರಾಮ: ಸೆಪ್ಟಂಬರ್ ಒಂದರಿಂದ ದೇಶಾದ್ಯಂತ “ಮೋಟರ್ ವಾಹನ ತಿದ್ದುಪಡಿ ಕಾಯಿದೆ” ಜಾರಿಯಾಗಿದೆ. ಹೊಸ ನಿಯಮವನ್ನು ಉಲ್ಲಂಘನೆ ಮಾಡಿ ವಾಹನ ಚಲಾಯಿಸಿದ ವ್ಯಕ್ತಿಯನ್ನು ಪೊಲೀಸರು ತಡೆದು ಬರೋಬ್ಬರಿ 23 ಸಾವಿರ ದಂಡವನ್ನು ಹಾಕಿದ ಘಟನೆ ಗುರುಗ್ರಾಮದಲ್ಲಿ ನಡೆದಿದೆ.
ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ದಿನೇಶ್ ಮದನ್ ಎನ್ನುವ ವ್ಯಕ್ತಿಯನ್ನು ಸಂಚಾರಿ ಪೊಲೀಸರು ಗುರುಗ್ರಾಮ ನ್ಯಾಯಾಲದ ಮುಂದುಗಡೆ ತಡೆದು ವಾಹನದ ದಾಖಲೆ ಹಾಗೂ ಇನ್ನಿತರ ಮಾಹಿತಿಯನ್ನು ಕೇಳಿದ್ದರು. ಈ ವೇಳೆಯಲ್ಲಿ ದಿನೇಶ್ ತನ್ನ ಲೈಸನ್ಸ್ ಬಿಟ್ಟು ಬಂದಿದ್ದಾನೆ. ಪೊಲೀಸರು ಎಲ್ಲಾ ದಾಖಲೆಯಗಳ ಕೇಳಿದಾಗ ದಿನೇಶ್ ಬಳಿ ಯಾವ ದಾಖಲೆಯೂ ಇಲ್ಲ. ಸಂಚಾರಿ ಪೊಲೀಸರು ವಿವಿಧ ನಿಯಮ ಉಲ್ಲಂಘನೆ ಮಾಡಿದ ಕಾರಣಕ್ಕಾಗಿ ಒಟ್ಟು 23,000ಸಾವಿರ ದಂಡವನ್ನು ಹಾಕಿದ್ದಾರೆ.
ದಿನೇಶ್ ಲೈಸನ್ಸ್ ಇಲ್ಲದ ಕಾರಣ ಹೊಸ ನಿಯಮದ ಪ್ರಕಾರ 5,000 ಸಾವಿರ ದಂಡ ಜೊತೆಗೆ ವಾಹನವನ್ನು ರಿಜಿಸ್ಟರ್ ಮಾಡದ ಕಾರಣ ಮತ್ತೆ 5 ಸಾವಿರ ದಂಡ ಇದರ ಜೊತೆಗೆ ವಾಹನದ ವಿಮೆ ಇಲ್ಲದ್ದಕ್ಕಾಗಿ 2,000 ದಂಡ, ಹೆಲ್ಮೆಟ್ ಹಾಕದೆ ವಾಹನ ಚಲಾಯಿಸಿದ್ದಕ್ಕಾಗಿ 1000 ಸಾವಿರ ಹಾಗೂ ವಾಯುಮಾಲಿನ್ಯ ಆಗುವ ಹೊಗೆ ಸೂಸುವ ಕಾರಣಕ್ಕಾಗಿನ 10,000 ದಂಡವನ್ನು ಹಾಕಿದ್ದಾರೆ. ಮದನ್ ದಂಡವನ್ನು ಆನ್ಲೈನ್ ಮುಖಾಂತರ ಅಥವಾ ನ್ಯಾಯಾಲಯದಲ್ಲಿ ಕಟ್ಟಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.