ಮಗಳು ಕಂಡಂತೆ ಟೀಚರ್‌…ಮನೇಲಿ ಅಮ್ಮ ಹೀಗಿರ್ತಾರೆ…

ಮಗಳು ಕಂಡಂತೆ ಟೀಚರ್‌...

Team Udayavani, Sep 4, 2019, 5:02 AM IST

q-17

ಅಮ್ಮ ತರಗತಿಯಲ್ಲಿ ಬೇರೆ ಮಕ್ಕಳೊಂದಿಗೆ ಇರುವಷ್ಟು ಸ್ವೀಟ್‌ ಆಗಿ ಮನೆಯಲ್ಲಿ ಇರುವುದಿಲ್ಲ! ಮನೆಯಲ್ಲಿ ನನ್ನೊಂದಿಗೆ, ನನ್ನ ತಮ್ಮನೊಂದಿಗೆ ಬಹಳ ಕಠಿಣವಾಗಿರುತ್ತಾರೆ.

ಅಮ್ಮನನ್ನು ನಾನು ಶಿಕ್ಷಕಿಯಾಗಿ ನೋಡಿದ್ದು ಅದೇ ಮೊದಲು. ಆ ದಿನ ಮನೆಯಲ್ಲಿ ನನ್ನನ್ನು ನೋಡಿಕೊಳ್ಳಲು ಯಾರೂ ಇರಲಿಲ್ಲ. ಅಮ್ಮನಿಗೆ ಕಾಲೇಜಿಗೆ ಹೋಗುವ ತರಾತುರಿ. ರಜೆ ಹಾಕಿ ಅಂತ ಅಪ್ಪನಿಗೆ ಹೇಳಿದರೆ, ಸಾಧ್ಯವೇ ಇಲ್ಲ ಅಂತ ತಲೆ ಆಡಿಸಿಬಿಟ್ಟರು. ಅಷ್ಟಕ್ಕೇ ಕೈ ಚೆಲ್ಲಿ ಅಮ್ಮ ಮನೆಯಲ್ಲಿ ಕೂರಲಿಲ್ಲ. ನನಗೆ ಅಂತ ಸ್ನ್ಯಾಕ್ಸ್‌ ಪ್ಯಾಕ್‌ ಮಾಡಿ, ಒಂದೆರಡು ಆಟಿಕೆಗಳನ್ನು, ಡ್ರಾಯಿಂಗ್‌ ಬುಕ್‌ ಅನ್ನು ತೆಗೆದುಕೊಂಡು ಬಸ್‌ ಹತ್ತಿಯೇಬಿಟ್ಟರು.

ಆ ದಿನ ಅಮ್ಮ ನನ್ನನ್ನು ತರಗತಿಯಲ್ಲೇ ಕೂರಿಸಿ ಪಾಠ ಮಾಡುತ್ತಿದ್ದರು. ನನಗಾಗ ಮೂರು-ಮೂರೂವರೆ ವರ್ಷ ಇರಬಹುದು. ಹಾಗಾಗಿ ಅವತ್ತು ಅವರು ಯಾವ ಪಾಠ ಮಾಡುತ್ತಿದ್ದರು ಅನ್ನೋ ವಿವರಗಳೇನೂ ನೆನಪಲ್ಲಿಲ್ಲ. ಆದರೆ, ಪ್ರತಿ ಐದೈದು ನಿಮಿಷಕ್ಕೂ ನಾನು ಅವರಿಗೆ ತೊಂದರೆ ಕೊಟ್ಟಿದ್ದು, ಅವರ ವಿದ್ಯಾರ್ಥಿಗಳೆಲ್ಲ ನನ್ನನ್ನು ಪ್ರೀತಿಯಿಂದ ಎತ್ತಿಕೊಂಡು ಕಾರಿಡಾರ್‌ನಲ್ಲಿ ಓಡಾಡಿದ್ದು ಮಾತ್ರ ಚೆನ್ನಾಗಿ ನೆನಪಿದೆ.

ನನಗೆ ತಿಳಿದ ಮಟ್ಟಿಗೆ ಅಮ್ಮ ತುಂಬಾ ಸ್ಟ್ರಿಕ್ಟ್ ಟೀಚರ್‌ ಅಲ್ಲ. ಅವರಿಗೆ ಒಳ್ಳೆಯ ಹಾಸ್ಯಪ್ರಜ್ಞೆ ಇದೆ. ಫ‌ನ್‌ ಲವಿಂಗ್‌ ವ್ಯಕ್ತಿತ್ವದ ಅವರೆಂದರೆ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚು. ಅವರ ತರಗತಿಗಳು ಆಸಕ್ತಿಯಿಂದ ಕೂಡಿರುತ್ತವೆ. ನೀನು ತುಂಬಾ ಲಕ್ಕಿ ಅಂತ ಗೆಳತಿಯರು ಆಗಾಗ್ಗೆ ಹೇಳುತ್ತಿರುತ್ತಾರೆ. ಆದರೆ, ಅಮ್ಮ ತರಗತಿಯಲ್ಲಿ ಬೇರೆ ಮಕ್ಕಳೊಂದಿಗೆ ಇರುವಷ್ಟು ಸ್ವೀಟ್‌ ಆಗಿ ಮನೆಯಲ್ಲಿ ಇರುವುದಿಲ್ಲ! ಮನೆಯಲ್ಲಿ ನನ್ನೊಂದಿಗೆ, ನನ್ನ ತಮ್ಮನೊಂದಿಗೆ ಬಹಳ ಕಠಿಣವಾಗಿರುತ್ತಾರೆ. ನಮಗೆ ಹೆಚ್ಚಿನ ಸ್ವಾತಂತ್ರ್ಯ ನೀಡುವುದಿಲ್ಲ. ತಮ್ಮ ನಿಲುವುಗಳನ್ನು ನಮ್ಮ ಮೇಲೆಯೂ ಹೇರಲು ಪ್ರಯತ್ನಿಸುತ್ತಾರೆ (ಆದರೆ, ನಾನು ಅವರ ಬಲೆಗೆ ಬೀಳುವುದಿಲ್ಲ ಅನ್ನುವುದು ಬೇರೆ ಮಾತು)

ನನಗೆ ಅಮ್ಮನ ಕುರಿತು, ಅವರು ಶಿಕ್ಷಕಿಯಾಗಿರುವ ವಿಷಯದಲ್ಲಿ ಒಂದಷ್ಟು ಆರೋಪಗಳಿವೆ. ಪಠ್ಯದ ವಿಷಯಕ್ಕೆ ಸಂಬಂಧಿಸಿದಂತೆ ನಾನು ಏನೇ ಕೇಳಲಿ, “ಇನ್ಯಾವಾಗ ನೀನು ಸ್ವಂತ ಅಭ್ಯಾಸ (ಸೆಲ್ಫ್ ಸ್ಟಡಿ) ಮಾಡುವುದನ್ನು ಕಲಿಯುತ್ತೀಯ?’ ಅಂತ ಸಿಡುಕುತ್ತಾರೆ. ತಮ್ಮನಿಗೆ ಹೇಳಿಕೊಡುವಾಗಲೂ, “ನೀನೂ ಅಕ್ಕನಂತೆ ಎಲ್ಲದಕ್ಕೂ ನನ್ನನ್ನೇ ಅವಲಂಬಿಸಬೇಡ. ಈಗಿನಿಂದಲೇ ಸೆಲ್ಫ್ ಸ್ಟಡಿ ಮಾಡಿಕೋ’ ಅಂತ ಹೇಳುತ್ತಾರೆ.

ಅದೇ ಬೇರೆ ಮಕ್ಕಳ ವಿಷಯಕ್ಕೆ ಬಂದರೆ, ರಾತ್ರಿಯೆಲ್ಲಾ ನಿದ್ದೆಕೆಟ್ಟು ರಿಸರ್ಚ್‌ ಮಾಡಿ, ಅವರಿಗೆ ಸಹಾಯ ಮಾಡುತ್ತಾರೆ. ನಮಗೆ ಪಾಠ ಹೇಳಿಕೊಡಲು ಇಲ್ಲದೇ ಇರುವ ಸಮಯ, ಬೇರೆ ಮಕ್ಕಳಿಗೆ ಹೇಳಿಕೊಡುವಾಗ ಅಮ್ಮನಿಗೆ ಎಲ್ಲಿಂದ ಬರುತ್ತೆ? ಹಾಗಂತ ಅಪ್ಪ ಪ್ರಶ್ನಿಸಿದರೆ, “ನನಗೆ ನನ್ನ ಮಕ್ಕಳು ಮಾತ್ರ ಉದ್ಧಾರ ಆಗಬೇಕು ಅನ್ನುವ ಸ್ವಾರ್ಥ ಇಲ್ಲ. ಯಾರ್ಯಾರಿಗೆ ಯೋಗ್ಯತೆ ಇದೆಯೋ ಅವರೆಲ್ಲ ಉದ್ಧಾರ ಆಗ್ತಾರೆ. ಅದರಲ್ಲೂ ನಾನು ಶಿಕ್ಷಕಿ ಆಗಿರುವುದು ಕೇವಲ ನಮ್ಮ ಮಕ್ಕಳಿಗೆ ಕಲಿಸಲು ಮಾತ್ರ ಅಲ್ಲ’ ಎಂದು ವಾದಿಸುತ್ತಾರೆ!

ಇಷ್ಟಕ್ಕೂ ಅಮ್ಮನೊಂದಿಗೆ ವಾದ ಮಾಡಿ ಗೆದ್ದವರುಂಟೆ?
ನನ್ನ ಆರೋಪಗಳೇನೇ ಇರಲಿ, ಅಮ್ಮ ಹೇಳಿಕೊಟ್ಟಿದ್ದನ್ನು ನಾನು ಕಲಿತುದಕ್ಕಿಂತ, ಅವರು ಮಾಡುವುದನ್ನು ನೋಡಿ ಕಲಿತಿದ್ದೇ ಹೆಚ್ಚು. ಹೆತ್ತವರು ಮಾಡುವುದನ್ನು ನೋಡಿ ಮಕ್ಕಳು ಕಲಿಯುತ್ತಾರೆ, ಹೇಳುವುದನ್ನು ಕೇಳಿ ಅಲ್ಲ ಎನ್ನುವ ಮಾತಿಗೆ ಪುಷ್ಟಿ ನೀಡುವಂತೆ ನನ್ನ ಎಲ್ಲಾ ಕೆಲಸಗಳಲ್ಲೂ, ಚಟುವಟಿಕೆಗಳಲ್ಲೂ ಅಮ್ಮನ ಛಾಯೆ ಇದೆ. ನನಗೆ ಪಠ್ಯ ಪುಸ್ತಕಗಳನ್ನು ಬಿಟ್ಟು ಬೇರೆ ಎಲ್ಲಾ ಪುಸ್ತಕಗಳನ್ನು ಓದುವ ಗೀಳನ್ನು ಹತ್ತಿಸಿದ್ದು ಅಮ್ಮ. (ಅಮ್ಮನಿಗೂ ಹೀಗೇ ಅಂತೆ) ನಾನು ಸಣ್ಣ ವಯಸ್ಸಿನಲ್ಲಿಯೇ ಬರೆಯಲು ಪ್ರಾರಂಭಿಸಿದೆ. ನನಗೆ ಅನಿಸಿದ್ದನ್ನು ಕನ್ನಡ, ಇಂಗ್ಲಿಷ್‌ನಲ್ಲಿ ಸುಲಲಿತವಾಗಿ ಬರೆಯಲು ಮೂಲ ಪ್ರೇರಣೆಯೇ ಅಮ್ಮ. ಅಮ್ಮನಿಗೆ ಪುಸ್ತಕ ಓದ್ತಾ ಓದ್ತಾ ಮಲಗೋ ಅಭ್ಯಾಸವಿದೆ, ನನಗೂ…

ಎಷ್ಟೋ ಸಲ ಅಂದುಕೊಂಡಿದ್ದೇನೆ, ಅಮ್ಮ ನನ್ನ ಬಾಲ್ಯದಲ್ಲಿ ಒಂದಾಗಿದ್ದಾರ ಅಥವಾ ನಾನು ಅವರ ಬಾಲ್ಯದಲ್ಲಿ ಒಂದಾಗಿದ್ದೇನ ಅಂತ!

ಯಾವುದೇ ಸನ್ನಿವೇಶವಾಗಲಿ ಅಮ್ಮ ಕಣ್ಣಿಗೆ ಕಟ್ಟುವಂತೆ ಅದನ್ನು ವಿವರಿಸುತ್ತಾರೆ. ಅವರ ಬಾಲ್ಯದ ಕತೆಗಳನ್ನು ಅವರ ಬಾಯಿಯಿಂದ ಕೇಳುವುದೇ ಒಂದು ಮಜಾ.
ಗಣಿತವೊಂದನ್ನು ಬಿಟ್ಟು ಬೇರೆ ಎಲ್ಲ ವಿಷಯವನ್ನು ಚೆನ್ನಾಗಿ ಹೇಳಿಕೊಡ್ತಾರೆ. ಅಮ್ಮನ ಶಿಕ್ಷಕ ವೃತ್ತಿಯ ವೈಶಿಷ್ಟ್ಯವೇನೆಂದರೆ, ನರ್ಸರಿಯಿಂದ ಹಿಡಿದು ಸ್ನಾತಕೋತ್ತರ ಪದವಿ ತನಕ ಎಲ್ಲ ಹಂತಗಳಲ್ಲಿಯೂ ಅವರು ಪಾಠ ಮಾಡಿದ್ದಾರೆ. ತರಗತಿಯಲ್ಲಿ ಯಾರೇ ಇರಲಿ, ಯಾವ ವಯಸ್ಸಿನವರೇ ಇರಲಿ; ಅವರನ್ನು ಅರಿತು, ಅವರೊಂದಿಗೆ ಬೆರೆತು ಪಾಠ ಮಾಡುವ ಕಲೆ ಅಮ್ಮನಿಗೆ ಸಿದ್ಧಿಸಿದೆ.

ಶಾಲೆಯಲ್ಲಿ ಟೀಚರ್‌ ಎಷ್ಟೇ ಚೆನ್ನಾಗಿ ಪಾಠ ಮಾಡಿದ್ದರೂ, ಒಂದು ಸಲ ಅಮ್ಮ ವಿವರಿಸಿಬಿಟ್ಟರೆ ನನಗೆ ಸಮಾಧಾನ. ಅದಕ್ಕಾಗಿ ಅಮ್ಮ ಸ್ವಲ್ಪ ಸಮಯ ಮಾಡಿಕೊಳ್ಳಬೇಕು ಅಷ್ಟೇ!

-ಮನೋಜ್ಞ ವಿ. ರೆಡ್ಡಿ

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.