ಹೊಸ ವಿದ್ಯುತ್‌ ಮೀಟರ್‌ ಓಟ: ಗ್ರಾಹಕರಿಗೆ ಸಂಕಷ್ಟ

ವಿದ್ಯುತ್‌ ಬಿಲ್‌ ಏಕಾಏಕಿ ಹೆಚ್ಚಳ; ಗೊಂದಲ ಸೃಷ್ಟಿಸಿದ ಮೆಸ್ಕಾಂ ಲೆಕ್ಕ

Team Udayavani, Sep 4, 2019, 5:05 AM IST

meter

ಉಡುಪಿ: ಕಳೆದೆರಡು ತಿಂಗಳ ವಿದ್ಯುತ್‌ ಬಿಲ್‌ ನೋಡಿ ನೂರಾರು ಮಂದಿ ವಿದ್ಯುತ್‌ ಗ್ರಾಹಕರು ದಂಗಾಗಿದ್ದಾರೆ.

ಈ ಹಿಂದಿನ ಕೆಲವು ತಿಂಗಳುಗಳಲ್ಲಿ ಬರುತ್ತಿದ್ದ ಬಿಲ್‌ ಮೊತ್ತಕ್ಕೆ ಹೋಲಿಸಿದರೆ ಈ ಬಾರಿ ಬಿಲ್‌ ಮೊತ್ತ ಒಂದೇ ಸಮನೆ ಏರಿರುವುದರಿಂದ ಕಂಗಾಲಾಗಿದ್ದಾರೆ. “ಹೊಸದಾಗಿ ಮೀಟರ್‌ ಅಳವಡಿಸಿದ ಅನಂತರ ಯರ್ರಾಬಿರ್ರಿ ಬಿಲ್‌ ಬಂದಿದೆ’ ಎಂಬುದು ಹಲವರ ದೂರು.

ಎಪ್ರಿಲ್‌ ತಿಂಗಳಲ್ಲಿ 600 ರೂ. ಬರುತ್ತಿದ್ದ ವಿದ್ಯುತ್‌ ಬಿಲ್‌ ಜುಲೈನಲ್ಲಿ ಸರಿಯಾಗಿ ದುಪ್ಪಟ್ಟು ಆಗಿದೆ ಎಂದು ಕೆಲವು ಮಂದಿ ಗ್ರಾಹಕರು ದೂರಿದ್ದಾರೆ. ಎರಡು ಪಟ್ಟಿಗಿಂತಲೂ ಅಧಿಕ ಬಿಲ್‌ ಬಂದಿದೆ ಎಂದು ಇನ್ನು ಕೆಲವು ಮಂದಿ ಗರಂ ಆಗಿದ್ದಾರೆ. ಪರಿಣಾವಾಗಿ ಮೆಸ್ಕಾಂನ ವಿವಿಧ ಉಪವಿಭಾಗ, ಶಾಖಾಧಿಕಾರಿ ಕಚೇರಿಗಳಲ್ಲಿ ಅಧಿಕ ಬಿಲ್‌ ಕುರಿತಾದ ದೂರುಗಳು ಒಂದರ ಮೇಲೊಂದರಂತೆ ಬರುತ್ತಲೇ ಇವೆ.

ಹೊಸ ಮೀಟರ್‌ ಅಳವಡಿಕೆ
ಮೆಸ್ಕಾಂ ವ್ಯಾಪ್ತಿಯ ಸುಮಾರು 6.5 ಲಕ್ಷ ಮೀಟರ್‌ಗಳು ಸೇರಿದಂತೆ ರಾಜ್ಯಾದ್ಯಂತ ಹಳೆಯ ಮೀಟರ್‌ಗಳನ್ನು (ಎಲೆಕ್ಟ್ರೋ ಮೆಕ್ಯಾನಿಕಲ್‌) ತೆಗೆದು ಹೊಸತಾಗಿ (ಸ್ಟಾಟಿಕ್‌ ಇಲೆಕ್ಟ್ರಾನಿಕ್‌-ಡಿಜಿಟಲ್‌) ಮೀಟರ್‌ಗಳನ್ನು ಅಳವಡಿಸುವ ಪ್ರಕ್ರಿಯೆ ಕಳೆದ 6 ತಿಂಗಳ ಹಿಂದೆ ಆರಂಭಗೊಂಡು ಉಡುಪಿ, ದ.ಕ ಜಿಲ್ಲೆಗಳಲ್ಲಿ ಬಹುತೇಕ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಮೀಟರ್‌ ಅಳವಡಿಸಿದ ಅನಂತರ ಈ ರೀತಿ ಬಿಲ್‌ ಮೊತ್ತ ಹೆಚ್ಚಾಗಿರುವುದು ಹೌದು. ಆದರೆ ಮೀಟರ್‌ನಲ್ಲಿರುವ ದೋಷ ಇದಕ್ಕೆ ಕಾರಣವಲ್ಲ ಎನ್ನುವುದು ಅಧಿಕಾರಿಗಳ ಸ್ಪಷ್ಟೀಕರಣ.

ನೈಜ ಕಾರಣವೇನು?
ಹೊಸ ಮೀಟರ್‌ಗಳ ಅಳವಡಿಕೆಯಾದ ಮೊದಲ ಎರಡು – ಮೂರು ತಿಂಗಳುಗಳಲ್ಲಿ ಆ ಮೀಟರ್‌ನಲ್ಲಿ ದಾಖಲಾದ ಮಾಹಿತಿ (ದತ್ತಾಂಶ) ನೆಟ್‌ವರ್ಕ್‌ ತೊಂದರೆಯಿಂದಾಗಿ ಇಲಾಖೆಯ ಸಿಸ್ಟಂಗೆ ಅಪ್‌ಡೇಟ್‌ ಆಗಿಲ್ಲ. ಹಾಗಾಗಿ ಈ ಅವಧಿಯಲ್ಲಿ ಗ್ರಾಹಕರಿಗೆ ಅವರೇಜ್‌ (ಉದಾ: ಹಿಂದೆ 500 ರೂ. ಬಿಲ್‌ ಬರುತ್ತಿದ್ದರೆ 200 ರೂ.) ಬಿಲ್‌ ಹಾಕಲಾಗುತ್ತಿತ್ತು. ಅಂದರೆ ವಾಸ್ತವವಾಗಿ 100 ಯುನಿಟ್‌ ಬಳಕೆಯಾಗಿದ್ದರೂ 80 ಯುನಿಟ್‌ನ ಮೊತ್ತವನ್ನು ಮಾತ್ರ ಬಿಲ್‌ನಲ್ಲಿ ತೋರಿಸಲಾಗಿತ್ತು. ಅನಂತರ ಸಿಸ್ಟಂಗೆ ಅಪ್‌ಡೇಟ್‌ ಆದ ಬಳಿಕ ಅಂದರೆ ಜೂನ್‌-ಜುಲೈ ತಿಂಗಳ ಬಿಲ್‌ಗ‌ಳಲ್ಲಿ ಈ ಹಿಂದಿನ ನೈಜ ಮೊತ್ತವನ್ನು ಸೇರಿಸಲಾಗಿದೆ. ಇದರಿಂದ ಮೊತ್ತ ಹೆಚ್ಚಾಗಿದೆ. ಇದರ ಜತೆಗೆ ಕಳೆದ ಎಪ್ರಿಲ್‌ನಲ್ಲಿ ಯುನಿಟ್‌ಗೆ 32 ಪೈಸೆ ವಿದ್ಯುತ್‌ ದರ ಹೆಚ್ಚಳವಾಗಿತ್ತು. ಅದು ಕೂಡ ಜೂನ್‌ ಅಥವಾ ಜುಲೈ ತಿಂಗಳಿನಲ್ಲಿ ಸೇರ್ಪಡೆಯಾಗಿದೆ. ಇದರೊಂದಿಗೆ ಹೊಸ ಮೀಟರ್‌ ಅತ್ಯಂತ ಸೂಕ್ಷ್ಮವಾಗಿ ವಿದ್ಯುತ್‌ ಬಳಕೆಯನ್ನು ಮಾಪನ ಮಾಡುವುದರಿಂದ ಒಂದಷ್ಟು ಹೆಚ್ಚು ಬಿಲ್‌ ಬಂದಿದೆ.

ಪಫೆìಕ್ಟ್ ರೆಕಾರ್ಡಿಂಗ್‌!
“ಹೊಸ ಸ್ಟಾಟಿಕ್‌ ಇಲೆಕ್ಟ್ರಾನಿಕ್‌ ಮೀಟರ್‌ ಅತ್ಯಂತ ನಿಖರವಾಗಿ ವಿದ್ಯುತ್‌ ಬಳಕೆಯ ಪ್ರಮಾಣವನ್ನು ದಾಖಲಿಸುತ್ತದೆ. ಹಿಂದಿನ ಮೀಟರ್‌ಗಳಲ್ಲಿ ಇಷ್ಟು ನಿಖರತೆ ಇರಲಿಲ್ಲ. ಸಣ್ಣ ಇಂಡಿಕೇಟರ್‌ ಲ್ಯಾಂಪ್‌ ಉರಿಯುತ್ತಿದ್ದರೂ, ಸಣ್ಣ ಮಿನಿಚರ್‌ ಇದ್ದರೂ ಅದರ ವಿದ್ಯುತ್‌ ಬಳಕೆ ರೆಕಾರ್ಡ್‌ ಆಗುತ್ತದೆ. ಟಿ.ವಿಯಂಥ ಉಪಕರಣಗಳನ್ನು ಆಫ್ ಮಾಡಿ ಫ್ಲಗ್‌ ಆನ್‌ ಇದ್ದರೆ ಅದರ ವಿದ್ಯುತ್‌ ಕೂಡ ಲೆಕ್ಕಕ್ಕೆ ಸಿಗುತ್ತದೆ. ಮನೆಗಳಿಗೆ ಪಾಯಿಂಟ್‌ 5 ಕ್ಲಾಸ್‌ , ಕೈಗಾರಿಕೆಗಳಿಗೆ ಪಾಯಿಂಟ್‌ 2 ಕ್ಲಾಸ್‌ ಮೀಟರ್‌ ಹಾಕಲಾಗುತ್ತಿದೆ. ಆದರೆ ಹಿಂದಿನ ಬಿಲ್‌ಗಿಂತ ಈಗ ದುಪ್ಪಟ್ಟು ಆಗುವ ಸಾಧ್ಯತೆಗಳು ಕಡಿಮೆ. ಅಂತಹ ನಿರ್ದಿಷ್ಟ ಪ್ರಕರಣಗಳ ಕುರಿತು ಪರಿಶೀಲಿಸುತ್ತೇವೆ’ ಎನ್ನುತ್ತಾರೆ ಮೆಸ್ಕಾಂ ಅಧಿಕಾರಿಗಳು.

ದೂರು ನೀಡಲು ಅವಕಾಶ
ಹೊಸ ಮೀಟರ್‌ಗಳು ಹೆಚ್ಚು ದಕ್ಷತೆಯಿಂದ ಕೆಲಸ ನಿರ್ವಹಿಸುತ್ತಿವೆ. ಇವುಗಳಲ್ಲಿ ದೋಷವಿಲ್ಲ. ಗೊಂದಲಗಳಿದ್ದರೆ ಗ್ರಾಹಕರು ಹತ್ತಿರದ ಮೆಸ್ಕಾಂ ಉಪವಿಭಾಗ ಅಥವಾ ಎಸ್‌ಒ ಕಚೇರಿಗೆ ತೆರಳಿ ದೂರು ನೀಡಬಹುದು.

ಮೀಟರ್‌ ಟೆಸ್ಟಿಂಗ್‌ ವಿಂಗ್‌ ಮೂಲಕ ಮೀಟರ್‌ನ್ನು ಕೂಡ ತಪಾಸಣೆ ಮಾಡಲಾಗುವುದು. ಮೀಟರ್‌ನಲ್ಲಿ ದೋಷ ಪತ್ತೆಯಾಗಿಲ್ಲ. ದೋಷವಿದ್ದರೆ ಮೀಟರ್‌ ಬದಲಿಸಲಾಗುವುದು. ಒಂದು ವೇಳೆ ಬಿಲ್‌ನಲ್ಲಿ ನಿಜವಾಗಿಯೂ ಹೆಚ್ಚು ಮೊತ್ತ ದಾಖಲಾಗಿದ್ದರೆ ಅದನ್ನು ಮುಂದಿನ ತಿಂಗಳಿನ ಬಿಲ್‌ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗುವುದು.

-ನರಸಿಂಹ ಪಂಡಿತ್‌,
ಸೂಪರಿಂಟೆಂಡೆಂಟ್‌ ಎಂಜಿನಿಯರ್‌, ಮೆಸ್ಕಾಂ

– ಸಂತೋಷ್‌ ಬೊಳ್ಳೆಟ್ಟು

ಟಾಪ್ ನ್ಯೂಸ್

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?

8

Mohini Dey: ಎಆರ್ ರೆಹಮಾನ್ ಜತೆ ಸಂಬಂಧ.. ಅವರು ನನಗೆ ತಂದೆ ಸಮಾನ ಎಂದ ಮೋಹಿನಿ

ತಿರುಪತಿ ಮೃಗಾಲಯದಲ್ಲಿ ಬೆಂಗಳೂರಿನಿಂದ ತರಲಾಗಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

By Election… ಕಮಲಕ್ಕೊಂದು ಕೈಗೊಂದು

By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

courts-s

Udupi: ವಿಮಾನಯಾನ ವಿಳಂಬದ ವಿರುದ್ಧ ನ್ಯಾಯಾಲಯದಲ್ಲಿ ಜಯ

Suicide 3

Karkala:ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿ ಕುಗ್ಗಿದ್ದ ಯುವಕ ಆತ್ಮಹ*ತ್ಯೆ

Kambala

Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ

accident

Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?

8

Mohini Dey: ಎಆರ್ ರೆಹಮಾನ್ ಜತೆ ಸಂಬಂಧ.. ಅವರು ನನಗೆ ತಂದೆ ಸಮಾನ ಎಂದ ಮೋಹಿನಿ

ತಿರುಪತಿ ಮೃಗಾಲಯದಲ್ಲಿ ಬೆಂಗಳೂರಿನಿಂದ ತರಲಾಗಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Mohammed Siraj: ಬಿಟೌನ್‌ನ ಈ ಹಾಟ್‌ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್‌ ಡೇಟಿಂಗ್?

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.