ಹೊನ್ನಾವರ: ಮಾಯವಾಗುತ್ತಿದೆ ಚಕ್ಕುಲಿ ಕಂಬ್ಬದ ಸೊಗಸು

ವರ್ಷವಿಡೀ ಸಿಗುತ್ತೆ ಬಣ್ಣ ಬಣ್ಣದ ಚಕ್ಕುಲಿಗಳು

Team Udayavani, Sep 4, 2019, 10:40 AM IST

uk-tdy-1

ಹೊನ್ನಾವರ: ಚೌತಿ ಹಬ್ಬಕ್ಕೆ ಬರುವ ಗಣಪತಿಗೆ ಪಂಚಕಜ್ಜಾಯವೇ ಮುಖ್ಯ. ಆದರೆ ಚೌತಿಗೂ ಚಕ್ಲಿ ಕಂಬಳಕ್ಕೂ ಯಾವ ಊರಿನ ಸಂಬಂಧವೋ ಗೊತ್ತಿಲ್ಲ. ಕೇರಿಯ ಯಾವುದೋ ಮನೆಯಲ್ಲಿ ನಾಲ್ಕಾರು ತಾಸು ಕರಿದ ಎಣ್ಣೆಯ ವಾಸನೆ ಬಂತೆಂದರೆ ಆ ಮನೆಯಲ್ಲಿ ಚಕ್ಲಿ ಕಂಬಳ ನಡೆಯುತ್ತಿದೆ. ಒಂದೊಂದೇ ಮನೆಯಲ್ಲಿ ನಡೆಯುತ್ತ ಬಂದು, ನಿತ್ಯ ಕರಿದೆಣ್ಣೆ ಊರತುಂಬ ಹರಡುವಾಗ ಚೌತಿ ಬಂತು ಎಂದೇ ಲೆಕ್ಕ.

ಅಕ್ಕಿ, ಪುಣಾಣಿ, ಎಳ್ಳು, ಮೊದಲಾದ ಸಾಮಗ್ರಿಗಳನ್ನು ಬೀಸು ಕಲ್ಲಿನಿಂದ ಹಿಟ್ಟು ಮಾಡಿ, ನೀರು ಸೇರಿಸಿ ಮೆದುವಾಗಿ ಕಲಸಿ ಅದನ್ನು ಕಟ್ಟಿಗೆಯ ಉಪಕರಣದಲ್ಲಿಟ್ಟು ಎರಡೂ ಕೈಯಿಂದ ಒತ್ತುತ್ತ ಚಕ್ರ ತಿರುಗಿಸಿದರೆ ಚಕ್ಲಿ ರೆಡಿ. ಎಣ್ಣೆ ಕಾಯಿಸಿ ಅದರಲ್ಲಿ ಹಿಂದೆ ಮುಂದೆ ಮಗುಚಿ ಬೇಯಿಸಿ, ಕಾಗದದ ಮೇಲೆ ಹರಡಿದಾಗ ಚಕ್ಲಿ ತನ್ನನ್ನೇ ತಿನ್ನು ಎನ್ನುತ್ತಿತ್ತು.

ವರ್ಷಕ್ಕೊಮ್ಮೆ ಬರುವ ಚೌತಿಯ ಹೊರತಾಗಿ ಬೇರೆ ದಿನಗಳಲ್ಲಿ ಚಕ್ಲಿ ಮಾಡುತ್ತಿರಲಿಲ್ಲ. ವರ್ಷಕ್ಕೊಮ್ಮೆ ಮಾತ್ರ ಸಿದ್ಧವಾಗುವ ಈ ತಿಂಡಿ ಮಣ್ಣಿನ ಮಡಿಕೆಯಲ್ಲಿ ತುಂಬಿಟ್ಟು, ತಿಂಗಳುಗಟ್ಟಲೆ ಹಂಚುವುದು, ತಿನ್ನುವುದು ವಾಡಿಕೆಯಾಗಿತ್ತು.

ಗಂಡಸರಿಗೆ ಹಿಟ್ಟು ಮಾಡಿ ಕೊಡುವುದು, ಚಕ್ಲಿ ಸುತ್ತಿಕೊಡುವುದು ಕೆಲಸವಾದರೆ ಹದವಾಗಿ ಸುಡುವುದು ಗೃಹಿಣಿಯರ ಕೆಲಸ. ಡಬ್ಬ ತುಂಬುವುದು, ಮಧ್ಯೆ ಮಧ್ಯೆ ಬಾಯಿಗೆ ಸೇರಿಸುವುದು ಮಕ್ಕಳ ಕೆಲಸವಾಗಿತ್ತು. ನಾಲ್ಕಾರು ಮನೆಯವರು ಸೇರಿದಾಗ ಚಕ್ಲಿ ಕಂಬಳದ ಜೊತೆ ಮಾತುಕತೆ ನಡೆದು, ಕಹಿ ಮರೆತು ಹೋಗುತ್ತಿತ್ತು. ಅವಿಭಕ್ತ ಕುಟುಂಬದಲ್ಲಿ 10-25 ಜನ ಇರುತ್ತಿದ್ದ ಕಾಲದಲ್ಲಿ ಮನೆಯವರೇ ಚಕ್ಲಿ ಮಾಡುತ್ತಿದ್ದರು. ಸಂಖ್ಯೆ ಕಡಿಮೆಯಾದಂತೆ ನಾಲ್ಕಾರು ಮನೆಯವರು ಒಟ್ಟಾಗಿ, ದಿನಕ್ಕೊಂದು ಮನೆಯ ಚಕ್ಲಿ ಕಂಬಳ ಮುಗಿಸುತ್ತಿದ್ದರು. ಈಗ ಕುಟುಂಬದಲ್ಲಿ ಇಬ್ಬರೋ, ಮೂವರೋ ಇರುವ ಕಾಲ. ಆಗಿನಂತೆ ಚಕ್ಲಿಗೆ ಈಗ ಕಾಯಬೇಕಾಗಿಲ್ಲ. ವರ್ಷವಿಡೀ ಚಕ್ಲಿ ಮಾರಾಟಕ್ಕೆ ಸಿಗುತ್ತದೆ. ಅದರಲ್ಲೂ ಟೊಮೆಟೋ, ಪಾಲಕ್‌, ಮೊದಲಾದ ಸೊಪ್ಪಿನ ಚಕ್ಲಿಗಳೂ ಸಿಗುತ್ತವೆ. ಗ್ರಾಮೀಣ ಭಾಗದಲ್ಲಿ ಅಡುಗೆ ಮಾಡುವವರು ಚೌತಿ ಚಕ್ಲಿಯನ್ನು ಸಿದ್ಧಪಡಿಸಿ, ಮಾರಾಟ ಮಾಡುತ್ತಾರೆ. ಅದನ್ನೇ ತಂದುಕೊಂಡರಾಯಿತು ಅನ್ನುವ ಪರಿಸ್ಥಿತಿ ಬಂದಿದೆ. ಜೊತೆಯಲ್ಲಿ ಹಿರಿಯರು ಮಾಡಿದ ಸಂಪ್ರದಾಯಗಳೆಲ್ಲಾ ವಿವಿಧ ಕಾರಣಗಳಿಂದ ಜನ ಮರೆಯುತ್ತಿದ್ದಾರೆ.

ಈ ಪರಿಸ್ಥಿತಿಯಲ್ಲಿ ಹಳೆಹೊಸದರ ಸಂಗಮದಂತಿರುವ ಶಿರಸಿ ಟಿಎಸ್‌ಎಸ್‌ ಚಕ್ಲಿ ಕಂಬಳವನ್ನು ತನ್ನ ಅಂಗಳಕ್ಕೆ ತಂದಿದೆ. ಯಾವ ಉಪಕರಣವಿಲ್ಲದೇ ಕೈಯಿಂದಲೇ ಚಕ್ಲಿ ಸುತ್ತುವುದು ಶಿರಸಿಯವರಿಗೆ ಸಿದ್ಧಿಸಿದ ಕಲೆ. ಈ ಸಂಪ್ರದಾಯ ಉಳಿಸಿಕೊಳ್ಳಲು ಚಕ್ಲಿ ಕಂಬಳ ಮಾಡಿದರು. ನೂರಾರು ಉತ್ಸಾಹಿಗಳು ಪಾಲ್ಗೊಂಡರು, ಸಾವಿರಾರು ಜನ ನೋಡಿದರು, ಖರೀದಿಸಿದರು. ಮರೆಯಾಗುತ್ತಿದ್ದ ಒಂದು ಸಂಪ್ರದಾಯಕ್ಕೆ ಹೊಸ ರೂಪಕೊಟ್ಟು ಉಳಿಸಿಕೊಳ್ಳುವ ಟಿಎಸ್‌ಎಸ್‌ ಯತ್ನ ಚೌತಿ ಹಬ್ಬದ ಪ್ರಮುಖ ಖುಷಿಯೊಂದನ್ನು ಉಳಿಸಿಕೊಳ್ಳುವ ಪ್ರಯತ್ನವೂ ಹೌದು. ಇಂತಹದು ಎಲ್ಲೆಡೆ ನಡೆಯಲಿ.

•ಜೀಯು, ಹೊನ್ನಾವರ

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!

Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!

ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ

ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ

1-wwewqe

Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ

5

Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು

Murdeshwar: ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲು; 1 ಶವ ಪತ್ತೆ

Murdeshwar: ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲು; 1 ಶವ ಪತ್ತೆ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.