ಕಲಿತ ಪಾಠಗಳು ಯಾವತ್ತೂ ವೇಸ್ಟ್ ಆಗೊಲ್ಲ!
Team Udayavani, Sep 4, 2019, 6:09 PM IST
ಕಬಡ್ಡಿ ಆಟದಲ್ಲಿ ಗುರು ಶಿಷ್ಯ ಪರಂಪರೆಗೆ ಉನ್ನತ ಸ್ಥಾನವಿದೆ. ಮಿಕ್ಕ ಕ್ರೀಡೆಗಳಲ್ಲಿಲ್ಲ ಅಂತ ಹೇಳುತ್ತಿಲ್ಲ. ಆದರೆ ಗುರುವಿನ ಎದುರೇ ಎದುರಾಳಿಗಳೊಡನೆ ಕಾದಾಡುವ ಶಿಷ್ಯ, ಆತನ ತಪ್ಪುಗಳನ್ನು ಅಂಕಣ ದಲ್ಲೇ ತಿದ್ದಿ ಮುಂದಿನ ರೈಡ್‌ಗೆ ತಯಾರು ಮಾಡುವ ಗುರು…
ಇವೆಲ್ಲಾ ಕಬಡ್ಡಿಯ ರೋಚಕ ರಸನಿಮಿಷಗಳು. ಇಲ್ಲಿಯವರೆಗೆ ಹಲವಾರು ಆಟಗಾರರನ್ನು ತರಬೇತುಗೊಳಿಸಿದ್ದೇನೆ. ಶಿಷ್ಯ ತನ್ನನ್ನು ಮೀರಿಸುವಂತೆ ಬೆಳೆಯಬೇಕು ಎನ್ನುವ ಆಸೆ ಪ್ರತಿಯೊಬ್ಬ ಗುರು ವಿನದ್ದು. ಹಾಗಾಗಿ ಶಿಷ್ಯಂದಿರಿಬ್ಬರು ಅಖಾಡದಲ್ಲಿ ಸಾಧನೆಗೈಯುತ್ತಿರುವುದನ್ನು ನೋಡಿದ್ದೇ ಗುರುವಾಗಿ ನಾನು ಅನುಭವಿಸಿದ ಸಾರ್ಥಕ ಕ್ಷಣಗಳು! ಜೀವ ಕುಮಾರ್ ಮತ್ತು ರಾಜಗುರು, ಇವರೇ ಆ ಇಬ್ಬರು ಆಟಗಾರರು.
ರಾಜಗುರುವಿಗೆ ನನ್ನ ಟ್ರೇನಿಂಗ್ ಮೇಲೆ ಸ್ವಲ್ಪ ಅನುಮಾನವಿತ್ತು. ಹಳೇ ಕಾಲದವರು, ಈಗಿನ
ಕಾಲಕ್ಕೆ ನಾನು ಕಲಿತ ತಂತ್ರ-ಪಟ್ಟುಗಳು ಹೊಂದು ವುದಿಲ್ಲ ಅಂತ. ಕಡೆಗೊಂದು ದಿನ ಅವನು ಕಬಡ್ಡಿ ಮೇಲೆ ಆಸಕ್ತಿಯನ್ನೇ ಕಳೆದುಕೊಂಡು ತನ್ನೂರು ತಂಜಾವೂರಿಗೆ ಹೋಗಿಬಿಟ್ಟ. ನಾನು ಅವನನ್ನು ಓಲೈಸಿ ಮತ್ತೆ ಕರೆದುಕೊಂಡುಬಂದೆ. ಟ್ರೇನಿಂಗ್ ಮುಂದುವರಿಸಿದೆ. ಅವನು ಏಷ್ಯನ್ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಷ್ಟೇ ಅಲ್ಲದೆ ಚಿನ್ನವನ್ನೂ ತಂದ! ನನ್ನ ಪ್ರಕಾರ ಯಾವುದೇ ಕ್ರೀಡೆಯಲ್ಲಿ ಆಧುನಿಕತೆ, ತಂತ್ರಜ್ಞಾನದ ಬಳಕೆ ಎಷ್ಟೇ ಸಹಕರಿಸಬಹುದು, ಕೆಲಸ ಸುಲಭವಾಗಿಸಬಹುದು. ಆದರೆ ಆಟದ ಮೂಲ ಬೇರು ಅಡಗಿರುವುದು ಪ್ರದಾಯಿಕತೆಯಲ್ಲಿಯೇ.
ಹಳೆಯದರ ಜೊತೆ ಹೊಸತನ್ನೂ ಮೈಗೂಡಿಸಿಕೊಂಡರೆ ಯಶಸ್ಸು ಕಟ್ಟಿಟ್ಟ ಬುತ್ತಿ.
ಜೀವ ಕುಮಾರ್ ಮುಂಚೆ ರೈಲ್ವೇಸ್ ತಂಡದಲ್ಲಿ ಆಡುತ್ತಿದ್ದ. ನಾನು ಅವನನ್ನು ನಮ್ಮ ಎಸ್‌ಬಿಎಂ ತಂಡಕ್ಕೆ ಕರೆದುಕೊಂಡು ಬಂದೆ. ಬೆಂಗಳೂರಿನ ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಪ್ರತಿದಿನ ಸಂಜೆ ಕೆಲಸ ಮುಗಿಸಿ ಅವರಿಗೆ ಅಲ್ಲಿ ತರಬೇತಿ ನೀಡುತ್ತಿದ್ದೆ. ಆಮೇಲೆ ಕಚೇರಿಯಲ್ಲಿ ಕೆಲ ಸಮಸ್ಯೆಗಳು ತಲೆದೋರಿ ಜೀವನಿಗೆ ಆಡಲು ಅವಕಾಶವೇ ಇಲ್ಲದಂತಾಗಿತ್ತು. ಅವನು ನನ್ನ ಮೇಲೆ ತುಂಬಾ ಬೇಜಾರು ಮಾಡ್ಕೊಂಡ. “ನಿಮ್ಮ ಮಾತು ಕೇಳಿ ಬಂದೆ. ಇಲ್ಲಿ ಗೇಮ್ ಆಡೋಕೆ ಅವಕಾಶ ಇಲ್ದೆ ಹೋಯ್ತು’ ಅಂತ. ನನಗೂ ಬೇಜಾರಾಯ್ತು. “ತರಬೇತಿ, ಕಲಿತ ಪಾಠಗಳು ಯಾವತ್ತೂ ವೇಸ್ಟ್ ಆಗೊಲ್ಲ. ಪ್ರಾಕ್ಟೀಸ್ ಮಾಡುತ್ತಿರು’ ಅಂತ ಸಮಾಧಾನಿಸಿದೆ.
ಅದೇ ವರ್ಷ ಅವನು ಏಷ್ಯನ್ ಗೇಮ್ಸ್ ಆಡಿದ. ಭಾರತಕ್ಕೆ ಗೋಲ್ಡ್ ಮೆಡಲ್ ಅನ್ನೂ ತಂದ. ಅವನನ್ನು ರಿಸೀವ್ ಮಾಡೋಕೆ ನಾನು ಏರ್ ಪೋರ್ಟಿಗೇ ಹೋಗಿದ್ದೆ. ಕಂಡ ತಕ್ಷಣವೇ ಅವನನ್ನು ಹೆಮ್ಮೆಯಿಂದ ಆಲಂಗಿಸಿದೆ. ಇಬ್ಬರೂ, ವಿದೇಶಿ ಆಟಗಾರರ ಟ್ಯಾಕ್ಟಿಕ್ಸ್, ತಂತ್ರ- ಪ್ರತಿತಂತ್ರಗಳ ಕುರಿತು ತುಂಬಾ ಹೊತ್ತು ಮಾತಾಡಿದೆವು. ಸಾರ್ಥಕತೆ ಅಂದರೆ ಇದೇ ಅಲ್ಲವೇ?
ಬಿ.ಸಿ.ರಮೇಶ್
ಭಾರತ ಕಬಡ್ಡಿ ತಂಡದ ಮಾಜಿ ಕಪ್ತಾನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ
Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು
Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ
Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು
Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.