ಮತದಾರರ ಪಟ್ಟಿ ಪರಿಶೀಲನಾ ಕಾರ್ಯಕ್ಕೆ ಚಾಲನೆ
Team Udayavani, Sep 4, 2019, 11:55 AM IST
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮತದಾರರ ಪಟ್ಟಿ ಪರಿಶೀಲನಾ ಕಾರ್ಯಕ್ರಮಕ್ಕೆ ಮಂಗಳವಾರ ಮೇಯರ್ ಪುಷ್ಪಲತಾ ಜಗನ್ನಾಥ್ ಹಾಗೂ ಗಾಯಕ ಶ್ರೀ ಹರ್ಷ ಅವರು ಚಾಲನೆ ನೀಡಿದರು.
ಮೈಸೂರು: ಭಾರತ ಚುನಾವಣಾ ಆಯೋಗವು ಸೆ.1ರಿಂದ ಅ.15 ರವರೆಗೆ ಹಮ್ಮಿಕೊಂಡಿರುವ ಮತದಾರರ ಪಟ್ಟಿ ಪರಿಶೀಲನಾ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮೇಯರ್ ಪುಷ್ಪಲತಾ ಜಗನ್ನಾಥ್ ಹಾಗೂ ಗಾಯಕ ಶ್ರೀ ಹರ್ಷ ಚಾಲನೆ ನೀಡಿದರು.
ಮತದಾರರ ಪಟ್ಟಿಯಲ್ಲಿ ಯಾವುದೇ ಲೋಪ ದೋಷಗಳಿದ್ದರೂ ಅಥವಾ ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿದ್ದರೆ ಅ.15ರವರೆಗೆ ಹತ್ತಿರದ ಸೇವಾ ಕೇಂದ್ರಗಳಲ್ಲಿ ಸರಿಪಡಿಸಿಕೊಳ್ಳಲು ಇದೊಂದು ಅವಕಾಶ ಇದೆ. ಎಲ್ಲರೂ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ತಿಳಿಸಿದರು.
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ ಹಾಗೂ ಬಿಎಲ್ಒಗಳು ಮನೆ-ಮನೆಗಳಿಗೆ ಭೇಟಿ ನೀಡಲಿದ್ದಾರೆ.ಆ ಸಂದರ್ಭದಲ್ಲಿ ಮೊಬೈಲ್ಆ್ಯಪ್ ಮೂಲಕ ಅಲ್ಲೇ ಸಮಸ್ಯೆ ಬಗೆಹರಿಸಿಕೊಳ್ಳಬಹುದು. ಮೊಬೈಲ್ ಆ್ಯಪ್‌ಕೂಡ ಶೀಘ್ರವಾಗಿ ಬರಲಿದೆ ಎಂದು ಹೇಳಿದರು.
ಗಾಯಕ ಶ್ರೀಹರ್ಷ ಮಾತನಾಡಿ, ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು, ಬೇರೆ ಕಡೆ ವಾಸವಿದ್ದರೆ ಅಲ್ಲಿ ಮತದಾರರ ಚೀಟಿ ಪಡೆಯಲು ಪ್ರತಿಯೊಂದಕ್ಕೂ ಇದೊಂದು ಸುವರ್ಣಾಕಾಶವಾಗಿದೆ.ಅಲ್ಲದೇ ಬಿಎಲ್ಒಗಳು ಮನೆಗಳಿಗೆ ಭೇಟಿ ನೀಡಲಿದ್ದಾರೆ ಅಲ್ಲೂ ಕೂಡ ಸಮಸ್ಯೆ ಪರಿಹರಿಸಿಕೊಳ್ಳಬಹುದು ಹಾಗಾಗಿ ಎಲ್ಲರೂ ಇದರ ಉಪಯೋಗ ಪಡೆದುಕೊಳ್ಳಿ ಎಂದು ತಿಳಿಸಿದರು.
ಉಪ ಮೇಯರ್ ಶಫಿಅಹಮದ್, ಜಿಪಂ ಸಿಇಒ ಕೆ. ಜ್ಯೋತಿ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್. ಪೂರ್ಣಿಮಾ, ಜಿಪಂ ಮುಖ್ಯಯೋಜನಾಧಿಕಾರಿ ಪದ್ಮಶೇಖರ್ ಪಾಂಡೆ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಮತದಾರರ ಪಟ್ಟಿ ಪರಿಷ್ಕರಣೆ ಮಾಡಿಸುವುದು ಹೇಗೆ?: 2020ರ ಜನವರಿ 1ರೊಳಗೆ 18 ವರ್ಷ ಪೂರ್ಣಗೊಂಡಿರುವ ಎಲ್ಲಾ ಪ್ರಜೆಗಳು ಮತದಾರರ ಪಟ್ಟಿಗೆ ಸೇರ್ಪಡೆ ಹೊಂದಲು ಅರ್ಹರಾಗಿರುತ್ತಾರೆ.
ಮತದಾರರ ಪಟ್ಟಿ ಪರಿಶೀಲನಾ ಕಾರ್ಯಕ್ರಮ ಸೆ.1ರಿಂದ ಅ.15ರವರೆಗೆ ನಡೆಯಲಿದ್ದು, ಬಿಎಲ್ಒ ಗಳಿಂದ ಮನೆ ಮನೆ
ಭೇಟಿ ಮಾಡಿ ಪರಿಶೀಲನೆ ಕಾರ್ಯಕ್ರಮ 1-9-2019 ರಿಂದ 30-9-2019ರ ವರೆಗೆ ನಡೆಯಲಿದೆ.
ಕರಡು ಮತದಾರರ ಪಟ್ಟಿಯನ್ನು ದಿನಾಂಕ 15-10-2019ರಂದು ಪ್ರಕಟಿಸಲಾಗುವುದು. ವಿಶೇಷ ಆಂದೋಲನ ದಿನಾಂಕ 2-11-2019 ಮತ್ತು 3-11-2019 ಹಾಗೂ 9-11-2019 ಮತ್ತು 10-11-2019 ರಂದು ನಡೆಯಲಿದೆ. ಹಕ್ಕು ಮತ್ತು ಆಕಗಳನ್ನು ದಿನಾಂಕ 15.10.2019 ರಿಂದ 30-11-2019 ವರೆಗೆ, ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ 15-12-2019 ಒಳಗಾಗಿ, ಮೂಲ ಮತದಾರರ ಪಟ್ಟಿಯ ಪ್ರಕಟಣೆ 1-1-2020 ದಿಂದ 15-01-2020 ರವರೆಗೆ ನಡೆಯಲಿದೆ.
ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲು ನಮೂನೆ-6, ಮತದಾರರ ಪಟ್ಟಿಯಿಂದ ಕೈಬಿಡಲು ನಮೂನೆ-7, ಗುರುತಿನ ಚೀಟಿಯಲ್ಲಿರುವ ವಿವರಗಳನ್ನು ತಿದ್ದುಪಡಿ ಮಾಡಲು ನಮೂನೆ-8, ಒಂದೇ ವಿಧಾನಸಭಾ ಕ್ಷೇತ್ರದಲ್ಲಿ ಒಂದು ನಿವಾಸ ಸ್ಥಳದಿಂದ ಮತ್ತೂಂದು ನಿವಾಸ ಸ್ಥಳಕ್ಕೆ ಸ್ಥಳಾಂತರಗೊಂಡರೆ ವಿಳಾಸ ಬದಲಾವಣೆ ಮಾಡಲು, ನಮೂನೆ-8ಎ ಅರ್ಜಿ ಪಡೆದು ಸಲ್ಲಿಸಬೇಕು ಹಾಗೂ ಸಾರ್ವಜನಿಕರು ಮುಖಾಂತರಅರ್ಜಿ ಸಲ್ಲಿಸಬಹುದು.
ಯಾವುದಾದರೂ ವ್ಯತ್ಯಾಸಗಳು ಕಂಡುಬಂದಲ್ಲಿ ವಿವರಗಳನ್ನು ತಿದ್ದುಪಡಿ ಮಾಡಲು ನಮೂನೆ-8ರಲ್ಲಿ ಅರ್ಜಿ ದಾಖಲಿಸಬಹುದು.
ಮೈಸೂರು ಜಿಲ್ಲೆಯಲ್ಲಿ ವಿಧಾನಸಭಾ ಕ್ಷೇತ್ರವಾರು ಕಂಟ್ರೋಲ್ ರೂಂ, ಚುನಾವಣಾ ಶಾಖೆ ಹಾಗೂ ಮತದಾರರ ನೋಂದಣಾಧಿಕಾರಿ / ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಚೇರಿಯ ದೂರವಾಣಿ ಸಂಖ್ಯೆಗಳು ಇಂತಿವೆ.
ಪಿರಿಯಾಪಟ್ಟಣ, ತಾಲೂಕು ಕಚೇರಿ: ದೂ. 08223-274175, ಕೆ.ಆರ್. ನಗರ ತಾಲೂಕು ಕಚೇರಿ: 08223 – 262371, 08223 – 262234, ಹುಣಸೂರು ತಾಲೂಕು ಕಚೇರಿ: 08222 – 252040, ಎಚ್.ಡಿ.ಕೋಟೆ ತಾಲೂಕು ಕಚೇರಿ: 08228 – 255325, ನಂಜನಗೂಡು ತಾಲೂಕು ಕಚೇರಿ: 08221 – 223108, ಮೈಸೂರು ತಾಲೂಕು ಕಚೇರಿ: 0821 – 2414811, 0821 – 2414812, ಮೈಸೂರು ಮಹಾ ನಗರ ಪಾಲಿಕೆ, ಮೈಸೂರು: 0821 – 2418800, ನಂಜನಗೂಡು ತಾಲೂಕು ಕಚೇರಿ: 08221 – 223108, ತಿ.ನರಸೀಪುರ ತಾಲೂಕು ಕಚೇರಿ: 08227 – 260210 ಸಾರ್ವಜನಿಕರು ಇಲ್ಲಿಗೆ ಕರೆ ಮಾಡಿ ಯಾವುದಾದರೂ ಸ್ಪಷ್ಟೀಕರಣ, ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಅಭಿರಾಮ್.ಜಿ.ಶಂಕರ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.