ಹಬ್ಬಗಳು ಬಾಂಧವ್ಯ ಬೆಸೆಯುವ ಸೇತುವೆ
•ಐದು ಗ್ರಾಮಗಳ ಜನರ ಮನೆಗಳಿಗೆ ಹಬ್ಬದ ಸಿಹಿ ತಲುಪಿಸಿದ ಎಂ.ಪಿ. ಲತಾ ಮಲ್ಲಿಕಾರ್ಜುನ
Team Udayavani, Sep 4, 2019, 4:10 PM IST
•ಐದು ಗ್ರಾಮಗಳ ಜನರ ಮನೆಗಳಿಗೆ ಹಬ್ಬದ ಸಿಹಿ ತಲುಪಿಸಿದ ಎಂ.ಪಿ. ಲತಾ ಮಲ್ಲಿಕಾರ್ಜುನ
ಹರಪನಹಳ್ಳಿ: ಎಂ.ಪಿ.ರವೀಂದ್ರ ಪ್ರತಿಷ್ಠಾನ, ರವಿ ಯುವ ಶಕ್ತಿ ಪಡೆ ಹಾಗೂ ಎಂ.ಪಿ.ಪ್ರಕಾಶ್ ಮತ್ತು ಎಂ.ಪಿ.ರವೀಂದ್ರ ಅಭಿಮಾನಿ ಬಳಗದ ಸಹಯೋಗದಲ್ಲಿ ಗೌರಿ-ಗಣೇಶ ಹಬ್ಬದ ಅಂಗವಾಗಿ ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ ಅವರು ತಾಲೂಕಿನ 5 ಗ್ರಾಮದ ಹಳ್ಳಿಯ ಜನರ ಮನೆ ಮನೆಗೆ ತೆರಳಿ ಸಿಹಿ ವಿತರಿಸಿದರು.
ತಾಲೂಕಿನ ಕಡಬಗೆರೆ, ಹಿಕ್ಕಿಂಗೇರೆ, ಜೋಷಿ ಲಿಂಗಾಪುರ, ಕಸವನಹಳ್ಳಿ, ಪಾವನಪುರ ಗ್ರಾಮಗಳ ಒಟ್ಟು 1500ಕ್ಕೂ ಹೆಚ್ಚು ಮನೆಗಳಿಗೆ ತೆರಳಿ ಗೌರಿ-ಹಬ್ಬದ ಅಂಗವಾಗಿ ಕಡೂಬು ಮತ್ತು ಬಟ್ಟಲು ಉಡುಗೊರೆಯಾಗಿ ನೀಡಲಾಗಿದೆ.
ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ ಮಾತನಾಡಿ, ಹಬ್ಬಗಳು ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗಿರದೇ ಸಾಮರಸ್ಯ ಮತ್ತು ಸೌಹಾರ್ದತೆಯನ್ನು ಉಂಟು ಮಾಡಲು ಶಕ್ತವಾಗುತ್ತದೆ. ವ್ಯಕ್ತಿ ಕೇವಲ ಬಾಹ್ಯ ಬದಲಾವಣೆಯಿಂದ ಅಭಿವೃದ್ಧಿ ಸಾಧಿಸಿದರೆ ಸಾಲದು ಪರಸ್ಪರ ಗೌರವಿಸುವ, ಪ್ರೀತಿಸುವ, ಆದರಿಸುವ, ಸತ್ಕರಿಸುವ ಮನೋಭಾವ ರೂಢಿಸಿಕೊಳ್ಳುವುದು ಅಗತ್ಯ. ಇದು ಸಾಧ್ಯವಾಗಬೇಕಿದ್ದಲ್ಲಿ ಇಂಥ ಹಬ್ಬಗಳಿಂದ ಮಾತ್ರ ಸಾಧ್ಯ ಎಂದರು.
ತಾಪಂ ಮಾಜಿ ಅಧ್ಯಕ್ಷೆ ಭಾಗ್ಯಮ್ಮ ಮಲ್ಲಿಕಾರ್ಜುನ್, ಬಸವರಾಜ್, ಕವಿತಾ ಸುರೇಶ್, ಶಮೀವುಲ್ಲಾ, ನೇತ್ರಾವತಿ, ಉದಯಶಂಕರ್, ಮತ್ತೂರು ಬಸವರಾಜ್, ಹಿಕ್ಕಿಂಕೇರಿ ಕೆಂಚಪ್ಪ, ಪಾವನಪುರ ತಿಮ್ಮಣ್ಣ, ಜೋಶಿಲಿಂಗಾಪುರ ಲಕ್ಷ್ಮಣ, ಏಕಾಂತಪ್ಪ, ಬುಳ್ಳಪ್ಪ ಇತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ
Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು
ನಿರ್ಲಕ್ಷ್ಯಕ್ಕೊಳಗಾದ ರಾಣಿ ಬೆನ್ನೂರ ಕೆರೆ-ಸ್ಥಳೀಯರ ಆಕ್ರೋಶ
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್ ಯಡಿಯೂರಪ್ಪ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.