ಟೆನ್ ಟೆನ್ ಟೆನ್
ಹತ್ತು ಪಾಯಿಂಟ್‌ಗಳಲ್ಲಿ ವ್ಯಕ್ತಿ ಪರಿಚಯ!
Team Udayavani, Sep 5, 2019, 5:35 AM IST
ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು…
1. ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಹುಟ್ಟಿದ ದಿನವನ್ನು ಶಿಕ್ಷಕರ ದಿನವೆಂದು ಆಚರಿಸಲಾಗುತ್ತದೆ.
2. ಅವರು ಭಾರತದ ಮೊದಲ ಉಪರಾಷ್ಟ್ರಪತಿ ಹಾಗೂ ಎರಡನೆಯ ರಾಷ್ಟ್ರಪತಿಯಾಗಿದ್ದವರು.
3. ರಾಷ್ಟ್ರಪತಿಯಾದ ಅವಧಿಯಲ್ಲಿ ರಾಧಾಕೃಷ್ಣನ್‌ರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಜನ ಮುಂದಾದಾಗ, “ನನ್ನ ಹುಟ್ಟುಹಬ್ಬವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಿದರೆ ನನಗೆ ಹೆಚ್ಚು ಸಂತೋಷ’ ಎಂದರು.
4. ರಾಧಾಕೃಷ್ಣನ್ ಹುಟ್ಟಿದ್ದು ತಮಿಳುನಾಡಿನ ತಿರುತ್ತಣಿ ಎಂಬಲ್ಲಿ.
5. ತಂದೆಗೆ ಮಗ ಇಂಗ್ಲಿಷ್ ಕಲಿಯುವುದರ ಬದಲು, ಅರ್ಚಕ/ ಪುರೋಹಿತನಾಗಲಿ ಎಂಬ ಆಸೆಯಿತ್ತಂತೆ. ಆದರೆ, ಓದಿನಲ್ಲಿ ಜಾಣನಾಗಿದ್ದ ರಾಧಾಕೃಷ್ಣನ್ ವಿದ್ಯಾಭ್ಯಾಸ ಮುಂದುವರಿಸಿದರು.
6. 1931ರಲ್ಲಿ ಇಂಗ್ಲೆಂಡಿನ ಪ್ರತಿಷ್ಟಿತ “ನೈಟ್’ ಪದವಿ ಸಿಕ್ಕಾಗ ಅವರು ತಮ್ಮ ಹೆಸರಿನ ಜೊತೆ “ಸರ್’ ಎಂದು ಸೇರಿಸಿಕೊಳ್ಳಲು ನಿರಾಕರಿಸಿದರು.
7. ಅಧ್ಯಾಪಕರಾಗಿ ಅವರು ಮಕ್ಕಳಿಗೆ ಎಷ್ಟು ಪ್ರಿಯರಾಗಿದ್ದರೆಂದರೆ, ರಾಧಾಕೃಷ್ಣನ್‌ರವರು ಮೈಸೂರು ವಿಶ್ವವಿದ್ಯಾಲಯವನ್ನು ತೊರೆದು ಅಂದಿನ ಕಲ್ಕತ್ತಾಗೆ ಹೊರಟಾಗ ಪುಷ್ಪಾಲಂಕೃತ ಸಾರೋಟನ್ನು ವಿದ್ಯಾರ್ಥಿಗಳೇ ಎಳೆದು ಬೀಳ್ಕೊಟ್ಟಿದ್ದರು!
8. ಅಮೆರಿಕದ ಶಿಕ್ಷಣತಜ್ಞ ಪಾಲ್ ಆರ್ಥರ್, ರಾಧಾಕೃಷ್ಣನ್‌ರನ್ನು ಪೂರ್ವ ಮತ್ತು ಪಶ್ಚಿಮ ದೇಶಗಳ ನಡುವಿನ ಜೀವಂತ ಸೇತುವೆ ಎಂದು ಕರೆದಿದ್ದರು. ಯಾಕೆಂದರೆ, ಅವರು ಭಾರತೀಯ ಚಿಂತನೆಗಳ ಶ್ರೇಷ್ಠತೆಯನ್ನು ಪಾಶ್ಚಿಮಾತ್ಯರಿಗೆ ಸಾರಿದವರು.
9. ರಾಜ್ಯಸಭೆಯ ಕಲಾಪಗಳಲ್ಲಿ ಅವರು ಸಂಸ್ಕೃತದ ಶ್ಲೋಕಗಳನ್ನು, ಬೈಬಲ್‌ನ ಸಾಲುಗಳನ್ನು ಹೇಳಿ, ಎಂಥದ್ದೇ ವಿಷಮ ಪರಿಸ್ಥಿತಿಯನ್ನೂ ನಿಭಾಯಿಸಬಲ್ಲವರಾಗಿದ್ದರು.
10. 1975ರಲ್ಲಿ ಅವರಿಗೆ ಸಿಕ್ಕಿದ ಟೆಂಪಲ್ಟನ್ ಪ್ರಶಸ್ತಿಯ ಸಂಪೂರ್ಣ ಮೊತ್ತವನ್ನು ಅವರು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಕ್ಕೆ ದೇಣಿಗೆಯಾಗಿ ಕೊಟ್ಟುಬಿಟ್ಟರು. ಈಗಲೂ ರಾಧಾಕೃಷ್ಣನ್ ಸ್ಮರಣಾರ್ಥ ಆಕ್ಸ್‌ಫರ್ಡ್ ವಿ.ವಿ.ಯಲ್ಲಿ ವಿದ್ಯಾರ್ಥಿವೇತನ ನೀಡಲಾಗುತ್ತದೆ.
ಸಂಗ್ರಹ: ಪ್ರಿಯಾಂಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Congress: ದ.ಕ ಗ್ರಾಮ ಪಂಚಾಯತ್; 24ರಲ್ಲಿ 19 ಸ್ಥಾನ ಕಾಂಗ್ರೆಸ್ ಬೆಂಬಲಿತರಿಗೆ ಗೆಲುವು
Siddapura: ಬುಲೆಟ್ ಬೈಕಿಗೆ ಜೆಸಿಬಿ ಡಿಕ್ಕಿ; ಸವಾರರಿಗೆ ಗಾಯ
Moodabidri: ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಪಿ.ನೇಮಿರಾಜ ಹೆಗ್ಡೆ ನಿಧನ
Amparu: ಬೈಕ್ ಸ್ಕಿಡ್; ಸವಾರ ಚಿಕಿತ್ಸೆಗೆ ಸ್ಪಂದಿಸದೆ ಸಾವು
KAUP: ಧರ್ಮಗ್ರಂಥಗಳಷ್ಟೇ ಸಂವಿಧಾನವೂ ಪವಿತ್ರ: ನಿಕೇತ್ ರಾಜ್ ಮೌರ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.