ಕಾಶ್ಮೀರದ ಕುರಿತು ಪ್ರಚೋದನಕಾರಿ ಪೋಸ್ಟ್; ಪಾಕ್ ನ 333 ಟ್ವೀಟರ್ ಖಾತೆ ಸ್ಥಗಿತ
Team Udayavani, Sep 5, 2019, 12:06 PM IST
ಇಸ್ಲಾಮಾಬಾದ್: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ರದ್ದುಗೊಳಿಸಿದ ನಂತರ ಕಾಶ್ಮೀರದ ಬಗ್ಗೆ ಪ್ರಚೋದನಕಾರಿ ಪೋಸ್ಟ್ ಹಾಕಿದ ಹಿನ್ನೆಲೆಯಲ್ಲಿ ಪಾಕಿಸ್ತಾನದ 333 ಟ್ವೀಟರ್ ಖಾತೆಯನ್ನು ಸ್ಥಗಿತಗೊಳಿಸಿರುವುದಾಗಿ ವರದಿ ತಿಳಿಸಿದೆ.
ಜಮ್ಮು-ಕಾಶ್ಮೀರದ ವಿಚಾರದಲ್ಲಿ ಸುಳ್ಳು ಮಾಹಿತಿ ಮತ್ತು ಪ್ರಚೋದನಕಾರಿ ದೃಷ್ಟಿಕೋನದ ವಿಚಾರಗಳನ್ನು ಹಂಚಿಕೊಂಡ ಟ್ವೀಟ್ ಬಗ್ಗೆ ಭಾರತೀಯ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ನಿಟ್ಟಿನಲ್ಲಿ ಟ್ವೀಟರ್ ಪಾಕಿಸ್ತಾನದ 333 ಖಾತೆಗಳನ್ನು ಸ್ಥಗಿತಗೊಳಿಸಿರುವುದಾಗಿ ವರದಿ ವಿವರಿಸಿದೆ.
ಪಾಕ್ ಟ್ವೀಟರ್ ಖಾತೆಗಳನ್ನು ಸಸ್ಪೆಂಡ್ ಮಾಡಿರುವ ಬಗ್ಗೆ ಪಾಕಿಸ್ತಾನದ ಟೆಲಿಕಮ್ಯುನಿಕೇಶನ್ ಅಥಾರಿಟಿ(ಪಿಟಿಎ) ವಿಷಯವನ್ನು ಪ್ರಸ್ತಾಪಿಸಿರುವುದಾಗಿ ಡಾನ್ ನ್ಯೂಸ್ ತಿಳಿಸಿತ್ತು. ಟ್ವೀಟರ್ ಆಡಳಿತ ಮಂಡಳಿ ಕ್ರಮ ನ್ಯಾಯೋಚಿತವಾದುದಲ್ಲ. ಟ್ವೀಟರ್ ಸಂಸ್ಥೆಯ ನಿಲುವು ಏಕಪಕ್ಷೀಯವಾಗಿದೆ ಎಂದು ಆರೋಪಿಸಿದೆ.
ಈಗಾಗಲೇ ಪಿಟಿಎಗೆ 333 ದೂರುಗಳು ಬಂದಿದ್ದು, ಟ್ವೀಟರ್ ಖಾತೆಯನ್ನು ಪುನರ್ ಬಳಕೆ ಮಾಡಲು ಅವಕಾಶ ಕೊಡುವಂತೆ ಕೋರಿಕೆ ಕಳುಹಿಸಲಾಗಿದೆ. ಆದರೆ ಈವರೆಗೆ ಕೇವಲ 67 ಟ್ವೀಟರ್ ಖಾತೆಗಳನ್ನು ಮಾತ್ರ ಬಳಸಲು ಅವಕಾಶ ಕೊಟ್ಟಿದೆ ಎಂದು ಡಾನ್ ವರದಿ ವಿವರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ
MUST WATCH
ಹೊಸ ಸೇರ್ಪಡೆ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.