ಯೂರಿಯಾಗೆ ಮಿತಿ; ರೈತರಿಗೆ ಫಜೀತಿ
ಡಿಎಪಿ, ಕಾಂಪ್ಲೆಕ್ಸ್ ಸೇರಿಸಿ ಹಾಕುವಂತೆ ರೈತರಿಗೆ ಒತ್ತಾಯ •ಖಾಸಗಿಯಲ್ಲಿ ಹೆಚ್ಚು ಹಣ ಕೊಟ್ಟು ಖರೀದಿಸುವ ಸ್ಥಿತಿ
Team Udayavani, Sep 5, 2019, 6:09 PM IST
ರಾಯಚೂರು: ಎಪಿಎಂಸಿಯ ಸಹಕಾರಿ ಸಂಘದಲ್ಲಿ ರಸಗೊಬ್ಬರ ಪಡೆಯಲು ಸರದಿಯಲ್ಲಿ ನಿಂತಿದ್ದ ರೈತರು.
ರಾಯಚೂರು: ಭೂಮಿಯ ಫಲವತ್ತತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರೂಪಿಸಿದ ನಿಯಮಗಳು ರೈತರನ್ನು ಇಕ್ಕಟ್ಟಿಗೆ ಸಿಲುಕಿಸಿವೆ. ಕಡಿಮೆ ದರದಲ್ಲಿ ಸಿಗುತ್ತಿದ್ದ ಯೂರಿಯಾ ರಸಗೊಬ್ಬರ ಅಗತ್ಯದಷ್ಟು ವಿತರಿಸದ ಕಾರಣ ರೈತರು ದುಬಾರಿ ಹಣ ಕೊಟ್ಟು ಖಾಸಗಿಯಲ್ಲಿ ಖರೀದಿಸುವಂತಾಗಿದೆ.
ಈಗ ಎಲ್ಲೆಡೆ ಬಹುತೇಕ ಬಿತ್ತನೆಯಾಗಿದ್ದು, ರೈತರು ರಸಗೊಬ್ಬರಕ್ಕಾಗಿ ಸಹಕಾರಿ ಸಂಘಗಳು, ರೈತ ಸಂಪರ್ಕ ಕೇಂದ್ರಗಳಿಗೆ ಎಡತಾಕುತ್ತಿದ್ದಾರೆ. ಆದರೆ, ಈ ಮುಂಚಿನಂತೆ ಅಗತ್ಯದಷ್ಟು ರಸಗೊಬ್ಬರ ನೀಡದಿರಲು ಸೂಕ್ತ ನಿರ್ದೇಶನ ಬಂದಿರುವುದರಿಂದ ಸಣ್ಣ ರೈತರಿಗೆ ಕೇವಲ 45 ಕೆಜಿ ತೂಕದ ಆರು ಪ್ಯಾಕೆಟ್‌ಗಳನ್ನು ಮಾತ್ರ ನೀಡಲಾಗುತ್ತಿದೆ. ಆದರೆ, ಇಷ್ಟು ಕಡಿಮೆ ರಸಗೊಬ್ಬರ ಸಾಲುವುದಿಲ್ಲ. ಜಾಸ್ತಿ ನೀಡುವಂತೆ ರೈತರು ಪಟ್ಟು ಹಿಡಿಯುತ್ತಿರುವ ಕಾರಣ ಕೃಷಿ ಇಲಾಖೆಗೂ ತಲೆನೋವಾಗಿ ಪರಿಣಮಿಸಿದೆ. ಯೂರಿಯಾದಲ್ಲಿ ನೈಟ್ರೋಜನ್ ಅಂಶ ಮಾತ್ರ ಇದ್ದು, ಇದನ್ನು ಹೆಚ್ಚಾಗಿ ಬಳಸಿದರೆ ಭೂಮಿಯ ಫಲವತ್ತತೆ ಹಾಳಾಗುತ್ತಿದೆ. ಯೂರಿಯಾಗೆ ಸಮನಾಗಿ ಕಾಂಪ್ಲೆಕ್ಸ್, ಡಿಎಪಿ ಗೊಬ್ಬರವನ್ನು ಬಳಸಿದರೆ ಬೆಳೆ ಹಸನಾಗಿ ಬರಲಿದೆ. ಹೀಗಾಗಿ ಕೇಂದ್ರ ಸರ್ಕಾರ ಯೂರಿಯಾ ವಿತರಣೆಗೆ ಕಡಿವಾಣ ಹಾಕಿದೆ. ಆದರೆ, ಕಡಿಮೆ ದರಕ್ಕೆ ಸಿಗುವ ಯೂರಿಯಾವನ್ನೇ ಬಳಸಿಕೊಂಡು ಬಂದಿರುವ ರೈತಾಪಿ ವರ್ಗಕ್ಕೆ ಇದು ಸಮಸ್ಯೆಯಾಗಿ ಪರಿಣಮಿಸಿದ್ದು, ನಮಗೆ ಅಗತ್ಯದಷ್ಟು ಯೂರಿಯಾವನ್ನೇ ನೀಡಬೇಕು ಎಂಬುದು ರೈತರ ವಾದ.
ದಾಸ್ತಾನಿಗಿಲ್ಲ ಕೊರತೆ: ಕೇಂದ್ರ ಸರ್ಕಾರ ಕಳೆದ ವರ್ಷದಿಂದ ರಸಗೊಬ್ಬರ, ಬಿತ್ತನೆ ಬೀಜ ಸೇರಿ ಯಾವುದೇ ಕೃಷಿ ಪರಿಕರ ಖರೀದಿಸಲು ಆಧಾರ್ ಕಾರ್ಡ್ ಕಡ್ಡಾಯ ಮಾಡಲಾಗಿದೆ. ಹೀಗಾಗಿ ಆಧಾರ್ ಕಾರ್ಡ್‌ಗೂ ಪಹಣಿಗೂ ಜೋಡಣೆ ಆಗಿರುವ ಕಾರಣ ಕೇಂದ್ರ ಸರ್ಕಾರ ನಿಗದಿ ಮಾಡಿದ್ದಕ್ಕಿಂತ ಹೆಚ್ಚಿನ ರಸಗೊಬ್ಬರ ಸಬ್ಸಿಡಿಯಲ್ಲಿ ಸಿಗುವುದಿಲ್ಲ. ಆದರೆ, ಇಲಾಖೆ ಬಳಿ ಈಗಾಗಲೇ 70 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನಿದ್ದು, ಜಿಲ್ಲೆಗೆ ಎಷ್ಟು ಅಗತ್ಯವೋ ಅಷ್ಟು ಸಂಗ್ರಹವಿದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.
ದೊಡ್ಡ ರೈತರಿಗೆ ಸಮಸ್ಯೆ: ಈಗ ಮುಖ್ಯವಾಗಿ ಸಣ್ಣ ರೈತರಿಗಿಂತ ದೊಡ್ಡ ರೈತರಿಗೆ ಇದು ಸಮಸ್ಯೆ ತಂದೊಡ್ಡಿದೆ. ಸರ್ಕಾರ ಸಬ್ಸಿಡಿ ದರದಲ್ಲಿ ನೀಡುವ ರಸಗೊಬ್ಬರಕ್ಕೆ ಮಿತಿ ಹಾಕಿರುವ ಕಾರಣ ದುಬಾರಿ ಹಣ ಕೊಟ್ಟು ಪಡೆಯುವ ಅನಿವಾರ್ಯತೆ ಎದುರಾಗಿದೆ. ಇದರಿಂದ ಮಿತಿ ಸಡಿಲಿಸುವಂತೆ ರಸಗೊಬ್ಬರ ವಿತರಣೆ ಕೇಂದ್ರಗಳಲ್ಲಿ ರೈತರು ವಾದ ಮಾಡುವ ದೃಶ್ಯ ಸಾಮಾನ್ಯವಾಗಿದೆ. ಇನ್ನು ಕಾಂಪ್ಲೆಕ್ಸ್, ಡಿಎಪಿ ರಸಗೊಬ್ಬರದ ದರ ಹೆಚ್ಚಾಗಿದ್ದು, ರೈತರು ಅದನ್ನು ಖರೀದಿಸಲು ಹಿಂದೇಟು ಹಾಕುತ್ತಾರೆ. ಆದರೆ, ಭೂಮಿ ಫಲವತ್ತತೆ ಹೆಚ್ಚಲು ಯೂರಿಯಾ ಜತೆಗೆ ಡಿಎಪಿ, ಕಾಂಪ್ಲೆಕ್ಸ್ ಕೂಡ ಸೇರಿಸಬೇಕು ಎಂಬುದು ಇಲಾಖೆ ಅಧಿಕಾರಿಗಳ ವಾದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
NH Highway Works: ಬಿ.ಸಿ.ರೋಡು: ಟ್ರಾಫಿಕ್ ಜಾಮ್
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ
Udupi: ಗೀತಾರ್ಥ ಚಿಂತನೆ-106; ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
NH Highway Works: ಬಿ.ಸಿ.ರೋಡು: ಟ್ರಾಫಿಕ್ ಜಾಮ್
Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.