ಚಳ್ಳಕೆರೆ To ಚಂದ್ರಲೋಕ; ಸಾಫ್ಟ್ ಲ್ಯಾಂಡಿಂಗ್ ತಾಲೀಮು
Team Udayavani, Sep 6, 2019, 6:00 AM IST
ಚಂದ್ರನ ಮೇಲೆ ಇಳಿದು ಹೆಜ್ಜೆ ಇಡುವ ಚಂದ್ರಯಾನ -2ರ ಲ್ಯಾಂಡರ್ ಹಾಗೂ ರೋವರ್‌ಗಳು ಈ ಮೊದಲೇ ಚಂದ್ರನಂಥ ಮೇಲ್ಮೆ„ನಲ್ಲಿ ಸವಾರಿ ಮಾಡಿ “ಅನುಭವ’ ಗಿಟ್ಟಿಸಿ ಕೊಂಡಿದ್ದವು!
ಇದಕ್ಕಾಗಿಯೇ ಚಳ್ಳಕೆರೆ ತಾಲೂಕಿನ ದೊಡ್ಡಉಳ್ಳಾರ್ತಿ ಪ್ರದೇಶದಲ್ಲಿ ಸಿದ್ಧಪಡಿಸಲಾಗಿದ್ದ ಕೃತಕ ಚಂದ್ರನ ನೆಲದಲ್ಲಿ ಪ್ರಯೋಗಕ್ಕೆ ಒಳಪಟ್ಟಿದ್ದವು. ಚಂದ್ರನ ಮೇಲಿನ ನೆಲ ಹಾಗೂ ಇಲ್ಲಿನ ಪ್ರದೇಶಕ್ಕೆ ಸಾಮ್ಯತೆಯಿದೆ. ಆದ್ದರಿಂದ ಇಸ್ರೋ ಇಲ್ಲಿನ ಪ್ರದೇಶದಲ್ಲಿ ಚಂದ್ರನ ಅಂಗಳವನ್ನು ಕೃತಕವಾಗಿ ಸೃಷ್ಟಿಸಿ ಪ್ರಯೋಗಗಳನ್ನು ಕೈಗೊಂಡಿತು. ಚಂದ್ರನ ಅಂಗಳಕ್ಕಿಳಿಯುವ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಉಪಕರಣಗಳು ಇಲ್ಲಿ ಕಠಿಣ ಪರೀಕ್ಷೆಗೆ ಒಳಪಟ್ಟಿವೆ.
ಗಮನಾರ್ಹ ವಿಷಯವೆಂದರೆ, ತಮಿಳುನಾಡಿನ ಸೇಲಂ ಜಿಲ್ಲೆಯ ಸೀತಂಪೂಂಡಿ ಹಾಗೂ ಕುನ್ನಾಮಲೈನಲ್ಲಿರುವ ಬಂಡೆಗಳ ಗುಣ-ರಚ ನೆ ಚಂದ್ರನ ಮೇಲಿರುವ ಬಂಡೆಗಳನ್ನು ಹೋಲುತ್ತವೆ. ಹಾಗಾಗಿ, ಅವು ಗಳನ್ನು ತಂದು ನಾನಾ ಪ್ರಮಾಣದಲ್ಲಿ ಪುಡಿ ಮಾಡಿ ಚಳ್ಳಕೆರೆ ತಾಲೂಕಿನ ಭೂಮಿಯ ಮೇಲ್ಮೈ ಮೇಲೆ ನಿರ್ಮಿಸಲಾಗಿರುವ ಕಂದಕಗಳ ಮೇಲೆ ಹರಡಲಾಯಿತು.
ದೊಡ್ಡಉಳ್ಳಾರ್ತಿ ನೆಲದಲ್ಲಿ 9 ನಾನಾ ಆಳತೆಯ ಚಂದ್ರನ ಮೇಲ್ಮೈ ಹೋಲುವ ಕಂದಕಗಳನ್ನು ನಿರ್ಮಿಸಲಾಯಿತು. 5 ಮೀಟರ್‌ನಿಂದ 15 ಮೀಟರ್‌ವರೆಗೆ ಕಂದಕಗಳ ಮೇಲೆ ಪ್ರಯೋಗಗಳನ್ನು ಕೈಗೊಳ್ಳಲಾಯಿತು. 2008ರಲ್ಲಿ ಚಂದ್ರಯಾನ-1 ಯೋಜ ನೆಯ ವೇಳೆ ಆರ್ಬಿಟರ್ ನೌಕೆಯಿಂದ ಪಡೆದಿದ್ದ ಚಿತ್ರಗಳನ್ನು ಆಧಾರವಾಗಿಟ್ಟುಕೊಂಡು ಈ ಕೃತಕ ವಾತಾವರಣವನ್ನು ನಿರ್ಮಿಸಲಾಯಿತು. ಇವುಗಳ ರಚನೆಗಾಗಿ ವಿಜ್ಞಾನಿಗಳು, ಆರ್ಕಿಟೆಕ್ಟ್ ಹಾಗೂ ಎಂಜಿನಿಯರ್‌ಗಳ ತಂಡ ವರ್ಷಗಟ್ಟಲೇ ಶ್ರಮಿಸಿದೆ.
ಚಳ್ಳಕೆರೆ ತಾಲೂಕು :ವಿಜ್ಞಾನ ತಂತ್ರಜ್ಞಾನದ ಹಬ್
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕು ವಿಜ್ಞಾನ ಹಾಗೂ ತಂತ್ರಜ್ಞಾನದ ಪ್ರಮುಖ ಕೇಂದ್ರ ವಾಗಿದೆ. ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಇಸ್ರೋ), ಬಾಬಾ ಅಣುಶಕ್ತಿ ಕೇಂದ್ರ (ಬಿಎಆರಿÕ), ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಪ್ರದೇಶದಲ್ಲಿ ಸ್ಥಾಪಿತವಾಗಿವೆ. ದೇಶದ ಪ್ರಮುಖ ವೈಜ್ಞಾನಿಕ ಸಂಸ್ಥೆಗಳು ಹತ್ತು ಸಾವಿರ ಎಕರೆ ಪ್ರದೇಶದಲ್ಲಿ ವ್ಯಾಪಿಸಿವೆ. ಚಳ್ಳಕೆರೆ ತಾಲೂಕಿನಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಎರಡು ಕೇಂದ್ರಗಳನ್ನು ಹೊಂದಿದೆ. ಒಂದು ಕೇಂದ್ರ ಚಳ್ಳಕೆರೆಯಿಂದ 7 ಕಿಮೀ ಹಾಗೂ ಬೆಂಗಳೂರಿನಿಂದ 214 ಕಿಮೀ ದೂರದಲ್ಲಿದೆ. ಮತ್ತೂಂದು ಕೇಂದ್ರ ಚಳ್ಳಕೆರೆಯಿಂದ 18 ಕಿಮೀ, ಬೆಂಗಳೂರಿನಿಂದ 218 ಕಿಮೀ ಹಾಗೂ ನಾಯಕನಹಟ್ಟಿಯಿಂದ 3 ಕಿಮೀ ದೂರದಲ್ಲಿದೆ. ದೊಡ್ಡಉಳ್ಳಾರ್ತಿ ಪ್ರದೇಶದಲ್ಲಿ 473 ಎಕರೆ ಹಾಗೂ ನಾಯಕನಹಟ್ಟಿ ಸಮೀಪದ ಕುದಾಪುರ ಕಾವಲು ಪ್ರದೇಶದಲ್ಲಿ 100 ಎಕರೆ ಪ್ರದೇಶವನ್ನು ಇಸ್ರೋಗೆ ನೀಡಲಾಗಿದೆ. ಈ ಎರಡು ಪ್ರದೇಶಗಳಲ್ಲಿ ಇಸ್ರೋ ಕಾಂಪೌಂಡ್‌ಗಳನ್ನು ನಿರ್ಮಿಸಿ ಪ್ರಯೋಗಗಳನ್ನು ಆರಂಭಿಸಿದೆ.
ಕೆಎಂ ಶಿವಸ್ವಾಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
MUST WATCH
ಹೊಸ ಸೇರ್ಪಡೆ
IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್ ಹೂಡಾ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.