ಕ್ಲೈಮ್ಯಾಕ್ಸ್ ಪೊಗರೇ ಬೇರೆ: ನಂದಕಿಶೋರ್
Team Udayavani, Sep 6, 2019, 6:00 AM IST
ನಿರ್ದೇಶಕ ಸಹೋದರರಾದ ನಂದಕಿಶೋರ್ ಹಾಗೂ ತರುಣ್ ಸುಧೀರ್ ‘ಪೊಗರು’ ಹಾಗೂ ‘ರಾಬರ್ಟ್’ ಚಿತ್ರಗಳನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರಗಳ ಕುರಿತು ಅಣ್ತಮ್ಮಾಸ್ ಮಾತನಾಡಿದ್ದಾರೆ.
“ಇಂಡಸ್ಟ್ರಿಯಲ್ಲಿ ನಾವೇನೂ ಸಾಧನೆ ಮಾಡಿಲ್ಲ. ಇನ್ನು ಗ್ರ್ಯಾಂಡ್
ಆಗಬೇಕು, ಬ್ರಾಂಡ್ ಆಗಬೇಕು ಅದಕ್ಕೆಲ್ಲಾ ಟೈಮ್ ಬೇಕು. ನಮ್ಮ ಉದ್ದೇಶವೊಂದೇ. ಒಳ್ಳೆಯ ಸಿನಿಮಾ ಮಾಡಬೇಕು….’ – ನಿರ್ದೇಶಕ ನಂದಕಿಶೋರ್ ಸುಧೀರ್ ಹೀಗೆ ನೇರವಾಗಿಯೇ ಹೇಳುತ್ತಾ ಹೋದರು.
ಧ್ರುವಸರ್ಜಾ ಅಭಿನಯದ “ಪೊಗರು’ ಬಹು ನಿರೀಕ್ಷೆಯ ಚಿತ್ರ.
ಆರಂಭದಿಂದ ಇಲ್ಲಿಯವರೆಗೂ ಸಾಕಷ್ಟು ಕುತೂಹಲ ಮೂಡಿಸಿದೆ. ಆ ಬಗ್ಗೆ
ನಂದಕಿಶೋರ್ ಹೇಳಿದ್ದು ಹೀಗೆ. “ಸದ್ಯಕ್ಕಿನ್ನೂ ಚಿತ್ರೀಕರಣ ನಡೆಯುತ್ತಿದೆ. ಇನ್ನು 20 ದಿನಗಳ ಚಿತ್ರೀಕರಣ ನಡೆದರೆ, ಕುಂಬಳಕಾಯಿ. “ಪೊಗರು’ ನನ್ನ ಹಾಗೂ ತಂಡದ ದೊಡ್ಡ ಕನಸು. ನಾನು ಸಕ್ಸಸ್, ಫೇಲ್ಯೂರ್ ಎಲ್ಲವನ್ನೂ ನೋಡಿದ್ದೇನೆ. ಈ ರಂಗದಲ್ಲಿ ಆಡಿಯನ್ಸ್‌ಗೆ ಎಷ್ಟು ತೃಪ್ತಿ
ಪಡಿಸ್ತೀವಿ ಅನ್ನೊದಷ್ಟೇ ಮುಖ್ಯವಾಗುತ್ತೆ ಹೊರತು, ಅಲ್ಲಿ ನಾಯಕ ಯಾರು, ನಿರ್ದೇಶಕ ಯಾರೆಂಬುದು ಮುಖ್ಯ ಆಗಲ್ಲ. ಕಂಟೆಂಟ್ ಸ್ಟ್ರಾಂಗ್ ಆಗಿದ್ದರೆ ಮಾತ್ರ ಅದು ರೀಚ್ ಆಗುತ್ತೆ. ಇನ್ನು, “ಪೊಗರು’ ಒಂದೂವರೆ
ವರ್ಷ ಆಯ್ತು, ತುಂಬಾ ಲೇಟ್ ಆಗ್ತಾ ಇದೆ ಎಂಬ ಮಾತಿದೆ. ಅದನ್ನು ಒಪ್ಪುತ್ತೇನೆ. ನಿಜ ಹೇಳುವುದಾದರೆ, ಈ ಚಿತ್ರದ ಕಥೆ, ಪಾತ್ರ ಆ ರೀತಿ ಇದೆ. ನಿರೂಪಣೆ ಗಟ್ಟಿಗೊಳಿಸಬೇಕೆಂಬ ಉದ್ದೇಶ ಈ ಚಿತ್ರದ್ದು. ಹಾಗಾಗಿ
ಹೀರೋ ಪಾತ್ರಕ್ಕೆ ಸಮಯ ಬೇಕಾಯ್ತು. ಸಿನಿಮಾ ಸ್ವಲ್ಪ ಲೇಟ್ ಆಗಿದ್ದರೂ, ಸ್ಕ್ರೀನ್ ಮೇಲೆ ನೋಡಿದಾಗ, ತೃಪ್ತಭಾವ ಅಂತೂ ಇರುತ್ತೆ’ ಎಂಬುದು ನಂದಕಿಶೋರ್ ಮಾತು.
ಮುದ್ದು ಹುಡುಗನ ರಗಡ್ ಲುಕ್
ಸಾಮಾನ್ಯವಾಗಿ ಸಕ್ಸಸ್‌ಫುಲ್ ಹೀರೋ, ನಿರ್ದೇಶಕ ಸೇರಿಕೊಂಡಾಗ, ಅಲ್ಲಿ ಇನ್ನಷ್ಟು ನಿರೀಕ್ಷೆ ಹೆಚ್ಚಿರುತ್ತೆ. ಅಂಥದ್ದೊಂದು ಒತ್ತಡ, ಸವಾಲು ನಿರ್ದೇಶಕರಿಗೂ ಇತ್ತಾ? ಇದಕ್ಕೆ ನಂದಕಿಶೋರ್ ಹೇಳಿದ್ದು ಹೀಗೆ. ‘ಖಂಡಿತ ಇದು ದೊಡ್ಡ ಚಾಲೆಂಜ್. ಅದಾಗಲೇ ಬ್ಯಾಕ್ ಟು ಬ್ಯಾಕ್ ಮೂರು ಹಿಟ್ ಸಿನಿಮಾ ಕೊಟ್ಟಿರುವ ಹೀರೋ ಸಿನಿಮಾ ಮಾಡಲು ಹೊರಟಾಗ, ಅದೊಂದು ದೊಡ್ಡ ಸವಾಲು. ಯಾಕೆಂದರೆ, ನಿರೀಕ್ಷೆ ಹೆಚ್ಚಿರುತ್ತೆ. ಯಾವ ಕಥೆ ಮಾಡಬೇಕು, ಹೇಗೆ ತೋರಿಸಬೇಕು, ಹಿಂದಿನ ಚಿತ್ರಗಳಿಗಿಂತಲೂ ಭಿನ್ನವಾಗಿ ತೋರಿಸುವುದು ಹೇಗೆ, ಹಾಡು ಹೇಗೆ ಮಾಡಿಸಬೇಕು, ವಿಷ್ಯುಯಲ್ ಪ್ಲಾನ್ ಹೆಂಗಿರಬೇಕು, ಗೆಟಪ್ ಯಾವ ರೀತಿ ಇರಬೇಕು ಎಂಬ ಲೆಕ್ಕಾಚಾರ ಹಾಕಿ ಈ ಚಿತ್ರ ಕೈಗೆತ್ತಿಕೊಂಡೆ. ಮೂರು ಚಿತ್ರಗಳಲ್ಲೂ ತುಂಬಾ ಮುದ್ದಾಗಿ ಕಾಣಿಸಿಕೊಂಡಿರುವ ಧ್ರುವಸರ್ಜಾ, ಇಲ್ಲಿ ಔಟ್ ಅಂಡ್ ಔಟ್ ರಗಡ್ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜನರು ಆ ರಗಡ್ ಲುಕ್ ಅನ್ನು ಸ್ವೀಕರಿಸುತ್ತಾರಾ, ಇಲ್ಲವಾ ಎಂಬ ಪ್ರಶ್ನೆಗಳೊಂದಿಗೇ ಮುಂದುವರೆದೆ. ವಿಶ್ವಾಸವಿತ್ತು. ಅದು ವರ್ಕೌಟ್ ಆಗುತ್ತಿದೆ’ ಎನ್ನುತ್ತಾರೆ ನಿರ್ದೇಶಕರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.