ಗ್ರಾಮ ಮಟ್ಟದಲ್ಲೂ ಇನ್ನು ಹವಾಮಾನ ವರದಿ
Team Udayavani, Sep 6, 2019, 5:59 AM IST
ಹೊಸದಿಲ್ಲಿ: ಬೆಳೆ ಹಾಗೂ ಜಾನುವಾರು ನಷ್ಟವನ್ನು ತಡೆಯುವುದಕ್ಕಾಗಿ ಹವಾಮಾನ ಇಲಾಖೆಯು ಇನ್ನು ಗ್ರಾಮ ಮಟ್ಟದಲ್ಲೂ ಹವಾಮಾನ ವರದಿ ನೀಡಲು ಯೋಜನೆ ರೂಪಿಸಿದೆ. ಸುಮಾರು 2-3 ಕಿ.ಮೀ ವ್ಯಾಪ್ತಿಯಲ್ಲಿ ಯಾವ0 ಹವಾಮಾನ ಇರಲಿದೆ ಎಂಬ ಮುನ್ಸೂಚನೆಯನ್ನು ಈ ವರದಿಯಲ್ಲಿ ನೀಡಲಾಗುತ್ತದೆ.
ಸದ್ಯ ಜಿಲ್ಲೆ ಮತ್ತು ಬ್ಲಾಕ್ ಮಟ್ಟದಲ್ಲಿ ವರದಿ ನೀಡಲಾಗುತ್ತಿದ್ದು, ಸಾಮಾನ್ಯವಾಗಿ 12 ಕಿ.ಮೀ ವ್ಯಾಪ್ತಿಯಲ್ಲಿ ಮುನ್ಸೂಚನೆ ನೀಡಲಾಗುತ್ತಿತ್ತು.
20 ವರ್ಷಗಳ ಹಿಂದೆ ಹವಾಮಾನ ಇಲಾಖೆಯು ರಾಜ್ಯ ಮಟ್ಟದಲ್ಲಿ ಮಾತ್ರ ಹವಾಮಾನ ವರದಿ ನೀಡುತ್ತಿದ್ದೆವು ಎಂದು ಐಎಂಡಿ ಉಪ ನಿರ್ದೇಶಕ ಎಸ್.ಡಿ ಅತ್ರಿ ಹೇಳಿದ್ದಾರೆ. ಹವಾಮಾನ ವರದಿಯು ಶೇ. 100 ರಷ್ಟು ನಿಖರವಲ್ಲ. ಆದರೆ ಸ್ವತ್ತು ಹಾಗೂ ಜಾನುವಾರು ನಾಶ ಕಡಿಮೆ ಮಾಡುವುದು ನಮ್ಮ ಉದ್ದೇಶ ಎಂದೂ ಇದೇ ವೇಳೆ ಅವರು ಹೇಳಿದ್ದಾರೆ.
ವರ್ಷದಿಂದ ವರ್ಷಕ್ಕೆ ಚಂಡಮಾರುತದ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ ಅದರ ತೀವ್ರತೆ ಹೆಚ್ಚುತ್ತಿದೆ. ಹೀಗಾಗಿ ನಾವು ಮುನ್ಸೂಚನೆ ವಿಚಾರದಲ್ಲಿ ಹೆಚ್ಚು ಪರಿಣತಿ ಸಾಧಿಸಬೇಕಿದೆ ಎಂದು ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್ 2.0? ಇದರ ವೈಶಿಷ್ಟ್ಯವೇನು?
Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ
Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂಧೆ ರಾಜೀನಾಮೆ… ಮುಂದಿನ ಸಿಎಂ ಯಾರು?
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.