ಡಾ|ರಾಧಾಕೃಷ್ಣನ್ ಸರಳ-ಸಜ್ಜನ ವ್ಯಕ್ತಿ: ಎಲ್.ಟಿ. ಪಾಟೀಲ್
Team Udayavani, Sep 6, 2019, 12:30 PM IST
ಮುಂಡಗೋಡ: ಜಿಪಂ ಸದಸ್ಯೆ ಜಯಮ್ಮ ಹಿರೇಹಳ್ಳಿ ಕಾರ್ಯಕ್ರಮ ಉದ್ಘಾಟಿಸಿದರು.
ಮುಂಡಗೋಡ: ಶಿಕ್ಷಕರು ಹೆಮ್ಮೆಪಡುವ ದಿನ ಇದಾಗಿದೆ. ಡಾ| ಸರ್ವಪಲ್ಲಿ ರಾಧಾಕೃಷ್ಣನ್ ಒಬ್ಬ ಸರಳ ಸಜ್ಜನ ವ್ಯಕ್ತಿ. ರಾಷ್ಟ್ರದ ಅತ್ಯುನ್ನತ ಸ್ಥಾನವನ್ನು ಅವರು ಅಲಂಕರಿಸಿದ್ದರು ಎಂದು ಜಿಪಂ ಸದಸ್ಯ ಎಲ್.ಟಿ. ಪಾಟೀಲ ಹೇಳಿದರು.
ಅವರು ಪಟ್ಟಣದ ಲೊಯೋಲಾ ವಿಕಾಸ ಕೇಂದ್ರದಲ್ಲಿ ನಡೆದ ಗುರು ಗೌರವಾರ್ಪಣಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಮಕ್ಕಳು ತಂದೆ-ತಾಯಿ ಮಾತು ಮೀರಿದರೂ ಗುರುಗಳ ಮಾತನ್ನು ಮೀರುವುದಿಲ್ಲ ಅಂತಹ ಸಾಮರ್ಥ್ಯ ಗುರುವಿಗಿದೆ ಎಂದರು.
ಹುಬ್ಬಳ್ಳಿಯ ಕಿರಣರಾಮ ಪಾಟೀಲ ಉಪನ್ಯಾಸ ನೀಡಿ ರಾಧಾಕೃಷನ್¡ ಅವರು ತತ್ವಶಾಸ್ತ್ರ ಪುಸ್ತಕವನ್ನು ಬರೆದು ಇಡೀ ಜಗತ್ತಿಗೇ ಪ್ರಚಾರ ಮಾಡಿದವರು ಮತ್ತು ಅದು ಇವತ್ತಿಗೂ ಪ್ರಚಲಿತವಾಗಿದೆ. ಶಿಕ್ಷಕರ ವೃತ್ತಿ ಸೇವೆಯಾಗದೇ ತ್ಯಾಗವಾಗಬೇಕು ಎಂದರು.
ಜಿಪಂ ಸದಸ್ಯೆ ಜಯಮ್ಮ ಹಿರೇಹಳ್ಳಿ ಕಾರ್ಯಕ್ರಮ ಉದ್ಘಾಟಿಸಿದರು. ದಾಕ್ಷಾಯಣಿ ಸುರಗಿಮಠ ಅಧ್ಯಕ್ಷತೆ ವಹಿಸಿದ್ದರು. ತಾಪಂ ಉಪಾಧ್ಯಕ್ಷ ಕೃಷ್ಣಮೂರ್ತಿ ನಾಡಿಗ, ಉದ್ಯಮಿ ಕೃಷ್ಣಾ ಹಿರೇಹಳ್ಳಿ, ತಾಪಂ ಇಒ ಪ್ರವೀಣ ಕಟ್ಟಿ, ಬಿಆರ್‌ಸಿ ಸಂಯೋಜಕ ಜಿ.ಎನ್. ನಾಯ್ಕ, ಶಿಕ್ಷಕರಾದ ಪ್ರದೀಪ ಕುಲಕರ್ಣಿ, ದಯಾನಂದ ನಾಯ್ಕ, ರಮೇಶ ಅಂಬಿಗೇರ, ಎಸ್.ಡಿ.ಎಸ್.ಎಫ ಲಮಾಣಿ, ಹರಿ ನಾಯ್ಕ, ಶೀಲಾ ರಾಠೊಡ, ಶಿಕ್ಷಕರು ಇದ್ದರು.
ಬಿಇಒ ಡಿ.ಎಂ. ಬಸವರಾಜಪ್ಪ ಸ್ವಾಗತಿಸಿದರು. ಸುರೇಶ ಪೂಜಾರ ಮತ್ತು ಬಸವರಾಜ ಬೆಂಡಲಗಟ್ಟಿ ನಿರ್ವಹಿಸಿದರು. ನಿವೃತ್ತ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Dandeli: ವಿದ್ಯುತ್ ಕಂಬದ ಜಿಓಎಸ್ ಕಳವು ಮಾಡಿದ್ದ ಆರೋಪಿ;ಮಾಲು ಸಹಿತ ವಶಕ್ಕೆ ಪಡೆದ ಪೊಲೀಸರು
Gujjar Kere: ಕೆರೆ ಪರಿಸರದ ರಕ್ಷಣೆಗೆ ಆದ್ಯತೆ ಅಗತ್ಯ; ತಹಶೀಲ್ದಾರ್‌ಗೆ ಮರು ಮನವಿ
MUST WATCH
ಹೊಸ ಸೇರ್ಪಡೆ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?
Bengaluru: ಬಸ್‌ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್ ನ ಅನ್ನಪೂರ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.