ತ್ಯಾಜ್ಯ: ಗ್ರಾಮಸ್ಥರ ಪ್ರತಿಭಟನೆ
Team Udayavani, Sep 6, 2019, 1:12 PM IST
ದೊಡ್ಡಬಳ್ಳಾಪುರ ತಾಲೂಕಿನ ಶಿರವಾರ ಗ್ರಾಮದ ಸಮೀಪದ ಖಾಸಗಿ ಯೊಬ್ಬರ ಜಮೀನಿನಲ್ಲಿ ತ್ಯಾಜ್ಯ ಸುರಿದಿರುವುದನ್ನು ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ದೊಡ್ಡಬಳ್ಳಾಪುರ: ತಾಲೂಕಿನ ಶಿರವಾರ ಗ್ರಾಮದ ಸಮೀಪದ ಆನಂದರೆಡ್ಡಿ ಎಂಬುವವರ ಖಾಸಗಿ ಜಮೀನಿನಲ್ಲಿ ಬೆಂಗಳೂರಿನ ಮಾರುಕಟ್ಟೆಯಿಂದ ತ್ಯಾಜ್ಯ ತಂದು ಸುರಿಯಲು ಅವಕಾಶ ನೀಡಿರುವ ಜಮೀನು ಮಾಲೀಕನ ವಿರುದ್ಧ ಗ್ರಾಮಸ್ಥರು ಗುರುವಾರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.
ಘಟನೆಯಿಂದ ಕಂಗೆಟ್ಟಿರುವ ಸ್ಥಳೀಯರು: ಟೆರ್ರಾ ಫಾರ್ಮ ಹಾಗೂ ಎಂಎಸ್‌ಜಿಪಿ ಬಿಬಿಎಂಪಿ ತ್ಯಾಜ್ಯ ವಿಲೇವಾರಿ ಘಟಕಗಳು ತಾಲೂಕಿನ ಜನತೆಗೆ ತೊಂದರೆ ನೀಡಿರುವ ಬೆನ್ನಲ್ಲೆ ಮತ್ತೂಮ್ಮೆ ತ್ಯಾಜ್ಯ ಸುರಿಯುವ ಪ್ರಕರಣ ನಡೆದಿದ್ದು, ಸ್ಥಳೀಯರು ಕಂಗೆಡುವಂತೆ ಮಾಡಿದೆ.
ತ್ಯಾಜ್ಯದ ವಾಹನ ಬಿಟ್ಟು ಚಾಲಕರು ಪರಾರಿ: ತಾಲೂಕಿನ ಶಿರವಾರ ಗ್ರಾಮದ ಸಮೀಪ ಆನಂದರೆಡ್ಡಿ ಜಮೀನಿನಲ್ಲಿ ಬುಧವಾರ ರಾತ್ರಿ ಬೆಂಗಳೂರಿನ ಮಾರುಕಟ್ಟೆ ಯಿಂದ ತ್ಯಾಜ್ಯ ತಂದು ಸುರಿಯುತ್ತಿರುವುದನ್ನ ಕಂಡು ಗ್ರಾಮಸ್ಥರು ಸ್ಥಳಕ್ಕೆ ತೆರಳಿದ್ದಾರೆ. ಸ್ಥಳಕ್ಕೆ ಧಾವಿಸಿದ ಜನರನ್ನು ಕಂಡು ತ್ಯಾಜ ಸಾಗಣೆ ಲಾರಿಗಳ ಚಾಲಕರು ಸ್ಥಳದಲ್ಲೆ ವಾಹನ ಬಿಟ್ಟು ಓಡಿಹೋಗಿದ್ದಾರೆ. ಇದರಿಂದ ಕೆರಳಿದ ಗ್ರಾಮಸ್ಥರು ಲಾರಿಗಳ ಟೈರ್ ಗಾಳಿ ತೆಗೆದು ಮರಳಿ ಬಂದಿದ್ದಾರೆ.
20ಕ್ಕೂ ಹೆಚ್ಚು ಟನ್ ತ್ಯಾಜ್ಯ ಸಂಗ್ರಹ: ಬೆಳಗ್ಗೆ ರಾಜ್ಯ ರೈತ ಸಂಘದ ಮುಖಂಡರ ನೇತೃತ್ವದಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿ, ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ. ಸುಮಾರು 20ಕ್ಕೂ ಹೆಚ್ಚು ಟನ್ ತ್ಯಾಜ್ಯ ಸಂಗ್ರಹವಾಗಿರುವುದು ಕಂಡು ಆತಂಕ ನಿರ್ಮಾಣವಾಗಿದೆ. ಸ್ಥಳಕ್ಕೆ ಜಮೀನು ಮಾಲಿಕರ ಕರೆಸುವಂತೆ ಪೊಲೀಸರನ್ನು ಒತ್ತಾಯಿಸಿದರು.
ಜಮೀನು ಮಾಲಿಕನಿಗೆ ಗ್ರಾಮಸ್ಥರ ಎಚ್ಚರಿಕೆ: ಮಧ್ಯಾಹ್ನದ ನಂತರ ಸ್ಥಳಕ್ಕೆ ಬಂದ ಜಮೀನು ಮಾಲೀಕ ಆನಂದರೆಡ್ಡಿ, ಗೊಬ್ಬರ ಸಿದ್ಧಪಡಿಸುವುದಕ್ಕಾಗಿ ತ್ಯಾಜ್ಯವನ್ನು ತರಿಸಲಾಗಿತ್ತು. ಎಂದು ತಿಳಿಸಿದರು. ಇದಕ್ಕೆ ಆಕ್ಷೇಪವೇತ್ತಿದ ರೈತ ಸಂಘ ಹಾಗೂ ಗ್ರಾಮಸ್ಥರು ತ್ಯಾಜ್ಯ ವಿಲೇವಾರಿ ಮಾಡಿರುವುದು ಅಕ್ರಮವಾಗಿದೆ. ಯಾವುದೇ ಅನುಮತಿ ಪಡೆಯದೆ ಕಳ್ಳ ಮಾರ್ಗದಲ್ಲಿ ತಂದು ತ್ಯಾಜ್ಯವನ್ನು ಸುರಿಯುವ ಮೂಲಕ ಮತ್ತೂಂದು ತ್ಯಾಜ್ಯವಿಲೇವಾರಿ ಘಟಕ ಸ್ಥಾಪಿಸುವ ಹುನ್ನಾರವಾಗಿದೆ. ಇದಕ್ಕೆ ಆವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು.
ನಂತರ ಪೊಲೀಸರ ಮಧ್ಯಸ್ಥಿಕೆಯಲ್ಲಿ ತ್ಯಾಜ್ಯ ತೆರವುಗೊಳಿಸಲು ಸೂಚನೆ ನೀಡಲಾಯಿತು. ಯಾವುದೇ ಕಾರಣಕ್ಕೂ ತ್ಯಾಜ್ಯ ಸಂಸ್ಕರಣೆಗೆ ಅವಕಾಶ ನೀಡಬಾರದು ಎಂದು ಜಮೀನು ಮಾಲಿಕನಿಗೆ ಎಚ್ಚರಿಕೆ ನೀಡಿದರು.
ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಮುತ್ತೆಗೌಡ, ತಾಲೂಕು ಮುಖ್ಯಸ್ಥ ರವಿ ಶಿರವಾರ, ತೂಬಗೆರೆ ಹೋಬಳಿ ಕಾರ್ಯದರ್ಶಿ ರಾಮ್ ಕುಮಾರ್ ಸೇರಿದಂತೆ ಕಲ್ಲುದೇವನಹಳ್ಳಿ, ತಿಪ್ಪೂರು, ಹೊಸಹಳ್ಳಿ, ಹೊಸಹಳ್ಳಿ ತಾಂಡ, ನೆಲ್ಲುಕುಂಟೆ, ಸೋಮಶೆಟ್ಟಹಳ್ಳಿಯ ಗ್ರಾಮಸ್ಥರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.