ಮೇಲ್ಸೇತುವೆಗೆ ಅಡ್ಡಿಯಾಗಿದ್ದ ಕಾಂಪೌಂಡ್ ತೆರವು
Team Udayavani, Sep 6, 2019, 2:47 PM IST
ಬಂಗಾರಪೇಟೆ ತಾಲೂಕಿನ ಹುಣಸನಹಳ್ಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಅಡ್ಡಿಯಾಗಿದ್ದ ಕಾಂಪೌಂಡ್ ಅನ್ನು ಸಂಸದ ಎಸ್.ಮುನಿಸ್ವಾಮಿ ನೇತೃತ್ವದಲ್ಲಿ ತೆರವುಗೊಳಿಸಿದರು.
ಬಂಗಾರಪೇಟೆ: ಬೆಂಗಳೂರು-ಚೆನ್ನೈರೈಲ್ವೆ ಮಾರ್ಗದಲ್ಲಿ ಹುಣಸನಹಳ್ಳಿ ಬಳಿಯ ಮೇಲ್ಸೇತುವೆ ನಿರ್ಮಾಣಕ್ಕೆ ಅಡ್ಡಿಯಾಗಿದ್ದ ರಾಜಕೀಯ ಮುಖಂಡರೊಬ್ಬರ ಕಾಂಪೌಂಡ್ ಅನ್ನು ಸಂಸದ ಎಸ್.ಮುನಿಸ್ವಾಮಿ ನೇತೃತ್ವದಲ್ಲಿ ತೆರವು ಮಾಡಲಾಯಿತು.
ಪಟ್ಟಣದಲ್ಲಿ ಕಳೆದ 10 ವರ್ಷಗಳಿಂದ ಈ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿತ್ತು. ಇದಕ್ಕೆ ಕೆಲವು ಖಾಸಗಿ ವ್ಯಕ್ತಿಗಳು ಜಾಗ ನೀಡದಿರುವುದೇ ಕಾರಣ. ಮೂರು ವರ್ಷಗಳ ಹಿಂದೆ ಸ್ಥಳೀಯ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಭೇಟಿ ನೀಡಿ ಎಲ್ಲರನ್ನು ಸಮಾಧಾನಪಡಿಸಿ, ಜಾಗ ತೆರವುಗೊಳಸುವಂತೆ ಸೂಚನೆ ನೀಡಿದ್ದರಿಂದ ಸ್ವಯಂ ಪ್ರೇರಿತರಾಗಿಯೇ ತೆರವುಗೊಳಿಸಿದ್ದರು.
ಕಾಂಗ್ರೆಸ್ ಮುಖಂಡ ಅಡ್ಡಿ: ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರ ಬೆಂಬಲಿಗ, ಆಲೂಗಡ್ಡೆ ವ್ಯಾಪಾರಿ ವೈ.ಇ.ಶ್ರೀನಿವಾಸ್ ಖಾಲಿ ನಿವೇಶನಕ್ಕೆ ಕಾಂಪೌಂಡ್ ನಿರ್ಮಾಣ ಮಾಡಿದ್ದರು. ಇದರಿಂದ ಮೇಲ್ಸೇತುವೆ ರಸ್ತೆ ಅಭಿವೃದ್ಧಿಗೆ ಅಡ್ಡಿಯಾಗಿತ್ತು. ತೆರವುಗೊಳಿಸುವಂತೆ ರೈಲ್ವೆ ಇಲಾಖೆಯವರು ಹೇಳಿದರೂ ಕೇಳದೇ ಹಾಗೆಯೇ ಬಿಟ್ಟಿದ್ದರು. ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹಲವು ಬಾರಿ ಹೇಳಿದರೂ ಮೇಲ್ಸೇತುವೆ ನಿರ್ಮಾಣವಾಗಲಿ ಎಂದು ಹೇಳಿ ಮುಂದಕ್ಕೆ ತಳ್ಳುತ್ತಿದ್ದರಿಂದ ಈ ಕಾಮಗಾರಿ ನಿರ್ಮಾಣಕ್ಕೆ ಅಡ್ಡಿಯಾಗಿತ್ತು.
ಕಳೆದ ವಾರ ಬೂದಿಕೋಟೆಯಲ್ಲಿ ನಡೆದ ಮಹಿಳಾ ಸಂಘಗಳಿಗೆ ಸಾಲ ವಿತರಣೆ ಕಾರ್ಯಕ್ರಮಕ್ಕೆ ಬಂದಾಗ ಸ್ಥಳ ಪರಿಶೀಲನೆ ಮಾಡಿದ್ದ ಸಂಸದರು, ಶೀಘ್ರ ಈ ಭಾಗದ ಜನರಿಗೆ ಆಗುತ್ತಿರುವ ಟ್ರಾಫಿಕ್ ಸಮಸ್ಯೆ ಬಗೆಹರಿಸಲು ರೈಲ್ವೆ ಮೇಲ್ಸೇತುವೆ ಲೋಕಾರ್ಪಣೆ ಮಾಡಬೇಕೆಂದು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಆಗ, ಕಾಂಗ್ರೆಸ್ ಮುಖಂಡರ ಕಾಂಪೌಂಡ್ ಅಡ್ಡಿಯಾಗಿದೆ ಎಂದು ಬಿಜೆಪಿ ಮುಖಂಡರು ಮನವಿ ಮಾಡಿದ್ದರು.
ಸ್ವತಃ ಜೆಸಿಬಿ ಯಂತ್ರ ತರಿಸಿದ್ರು: ಸಂಸದ ಎಸ್.ಮುನಿಸ್ವಾಮಿ ಕೋಲಾರ ಉಪವಿಭಾಗಾಧಿಕಾರಿ ಎಸ್.ಸೋಮಶೇಖರ್‌ರಿಗೆ ಮೊಬೈಲ್ ಮೂಲಕ ಮಾತನಾಡಿ, ಈ ಕೂಡಲೇ ಕಾಂಪೌಂಡ್ ತೆರವುಗೊಳಿಸುವಂತೆ ಸೂಚನೆ ನೀಡಿದರು. ತೆರವುಗೊಳಿಸುವ ಸಮಯದಲ್ಲಿ ಅಡ್ಡಿ ಮಾಡುವುದರಿಂದ ತೆರವುಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ ತಕ್ಷಣವೇ, ಬುಧವಾರ ಸಂಜೆ ಬನ್ನಿ ನಾನೂ ಬರುತ್ತೇನೆಂದು ಹೇಳಿ ಕೊಟ್ಟ ಮಾತಿನಂತೆ ಸಂಸದ ಎಸ್.ಮುನಿಸ್ವಾಮಿ ಖುದ್ದು ಹಾಜರಾಗಿ ಸ್ವತಃ ಜೆಸಿಬಿ ಯಂತ್ರಗಳನ್ನು ತಂದು ಕಾಂಪೌಂಡ್ ಅನ್ನು ತೆರವುಗೊಳಿಸಿದರು.
ತೆರವು ಮಾಡದಂತೆ ಅಡ್ಡಿ: ಜೆಸಿಬಿ ಯಂತ್ರಗಳ ಮೂಲಕ ಕಾಂಪೌಂಡ್‌ಅನ್ನು ತೆರವುಗೊಳಿಸುತ್ತಿದ್ದ ವೇಳೆ ಕಾಂಗ್ರೆಸ್ ಮುಖಂಡ ವೈ.ಇ.ಶ್ರೀನಿವಾಸ್ ಅವರ ಪತ್ನಿ ಸೇರಿ ಕೆಲವರು ಬಂದು ತೆರವು ಮಾಡದಂತೆ ಅಡ್ಡಿಪಡಿಸಿದರು. ಸಾರ್ವಜನಿಕರಿಗೆ ತೊಂದರೆ ಯಾಗುವ ರೀತಿಯಲ್ಲಿ ಕಾಂಪೌಂಡ್ ನಿರ್ಮಾಣ ಮಾಡಿರುವುದರಿಂದ ಸಂಚಾರಕ್ಕೆ ಅಡ್ಡಿಯಾಗಿದೆ. ಯಾವುದೇ ಕಾರಣಕ್ಕೂ, ತೆರವುಗೊಳಿಸುವುದಕ್ಕೆ ಯಾರೂ ಅಡ್ಡಿ ಮಾಡಬಾರದೆಂದು ಹೇಳಿ ಸಂಜೆ 6 ಗಂಟೆಯವರೆಗೂ ಅಲ್ಲಿಯೇ ಇದ್ದು, ರಸ್ತೆ ಬದಿಗೆ ಬರುವ ಕಾಂಪೌಂಡವನ್ನು ತೆರವುಗೊಳಿಸಿದ್ದಾರೆ.
ತರಾಟೆ: ಕಳೆದ 10 ವರ್ಷಗಳಿಂದ ಈ ರೈಲ್ವೆ ಮೇಲ್ಸೇತುವೆ ಕಾಮಗಾರಿ ನನೆಗುದಿಗೆ ಬಿದ್ದಿದೆ. ಪಿಡಬ್ಲ್ಯೂಡಿ ಎಂಜಿನಿಯರ್‌ಗಳು ಕೈಕಟ್ಟಿ ಕುಳಿತಿ ರುವುದರಿಂದಲೇ ಈ ಕಾಮಗಾರಿ ನನೆಗುದಿಗೆ ಬಿದ್ದಿದೆ ಎಂದು ಸ್ಥಳದಲ್ಲೇ ಇದ್ದ ಎಂಜಿನಿಯರ್‌ಗಳನ್ನು ತರಾ ಟೆಗೆ ತೆಗೆದುಕೊಂಡರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಪಿ. ವೆಂಕಟಮುನಿಯಪ್ಪ, ತಹಶೀಲ್ದಾರ್ ಚಂದ್ರ ಮೌಳೇ ಶ್ವರ್, ಡಿವೈಎಸ್‌ಪಿ ಶ್ರೀನಿವಾಸಮೂರ್ತಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.