ಇವರೇ ಚಂದಿರನ ಹಿಂದಿನ ತಾರೆಯರು!
ಮಹಿಳಾ ಅಧಿಕಾರಿಗಳ ನಿರ್ದೇಶನದಲ್ಲೇ ಇಸ್ರೋ ಕೈಗೊಳ್ಳಲಿದೆ ದಿಗ್ವಿಜಯ
Team Udayavani, Sep 6, 2019, 10:37 PM IST
ಬೆಂಗಳೂರು: ಮಹತ್ವಾಕಾಂಕ್ಷಿ ಚಂದ್ರಯಾನ-2ರ ಹಿಂದಿರುವುದು ಮಹಿಳೆಯರು, ಜತೆಗೆ ವಿಜ್ಞಾನಿಗಳ ದೊಡ್ಡ ತಂಡ ಇಬ್ಬರು ಮಹಿಳೆಯರು ಇಡೀ ಚಂದ್ರಯಾನದ ಯೋಜನೆಯನ್ನು ಮುನ್ನಡೆಸುತ್ತಿದ್ದಾರೆ. ವಿಜ್ಞಾನಿ ಮುತ್ತಯ್ಯ ವನಿತಾ ಅವರು ಚಂದ್ರಯಾನದ ಯೋಜನೆ ನಿರ್ದೇಶಕರಾದರೆ, ರಿತು ಕರಿದಲ್ ಅವರು ಚಂದ್ರಯಾನದ ಕಾರ್ಯಯೋಜನೆ ನಿರ್ದೇಶಕರು.
ವನಿತಾ ಅವರು ಇಸ್ರೋದ ಉಪಗ್ರಹ ವಿಭಾಗದ ಟೆಲಿಕಾಂ ಮತ್ತು ಡಿಜಿಟಲ್ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಇದರೊಂದಿಗೆ ಅವರು ಡಿಜಿಟಲ್ ವ್ಯವಸ್ಥೆಯ ಟೆಲಿಮೆಟ್ರಿ ಮತ್ತು ಟೆಲಿಕಾಂ ವಿಭಾಗದ ಮುಖ್ಯಸ್ಥರೂ ಆಗಿದ್ದಾರೆ. ಕಾಟೋಸ್ಯಾಟ-1ರ ಉಪನಿರ್ದೇಶಕರೂ ಆಗಿದ್ದರು. ಓಸೀನ್‌ಸ್ಯಾಟ್, ಇತರ ಉಪಗ್ರಹ ನಿಯೋಜನೆಗಳಿಗೂ ಕೆಲಸ ಮಾಡಿದ್ದರು. ಉಪಗ್ರಹ ತಯಾರಿಕೆ, ಅವುಗಳ ಪರಿಶೀಲನೆ, ಜೋಡಿಸುವಿಕೆ, ಯೋಜನೆ ಜಾರಿ ಇತ್ಯಾದಿ ಕೆಲಸಗಳನ್ನು ಅವರ ಇಸ್ರೋದಲ್ಲಿ ಯಶಸ್ವಿಯಾಗಿ ನಿರ್ವಃಇಸಿದ್ದಾರೆ. 2006ರಲ್ಲಿ ಅವರು ಅತ್ಯುತ್ತಮ ಮಹಿಳಾ ವಿಜ್ಞಾನಿ ಪ್ರಶಸ್ತಿ ಪಡೆದಿದ್ದರು. 1987ರಲ್ಲಿ ಅವರು ಇಸ್ರೋ ಸೇರಿದ್ದರು.
ರೀತು ಅವರು ಕಾರ್ಯಯೋಜನೆ ನಿರ್ದೇಶಕರಾಗಿದ್ದು, ಇದಕ್ಕೂ ಮೊದಲು ಮಂಗಳಯಾನದ ಕಾರ್ಯನಿರ್ವಹಣೆ ನಿರ್ದೇಶಕರಾಗಿದದ್ದರು. ಇದು ಇಸ್ರೋದ ಪ್ರಮುಖ ಯೋಜನೆ ಮತ್ತು ಅನ್ಯಗ್ರಹಕ್ಕೆ ಉಪಗ್ರಹ ಕಳಿಸಿದ ಮೊದಲ ಯೋಜನೆಯಾಗಿದೆ. ಬಾಹ್ಯಾಕಾಶ ನೌಕೆಯ ಸ್ವಯಂಚಾಲಿತ ವ್ಯವಸ್ಥೆಗಳು, ಉಪಗ್ರಹದ ಸ್ವಯಂಚಾಲಿತ ವ್ಯವಸ್ಥೆಗಳು ಮತ್ತು ಬಾಹ್ಯಾಕಾಶದಲ್ಲಿ ಅವುಗಳು ಹಾಳಾದರೆ ತನ್ನಿಂದತಾನಾಗಿಯೇ ಸರಿಪಡಿಸಿಕೊಳ್ಳುವ ವ್ಯವಸ್ಥೆಯನ್ನು ರೂಪಿಸುವುದರಲ್ಲಿ ರೀತು ಅವರು ಹೆಚ್ಚಿನ ಪರಿಣತಿ ಹೊಂದಿದ್ದಾರೆ. ಐಐಎಸ್‌ಸಿಯಲ್ಲಿ ಅವರು ಏರೋಸ್ಪೇಸ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, 1997ರಿಂದ ಇಸ್ರೋದಲ್ಲಿ ಕೆಲಸ ಮಾಡುತ್ತಿದ್ದಾರೆ. 2007ರಲ್ಲಿ ಅವರು ಮಾಜಿ ರಾಷ್ಟ್ರಪತಿ ಡಾ| ಎ.ಪಿ.ಜೆ. ಅಬ್ದುಲ್ ಕಲಾಂರಿಂದ ಯುವ ವಿಜ್ಞಾನಿ ಪ್ರಶಸ್ತಿ ಪಡೆದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
Internal Dissent: ಪ್ರಧಾನಿ ಮೋದಿ ಭೇಟಿಯಾದ ವಿಜಯೇಂದ್ರ ದೂರದಿದ್ದರೂ ‘ಸಂದೇಶ’ ರವಾನೆ
Narendra Modi: 43 ವರ್ಷದ ಬಳಿಕ ಭಾರತ ಪ್ರಧಾನಿ ಕುವೈಟ್ ಭೇಟಿ: 21ರಿಂದ ಮೋದಿ ಪ್ರವಾಸ
Whale: ಅಂಬರ್ ಗ್ರೀಸ್ ಮಾರಾಟ ಜಾಲ ಶಂಕೆ: ಕಾರ್ಯಾಚರಣೆಗೆ ಬಂದಿದ್ದ ಅಧಿಕಾರಿಗಳಿಗೆ ಹಲ್ಲೆ!
Bill Amendment: ರಾಜ್ಯಪಾಲರ ಕುಲಾಧಿಪತಿ ಅಧಿಕಾರಕ್ಕೆ ಕತ್ತರಿ: ಮೇಲ್ಮನೆಯಲ್ಲೂ ಅಂಗೀಕಾರ
MUST WATCH
ಹೊಸ ಸೇರ್ಪಡೆ

Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.