ಜೋರು ಸದ್ದು ಮಾಡುತ್ತಿರುವ ಮೋದಿ ಫ್ಲೆಕ್ಸ್‌

| ನೆರೆ ಸ್ಥಿತಿ ವೀಕ್ಷಿಸದ ಪ್ರಧಾನಿ ಪ್ರಶ್ನಿಸೋದೇ ತಪ್ಪಾ?| ಬಿಜೆಪಿಯವರಿಂದ ಸರ್ವಾಧಿಕಾರಿ ಧೋರಣೆ

Team Udayavani, Sep 7, 2019, 9:51 AM IST

huballi-tdy-2

ಹುಬ್ಬಳ್ಳಿ: ರಾಜ್ಯದಲ್ಲಿ ಜನ ಪ್ರವಾಹದಿಂದ ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ. ಪ್ರಧಾನಿ ನೆರೆಹಾವಳಿ ಪ್ರದೇಶಕ್ಕೆ ಭೇಟಿ ಕೊಟ್ಟು ನಿರಾಶ್ರಿತರ ಸಮಸ್ಯೆ ಆಲಿಸಿ, ಪರಿಹಾರ ನೀಡಿ ಎಂದು ಕೇಳುವುದು ತಪ್ಪಾ? ಇದನ್ನು ಪ್ರಶ್ನಿಸಿದವರ ಮೇಲೆ ದೂರು ದಾಖಲಿಸುವುದು ಯಾವ ನ್ಯಾಯವೆಂದು ಕಾಂಗ್ರೆಸ್‌ ಹು-ಧಾ ಮಹಾನಗರ ಗ್ರಾಮೀಣ ಅಧ್ಯಕ್ಷ ಅನಿಲಕುಮಾರ ಪಾಟೀಲ ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ 2009ರಲ್ಲಿ ಆಗಿದ್ದ ನೆರೆ ಹಾವಳಿಗಿಂತ 8-10 ಪಟ್ಟು ಹೆಚ್ಚು ಈ ವರ್ಷ ಪ್ರವಾಹ ಬಂದಿದೆ. ಜನರು ಮನೆ-ಮಠ, ಜಮೀನು ಕಳೆದುಕೊಂಡು ನಿರಾಶ್ರಿತರಾಗಿ ತೀವ್ರ ಸಮಸ್ಯೆಗೊಳಗಾಗಿದ್ದಾರೆ. ಆದರೆ ಕೇಂದ್ರ ಸರಕಾರ ಇದುವರೆಗೂ ಪರಿಹಾರಧನ ಬಿಡುಗಡೆ ಮಾಡಿಲ್ಲ. ಇಷ್ಟೆಲ್ಲ ಹಾನಿಯಾದರು, ಜನರು ತೊಂದರೆ ಅನುಭವಿಸುತ್ತಿದ್ದರು ಪ್ರಧಾನಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ಕೊಟ್ಟಿಲ್ಲ. ಈಗ ಚಂದ್ರಯಾನ ವೀಕ್ಷಣೆಗೆ ಆಗಮಿಸುತ್ತಿದ್ದಾರೆ. ಅವರ ಈ ಧೋರಣೆ ಬಗ್ಗೆ ಪ್ರಶ್ನಿಸುವುದು ತಪ್ಪೇ? ಅವರ ತಪ್ಪುಗಳನ್ನು ವಿರೋಧಿಸುವ ಹಾಗೂ ಧ್ವನಿ ಎತ್ತಿದವರ ಮೇಲೆ ಪ್ರಕರಣ ದಾಖಲಿಸಲಾಗುತ್ತಿದೆ. ಆ ಮೂಲಕ ಬಿಜೆಪಿಯವರು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಇನ್ನಾದರು ಅವರು ಪ್ರಜಾಪ್ರಭುತ್ವ ಉಳಿಸಲಿ ಎಂದರು.

ಇನ್ಮುಂದೆ ಎಲ್ಲೆಡೆ ಫ್ಲೆಕ್ಸ್‌ ಅಳವಡಿಕೆ: ಯುವ ಕಾಂಗ್ರೆಸ್‌ ಕಾರ್ಯಕರ್ತರು ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ಭೇಟಿಯ ಕುರಿತು ವ್ಯಂಗ್ಯವಾದ ಫ್ಲೆಕ್ಸ್‌ನ್ನು ಕಾನೂನುಬದ್ಧವಾಗಿಯೇ ಅಳವಡಿಸಿದ್ದರು. ಆದರೆ ಪಾಲಿಕೆ ಅಧಿಕಾರಿಗಳು ಬಿಜೆಪಿಯವರಿಗೆ ಹೆದರಿ ಪಕ್ಷದ ಕಾರ್ಯಕರ್ತರಿಬ್ಬರ ಮೇಲೆ ದೂರು ದಾಖಲಿಸಿದ್ದಾರೆ. ನಗರದಲ್ಲಿ ಸಾಕಷ್ಟು ಅನಧಿಕೃತ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿದೆ. ಅವರ ಮೇಲೆಯು ಅಧಿಕಾರಿಗಳು ದೂರು ದಾಖಲಿಸುತ್ತಾರೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಿಯವರ ಈ ಧೋರಣೆ ಕುರಿತ ಫ್ಲೆಕ್ಸ್‌ಗಳನ್ನು ಪ್ರತಿ ತಾಲೂಕು ಮಟ್ಟದಲ್ಲಿ ಅಳವಡಿಸುವಂತೆ ಬ್ಲಾಕ್‌ ಅಧ್ಯಕ್ಷರಿಗೆ ಹಾಗೂ ಜಿಲ್ಲಾಧ್ಯಕ್ಷರು ತಮ್ಮ ಜಿಲ್ಲೆಗಳಲ್ಲಿ ಕಟೌಟ್ ಹಾಕಿ ಜನರಿಗೆ ತಿಳಿವಳಿಕೆ ನೀಡಲು ಸೂಚಿಸಲಾಗಿದೆ. ಆ ಮೂಲಕ ಬಿಜೆಪಿಯವರಿಗೆ ಕಣ್ಣು ತೆರೆಸುವ ಕೆಲಸ ಮಾಡಲಾಗುವುದು. ಕಾರ್ಯಕರ್ತರ ಮೇಲೆ ಹಾಕಿರುವ ಪ್ರಕರಣ ಹಿಂಪಡೆಯಬೇಕು. ಇಲ್ಲವಾದರೆ ನಾಳೆಯಿಂದಲೇ ಇಂತಹುದೆ ಫ್ಲೆಕ್ಸ್‌ಗಳನ್ನು ಹಾಕಿಸಲಾಗುವುದು. ಆಗ ನನ್ನ ಮೇಲೂ ದೂರು ದಾಖಲಿಸಲಿ. ಎಷ್ಟು ಜನರ ಮೇಲೆ ಇದೇ ರೀತಿ ಪ್ರಕರಣ ದಾಖಲಿಸುತ್ತಾರೆ ನೋಡೋಣ. ಜನರ ಸಮಸ್ಯೆಗಳ ಬಗೆಗಿನ ಹೋರಾಟ ಕೈ ಬಿಡುವುದಿಲ್ಲ ಎಂದರು.

ರಜತ್‌ ಉಳ್ಳಾಗಡ್ಡಿಮಠ, ಶ್ವಾಜಮಾನ ಮುಜಾಹಿದ್‌, ಬಸವರಾಜ ಹೊಸಮನಿ, ರವಿ ರಾಜೂರ, ವಿನಯ ಜಕನೂರ ಇನ್ನಿತರರಿದ್ದರು.

ಟಾಪ್ ನ್ಯೂಸ್

Udupi: ಇಂದ್ರಾಳಿ ಮೇಲ್ಸೇತುವೆ: ಜ. 15 ರೊಳಗೆ ಮುಗಿಸಲು ಗಡುವು

Udupi: ಇಂದ್ರಾಳಿ ಮೇಲ್ಸೇತುವೆ: ಜ. 15 ರೊಳಗೆ ಮುಗಿಸಲು ಗಡುವು

Who wrote the book on terrorism behind the fake bomb call?

Fake Call: ಹುಸಿ ಬಾಂಬ್‌ ಕರೆ ಹಿಂದೆ ಭಯೋತ್ಪಾದನೆ ಕುರಿತ ಪುಸ್ತಕ ಬರೆದವನ ಕೈವಾಡ?

Special Train: ದೀಪಾವಳಿ ಹಬ್ಬ ವಿಶೇಷ ರೈಲು ಸಂಚಾರ

Special Train: ದೀಪಾವಳಿ ಹಬ್ಬ ವಿಶೇಷ ರೈಲು ಸಂಚಾರ

Shivaraj-Thangadagi

Government Encourge: ಜ.1ರಿಂದ ಕಲಾವಿದರ ಮಾಸಾಶನ 3 ಸಾವಿರ ರೂ. ಏರಿಕೆ: ಸಚಿವ

Deepavali 2024: ಇಂದಿನಿಂದ ದೀಪಾವಳಿ ಸಂಭ್ರಮ

Deepavali 2024: ಇಂದಿನಿಂದ ದೀಪಾವಳಿ ಸಂಭ್ರಮ

Ratan Tata asked for money to make phone calls: Amitabh Bachchan

Ratan Tata; ಫೋನ್‌ ಮಾಡಲು ರತನ್‌ ದುಡ್ಡು ಕೇಳಿದ್ದರು: ಅಮಿತಾಭ್‌ ಬಚ್ಚನ್‌

HD-kumara

Waqf Property: ಭೂಗಳ್ಳರಿಗೆ ರಕ್ಷಣೆ ಕೊಟ್ಟರೆ ಬೆಲೆ ತೆರಬೇಕಾದೀತು: ಎಚ್‌.ಡಿ.ಕುಮಾರಸ್ವಾಮಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಯಾವ ಕಾರಣಕ್ಕೂ ರೈತರ ಜಮೀನು ಮುಟ್ಟಲ್ಲ: ಜಮೀರ್‌ ಅಹ್ಮದ್

Waqf Land Issue; ಯಾವ ಕಾರಣಕ್ಕೂ ರೈತರ ಜಮೀನು ಮುಟ್ಟಲ್ಲ: ಜಮೀರ್‌ ಅಹ್ಮದ್

ವಕ್ಫ್ ಕಾನೂನು ತೆಗೆದು ಹಾಕುವುದೇ ಸೂಕ್ತ: ಸಚಿವ ಜೋಶಿ

Waqf Land Issue: ವಕ್ಫ್ ಕಾನೂನು ತೆಗೆದು ಹಾಕುವುದೇ ಸೂಕ್ತ: ಸಚಿವ ಜೋಶಿ

Hubballi: ವಕ್ಫ್ ಗೊಂದಲ ರಾಜ್ಯ ಸರ್ಕಾರದ ನಿರ್ವಹಣಾ ವೈಫಲ್ಯಕ್ಕೆ ಸ್ಪಷ್ಟ ಉದಾಹರಣೆ: ಶೆಟ್ಟರ್

Hubballi: ವಕ್ಫ್ ಗೊಂದಲ ರಾಜ್ಯ ಸರ್ಕಾರದ ನಿರ್ವಹಣಾ ವೈಫಲ್ಯಕ್ಕೆ ಸ್ಪಷ್ಟ ಉದಾಹರಣೆ: ಶೆಟ್ಟರ್

Aravind-Bellad

Waqf: ರೈತರ ಭೂಮಿ ಕಬಳಿಸಲು ವಕ್ಫ್ ಗೆ ಕಾಂಗ್ರೆಸ್‌ ಕುಮ್ಮಕ್ಕು: ಅರವಿಂದ್‌ ಬೆಲ್ಲದ

BJP: ಹೈಕಮಾಂಡ್‌ ಸೂಚಿಸಿರುವ ಅಭ್ಯರ್ಥಿ ಪರ ಕೆಲಸ: ನಿರಾಣಿ

BJP: ಹೈಕಮಾಂಡ್‌ ಸೂಚಿಸಿರುವ ಅಭ್ಯರ್ಥಿ ಪರ ಕೆಲಸ: ನಿರಾಣಿ

MUST WATCH

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

Udupi: ಇಂದ್ರಾಳಿ ಮೇಲ್ಸೇತುವೆ: ಜ. 15 ರೊಳಗೆ ಮುಗಿಸಲು ಗಡುವು

Udupi: ಇಂದ್ರಾಳಿ ಮೇಲ್ಸೇತುವೆ: ಜ. 15 ರೊಳಗೆ ಮುಗಿಸಲು ಗಡುವು

Who wrote the book on terrorism behind the fake bomb call?

Fake Call: ಹುಸಿ ಬಾಂಬ್‌ ಕರೆ ಹಿಂದೆ ಭಯೋತ್ಪಾದನೆ ಕುರಿತ ಪುಸ್ತಕ ಬರೆದವನ ಕೈವಾಡ?

Special Train: ದೀಪಾವಳಿ ಹಬ್ಬ ವಿಶೇಷ ರೈಲು ಸಂಚಾರ

Special Train: ದೀಪಾವಳಿ ಹಬ್ಬ ವಿಶೇಷ ರೈಲು ಸಂಚಾರ

Shivaraj-Thangadagi

Government Encourge: ಜ.1ರಿಂದ ಕಲಾವಿದರ ಮಾಸಾಶನ 3 ಸಾವಿರ ರೂ. ಏರಿಕೆ: ಸಚಿವ

Deepavali 2024: ಇಂದಿನಿಂದ ದೀಪಾವಳಿ ಸಂಭ್ರಮ

Deepavali 2024: ಇಂದಿನಿಂದ ದೀಪಾವಳಿ ಸಂಭ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.