ಆನವಟ್ಟಿಗೆ ಬನವಾಸಿ ಸೇರ್ಪಡೆ: ವಿರೋಧ
•ಬನವಾಸಿ ಉತ್ತರ ಕನ್ನಡದಲ್ಲೇ ಉಳಿಯಲಿ•ಸರ್ಕಾರದ ವಿರುದ್ಧ ಹೋರಾಟಕ್ಕೆ ಸಕಲ ಸಿದ್ಧತೆ
Team Udayavani, Sep 7, 2019, 11:33 AM IST
ಶಿರಸಿ: ಬನವಾಸಿಯನ್ನು ಜಿಲ್ಲೆಯಲ್ಲೇ ಉಳಿಸುವ ನಿಟ್ಟಿನಲ್ಲಿ ಸಭೆ ನಡೆಯಿತು.
ಶಿರಸಿ: ತಾಲೂಕಿನ ಬನವಾಸಿ ವಲಯವನ್ನು ಸೊರಬ ತಾಲೂಕಿನ ಆನವಟ್ಟಿಗೆ ಸೇರಿಸುವ ಸರ್ಕಾರದ ವಿಚಾರವನ್ನು ಇಲ್ಲಿಯ ಜನಪ್ರತಿನಿಧಿಗಳು ತೀವ್ರವಾಗಿ ವಿರೋಧಿಸಿದ್ದು, ಬನವಾಸಿಯನ್ನು ಯಾವುದೇ ರೀತಿಯಿಂದ ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ಈ ಬಗ್ಗೆ ಕನ್ನಡ ಪರ ಸಂಘಟನೆ ಕದಂಬ ಸೈನ್ಯ ಆಯೋಜಿಸಿದ್ದ ಸಭೆಯಲ್ಲಿ ಪ್ರತಿಕ್ರಿಯಿಸಿದರು.
ಬನವಾಸಿ ವಲಯ ವ್ಯಾಪ್ತಿಯ ಎಲ್ಲ ಜನಪ್ರತಿನಿಧಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಆನವಟ್ಟಿಗೆ ಬನವಾಸಿ ಸೇರ್ಪಡೆ ಮಾಡುವುದನ್ನು ವಿರೋಧಿಸಿದ್ದಾರೆ.
ಬನವಾಸಿಯನ್ನು ಪ್ರತ್ಯೇಕ ತಾಲೂಕಾಗಿ ಮಾಡಿ, ಶಿರಸಿಯನ್ನು ಪ್ರತ್ಯೇಕ ಜಿಲ್ಲಾ ಕೇಂದ್ರವಾಗಿ ಮಾಡಬೇಕೆಂದು ಒತ್ತಾಯಿಸಿದರು. ಈ ಬಗ್ಗೆ ಸಭೆಯಲ್ಲಿ ಠರಾವು ಕೂಡಾ ಸ್ವೀಕರಿಸಲಾಯಿತು.
ಬನವಾಸಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಿ.ಎಫ್. ನಾಯ್ಕ ಮಾತನಾಡಿ, ಯಾವುದೇ ದೃಷ್ಟಿಯಿಂದ ನೋಡಿದರೂ ಆನವಟ್ಟಿ ಸೇರ್ಪಡೆ ಸಾಧ್ಯವಿಲ್ಲ. ಕನ್ನಡಿಗರ ಪ್ರಥಮ ರಾಜಧಾನಿ ಬನವಾಸಿಗೆ ತನ್ನದೇ ಆದ ಸ್ಥಾನಮಾನವಿದೆ ಎಂದರು.
ಕಾರ್ಯಕ್ರಮ ಸಂಯೋಜನೆ ಮಾಡಿದ ಕದಂಬ ಸೈನ್ಯ ಸಂಘಟನೆ ರಾಜ್ಯ ಸಂಚಾಲಕ ಉದಯಕುಮಾರ ಕಾನಳ್ಳಿ ಮಾತನ್ನಾಡಿ ಉತ್ತರ ಕನ್ನಡದಿಂದ ಬನವಾಸಿ ಬೇರೆಡೆ ಒಯ್ಯಲು ಸಾಧ್ಯವೇ ಇಲ್ಲ. ಇದು ಕೇವಲ ಜಿಲ್ಲೆಯ ಆಸ್ತಿಯಷ್ಟೇ ಅಲ್ಲ, ರಾಜ್ಯದ ಆಸ್ತಿ ಕೂಡಾ. ಈಗಾಗಲೇ ಅನೇಕ ಸಾಹಿತಿಗಳು, ಬರಹಗಾರರು, ಚಿಂತಕರು ಕೂಡಾ ಬನವಾಸಿ ಆನವಟ್ಟಿ ಸೇರ್ಪಡೆ ವಿಚಾರ ವಿರೋಧಿಸಿ ಪತ್ರಿಕಾ ಹೇಳಿಕೆ ನೀಡಿದ್ದಾರೆ. ಸರ್ಕಾರ ಇಂತಹ ದುಸ್ಸಾಹಸಕ್ಕೆ ಕೈ ಹಾಕಬಾರದೆಂದು ಹೇಳಿದ ಅವರು, ಬನವಾಸಿ ವಲಯ ವ್ಯಾಪ್ತಿಯಲ್ಲಿ ಈಗಾಗಲೇ ಹೋರಾಟದ ಕಿಚ್ಚು ಹೆಚ್ಚಾಗಿದೆ ಎಂದಿದ್ದಾರೆ.
ಅಧ್ಯಕ್ಷತೆ ವಹಿಸಿದ್ದ ಬನವಾಸಿ ಗ್ರಾಪಂ ಅಧ್ಯಕ್ಷ ಗಣೇಶ ಸಣ್ಣಲಿಂಗಣ್ಣನವರ, ಬನವಾಸಿ ಅಭಿವೃದ್ಧಿಗಾಗಿ, ಬನವಾಸಿ ತಾಲೂಕು ಹೋರಾಟಕ್ಕಾಗಿ ನಾವೆಲ್ಲ ಕಟಿಬದ್ಧರಾಗಬೇಕು ಎಂದರು.
ಶಿರಸಿ ತಾಪಂ ಅಧ್ಯಕ್ಷೆ ಶ್ರೀಲತಾ ಶಿವಾಜಿ ಕಾಳೇರಮನೆ, ಬನವಾಸಿ ಎಲ್ಲಿಯೂ ಹೋಗಲು ಸಾಧ್ಯವಿಲ್ಲ ಎಂದರು. ಜಿಪಂ ಸದಸ್ಯ ಬಸವರಾಜ ದೊಡ್ಮನಿ, ಇತಿಹಾಸ ಪ್ರಸಿದ್ಧ ಬನವಾಸಿ ಚರಿತ್ರೆ, ಕ್ಷೇತ್ರ ಪರಿಗಣನೆ ಮಾಡಿ ಬನವಾಸಿ ಪ್ರತ್ಯೇಕ ತಾಲೂಕು ಸ್ಥಾನಮಾನ ನೀಡಬೇಕೆಂದು ಒತ್ತಾಯಿಸಿದರು. ಜಿಪಂ ಸದಸ್ಯೆ ರೂಪಾ ಗಣಪತಿ ನಾಯ್ಕ, ಕದಂಬ ಸೈನ್ಯ ಸಂಘಟನೆ ಕಾರ್ಯ ಶ್ಲಾಘಿಸಿದರು.
ಪಂಚಾಯ್ತಿ ಅಧ್ಯಕ್ಷರಾದ ಶಂಕರ ಗೌಡ (ಭಾಶಿ), ಬೋಜಪ್ಪ ನಾಯ್ಕ (ಗುಡ್ನಾಪುರ), ವಿಜಯಾ ನಾಯ್ಕ (ಹಲಗದ್ದೆ), ಬಸಣ್ಣ ನಾಯ್ಕ (ಅಂಡಗಿ) ಹಾಗೂ ಬನವಾಸಿ ವಿಎಸ್‌ಎಸ್ ಅಧ್ಯಕ್ಷ ಮಹಾದೇವ ಗೌಡ, ಕದಂಬ ಸೈನ್ಯದ ಉಪಾಧ್ಯಕ್ಷ ಎಸ್.ಬಿ. ಗೌಡ ಸಂತೊಳ್ಳಿ, ಜಿಲ್ಲಾಧ್ಯಕ್ಷ ದೀಪಕ ಬಂಗ್ಲೆ, ಎಪಿಎಂಸಿ ಸದಸ್ಯರಾದ ಪ್ರಶಾಂತ ಗೌಡ ಹಾಗೂ ಶಿವಕುಮಾರ ದೇಸಾಯಿಗೌಡ, ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಬಿ. ಶಿವಾಜಿ, ಪಂಚಾಯ್ತಿ ಸದಸ್ಯರು, ವ್ಯವಸಾಯ ಸೇವಾ ಸಂಘಗಳ ಸದಸ್ಯರು ಚರ್ಚಿಸಿದರು.
ಸೆ.10 ರಂದು ಎಲ್ಲಾ ಪಂಚಾಯತಿಗಳು ಠರಾವು ಸ್ವೀಕರಿಸಿದ ನಕಲನ್ನು ಶಿರಸಿ ಸಹಾಯಕ ಆಯುಕ್ತರ ಮುಖಾಂತರ ಸರಕಾರಕ್ಕೆ ರವಾನಿಸಲಾಗುವುದು. ಹಾಗೂ ತದನಂತರ ಒಂದು ದಿನ ಬೃಹತ್ ಪ್ರತಿಭಟನೆ ಕೂಡಾ ನಡೆಸಬೇಕು ಎಂದು ತೀರ್ಮಾನಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.